Headlines

ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು: ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ | Two Sisters Mysterious Death One Day Before Their Marriage In Jodhpur

ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು: ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ | Two Sisters Mysterious Death One Day Before Their Marriage In Jodhpur



ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು: ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ | Two Sisters Mysterious Death One Day Before Their Marriage In Jodhpur

ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದ ಸೋದರಿಯರಿಬ್ಬರೂ ತಮ್ಮದೇ ಮದುವೆಗೆ ಇನ್ನೇನು ಒಂದು ದಿನ ಬಾಕಿ ಇರುವಾಗ ಶವವಾಗಿ ಪತ್ತೆಯಾಗಿದ್ದಾರೆ. ರಾಜಸ್ಥಾನ ಜೋಧ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮದುವೆಯ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮದುವೆಗೆ ದಿನ ಮೊದಲು ಸಾವಿಗೆ ಶರಣಾದ್ರಾ ಸೋದರಿಯರು?

ಜೋಧಪುರ: ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದ ಸೋದರಿಯರಿಬ್ಬರೂ ತಮ್ಮದೇ ಮದುವೆಗೆ ಇನ್ನೇನು ಒಂದು ದಿನ ಬಾಕಿ ಇರುವಾಗ ಶವವಾಗಿ ಪತ್ತೆಯಾಗಿದ್ದಾರೆ. ರಾಜಸ್ಥಾನ ಜೋಧ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮದುವೆಯ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹದಿಹರೆಯದ ಮಕ್ಕಳನ್ನು ಹಸೆಮಣೆಯಲ್ಲಿ ಕಾಣಬೇಕು ಎಂದು ಆಸೆ ಪಟ್ಟಿದ್ದ ಪೋಷಕರೇ ಈಗ ಮಕ್ಕಳಿಗೆ ಚಟ್ಟ ಕಟ್ಟಬೇಕಾದಂತಹ ದುರಂತ ಸ್ಥಿತಿ ಎದುರಾಗಿದೆ.

ಮೃತ ಯುವತಿಯರನ್ನು 25 ವರ್ಷದ ಶೋಭಾ ಹಾಗೂ 23 ವರ್ಷದ ವಿಮ್ಲಾ ಎಂದು ಗುರುತಿಸಲಾಗಿದೆ. ಇಬ್ಬರೂ ದೀಪ್‌ ಸಿಂಗ್ ಎಂಬುವವರ ಪುತ್ರಿಯರಾಗಿದ್ದು, ಇಬ್ಬರೂ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಅಂದರೆ ಇಂದು ಅವರ ಮದುವೆ ನಿಗದಿಯಾಗಿತ್ತು. ಆದರೆ ದಿನ ಮೊದಲು ಅಂದರೆ ನಿನ್ನೆ ಅವರು ಶವವಾಗಿ ಪತ್ತೆಯಾಗಿದ್ದು, ಆತ್ಮ*ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜೋಧ್‌ಪುರದ ಮನೈ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದ್ದು, ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಪಶ್ಚಿಮ ಎಡಿಸಿಪಿ ರೋಷನ್ ಮೀನಾ ಅವರ ಪ್ರಕಾರ, ಶುಕ್ರವಾರ ತಡರಾತ್ರಿಯವರೆಗೂ ಮನೆಯಲ್ಲಿ ಮದುವೆ ಸಂಭ್ರಮ ಮುಂದುವರಿದಿತ್ತು. ಮಧ್ಯರಾತ್ರಿಯ ಸುಮಾರಿಗೆ ಸಹೋದರಿಯರಿಬ್ಬರು ಮಲಗಲು ತಮ್ಮ ಕೋಣೆಗೆ ಹೋಗಿದ್ದಾರೆ. ಆದರೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅವರ ಆರೋಗ್ಯ ಹದಗೆಟ್ಟಿದ್ದು, ಕುಟುಂಬ ಸದಸ್ಯರು ಅವರನ್ನು ಜೋಧ್‌ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಈ ಯುವತಿಯರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ… ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ‘ಆತ್ಮ8ತ್ಯೆ’ ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline – 080 2549 7777

ಇದನ್ನೂ ಓದಿ: ಖ್ಯಾತ ಹೃದಯ ತಜ್ಞನಿಗಾಗಿ ಎರಡು ಹೃದಯಗಳ ಗಲಾಟೆ: ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿದ ಪ್ರೇಯಸಿ, ಹೆಂಡ್ತಿ

ನಂತರ ಶವಗಳನ್ನು ಮನೆಗೆ ತಂದ ಪೋಷಕರು ಹಾಗೂ ಕುಟುಂಬದವರು ಮರಣೋತ್ತರ ಪರೀಕ್ಷೆ ನಡೆಸದೆಯೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿ ಅಂತ್ಯಕ್ರಿಯೆಯನ್ನು ನಿಲ್ಲಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಚ್ ಶವಾಗಾರಕ್ಕೆ ಕಳುಹಿಸಲಾಗಿದ್ದು, ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಸಹೋದರಿಯರು ವಿಷಕಾರಿ ವಸ್ತುವನ್ನು ಸೇವಿಸಿ ಸಾವನ್ನಪ್ಪಿರಬಹುದು, ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ನಿಖರವಾದ ಕಾರಣ ತಿಳಿದುಬರಲಿದೆ. ಸ್ಥಳದಲ್ಲಿ ಇದುವರೆಗೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.

ಇದನ್ನೂ ಓದಿ: ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

ಈ ಯುವತಿಯರ ತಾಯಿಯ ಚಿಕ್ಕಪ್ಪ ಜಸ್ವಂತ್ ಸಿಂಗ್ ಈ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಬ್ಬರು ಸಹೋದರಿಯರ ವಿವಾಹಗಳು ಮೂಲತಃ ಭಿನ್ಮಲ್‌ನ ವರರೊಂದಿಗೆ ನಿಶ್ಚಯವಾಗಿದ್ದವು, ಆದರೆ ಕುಟುಂಬದ ಒತ್ತಡದಿಂದಾಗಿ ಮದುವೆ ರದ್ದುಗೊಂಡು ಪೋಖ್ರಾನ್‌ನ ಜೆಮ್ಲಾ ಗ್ರಾಮದ ಯುವಕರೊಂದಿಗೆ ಇವರ ಮದುವೆ ಮರು ನಿಗದಿಪಡಿಸಲಾಗಿತ್ತು. ದೀಪ್ ಸಿಂಗ್ ಅವರ ಕಿರಿಯ ಸಹೋದರ ಮತ್ತು ಕೌಟುಂಬಿಕ ಸಂದರ್ಭಗಳ ಒತ್ತಡದಿಂದಾಗಿ ಇಬ್ಬರು ಸಹೋದರಿಯರು ಈ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಅವರು ಹೇಳಿದ್ದಾರೆ. ಈ ವಿಚಾರ ಆತಂಕ ಹೆಚ್ಚಿಸಿದ್ದು, ಬಹುಶಃ ಮಕ್ಕಳು ಪೋಷಕರ ಒತ್ತಾಯಕ್ಕೆ ಮದುವೆಗೆ ಒಪ್ಪಿದ್ದರೆ, ಅಥವಾ ಒತ್ತಾಯ ಮಾಡಿ ಅವರನ್ನು ಮದುಗೆ ಒಪ್ಪಿಸಲಾಗಿತ್ತೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.



Source link

Leave a Reply

Your email address will not be published. Required fields are marked *