Headlines

ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌! 2 ದೇಶಗಳ ಯುದ್ಧ ಮಧ್ಯಪ್ರಾಚ್ಯಕ್ಕೆ ವಿಸ್ತರಣೆ | Donald Trump Lacks Clear Exit Plan For War Critics Say

ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌! 2 ದೇಶಗಳ ಯುದ್ಧ ಮಧ್ಯಪ್ರಾಚ್ಯಕ್ಕೆ ವಿಸ್ತರಣೆ | Donald Trump Lacks Clear Exit Plan For War Critics Say



ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌! 2 ದೇಶಗಳ ಯುದ್ಧ ಮಧ್ಯಪ್ರಾಚ್ಯಕ್ಕೆ ವಿಸ್ತರಣೆ | Donald Trump Lacks Clear Exit Plan For War Critics Say

ಇರಾನ್‌ನ ಪರಮೋಚ್ಚ ನಾಯಕ ಆಯೆತೊಲ್ಲಾ ಖಮೇನಿ ಹತ್ಯೆಯಿಂದ ಒಂದೇ ವಾರದಲ್ಲಿ ಮುಗಿಯಬಹುದೆಂದು ಅಂದಾಜಿಸಿದ್ದ ಮಧ್ಯಪ್ರಾಚ್ಯ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅಮೆರಿಕ-ಇಸ್ರೇಲ್‌ ಜಂಟಿ ದಾಳಿ ಹೊರತಾಗಿಯೂ ಇರಾನ್‌ನ ಪ್ರತಿರೋಧ ಯಥಾರೀತಿ ಮುಂದುವರಿದಿದೆ.

ವಾಷಿಂಗ್ಟನ್‌ : ಇರಾನ್‌ನ ಪರಮೋಚ್ಚ ನಾಯಕ ಆಯೆತೊಲ್ಲಾ ಖಮೇನಿ ಹತ್ಯೆಯಿಂದ ಒಂದೇ ವಾರದಲ್ಲಿ ಮುಗಿಯಬಹುದೆಂದು ಅಂದಾಜಿಸಿದ್ದ ಮಧ್ಯಪ್ರಾಚ್ಯ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅಮೆರಿಕ-ಇಸ್ರೇಲ್‌ ಜಂಟಿ ದಾಳಿ ಹೊರತಾಗಿಯೂ ಇರಾನ್‌ನ ಪ್ರತಿರೋಧ ಯಥಾರೀತಿ ಮುಂದುವರಿದಿದೆ. ಇರಾನ್‌ನಿಂದ ಈ ರೀತಿಯ ಪ್ರತಿರೋಧದ ನಿರೀಕ್ಷೆ ಮಾಡದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬಳಿ ಯುದ್ಧದಿಂದ ಹೊರಬರಲು ಸೂಕ್ತ ಯೋಜನೆಗಳಿಲ್ಲ. ಹೀಗಾಗಿ ಅವರ ಸರ್ಕಾರ ಗೊಂದಲಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ, ಒಂದು ವೇಳೆ ಇದು ನಿಜವೇ ಆಗಿದ್ದರೆ ಈ ಯುದ್ಧ ತಿಂಗಳುಗಳ ಕಾಲ ಮುಂದುವರಿಯುವ ಆತಂಕ ಶುರುವಾಗಿದೆ ಎಂದು ಕೆಲವು ತಜ್ಞರು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಫೆ.28ರಂದು ಇರಾನ್‌ ಮೇಲೆ ದಾಳಿ ನಡೆಸಿದ್ದ ಅಮೆರಿಕ ಈ ಯುದ್ಧವನ್ನು ಚುಟುಕಾಗಿ ಮುಗಿಸುವ ಇರಾದೆ ಹೊಂದಿತ್ತು. ಆದರೆ, 8 ಸಾವಿರಕ್ಕೂ ಕ್ಷಿಪಣಿ, ಬಾಂಬ್‌ ದಾಳಿ ಮಾಡಿದರೂ ಇರಾನ್‌ ಸೋಲೊಪ್ಪುವ ಲಕ್ಷಣ ಕಾಣಿಸುತ್ತಿಲ್ಲ. ತನ್ನ ಮೇಲಿನ ದಾಳಿಗೆ ಪ್ರತಿಯಾಗಿ ಮಧ್ಯಪ್ರಾಚ್ಯದ ಅಮೆರಿಕ ಮತ್ತು ಅದರ ಮಿತ್ರದೇಶಗಳ ಸೇನಾ ನೆಲೆಗಳು, ವಾಣಿಜ್ಯ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಇರಾನ್‌ ಮತ್ತಷ್ಟು ದಾಳಿ ನಡೆಸುತ್ತಿದೆ. ಹೋರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡಿ ಕಚ್ಚಾ ತೈಲ, ಗ್ಯಾಸ್‌ ಪೂರೈಕೆಗೆ ತಡೆಯೊಡ್ಡುವ ಮೂಲಕ ಯುದ್ಧದ ಬಿಸಿ ಅಂತಾರಾಷ್ಟ್ರೀಯ ಸಮುದಾಯಕ್ಕೂ ತಟ್ಟುವಂತೆ ಮಾಡಿದೆ. ಯುದ್ಧವನ್ನು ಸಂಪೂರ್ಣ ಮಧ್ಯಪ್ರಾಚ್ಯ, ಹಿಂದೂಮಹಾಸಾಗರಕ್ಕೂ ಕೊಂಡೊಯ್ದಿದೆ.

ಏಕಾಂಗಿ ಅಮೆರಿಕ:

‘ಇರಾನ್‌ ಜತೆಗಿನ ಸಂಘರ್ಷದಲ್ಲಿ ಅಮೆರಿಕ ಸದ್ಯ ಏಕಾಂಗಿ ಎನ್ನುವಂತಾಗಿದೆ. ಮಿತ್ರರಾಷ್ಟ್ರಗಳು ಈ ಯುದ್ಧ ನಮ್ಮದಲ್ಲ ಎಂದು ಹೇಳುವ ಮೂಲಕ ಅಂತರ ಕಾಯ್ದುಕೊಂಡಿವೆ. ಇದರಿಂದ ಅಮೆರಿಕ-ಮಿತ್ರ ರಾಷ್ಟ್ರಗಳ ಸಂಬಂಧ ಹಳಸುವಂತಾಗಿದೆ. ಇನ್ನು ಆರ್ಥಿಕವಾಗಿಯೂ ಈ ಯುದ್ಧ ಅಮೆರಿಕದ ಪಾಲಿಗೆ ಹೊರೆಯಾಗುತ್ತಿದೆ. ಮಿತ್ರದೇಶಗಳ ರಕ್ಷಣೆಯಲ್ಲೇ ಅಮೆರಿಕದ ಬತ್ತಳಿಕೆಯಲ್ಲಿರುವ ಕ್ಷಿಪಣಿಗಳು ಖಾಲಿಯಾಗುತ್ತಿವೆ. ಕೇವಲ 12 ದಿನಗಳಲ್ಲಿ ಅಮೆರಿಕಕ್ಕೆ 1.55 ಲಕ್ಷ ಕೋಟಿ ರು.ನಷ್ಟು ಆರ್ಥಿಕ ಹೊರೆ ಹೊರೆಬಿದ್ದಿದೆ’ ಎಂದು ತಜ್ಞರು ಹೇಳುತ್ತಿದ್ದಾರೆ.

ದೀರ್ಘಾವಧಿಯ ರೂಪ ತಳೆಯುತ್ತಿದೆ

ಒಟ್ಟಿನಲ್ಲಿ ಅಲ್ಪಾವಧಿಯಲ್ಲಿ ಮುಗಿಯಬಹುದಾಗಿದ್ದ ಯುದ್ಧ ಇದೀಗ ದೀರ್ಘಾವಧಿಯ ರೂಪ ತಳೆಯುತ್ತಿದೆ. ಅಮೆರಿಕ ಯುದ್ಧ ನಿಲ್ಲಿಸಲೂ ಆಗದೆ, ಮಧ್ಯದಲ್ಲೇ ನಿಲ್ಲಿಸಲೂ ಆಗದೆ ಅಡಕತ್ತರಿಗೆ ಸಿಲುಕಿದೆ.



Source link

Leave a Reply

Your email address will not be published. Required fields are marked *