Newlywed couple killed ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು | Madhya Pradesh Tragedy Newlywed Couple Among 4 Killed In Road Accident Day After Wedding

Newlywed couple killed ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು | Madhya Pradesh Tragedy Newlywed Couple Among 4 Killed In Road Accident Day After Wedding



Newlywed couple killed ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು | Madhya Pradesh Tragedy Newlywed Couple Among 4 Killed In Road Accident Day After Wedding

ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು, ಮದುವೆ ಮರು ದಿನ ಮನೆಗೆ ತೆರಳುವಾಗ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದುರಂತ ಅಂದರೆ ಈ ಮಡಿದವ ನಾಲ್ವರ ಪೈಕಿ ಸಂಬಂಧಿಗೆ ಇನ್ನೆರಡೇ ದಿನದಲ್ಲಿ ಎಂಗೇಜ್‌ಮೆಂಟ್ ನಡೆಯಬೇಕಿತ್ತು.

ಭೋಪಾಲ್ (ಏ.12) ಸಂಪ್ರದಾಯ ಬದ್ಧವಾಗಿ ಮದುವೆ ನಡೆದಿದ್ದು. ನವ ಜೋಡಿಗಳಿಗೆ ಕುಟುಂಬಸ್ಥರು ಶುಭಹಾರೈಸಿದ್ದರು. ನವ ಜೋಡಿಗಳು ಮೊದಲ ರಾತ್ರಿಯನ್ನು ಹುಡುಗಿ ಮನೆಯಲ್ಲಿ ಕಳೆದರೆ, ಮರು ದಿನ ಆಟೋ ರಿಕ್ಷಾ ಮೂಲಕ ಗಂಡನ ಮನೆಗೆ ತೆರಳಿದ್ದರು. ನವ ಜೋಡಿ, ವರನ ತಾಯಿ, ವರನ ಇಬ್ಬರು ಸಹೋದರಿಯರು ಆಟೋ ರಿಕ್ಷಾದಲ್ಲಿ ತೆರಳುವಾಗ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಿವುಪರಿ ಜಿಲೆಯಲ್ಲಿ ನಡೆದಿದೆ.

ನವ ಜೋಡಿಗಳ ಸ್ವಾಗತಕ್ಕೆ ಕಾದಿದ್ದವರಿಗೆ ಅಂತಿಮ ದರ್ಶನ

ನವ ಜೋಡಿಗಳು ಮದುವೆಯಾದ ಮರು ದಿನ ಬೆಳಗ್ಗೆ ವಧುವಿನ ಮನೆಯಿಂದ ವರ ಮನೆಗೆ ತೆರಳಲು ಆಟೋ ರಿಕ್ಷಾ ಕರೆದಿದ್ದಾರೆ. ಆಟೋ ರಿಕ್ಷಾ ಮೂಲಕ ಲಗೇಜ್ ಹಿಡಿದು ನಾಲ್ವರು ಹೊರಟಿದ್ದಾರೆ. ವರ ಮನೆಯಲ್ಲಿ ನವ ಜೋಡಿಗಳನ್ನು ಸ್ವಾಗತಿಸಲು ಎಲ್ಲಾ ತಯಾರಿ ಮಾಡಿದ್ದರು. ಸಿಹಿ, ಜ್ಯೂಸ್, ಮಧ್ಯಾಹ್ನದ ಊಟ ಸೇರಿದಂತೆ ಎಲ್ಲವೂ ತಯಾರಿ ಮಾಡಿಕೊಳ್ಳಲಾಗಿತ್ತು. ಬಳಿಕ ನವ ಜೋಡಿಗಳ ಆಗಮನಕ್ಕೆ ಕಾಯುತ್ತಾ ಕುಳಿತಿದ್ದರು. ಇದರ ನಡುವೆ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ತಮ್ಮದಲ್ಲದ ತಪ್ಪಿಗೆ ದುರುಂತ ಅಂತ್ಯ ಕಂಡ ನಾಲ್ವರು

ಆಟೋ ರಿಕ್ಷಾ ಮೂಲಕ ಹೆದ್ದಾರಿಯಲ್ಲಿ ಸಾಗುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಕೋಳಿ ಫಾರಂ ಟ್ರಕ್ ನಿಯಂತ್ರಣ ತಪ್ಪಿ ಆಟೋ ಮೇಲೆ ಪಲ್ಟಿಯಾಗಿದೆ. ದೊಡ್ಡ ಟ್ರಕ್ ಆಟೋ ಮೇಲೆ ಪಲ್ಟಿಯಾದ ಪರಿಣಾಮ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ಘಟನೆಯಲ್ಲಿ ನವ ವಧು ವರರು ಸೇರಿದಂತೆ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕ್ಷಣಾರ್ಧದಲ್ಲೇ ದುರಂತ ನಡೆದು ಹೋಗಿದೆ. ಸ್ಥಳೀಯರು ನೆರವಿಗೆ ಧಾವಿಸಿದರೂ ಏನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಟ್ರಕ್ ಆಟೋ ಮೇಲೆ ಬಿದ್ದ ಪರಿಣಾಮ ಸರಿಸಿ ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲು ಸಾಧ್ಯವಾಗಲಿಲ್ಲ. ಪೊಲೀಸರು, ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ನಾಲ್ವರು ಮೃತಪಟ್ಟಿದ್ದರು.

ಘಟನೆಯಲ್ಲಿ ಬುದುಕಿಳದ ಇಬ್ಬರು

ಅಟೋದ ಮೇಲೆ ಟ್ರಕ್ ಪಲ್ಟಿಯಾಗುತ್ತಿದ್ದಂತೆ ಆಟೋ ಚಾಲಕ ತಕ್ಷಣವೇ ಆಟೋದಿಂದ ಹೊರಕ್ಕೆ ಹಾರಿದ್ದಾರೆ. ಆಟೋ ಚಾಲಕನಿಗೆ ಗಂಭೀರ ಗಾಯಗಳಾದಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ವರನ 19 ವರ್ಷದ ಓರ್ವ ಸಹೋದರಿ ಈ ದುರಂತದಲ್ಲಿ ಬದುಕುಳಿದಿದ್ದಾರೆ. ಸಹೋದರಿಗೂ ಗಂಭೀರ ಗಾಯಗಳಾಗಿವೆ. ಆಧರೆ ನವ ವದು, ವರನ ತಾಯಿ ಹಾಗೂ ಹಿರಿಯ ಸಹೋದರಿ ಮೃತಪಟ್ಟಿದ್ದಾರೆ.

ಚಾಲಕ ಪರಾರಿ

ಅತೀ ವೇಗವಾಗಿ ವಾಹನ ಚಲಾಯಿಸಿ ಅಪಘಾತ ಮಾಡಿಸಿದ ಲಾರಿ ಚಾಲಕ ದುರಂತ ನಡೆದ ಮರು ಕ್ಷಣದಲ್ಲೇ ಪರಾರಿಯಾಗಿದ್ದಾನೆ. ಭೀಕರ ಅಫಘಾತ ಹಾಗೂ, ಚಾಲತ ಪರಾರಿಯಾಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ನವ ಜೋಡಿಗಳನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದ ಕುಟುಂಬಕ್ಕೆ ಮಾಹಿತಿ ತಿಳಿಯುತ್ತಿದ್ದಂತೆ ಆಘಾತವಾಗಿದೆ. ಇತ್ತ ವರ ಹಾಗೂ ವಧುವಿನ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಪೈಕಿ ವರ ಮತ್ತೊರ್ವ ಸಹೋದರಗೆ ಇನ್ನೆರಡು ದಿನದಲ್ಲಿ ನಿಶ್ಚಿತಾರ್ಥ ನಡೆಯಬೇಕಿತ್ತು.



Source link

Leave a Reply

Your email address will not be published. Required fields are marked *