ಟಿ20 ವಿಶ್ವಕಪ್: ನಿನ್ನೆ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Icc T20 World Cup 2026 India Vs West Indies Who Won Yesterday Match Kvn

ಟಿ20 ವಿಶ್ವಕಪ್: ನಿನ್ನೆ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Icc T20 World Cup 2026 India Vs West Indies Who Won Yesterday Match Kvn



ಟಿ20 ವಿಶ್ವಕಪ್: ನಿನ್ನೆ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Icc T20 World Cup 2026 India Vs West Indies Who Won Yesterday Match Kvn

ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್‌-8 ಪಂದ್ಯದಲ್ಲಿ, ವೆಸ್ಟ್‌ಇಂಡೀಸ್‌ ವಿರುದ್ಧ ಭಾರತ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್‌ ಅವರ ಅಜೇಯ 97 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ತಂಡ ಗೆಲುವಿನ ದಡ ಸೇರಿತು.  

ಕೋಲ್ಕತಾ: ‘ವರ್ಚುವಲ್‌ ಕ್ವಾರ್ಟರ್‌ ಫೈನಲ್‌’ ಎನಿಸಿಕೊಂಡಿದ್ದ ಸೂಪರ್‌-8 ಹಂತದ ನಿರ್ಣಾಯಕ ಪಂದ್ಯದಲ್ಲಿ 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ ಗೆದ್ದ ಹಾಲಿ ಚಾಂಪಿಯನ್‌ ಭಾರತ, ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ದ.ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತರೂ ಬಳಿಕ ಜಿಂಬಾಬ್ವೆ, ವಿಂಡೀಸ್‌ನ ಮಣಿಸಿ ತಂಡ ಅಂತಿಮ-4ರ ಘಟ್ಟ ಪ್ರವೇಶಿಸಿತು. ಇದರೊಂದಿಗೆ, 2026ರಲ್ಲಿ ಚಾಂಪಿಯನ್‌ ಆದ ಬಳಿಕ ವಿಂಡೀಸ್‌ ಸತತ 4ನೇ ಬಾರಿಯೂ ಸೆಮೀಸ್‌ ತಲುಪಲು ವಿಫಲವಾಯಿತು.

ಭಾನುವಾರದ ಸೆಮೀಸ್‌ ಕಾದಾಟದಲ್ಲಿ ಭಾರತಕ್ಕೆ ಸಿಕ್ಕಿದ್ದು 54 ವಿಕೆಟ್‌ ಗೆಲುವು. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ತಂಡದಿಂದ ಹೊರಗಿದ್ದ ಸಂಜು ಸ್ಯಾಮ್ಸನ್‌ ಈ ಪಂದ್ಯದಲ್ಲಿ ಭಾರತದ ಆಪತ್ಬಾಂಧವರಾಗಿ ಮೂಡಿಬಂದರು. ಅವರ ಏಕಾಂಗಿ ಹೋರಾಟ ತಂಡವನ್ನು ಸೆಮೀಸ್‌ಗೇರಿಸಿತು.

Scroll to load tweet…

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 4 ವಿಕೆಟ್‌ಗೆ 195 ರನ್ ಕಲೆಹಾಕಿತು. ಈಡನ್‌ ಗಾರ್ಡನ್ಸ್‌ನಲ್ಲಿ ಮಾಡಬಹುದು ಎಂದು ನಂಬಿಕೆ ಇಟ್ಟುಕೊಂಡಿದ್ದ ಭಾರತ, ದೊಡ್ಡ ಗುರಿಯನ್ನು 19.2 ಓವರ್‌ಗಳಲ್ಲಿ ಬೆನ್ನತ್ತಿ ಗೆದ್ದಿತು.

ವಿಂಡೀಸ್ ಸಂಘಟಿತ ಆಟ:

ವಿಂಡೀಸ್‌ ಈ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ತಂಡದ ಯಾರೊಬ್ಬರೂ ಅರ್ಧಶತಕ ಬಾರಿಸದಿದ್ದರೂ ಸ್ಕೋರ್‌ 200ರ ಸನಿಹಕ್ಕೆ ಬಂತು. ರಾಸ್ಟನ್‌ ಚೇಸ್‌ 40, ಜೇಸನ್‌ ಹೋಲ್ಡರ್‌ 22 ಎಸೆತಕ್ಕೆ ಔಟಾಗದೆ 37, ರೋವ್ಮನ್‌ ಪೊವೆಲ್‌ 19 ಎಸೆತಕ್ಕೆ ಔಟಾಗದೆ 34, ಶಾಯ್‌ ಹೋಪ್‌ 32, ಹೆಟ್ಮೇಯರ್‌ 12 ಎಸೆತಕ್ಕೆ 27 ರನ್‌ ಸಿಡಿಸಿದರು. ಭಾರತದ ಎಲ್ಲಾ 5 ಬೌಲರ್‌ಗಳೂ ತಲಾ 35+ ರನ್‌ ಬಿಟ್ಟುಕೊಟ್ಟರು. ಬೂಮ್ರಾ 36 ರನ್‌ಗೆ 2 ವಿಕೆಟ್‌ ಕಿತ್ತರು.

ಸ್ಯಾಮ್ಸನ್‌ ಸಾಹಸ:

ಭಾರತದ ಪಾಲಿಗೆ ಬ್ಯಾಟಿಂಗ್‌ನಲ್ಲಿ ನೆರವಾಗಿದ್ದ ಸಂಜು ಸ್ಯಾಮ್ಸನ್‌ ಮಾತ್ರ. ಅಭಿಷೇಕ್‌ ಶರ್ಮಾ(10) ಮತ್ತೆ ವಿಫಲರಾದರೆ, ಇಶಾನ್‌ ಕಿಶನ್‌(10), ನಾಯಕ ಸೂರ್ಯಕುಮಾರ್‌(18) ಆಟ ಹೆಚ್ಚು ಹೊತ್ತು ಇರಲಿಲ್ಲ. ತಿಲಕ್‌ ವರ್ಮಾ 15 ಎಸೆತಕ್ಕೆ 27 ರನ್‌ ಗಳಿಸಿದರೂ 15ನೇ ಓವರ್‌ನಲ್ಲಿ ಔಟಾದರು. ಹಾರ್ದಿಕ್‌ ಪಾಂಡ್ಯ 17 ರನ್‌ಗೆ ಔಟಾದ ಬಳಿಕ ಸಂಜು 20ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌, ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದರು. ಕೊನೆವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಅವರು, 50 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 97 ರನ್‌ ಸಿಡಿಸಿದರು.

ಸ್ಕೋರ್‌:

ವಿಂಡೀಸ್‌ 20 ಓವರ್‌ನಲ್ಲಿ 195/4 (ರಾಸ್ಟನ್‌ ಚೇಸ್‌ 30, ಹೋಲ್ಡರ್‌ 37*, ಪೊವೆಲ್‌ 34*, ಬೂಮ್ರಾ 2-36), ಭಾರತ 19.2 ಓವರ್‌ಗಳಲ್ಲಿ 199/5 (ಸ್ಯಾಮ್ಸನ್‌ 97*, ತಿಲಕ್‌ 27, ಹೋಲ್ಡರ್‌ 2-38)ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌

97 ರನ್: ಕೊಹ್ಲಿಯನ್ನು ಹಿಂದಿಕ್ಕಿದ ಸ್ಯಾಮ್ಸನ್‌

ಸಂಜು ಔಟಾಗದೆ 97 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಚೇಸಿಂಗ್‌ ವೇಳೆ ಭಾರತೀಯ ಆಟಗಾರನ ಗರಿಷ್ಠ ಸ್ಕೋರ್‌. 2016ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 2022ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ಗಳಿಸಿದ್ದ ತಲಾ 82 ರನ್‌ಗಳ ದಾಖಲೆಯನ್ನು ಸಂಜು ಮುರಿದರು.

6ನೇ ಬಾರಿ ಭಾರತ ಸೆಮಿಫೈನಲ್‌ ಪ್ರವೇಶ

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ 6ನೇ ಬಾರಿ ಸೆಮಿಫೈನಲ್ ತಲುಪಿದೆ. 2007ರಲ್ಲಿ ಚಾಂಪಿಯನ್ ಆಗಿದ್ದ ತಂಡ 2014ರಲ್ಲಿ ರನ್ನರ್‌-ಅಪ್‌ ಆಗಿತ್ತು. 2016, 2022ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿತ್ತು ಮತ್ತು 2024ರಲ್ಲಿ ಟ್ರೋಫಿ ಗೆದ್ದಿತ್ತು.



Source link

Leave a Reply

Your email address will not be published. Required fields are marked *