Headlines

ಮೆಟ್ರೋ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಅಷ್ಟೇ! ರಾಜಕೀಯ ನಾಯಕರ ಟಾಕ್‌ ವಾರ್‌ ನಿಲ್ಲಿಸಲು BMRCL ಮಹಾಪ್ಲ್ಯಾನ್! | Namma Metro Fare Hike On Cards In Bengaluru As Bmrcl Weighs New Fare Committee

ಮೆಟ್ರೋ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಅಷ್ಟೇ! ರಾಜಕೀಯ ನಾಯಕರ ಟಾಕ್‌ ವಾರ್‌ ನಿಲ್ಲಿಸಲು BMRCL ಮಹಾಪ್ಲ್ಯಾನ್! | Namma Metro Fare Hike On Cards In Bengaluru As Bmrcl Weighs New Fare Committee



ಮೆಟ್ರೋ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ ಅಷ್ಟೇ! ರಾಜಕೀಯ ನಾಯಕರ ಟಾಕ್‌ ವಾರ್‌ ನಿಲ್ಲಿಸಲು BMRCL ಮಹಾಪ್ಲ್ಯಾನ್! | Namma Metro Fare Hike On Cards In Bengaluru As Bmrcl Weighs New Fare Committee

 ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ವಿರೋಧದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಈ ಪ್ರಸ್ತಾವನೆಯ ಬಗ್ಗೆ, ಹೊಸ ದರ ನಿಗದಿ ಸಮಿತಿ ರಚನೆ ಸೇರಿದಂತೆ ಅಂತಿಮ ನಿರ್ಧಾರವನ್ನು ಮುಂಬರುವ BMRCL ಬೋರ್ಡ್ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ (BMRCL) ವತಿಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಕುರಿತಾಗಿ ಮಹತ್ವದ ಚರ್ಚೆಗಳು ನಡೆಯುತ್ತಿದ್ದು, ಈ ವಿಚಾರ ಇದೀಗ ರಾಜಕೀಯ ವಲಯದಲ್ಲೂ ಭಾರೀ ‘ಟಾಕ್ ವಾರ್’ಗೆ ಕಾರಣವಾಗಿದೆ. ಟಿಕೆಟ್ ದರ ಏರಿಕೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿರುವ ನಡುವೆಯೇ, BMRCL ನೂತನ ದರ ನಿಗದಿ ಸಮಿತಿ ರಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸದ್ಯಕ್ಕೆ ತಾತ್ಕಾಲಿಕ

ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ

ಇತ್ತೀಚೆಗೆ ಹಾಲಿ ದರ ನಿಗದಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಶೇ.5ರಷ್ಟು ಮೆಟ್ರೋ ಟಿಕೆಟ್ ದರ ಏರಿಕೆ ಮಾಡುವ ಪ್ರಸ್ತಾವ ಮುಂದಿಟ್ಟಿದ್ದರೂ, ರಾಜಕೀಯ ವಿರೋಧ ಮತ್ತು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ BMRCL ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಆದರೆ, ಸಂಸ್ಥೆಗೆ ಉಂಟಾಗುತ್ತಿರುವ ಆರ್ಥಿಕ ಒತ್ತಡ, ನಿರ್ವಹಣಾ ವೆಚ್ಚ ಹಾಗೂ ಸಾಲದ ಭಾರವನ್ನು ಗಮನದಲ್ಲಿಟ್ಟುಕೊಂಡರೆ, ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಟಿಕೆಟ್ ದರ ಏರಿಕೆ ಸಂಬಂಧ ಹಾಲಿ ದರ ನಿಗದಿ ಸಮಿತಿ ನೀಡಿರುವ ಶಿಫಾರಸ್ಸುಗಳ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಈ ಶಿಫಾರಸ್ಸುಗಳನ್ನು ತಕ್ಷಣ ಜಾರಿಗೆ ತರಬಾರದು ಎಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ, ಹಾಲಿ ಸಮಿತಿಯ ಶಿಫಾರಸ್ಸಿನಂತೆ ದರ ಏರಿಕೆ ಮಾಡಬೇಕೋ ಅಥವಾ ಹೊಸ ದರ ನಿಗದಿ ಸಮಿತಿ ರಚಿಸಿ ಅದರ ಶಿಫಾರಸ್ಸಿನ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳಬೇಕೋ ಎಂಬ ದ್ವಂದ್ವ ಸ್ಥಿತಿ BMRCL ಮುಂದಿದೆ.

ಶಿಫಾರಸ್ಸಿನಂತೆ ಶೇ.5ರಷ್ಟು ದರ ಏರಿಕೆ ಮಾಡುವುದು ಒಂದೇ ಮಾರ್ಗ!

ನಿಯಮಗಳ ಪ್ರಕಾರ, ದರ ನಿಗದಿ ಸಮಿತಿಯ ಶಿಫಾರಸ್ಸಿಲ್ಲದೆ ಮೆಟ್ರೋ ಟಿಕೆಟ್ ದರವನ್ನು ಏರಿಕೆ ಅಥವಾ ಇಳಿಕೆ ಮಾಡಲು ಅವಕಾಶವಿಲ್ಲ. ಹೀಗಾಗಿ, ಹಾಲಿ ಸಮಿತಿ ನೀಡಿರುವ ಶಿಫಾರಸ್ಸಿನಂತೆ ಶೇ.5ರಷ್ಟು ದರ ಏರಿಕೆ ಮಾಡುವುದು ಒಂದೇ ಮಾರ್ಗವಾಗಿರಬಹುದು. ಇಲ್ಲವೇ, ಹೊಸ ದರ ನಿಗದಿ ಸಮಿತಿ ರಚಿಸಿ, ಆ ಸಮಿತಿ ನೀಡುವ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು BMRCL ಬೋರ್ಡ್ ಮೀಟಿಂಗ್ ಅತ್ಯಂತ ಮಹತ್ವ ಪಡೆದಿದೆ. ನಿನ್ನೆ ನಡೆಯಬೇಕಿದ್ದ ಬೋರ್ಡ್ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಶೀಘ್ರದಲ್ಲೇ ಮತ್ತೊಮ್ಮೆ ಬೋರ್ಡ್ ಮೀಟಿಂಗ್ ನಡೆಸಲು ತಯಾರಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆ, ನೂತನ ದರ ನಿಗದಿ ಸಮಿತಿ ರಚನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಒಟ್ಟಾರೆ, ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವು ಆಡಳಿತಾತ್ಮಕ, ಆರ್ಥಿಕ ಹಾಗೂ ರಾಜಕೀಯ ಆಯಾಮಗಳನ್ನು ಹೊಂದಿರುವ ಮಹತ್ವದ ವಿಷಯವಾಗಿದ್ದು, BMRCL ಬೋರ್ಡ್ ಮೀಟಿಂಗ್ ನಂತರವೇ ಪ್ರಯಾಣಿಕರಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *