ಗೌಡ್ರ ಬಲವಂತಕ್ಕೆ ವಿತ್ತ ಸಚಿವನಾಗಿದ್ದೆ: ನಂಬಿಕಸ್ಥ ಬೇಕು ಅಂತ ವಿತ್ತ ಸಚಿವ ಮಾಡಿದ್ರು: ಸಿದ್ದು | I Asked Revenue Department He Made Me Finance Minister Siddaramaiah Remembers Devegowda

1994ರಲ್ಲಿ ದೇವೇಗೌಡರು ತಮ್ಮನ್ನು ಬಲವಂತವಾಗಿ ವಿತ್ತ ಸಚಿವರನ್ನಾಗಿ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಸ್ಮರಿಸಿಕೊಂಡರು. ತಮಗೆ ಕಂದಾಯ ಇಲಾಖೆಯ ಆಸಕ್ತಿ ಇದ್ದರೂ, ನಂಬಿಕಸ್ಥ ವ್ಯಕ್ತಿ ಬೇಕೆಂಬ ಕಾರಣಕ್ಕೆ ದೇವೇಗೌಡರು ಆರ್ಥಿಕ ಇಲಾಖೆಯನ್ನು ನೀಡಿದರೆಂದು ಅವರು ವಿವರಿಸಿದರು.

ಗೌಡ್ರ ಬಲವಂತಕ್ಕೆ ವಿತ್ತ ಸಚಿವನಾಗಿದ್ದೆ

ಬೆಂಗಳೂರು: ನನಗೆ ಮೊದಲ ಬಾರಿಗೆ ದೇವೇಗೌಡ ಅವರು ಆರ್ಥಿಕ ಇಲಾಖೆ ನೀಡಿದಾಗ ಬೇಡ ಎಂದಿದ್ದೆ. ಆದರೆ, ನಂಬಿಕಸ್ಥ ಬೇಕು ಎಂಬ ಕಾರಣಕ್ಕಾಗಿ ಬಲವಂತವಾಗಿ ನನ್ನನ್ನು ವಿತ್ತ ಸಚಿವನನ್ನಾಗಿ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 1994ರಲ್ಲಿ ಮೊದಲ ಬಾರಿಗೆ ವಿತ್ತ ಸಚಿವರನ್ನಾಗಿ ಮಾಡಿದ್ದು ಯಾರು ಎಂಬ ಕುರಿತು ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸಿದ್ದರಾಮಯ್ಯ ಅವರನ್ನು ದೇವೇಗೌಡ ಅವರು ಹುಡುಕಿ ಮೊದಲ ಬಾರಿಗೆ ಆರ್ಥಿಕ ಇಲಾಖೆಯ ಹೊಣೆ ನೀಡಿದರು ಎಂದು ಹೇಳಿದರು.

ಇದನ್ನೂ ಓದಿ: ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ₹4000ವರೆಗೂ ಬಿಕರಿ: ಇಂದು ಬೆಂಗಳೂರಿನ 30% ಹೋಟೆಲ್‌ಗಳು ಬಂದ್‌ ಸಂಭವ

ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 1994ರಲ್ಲಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾಲಪ್ಪ ಮೆಡಿಕಲ್‌ ಕಾಲೇಜಿನಲ್ಲಿ ನಾನು, ದೇವೇಗೌಡ, ಪಿಜಿಆ‌ರ್ ಸಿಂಧ್ಯಾ, ಆರ್.ಎಲ್.ಜಾಲಪ್ಪ ಅವರು ಸಚಿವ ಸಂಪುಟ ರಚನೆ ಕುರಿತು ಚರ್ಚೆ ಮಾಡುತ್ತಿದ್ದೆವು. ಆಗ ನಾನು ಕಂದಾಯ ಇಲಾಖೆ ನೀಡುವಂತೆ ಕೋರಿದ್ದೆ. ಆದರೆ, ಜಾಲಪ್ಪ ಅವರು ತಮಗೆ ಕಂದಾಯ ಇಲಾಖೆ ನೀಡುವಂತೆ ಪಟ್ಟು ಹಿಡಿದರು. ಕೊನೆಗೆ ದೇವೇಗೌಡ ಅವರು ಆರ್ಥಿಕ ಇಲಾಖೆ ವಹಿಸಿಕೊಳ್ಳುವಂತೆ ತಿಳಿಸಿದರು. ಆದರೆ, ನಾನು ಬೇಡ ಎಂದೆ. ಆದರೂ ನಂಬಿಕಸ್ಥ ಬೇಕು ಎಂದು ಬಲವಂತವಾಗಿ ನನಗೆ ಆರ್ಥಿಕ ಸಚಿವನನ್ನಾಗಿ ಮಾಡಿದರೂ ಎಂದು ಸ್ಮರಿಸಿದರು. ಆಗ ಅಶೋಕ್, ಅದಕ್ಕಾಗಿಯಾದರೂ ನೀವು ದೇವೇಗೌಡರಿಗೆ ಧನ್ಯವಾದ ಹೇಳಬೇಕು ಎಂದು ಕಾಲೆಳೆದರು.

ಇದನ್ನೂ ಓದಿ: ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವಂಥ ನಿಲ್ದಾಣ : ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ

Source link

Leave a Reply

Your email address will not be published. Required fields are marked *