Headlines

ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat

ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat



ಪಾನಿಪುರಿ ವ್ಯಾಪಾರಿಯ ಸಂಪಾದನೆ ದಿನಕ್ಕೆ 3,000, ತಿಂಗಳಿಗೆ 90,000! ವರ್ಷದ ಲೆಕ್ಕ ಹಾಕಿದ ನೆಟ್ಟಿಗರು ಶಾಕ್! | India Best Street Food Business Idea Pani Puri Vendor Earns 90000 A Month Video Goes Viral Sat

ಬೀದಿಬದಿ ಪಾನಿಪುರಿ ಮಾರಾಟಗಾರರೊಬ್ಬರು ದಿನಕ್ಕೆ 3,000 ರೂ.ನಂತೆ ತಿಂಗಳಿಗೆ 90,000 ರೂ. ಸಂಪಾದಿಸುತ್ತಿರುವ ಸುದ್ದಿ ವೈರಲ್ ಆಗಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು ಇದನ್ನು ಖಚಿತಪಡಿಸಿದ್ದು, ಈ ವ್ಯಾಪಾರಿಯ ಕಠಿಣ ಪರಿಶ್ರಮ ಮತ್ತು ಆದಾಯದ ಬಗ್ಗೆ ನೆಟ್ಟಿಗರಲ್ಲಿ ಚರ್ಚೆ ಹುಟ್ಟುಹಾಕಿದೆ.

ಭಾರತದಲ್ಲಿ ಸ್ಟ್ರೀಟ್ ಫುಡ್‌ಗೆ ದೊಡ್ಡ ಮಾರುಕಟ್ಟೆ ಇದೆ. ನಮ್ಮ ಕರ್ನಾಟಕದಲ್ಲಿ ಚಹಾ, ಬಗೆಬಗೆಯ ವಡೆ, ಪಫ್ಸ್, ಸಮೋಸ ಫೇಮಸ್ ಆದ್ರೆ, ಉತ್ತರ ಭಾರತದಲ್ಲಿ ಈ ಜಾಗವನ್ನು ಹೆಚ್ಚಾಗಿ ಪಾನಿಪುರಿಯೇ ಆಕ್ರಮಿಸಿಕೊಂಡಿದೆ. ಇಂತಹ ಒಬ್ಬ ಬೀದಿಬದಿ ಪಾನಿಪುರಿ ವ್ಯಾಪಾರಿ ದಿನಕ್ಕೆ 3,000 ರೂಪಾಯಿಯಂತೆ ತಿಂಗಳಿಗೆ 90,000 ರೂಪಾಯಿ ಸಂಪಾದಿಸುತ್ತಾರೆ ಎಂಬ ಸುದ್ದಿ ಕೇಳಿ ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ.

ದಿನಕ್ಕೆ 3,000, ತಿಂಗಳಿಗೆ 90,000, ವರ್ಷಕ್ಕೆ 10.8 ಲಕ್ಷ!

ರುಚಿಕರವಾದ ಆಲೂಗಡ್ಡೆ ಅಥವಾ ಖಾರವಾದ ಬಿಳಿ ಬಟಾಣಿ ಮಿಶ್ರಣವನ್ನು ತುಂಬಿದ ಗರಿಗರಿಯಾದ ಪೂರಿ ಜೊತೆಗೆ, ಖಾರ, ಮಸಾಲೆಯುಕ್ತ ಮತ್ತು ಸ್ವಲ್ಪ ಹುಳಿ ಇರುವ ನೀರನ್ನು ಸೇರಿಸಿ ತಿನ್ನಲು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಜನರ ಈ ಇಷ್ಟವೇ ಪಾನಿಪುರಿ ವ್ಯಾಪಾರಿಯ ಜೇಬು ತುಂಬಿಸುತ್ತಿದೆ. ಹೌದು, ತಿಂಗಳಿಗೆ ಸುಮಾರು 90,000 ರೂಪಾಯಿ ಸಂಪಾದಿಸುವ ಈ ಪಾನಿಪುರಿ ವ್ಯಾಪಾರಿಯ ವಾರ್ಷಿಕ ಆದಾಯ 10.8 ಲಕ್ಷ ರೂಪಾಯಿ! 

ಕ್ಯಾಸಿ ಪೆರೇರಾ ಎಂಬ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡ ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸಿದೆ. ಈ ವಿಡಿಯೋದಲ್ಲಿ ಪಾನಿಪುರಿ ಮಾರಾಟಗಾರರೊಬ್ಬರ ದಿನಚರಿಯನ್ನು ತೋರಿಸಲಾಗಿದೆ. ಒಂದು ಪ್ಲೇಟ್‌ಗೆ 30 ರೂಪಾಯಿಯಂತೆ, ಆ ಸ್ಟಾಲ್‌ನಿಂದ ದಿನಕ್ಕೆ 80 ರಿಂದ 100 ಪ್ಲೇಟ್ ಪಾನಿಪುರಿ ಮಾರಾಟವಾಗುತ್ತದೆ. ಅಂದರೆ, ದಿನಕ್ಕೆ 3,000 ರೂಪಾಯಿ ವ್ಯಾಪಾರ ಆಗುತ್ತದೆ. ಇದು ನಿಜವೇ ಎಂದು ತಿಳಿಯಲು, ಕ್ಯಾಸಿ ಪೆರೇರಾ ಅವರೇ ಸಂಜೆ 4:00 ರಿಂದ ರಾತ್ರಿ 10:00 ರವರೆಗೆ ಆ ವ್ಯಾಪಾರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೀಕ್ಷಿಸಿ

ನೆಟ್ಟಿಗರಿಂದ ಮೆಚ್ಚುಗೆ

ವಿಡಿಯೋ ವೈರಲ್ ಆಗುತ್ತಿದ್ದಂತೆ, ಈ ಆದಾಯ ಸ್ಥಿರವಾಗಿದೆಯೇ ಮತ್ತು ದೀರ್ಘಕಾಲದವರೆಗೆ ಇದನ್ನು ನಂಬಬಹುದೇ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಪಾನಿಪುರಿ ವ್ಯಾಪಾರಿಯನ್ನು ಹೊಗಳಿದ್ದಾರೆ. “ಬ್ರೋ, ಯಾವುದೇ ಅಂಗಡಿ ಮಾಲೀಕ ಬಿಕಾಂ ಪದವೀಧರನಿಗಿಂತ ಹೆಚ್ಚು ಸಂಪಾದಿಸಬಹುದು. ಬಿಕಾಂ ಒಂದು ವೇಸ್ಟ್ ಡಿಗ್ರಿ ಇದ್ದ ಹಾಗೆ,” ಎಂದು ನಿರಾಶೆಗೊಂಡ ಬಿಕಾಂ ಪದವೀಧರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಹಾರದ ಬ್ಯುಸಿನೆಸ್‌ನಲ್ಲಿ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಮುಖ್ಯ. ಅಂತಹ ಸ್ಥಳದಲ್ಲಿ ಗುಣಮಟ್ಟದ ಆಹಾರವನ್ನು ನೀಡಿದರೆ ಈ ಆದಾಯದಲ್ಲಿ ಆಶ್ಚರ್ಯವೇನಿಲ್ಲ, ಹೆಚ್ಚಿನ ಹೋಟೆಲ್‌ಗಳು ದೊಡ್ಡ ಲಾಭ ಗಳಿಸುತ್ತವೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು, ತಿಂಗಳಿಗೆ 90,000 ರೂಪಾಯಿ ಬರುವಾಗ, ಅವರ ಖರ್ಚು ಎಷ್ಟು, ಅವರ ಉಳಿತಾಯ ಎಷ್ಟು ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದಾರೆ.



Source link

Leave a Reply

Your email address will not be published. Required fields are marked *