ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ 250 ಮತ ಪಡೆದು ಗೆಲುವು- ಶಾಸಕತ್ವ ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶ ರದ್ದು | Malur Congress Mla Nanjegowda Wins By 250 Votes

ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ 250 ಮತ ಪಡೆದು ಗೆಲುವು- ಶಾಸಕತ್ವ ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶ ರದ್ದು | Malur Congress Mla Nanjegowda Wins By 250 Votes



ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ 250 ಮತ ಪಡೆದು ಗೆಲುವು- ಶಾಸಕತ್ವ ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶ ರದ್ದು | Malur Congress Mla Nanjegowda Wins By 250 Votes

2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಮರು ಮತ ಎಣಿಕೆ ಫಲಿತಾಂಶ ಪ್ರಕಟವಾಗಿದೆ. ಗುರುವಾರ ಹಾಲ್‌ನಲ್ಲಿಯೇ ತೆರೆದ ಪೀಠ ನಂಜೇಗೌಡ ಆಯ್ಕೆಯನ್ನು ಸಿಂಧುಗೊಳಿಸಿದೆ.

ನವದೆಹಲಿ : 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆವರಣದಲ್ಲಿಯೇ ಮರು ಮತ ಎಣಿಕೆ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರು 50,957 ಮತಗಳು, ಬಿಜೆಪಿಯ ಕೆ.ಎಸ್‌.ಮಂಜುನಾಥ ಗೌಡ ಅವರು 50,707 ಮತಗಳನ್ನು ಪಡೆದಿದ್ದು, ತನ್ಮೂಲಕ ನಂಜೇಗೌಡ ಅವರು ಜಯ ಸಾಧಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ನಂಜೇಗೌಡ ಆಯ್ಕೆಯನ್ನು ಸುಪ್ರೀಂ ಕೋರ್ಟ್‌ ಸಿಂಧುಗೊಳಿಸಿದೆ.

ನಂಜೇಗೌಡ ಆಯ್ಕೆ ಸಿಂಧು

2023ರಲ್ಲಿ 248 ಮತಗಳಿಂದ ಪರಾಭವಗೊಂಡಿದ್ದ ಮಂಜುನಾಥ ಅವರು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪರಿಣಾಮ ಹೈಕೋರ್ಟ್‌ ನಂಜೇಗೌಡರ ಶಾಸಕತ್ವ ಅಸಿಂಧುಗೊಳಿಸಿ, ಮರು ಮತ ಎಣಿಕೆಗೆ ಆದೇಶಿಸಿತ್ತು. ಅಕ್ಟೋಬರ್‌ನಲ್ಲಿ ಇದಕ್ಕೆ ತಡೆ ಕೊಟ್ಟಿದ್ದ ಸುಪ್ರೀಂ, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆಯೇ ನ.11ರಂದು ಮರು ಮತ ಎಣಿಕೆ ನಡೆಸಿದ ಆಯೋಗ ಸುಪ್ರೀಂಗೆ ಫಲಿತಾಂಶ ಸಲ್ಲಿಸಿತ್ತು. ಇದನ್ನು ಗುರುವಾರ ಹಾಲ್‌ನಲ್ಲಿಯೇ ತೆರೆದ ಪೀಠ ನಂಜೇಗೌಡ ಆಯ್ಕೆಯನ್ನು ಸಿಂಧುಗೊಳಿಸಿದೆ.

ಏನಿದು ಪ್ರಕರಣ:

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ಬಿಜೆಪಿಯ ಮಂಜುನಾಥ ಗೌಡ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ನಂಜೇಗೌಡರ ಸದಸ್ಯತ್ವ ರದ್ದುಗೊಳಿಸಿ, 4 ವಾರಗಳಲ್ಲಿ ಮರು ಮತ ಎಣಿಕೆ ಮಾಡುವಂತೆ ಆಯೋಗಕ್ಕೆ ಸೂಚಿಸಿತ್ತು. ನಂಜೇಗೌಡ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಪೀಠವು ಹೈಕೋರ್ಟ್‌ ಆದೇಶಕ್ಕೆ ತಡೆ ಕೊಟ್ಟು, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಗುರುವಾರ ಇದನ್ನು ಪ್ರಕಟಿಸಿದೆ.

– ಸುಪ್ರೀಂಕೋರ್ಟ್‌ ಹಾಲಲ್ಲಿ ಮುಚ್ಚಿದ ಲಕೋಟೆ ಫಲಿತಾಂಶ ಬಹಿರಂಗ



Source link

Leave a Reply

Your email address will not be published. Required fields are marked *