Headlines

Leave issues ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್ | Shocking Loco Pilot Forced To Undress To Prove Piles Surgery After Senior Denies Sick Leave

Leave issues ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್ | Shocking Loco Pilot Forced To Undress To Prove Piles Surgery After Senior Denies Sick Leave



Leave issues ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್ | Shocking Loco Pilot Forced To Undress To Prove Piles Surgery After Senior Denies Sick Leave

ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್, ಅಧಿಕಾರಿಗೆ ಮುಂದೆ ಮೆಡಿಕಲ್ ಸರ್ಟಿಫಿಕೇಟ್, ಔಷಧಿ ಎಲ್ಲಾ ಮುಂದಿಟ್ಟರೂ ಅಧಿಕಾರಿ ನಂಬಲೇ ಇಲ್ಲ, ಬೇರೆ ದಾರಿ ಕಾಣದೆ ಪ್ಯಾಂಟ್ ಬಿಚ್ಚಿ ತೋರಿಸಿದ್ದಾನೆ. 

ನವದೆಹಲಿ (ಮಾ.04) ಖಾಸಗಿ ಇರಲಿ ಸರ್ಕಾರಿ ಉದ್ಯೋಗ ಇರಲಿ ಉದ್ಯೋಗಿಗಳು ಎದುರಿಸುವ ಅತೀ ದೊಡ್ಡ ಸವಾಲು ರಜೆ. ಅಗತ್ಯ ಸಮಯದಲ್ಲಿ, ಕುಟುಂಬದ ಕಾರ್ಯಕ್ರಮಗಳಿಗೆ ಬೇಕಾದಷ್ಟು ರಜೆ ಸಿಗಲ್ಲ. ಮದುವೆ ದಿನವೂ ಕೆಲಸ ಮಾಡಲು ಸೂಚಿಸದ ಬಾಸ್ ಹೀಗೆ ಒಂದಷ್ಟು ಕ್ರೌರ್ಯದ ಘಟನೆಗಳು ನಡೆಯುತ್ತಲೇ ಇರುತ್ತೆ. ಇದೀಗ ಭಾರತೀಯ ರೈಲ್ವೇಯ ಲೋಕೋ ಪೈಲೆಟ್ ಮೂಲವ್ಯಾಧಿ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ರಜೆ ಕೇಳಿದರೆ ಹಿರಿಯ ಅಧಿಕಾರಿ ನಂಬಲೇ ಇಲ್ಲ, ಕೊನೆಗೆ ಪ್ಯಾಂಟ್ ಬಿಚ್ಚಿ ತೋರಿಸಿದ ಘಟನೆ ನಡೆದಿದೆ.

ಏನಿದು ಘಟನೆ?

ರಾಜೇಶ್ ಮೀನಾ ಭಾರತೀಯ ರೈಲ್ವೇಯಲ್ಲಿ ಲೋಕೋ ಪೈಲೆಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ರಾಜೇಶ್ ಮೀನಾಗೆ ಪೈಲ್ಸ್ ಸಮಸ್ಯೆ ಎದುರಾಗಿದೆ. ಹೀಗಾಗಿ ತುರ್ತು ರಜೆ ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾನೆ. ತಪಾಸಣೆ ನಡೆಸಿದ ವೈದ್ಯರು ಸರ್ಜರಿ ಮಾಡಲು ಸೂಚಿಸಿದ್ದಾರೆ. ಹೀಗಾಗಿ ತುರ್ತು ರಜೆ ಅಡಿ ಮೂರು ದಿನ ರಜೆ ಪಡೆದಿದ್ದಾನೆ. ಬಳಿಕ ಸರ್ಜರಿ ಮಾಡಲಾಗಿದೆ.

ಮೂರು ದಿನವಾದರೂ ಲೋಕೋ ಪೈಲೆಟ್ ರಾಜೇಶ್ ಮೀನಾ ಕರ್ತವ್ಯಕ್ಕೆ ಹಾಜರಾಗಿಲ್ಲ. ಇದು ಹಿರಿಯ ಅಧಿಕಾರಿ ರತನ್ ಕುಮಾರ್ ಸಿಟ್ಟು ತೀವ್ರಗೊಳಿಸಿದೆ. ಆಸ್ಪತ್ರೆಯಿಂದ ಕರೆ ಮಾಡಿ ತನಗೆ ವಿಶ್ರಾಂತಿಗೆ ಕನಿಷ್ಠ 15 ದಿನ ರಜೆ ನೀಡುವಂತೆ ಮನವಿ ಮಾಡಿದ್ದಾನೆ. ಇತ್ತ ಗರಂ ಆದ ಮ್ಯಾನೇಜರ್ , ಇಲ್ಲ ಸಲ್ಲದ ಕಾರಣ ಹೇಳಿ ರಜೆ ತೆಗೆದುಕೊಳ್ಳುವುದು ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದಾರೆ.

ಇತ್ತ ಕನಿಷ್ಠ 2 ವಾರ ವಿಶ್ರಾಂತಿ ಪಡೆಯಲು ವೈದ್ಯರು ರಾಜೇಶ್ ಮೀನಾಗೆ ಸೂಚಿಸಿದ್ದರು. ಹೀಗಾಗಿ ಬೇರೆ ದಾರಿ ಕಾಣದ ನೇರವಾಗಿ ಡಿವಿಶನಲ್ ಕಚೇರಿಗೆ ಆಗಮಿಸಿದ ಲೋಕೋ ಪೈಲೆಟ್ ತನ್ನ ಸರ್ಜರಿ ವಿವರದ ಸರ್ಟಿಫಿಕೇಟ್, ಆಸ್ಪತ್ರೆ ದಾಖಲಾದ ದಾಖಲೆಗಳು, ಐಷಧಿಗಳು ಎಲ್ಲವನ್ನೂ ಮ್ಯಾನೇಜರ್ ಮುಂದಿಟ್ಟು ವಿಶ್ರಾಂತಿಗಾಗಿ ರಜೆಯ ಅಗತ್ಯವಿದೆ ಎಂದಿದ್ದಾನೆ.

ಇಷ್ಟೆಲ್ಲಾ ದಾಖಲೆ ಇಟ್ಟರೂ ಮ್ಯಾನೇಜರ್ ನಂಬಲೇ ಇಲ್ಲ. ಲೋಕೋ ಪೈಲೆಟ್ ಪರಿ ಪರಿಯಾಗಿ ಬೇಡಿಕೊಂಡರೂ ರಜೆ ನೀಡಲೇ ಇಲ್ಲ. ಕೊನೆಗೆ ಬೇರೆ ದಾರಿ ಕಾಣದ ಲೋಕೋ ಪೈಲೆಟ್ ಪ್ಯಾಂಚ್ ಬಿಚ್ಚಿ ಮ್ಯಾನೇಜರ್‌ಗೆ ತನ್ನ ಸರ್ಜರಿ ತೋರಿಸಿದ್ದಾನೆ. ಮ್ಯಾನೇಜರ್, ಇತರ ಸಿಬ್ಬಂದಿಗಳು ಎದುರಿನಲ್ಲಿ ಪ್ಯಾಂಟ್ ಬಿಚ್ಚಿ ತೋರಿಸಿದ ಘಟನೆಯನ್ನು ಇತರ ಸಿಬ್ಬಂದಿಗಳು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ರೈಲ್ವೇ ನೌಕರರ ಗ್ರೂಪ್, ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಡೆ ವೈರಲ್ ಆಗಿದೆ.

ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ ಗರಂ

ಇತ್ತ ಲೋಕೋ ಪೈಲೆಟ್ ರಾಜೇಶ್ ಮೀನಾ, ಲೋಕೋ ರನ್ನಿಂಗ್ ಸ್ಟಾಪ್ ಅಸೋಸಿಯೇಶನ್‌ಗೆ ದೂರು ನೀಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಘಟನೆ ಅಧಿಕಾರಿ ಬಳಿ ಸ್ಪಷ್ಟನೆ ಕೇಳಿದೆ. ಇಷ್ಟೇ ಅಲ್ಲ ಅಧಿಕಾರಿ ವಿರುದ್ದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Scroll to load tweet…



Source link

Leave a Reply

Your email address will not be published. Required fields are marked *