ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ | Daughter Emotional Note To Father Captain Sumit Kapoor Who Died In Plane Crash

ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ | Daughter Emotional Note To Father Captain Sumit Kapoor Who Died In Plane Crash



ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ | Daughter Emotional Note To Father Captain Sumit Kapoor Who Died In Plane Crash

ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಬಲಿ ಪಡೆದ ಲಿಯರ್‌ಜೆಟ್ ವಿಮಾನದಲ್ಲಿದ್ದ ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ದುರಂತರದಲ್ಲಿ ಸಾವನ್ನಪ್ಪಿದ್ದು, ಅವರ ಪುತ್ರಿ ತಮ್ಮ ತಂದೆಯನ್ನು ಸ್ಮರಿಸಿಕೊಂಡು ಭಾವುಕರಾಗಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್‌ ಅನೇಕರನ್ನು ಭಾವುಕರಾಗಿಸಿದೆ. 

ವಿಮಾನ ಅಪಘಾತದಲ್ಲಿ ಅಪ್ಪನ ಕಳೆದುಕೊಂಡ ಪುತ್ರಿಯ ಭಾವುಕ ಬರಹ

ಪ್ರೀತಿಪಾತ್ರರ ಹಠಾತ್ ಸಾವು ಎಂಥಾ ಕಲ್ಲು ಹೃದಯದವರನ್ನು ಕೊರಗುವಂತೆ ಮಾಡುತ್ತದೆ. ಅವರೊಂದಿಗೆ ಕಳೆದ ನೆನಪುಗಳು ಕಾಡಲು ಶುರುವಾಗುವುದರ ಜೊತೆಗೆ ಅವರು ಬದುಕಿಲ್ಲ ಎಂಬ ವಿಚಾರವನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಅದೇ ರೀತಿ ಮೊನ್ನೆ ನಡೆದ ಅಜಿತ್ ಪವಾರ್ ಅವರನ್ನು ಬಲಿ ಪಡೆದ ಲಿಯರ್ ಜೆಟ್ ವಿಮಾನದಲ್ಲಿದ್ದ ವಿಮಾನ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್‌ ಅವರ ಸಾವು ಅವರ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿದ್ದು, ಅವರ ಪುತ್ರಿ ತನ್ನ ತಂದೆಯನ್ನು ನೆನಪಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಭಾವುಕವಾಗಿ ಬರೆದುಕೊಂಡಿದ್ದು, ಅವರ ಪೋಸ್ಟ್ ಅನೇಕರನ್ನು ಭಾವುಕರನ್ನಾಗಿಸಿದೆ.

ಕ್ಯಾಪ್ಟನ್ ಸುಮಿತ್ ಕಪೂರ್ ಅವರ ಪುತ್ರಿ ಸಾನ್ಯಾ ಕಪೂರ್ ವಧ್ವಾ(Sanya Kapur Wadhwa)ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ತಂದೆಯ ಜೊತೆಗೆ ತಾವಿರುವ ಖುಷಿ ಕ್ಷಣದ ಫೋಟೋವೊಂದನ್ನು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ. ‘ನಾನು ಇದನ್ನು ಏಕೆ ಬರೆಯುತ್ತಿದ್ದೇನೆ ಎಂದು ನನಗೆ ಗೊತ್ತಿಲ್ಲ, ಆದರೆ ಇದನ್ನು ನೀವು ಜಾದೂ ಆದಂತೆ ಬಂದು ಓದಬೇಕು ಎಂದು ನಾನು ಪ್ರಾರ್ಥಿಸುತ್ತೇನೆ ಡ್ಯಾಡಿ. ಇದೊಂದು ಕೆಟ್ಟ ಕನಸಿನಂತೆ ಕಾಣಿಸುತ್ತಿದೆ. ನಾನು ಇನ್ನೂ ಇದರ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ನೀವು ಕರೆ ಮಾಡಿ ‘ಔರ್ ಕಹಾ ಹೈ ಮೇರಿ ಝಾನ್ಸಿ ಕಿ ರಾಣಿ( ಎಲ್ಲಿದ್ದೀಯಾ ನನ್ನ ಝಾನ್ಸಿಯಾ ರಾಣಿ) ಎಂದು ಹೇಳುತ್ತೀರಿ ಎಂದು ಆಶಿಸುತ್ತಿದ್ದೇನೆ.

ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಾನು ಯಾವಾಗಲೂ ಅಪ್ಪನ ಮಗಳೇ. ಈ ದುಃಸ್ವಪ್ನ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ಕರೆ ಮಾಡಿ ನಿಮ್ಮ ಜೊತೆ ಮಾತನಾಡಬೇಕು ಎಂದು ಬಯಸುತ್ತೇನೆ.

ಇದನ್ನೂ ಓದಿ: ಪ್ಯಾಕರ್ಸ್ & ಮೂವರ್ಸ್‌ ಕಾರ್ಮಿಕರಿಗೆ ಲಿಫ್ಟ್ ಬಳಕೆಗೆ ನಿರಾಕರಿಸಿದ ರೆಸಿಡೆನ್ಸಿಯಲ್ ಸೊಸೈಟಿ ಸದಸ್ಯರು

ನೀವು ಆಕಾಶವನ್ನು ಆಳಲು ಹುಟ್ಟಿದ್ದೀರಿ ಹಾಗೂ ನಿಮಗೆ ಇಷ್ಟವಿದ್ದಿದ್ದನ್ನೇ ಮಾಡುತ್ತಾ ಕೊನೆಯುಸಿರೆಳೆದಿದ್ದೀರಿ. ನೀವೊಬ್ಬರು ಅತ್ಯುತ್ತಮ ತಂದೆ, ಶ್ರೇಷ್ಠ ವಿಮಾನ ಚಾಲಕ (ಪೈಲಟ್) ಮತ್ತು ಅತ್ಯಂತ ಸಿಹಿಯಾದ ಮಾನವ ಕ್ಯಾಪ್ಟನ್ ಸುಮಿತ್ ಕಪೂರ್ ತುಂಬಾ ಬೇಗ ಹೊರಟು ಬಿಟ್ಟಿರಿ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಡ್ಯಾಡಿ, ನಾನು ಯಾವಾಗಲೂ ನಿಮ್ಮ ಮಗು, ನಿಮ್ಮ ಝಾನ್ಸಿ ಕೀ ರಾಣಿ’ ಎಂದು ಬರೆದು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕುಂಟುತ್ತಿದ್ದ ಬೆಕ್ಕನ್ನು 7ನೇ ಮಹಡಿಯಿಂದ ಕೆಳಗೆಸೆದ ವಾಚ್‌ಮ್ಯಾನ್: ಪೈಶಾಚಿಕ ಕೃತ್ಯ ಕ್ಯಾಮರಾದಲ್ಲಿ ಸೆರೆ

ಈ ಪೋಸ್ಟ್‌ ನೋಡಿ ಅನೇಕರು ಭಾವುಕರಾಗಿದ್ದು, ಸುಮಿತ್ ಪುತ್ರಿ ಸಾನ್ಯಾ ಅವರಿಗೆ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದಾರೆ. ನಿಮ್ಮ ತಂದೆಯ ಸಾವಿನ ವಿಚಾರ ಕೇಳಿ ತೀವ್ರ ಭಾವುಕರಾಗಿದ್ದೇವೆ. ಈ ಕಷ್ಟದ ದಿನದಿಂದ ಬೇಗನೇ ಚೇತರಿಸಿಕೊಳ್ಳಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜನವರಿ 28ರಂದು ಬುಧವಾರ ಈ ದುರಂತ ಸಂಭವಿಸಿತ್ತು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಮಹಾರಾಷ್ಟ್ರದ ಡಿಸಿಎಂ ಆಗಿದ್ದ ಅಜಿತ್ ಪವಾರ್ ಇಬ್ಬರು ಸಿಬ್ಬಂದಿ ಹಾಗೂ ವಿಮಾನದ ಪೈಲಟ್‌ಗಳು ಸೇರಿ ಐವರಿದ್ದ ವಿಮಾನವು ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು.



Source link

Leave a Reply

Your email address will not be published. Required fields are marked *