Hide Gold From Thieves: ಮನೆ ಬಿಟ್ಟು ಹೋಗುವಾಗ ಕಳ್ಳರ ಭಯವಿದ್ದರೆ ಚಿನ್ನವನ್ನು ಹೀಗೂ ಮುಚ್ಚಿಡಬಹುದು | Viral Video Shows Unique Method To Hide Gold At Home

Hide Gold From Thieves: ಮನೆ ಬಿಟ್ಟು ಹೋಗುವಾಗ ಕಳ್ಳರ ಭಯವಿದ್ದರೆ ಚಿನ್ನವನ್ನು ಹೀಗೂ ಮುಚ್ಚಿಡಬಹುದು | Viral Video Shows Unique Method To Hide Gold At Home



Hide Gold From Thieves: ಮನೆ ಬಿಟ್ಟು ಹೋಗುವಾಗ ಕಳ್ಳರ ಭಯವಿದ್ದರೆ ಚಿನ್ನವನ್ನು ಹೀಗೂ ಮುಚ್ಚಿಡಬಹುದು | Viral Video Shows Unique Method To Hide Gold At Home

Hide Gold From Thieves: ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿಡಲು ಐಡಿಯಾ ತೋರಿಸಲಾಗಿದೆ. ಈ ಸೀಕ್ರೆಟ್ ಐಡಿಯಾವನ್ನು ಕೆಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ಕಳ್ಳರಿಗೂ ಮಾಹಿತಿ ಸಿಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಮನೆಯಿಂದ ಹೊರಹೋಗುವಾಗ ಅಥವಾ ಪ್ರವಾಸಕ್ಕೆ ತೆರಳುವಾಗ ಮನೆಯಲ್ಲಿರುವ ಬೆಲೆಬಾಳುವ ಚಿನ್ನಾಭರಣಗಳ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರಿಗೂ ಆತಂಕವಿರುತ್ತದೆ. ಕಳ್ಳರ ಕಣ್ಣು ಬೀಳದಂತೆ ಚಿನ್ನವನ್ನು ಎಲ್ಲಿಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿರುತ್ತದೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಿತ್ರ ಹಾಗೂ ಆಸಕ್ತಿದಾಯಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ತಮ್ಮ ಮನೆಯಲ್ಲಿರುವ ಚಿಕ್ಕ ಚಿಕ್ಕ ಚಿನ್ನದ ಆಭರಣಗಳನ್ನು (ಉಂಗುರ, ಕಿವಿಯೋಲೆ ಇತ್ಯಾದಿ) ಅತ್ಯಂತ ಚಾಣಾಕ್ಷತನದಿಂದ ಬಚ್ಚಿಡುವುದನ್ನು ತೋರಿಸಲಾಗಿದೆ. ಅವರು ಕಿಟಕಿಯ ಕರ್ಟನ್ ಕಂಬಿಯ (Curtain Rod) ತುದಿಯಲ್ಲಿರುವ ಕ್ಯಾಪ್ ಅನ್ನು ತೆಗೆದು, ಅದರ ಒಳಗಿನ ಪೊಳ್ಳು ಜಾಗದಲ್ಲಿ ಚಿನ್ನವನ್ನು ಹಾಕಿ ಮತ್ತೆ ಮುಚ್ಚುತ್ತಾರೆ. ಮೇಲ್ನೋಟಕ್ಕೆ ಇದು ಕೇವಲ ಸಾಮಾನ್ಯ ಕರ್ಟನ್ ಕಂಬಿಯಂತೆ ಕಾಣುವುದರಿಂದ ಕಳ್ಳರಿಗೆ ಇದರೊಳಗೆ ಚಿನ್ನವಿರಬಹುದು ಎಂಬ ಅನುಮಾನವೇ ಬರುವುದಿಲ್ಲ ಎಂಬುದು ಈ ಟ್ರಿಕ್‌ನ ಉದ್ದೇಶ.

ನೆಟ್ಟಿಗರಿಂದ ಬಂತು ಮಿಶ್ರಪ್ರತಿಕ್ರಿಯೆ
ಈ ವಿಡಿಯೋ ಕಾಡ್ಗಿಚ್ಚಿನಂತೆ ಹರಡುತ್ತಿದ್ದರೂ, ಇದರ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು “ಸಾಮಾನ್ಯವಾಗಿ ಕಳ್ಳರು ಕಪಾಟು, ಲಾಕರ್ ಅಥವಾ ಹಾಸಿಗೆಯ ಕೆಳಗೆ ಹುಡುಕುತ್ತಾರೆ. ಆದರೆ ಕಿಟಕಿಯ ಕಂಬಿಯೊಳಗೆ ಯಾರೂ ನೋಡುವುದಿಲ್ಲ. ಇದು ತುರ್ತು ಸಂದರ್ಭದಲ್ಲಿ ಉತ್ತಮ ಐಡಿಯಾ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅಂದರೆ ವಿರೋಧಿಸುವವರು “ಇಂತಹ ಐಡಿಯಾಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಅದನ್ನು ಕಳ್ಳರೂ ಸಹ ನೋಡುತ್ತಾರೆ ಎಂಬುದು ನೆನಪಿರಲಿ. ಈಗ ಈ ರಹಸ್ಯ ಬಯಲಾಗಿರುವುದರಿಂದ, ಕಳ್ಳರು ಮೊದಲು ಕರ್ಟನ್ ಕಂಬಿಯನ್ನೇ ಚೆಕ್ ಮಾಡಿದರೂ ಆಶ್ಚರ್ಯವಿಲ್ಲ” ಎಂದು ಹೆಚ್ಚಿನವರು ಎಚ್ಚರಿಸಿದ್ದಾರೆ. 

ಸುರಕ್ಷತೆಯ ದೃಷ್ಟಿಯಿಂದ ನೆನಪಿರಲಿ
ಯಾವುದೇ ಹೊಸ ಐಡಿಯಾಗಳು ಇಂಟರ್ನೆಟ್‌ನಲ್ಲಿ ವೈರಲ್ ಆದಾಗ ಅವುಗಳ ರಹಸ್ಯವೂ ಮಾಯವಾಗುತ್ತದೆ. ಹಾಗಾಗಿ ಬೆಲೆಬಾಳುವ ಹೆಚ್ಚಿನ ಪ್ರಮಾಣದ ಚಿನ್ನವನ್ನು ಮನೆಯಲ್ಲಿ ಇಡುವ ಬದಲು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಅತ್ಯಂತ ಸುರಕ್ಷಿತ. ಇಂತಹ ‘ಸೀಕ್ರೆಟ್’ ಜಾಗಗಳನ್ನು ಬಳಸುವ ಮುನ್ನ ಅದರ ಅಪಾಯಗಳ ಬಗ್ಗೆಯೂ ಯೋಚಿಸಿ. ಮನೆಗೆ ಸಿಸಿಟಿವಿ ಕ್ಯಾಮೆರಾ ಅಥವಾ ಸೆಕ್ಯೂರಿಟಿ ಅಲಾರಂ ಅಳವಡಿಸುವುದು ಉತ್ತಮ ಆಯ್ಕೆ.

ಉಪಾಯದ ಹಿಂದಿದೆ ದೊಡ್ಡ ಅಪಾಯ

ಈ ವಿಡಿಯೋ ಕೇವಲ ಒಂದು ಉಪಾಯವಾಗಿ ಕಾಣಿಸಿದರೂ, ಇದರ ಹಿಂದೆ ದೊಡ್ಡ ಅಪಾಯವೂ ಅಡಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ನಾವು ಹಂಚಿಕೊಳ್ಳುವ ಇಂತಹ ‘ಸ್ಮಾರ್ಟ್ ಹ್ಯಾಕ್ಸ್’ (Smart Hacks) ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ, ಕಳ್ಳರಿಗೂ ಹೊಸ ದಾರಿಗಳನ್ನು ತೋರಿಸಿಕೊಡುತ್ತವೆ. ಈ ಹಿಂದೆ ಜನರು ಹಣವನ್ನು ಅಕ್ಕಿ ಡಬ್ಬಿಯಲ್ಲೋ ಅಥವಾ ಹಳೆಯ ಪುಸ್ತಕಗಳ ನಡುವೆಯೋ ಬಚ್ಚಿಡುತ್ತಿದ್ದರು. ಆದರೆ ಈಗ ಕರ್ಟನ್ ಕಂಬಿ, ಸ್ವಿಚ್ ಬೋರ್ಡ್‌ಗಳ ಒಳಗೆ ಅಥವಾ ಫಾಲ್ಸ್ ಸೀಲಿಂಗ್‌ಗಳ ನಡುವೆ ಹಣ-ಚಿನ್ನ ಬಚ್ಚಿಡುವ ವಿಡಿಯೋಗಳು ವೈರಲ್ ಆಗುತ್ತಿರುವುದು ಕಳ್ಳತನದ ಶೈಲಿಯನ್ನೇ ಬದಲಿಸಬಹುದು.

ಸೈಬರ್ ತಜ್ಞರ ಪ್ರಕಾರ, ಇಂತಹ ವಿಡಿಯೋಗಳು ವೈರಲ್ ಆದಷ್ಟೂ ಅವುಗಳ ರಹಸ್ಯ ಮತ್ತು ಸುರಕ್ಷತೆಯ ಮೌಲ್ಯ ಕಡಿಮೆಯಾಗುತ್ತದೆ. ಕಳ್ಳರು ಈಗ ಕಪಾಟುಗಳಿಗಿಂತ ಹೆಚ್ಚಾಗಿ ಇಂತಹ ಅಸಹಜ ಜಾಗಗಳ ಮೇಲೆ ನಿಗಾ ಇಡುತ್ತಿದ್ದಾರೆ. ಹೀಗಾಗಿ, ಸೋಶಿಯಲ್ ಮೀಡಿಯಾ ನೋಡಿ ಇಂತಹ ಪ್ರಯೋಗಗಳನ್ನು ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು. ನಿಜವಾದ ಸುರಕ್ಷತೆ ಎಂಬುದು ರಹಸ್ಯವಾಗಿಡುವುದರಲ್ಲಿ ಅಡಗಿದೆಯೇ ಹೊರತು, ವೈರಲ್ ಆಗುವುದರಲ್ಲಲ್ಲ. 

ಇಲ್ಲಿದೆ ನೋಡಿ ವೈರಲ್ ವಿಡಿಯೋ 



Source link

Leave a Reply

Your email address will not be published. Required fields are marked *