Headlines

ಅಮೆರಿಕ-ಇಸ್ರೇಲ್‌ ಮಂಡಿಊರುವರ್ಗೂ ಸಂಧಾನ ಇಲ್ಲ ಎಂದ ಇರಾನ್‌, ಟ್ರಂಪ್‌ಗೆ ದಾಳಿ ಭೀತಿ? | No Negotiations Until Us And Israel Surrender Iran Issues Defiant Warning

ಶಾಂತಿ ಮಾತುಕತೆಯ ಕುರಿತ ಅಮೆರಿಕದ ಹೇಳಿಕೆಯನ್ನು ಇರಾನ್ ಸಾರಾಸಗಟಾಗಿ ತಿರಸ್ಕರಿಸಿದೆ. ಅಮೆರಿಕ ಮತ್ತು ಇಸ್ರೇಲ್‌ ಮಂಡಿಯೂರಿ, ಸೋಲೊಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂದು ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸ್ಪಷ್ಟಪಡಿಸಿದ್ದಾರೆ.

ಟೆಹ್ರಾನ್‌: ಯುದ್ಧಸ್ಥಗಿತಕ್ಕೆ ಸಂಬಂಧಪಟ್ಟಂತೆ ಇರಾನ್‌ ಮಾತುಕತೆ ಬಯಸುತ್ತಿದೆ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ಇರಾನ್‌ ಸಾರಾಸಗಟಾಗಿ ತಿರಸ್ಕರಿಸಿದೆ. ‘ಅಮೆರಿಕ ಮತ್ತು ಇಸ್ರೇಲ್‌ ಮಂಡಿಯೂರಿ, ಸೋಲೊಪ್ಪಿಕೊಳ್ಳುವವರೆಗೂ ಶಾಂತಿ ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗುಡುಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಇರಾನ್‌ ಅಧಿಕಾರಿಯೊಬ್ಬರು, ‘ಅಮೆರಿಕ ಹಾಗೂ ಇಸ್ರೇಲ್‌ ನಮ್ಮೆದುರು ಮಂಡಿಯೂರಿ, ಸೋಲನ್ನು ಒಪ್ಪಿಕೊಳ್ಳಬೇಕು. ಯುದ್ಧದ ನಷ್ಟವನ್ನು ಭರಿಸಬೇಕು. ಅಲ್ಲಿಯವರೆಗೂ ಶಾಂತಿ ಸಾಧ್ಯವಿಲ್ಲ ಎಂದು ಮೊಜ್ತಬಾ ಸ್ಪಷ್ಟಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಸದ್ಯ ಗೌಪ್ಯ ಸ್ಥಳದಲ್ಲಿ ಮೊಜ್ತಬಾ ವಿಶ್ರಾಂತಿ ಪಡೆಯುತ್ತಿದ್ದಾರೆ

ಮಧ್ಯಪ್ರಾಚ್ಯದ ಸಂಘರ್ಷ ಆರಂಭವಾಗಿ 18 ದಿನಗಳು ಕಳೆದಿದೆ. ಇನ್ನೂ ನಿಲ್ಲದ ಯುದ್ಧ ಪರಸ್ಪರ ನಿರಂತರ ಡ್ರೋನ್ ಕ್ಷಿಪಣಿ ದಾಳಿ ನಡೆಯುತ್ತಲೇ ಇದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಜೊತೆಗೆ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಲಾಗಿದೆ. ಇದರಿಂದಾಗಿ ಇರಾನ್ ಮತ್ತಷ್ಟು ಕುದ್ದು ಹೋಗಿದೆ. ಹೀಗಾಗಿ ಅಮೆರಿಕ-ಇಸ್ರೇಲ್ ಜೊತೆಗೆ ಯುದ್ಧ ಸಂಧಾನ ಮಾಡುವ ಸಮಯ ಇದಲ್ಲ. ಅವೆರಡೂ ದೇಶಗಳನ್ನ ಮಂಡಿಯೂರಿಸುವರೆಗೆ ಯುದ್ಧ ನಿಲ್ಲುವುದಿಲ್ಲ ಎಂದು ಇರಾನ್ ಶಪಥ ಮಾಡಿದೆ.

Source link

Leave a Reply

Your email address will not be published. Required fields are marked *