Niveditha Gowda Reels : ನಿವೇದಿತಾ ಗೌಡಗೆ ಏನಾಯ್ತು? ಜೀವನ ಪರ್ಫೆಕ್ಟ್ ಇಲ್ಲ ಎಂದಿದ್ದೇಕೆ? | Niveditha Gowda Shares Video On Instagram

Niveditha Gowda Reels : ನಿವೇದಿತಾ ಗೌಡಗೆ ಏನಾಯ್ತು? ಜೀವನ ಪರ್ಫೆಕ್ಟ್ ಇಲ್ಲ ಎಂದಿದ್ದೇಕೆ? | Niveditha Gowda Shares Video On Instagram



Niveditha Gowda Reels : ನಿವೇದಿತಾ ಗೌಡಗೆ ಏನಾಯ್ತು? ಜೀವನ ಪರ್ಫೆಕ್ಟ್ ಇಲ್ಲ ಎಂದಿದ್ದೇಕೆ? | Niveditha Gowda Shares Video On Instagram

ರ್ಯಾಪರ್ ಚಂದನ್ ಶೆಟ್ಟಿ ಮಾಜಿ ಪತ್ನಿ ಗೊಂಬೆ ನಿವೇದಿತಾ ಗೌಡ ರೀಲ್ಸ್ ಮಾಡಿದ್ರೂ ಖುಷಿಯಾಗಿಲ್ಲ. ಜೀವನ ಪರ್ಫೆಕ್ಟ್ ಆಗಿಲ್ಲ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ನಿವೇದಿತಾಗೆ ಆಗಿದ್ದೇನು? 

ಸ್ಯಾಂಡಲ್ ವುಡ್ ಗೊಂಬೆ, ರೀಲ್ಸ್ ರಾಣಿ ನಿವೇದಿತಾ ಗೌಡ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ನಿವೇದಿತಾ ಚಿಕ್ಕ ಸ್ಕರ್ಟ್ ಧರಿಸಿ ಫೋಸ್ ನೀಡಿದ್ದಾರೆ. ಈ ಬಾರಿ ಅವರ ಡ್ರೆಸ್, ಆಕ್ಟಿಂಗ್ ಗಿಂತ ಅವರು ವಿಡಿಯೋಕ್ಕೆ ಹಾಕಿದ ಶೀರ್ಷಿಕೆ ಗಮನ ಸೆಳೆದಿದೆ. ನಿವೇದಿತಾ ವಿಡಿಯೋ ಮೇಲೆ ಬರೆದಿರುವ ವಿಷ್ಯ ಅನೇಕರ ತಲೆ ಕೆಡಿಸಿದೆ. ನಿವೇದಿತಾ ಗೌಡಗೆ ಏನಾಯ್ತು ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಅಷ್ಟಕ್ಕೂ ನಿವೇದಿತಾ ಬರೆದಿದ್ದೇನು?

ಗ್ರೇ ಕಲರ್ ಟಾಪ್, ಬ್ಲಾಕ್ ಕಲರ್ ಶಾರ್ಟ್ ಸ್ಕರ್ಟ್ ಹಾಕಿರುವ ನಿವೇದಿತಾ ಗೌಡ ಇಂಗ್ಲೀಷ್ ಹಾಡಿಗೆ ಫೋಸ್ ನೀಡಿದ್ದಾರೆ. ಎಂದಿನಂತೆ ಒಂದು ಸಲ ಕ್ಯಾಮರಾ ಹತ್ತಿರ, ಇನ್ನೊಂದು ಸಲ ಕ್ಯಾಮರಾದಿಂದ ದೂರ ಹೋಗಿ, ತಮ್ಮ ದೇಹ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ. ಇದ್ರಲ್ಲಿ ನಿವೇದಿತಾ ಮುಖಕ್ಕೆ ಸಾಕಷ್ಟು ಬೆಳಕು ಬೀಳ್ತಿದೆ. ವಿಡಿಯೋ ಪೋಸ್ಟ್ ಮಾಡಿದ ನಿವೇದಿತಾ ಗೌಡ, ವಿಡಿಯೋ ಮೇಲೆ ಫೋಟೋಗೆ ಬೆಳಕು ಪರ್ಫೆಕ್ಟ್ ಇದ್ದರೂ, ಜೀವನ ಮಾತ್ರ ಅಷ್ಟು ಪರ್ಫೆಕ್ಟ್ ಆಗಿಲ್ಲ ಎನ್ನುವ ಅರ್ಥದಲ್ಲಿ ಶೀರ್ಷಿಕೆ ನೀಡಿದ್ದಾರೆ.

ಭಾಗ್ಯಲಕ್ಷ್ಮೀ ಶೂಟಿಂಗ್ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು; ಮೇಕಿಂಗ್ ವಿಡಿಯೋ ವೈರಲ್

ನಿವೇದಿತಾಗೆ ಏನಾಯ್ತು?

ಬಿಗ್ ಬಾಸ್ ಮೂಲಕ ಟಿವಿ ಲೋಕಕ್ಕೆ ಎಂಟ್ರಿ ನೀಡಿದ್ದ ನಿವೇದಿತಾ ಗೌಡ ನಂತ್ರ ಕೆಲ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದರು. ಚಂದನ್ ಶೆಟ್ಟಿ ಪ್ರಪೋಸ್ ಗೆ ಒಪ್ಪಿ ಮದುವೆ ಮಾಡ್ಕೊಂಡಿದ್ದ ನಿವೇದಿತಾ ಗೌಡ ಡಿವೋರ್ಸ್ ಪಡೆದು ಎರಡು ವರ್ಷವಾಗ್ತಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದಾಗಿದೆ.

ಡಿವೋರ್ಸ್ ನೀಡಿದ್ಮೇಲೆ ಹೆಚ್ಚು ಸುದ್ದಿಗೆ ಬಂದಿದ್ದು ನಿವೇದಿತಾ ಗೌಡ. ಡಿವೋರ್ಸ್ ಆದ್ಮೇಲೆ ನಿವೇದಿತಾ ರೀಲ್ಸ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ರು. ಅವರ ರೀಲ್ಸ್ ಗಿಂತ ಅವರ ಬಟ್ಟೆ ಮೇಲೆ ನೆಟ್ಟಿಗರ ಕಣ್ಣು ಬಿದ್ದಿತ್ತು. ಪ್ರವಾಸದಲ್ಲೂ ಬ್ಯುಸಿ ಇರುವ ನಿವೇದಿತಾ ಬಿಕನಿ ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದ ನಿವೇದಿತಾ ಗೌಡ ಅವರನ್ನು ಸದ್ಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ಹಿಂದಿಕ್ಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಮಧ್ಯೆ ಜೊತೆಯಾಗಿ ಪೋಸ್ ಕೊಟ್ರು ನಿಧಿ-ನಿತ್ಯಾ

ನಿವೇದಿತಾ ಗೌಡ ರೀಲ್ಸ್, ಟ್ರಿಪ್ ನಲ್ಲಿ ಮಾತ್ರವಲ್ಲ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ತೆಲುಗು ವಾಲು ಕಳ್ಳತಾ ಅಲ್ಬಂನಲ್ಲಿ ನಟಿಸಿದ್ದಾರೆ. ದಿಗಂತ್ ಜೊತೆ ಕನ್ನಡ ಸಾಂಗ್ ಒಂದರಲ್ಲಿ ಕುಣಿದಿದ್ದಾರೆ. ಒಂದಲ್ಲ ಒಂದು ಕೆಲ್ಸದಲ್ಲಿ ಬ್ಯುಸಿ ಇರುವ ನಿವೇದಿತಾಗೆ ಈಗೇನಾಯ್ತು? ನಿವೇದಿತಾಗೆ ಒಂಟಿತನ ಕಾಡ್ತಿದೆ ಅನ್ನೋದು ನೆಟ್ಟಿಗರ ಕಮೆಂಟ್. ಬೆಳಕು ಪರ್ಫೆಕ್ಟ್ ಇದ್ದರೂ ಜೀವನ ಮಾತ್ರ ಅಷ್ಟು ಪರ್ಫೆಕ್ಟ್ ಇಲ್ಲ ಎಂಬುದನ್ನು ಓದಿದ ನೆಟ್ಟಿಗರು, ನಿವೇದಿತಾಗೆ ಸಾಂತ್ವಾನ ಕೂಡ ಹೇಳ್ತಿದ್ದಾರೆ. ಲೈಫ್ ನಲ್ಲಿ ಇದೆಲ್ಲ ಕಾಮನ್ ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ಇನ್ನೊಂದು ಮದುವೆಯಾಗುವ ಸಲಹೆ ನೀಡಿದ್ದಾರೆ.

ಡಿವೋರ್ಸ್ ಬಗ್ಗೆ ನಿವೇದಿತಾ ಹೇಳಿದ್ದೇನು?

ಕೆಲ ದಿನಗಳ ಹಿಂದೆ anything_about_eveything ಗೆ ನೀಡಿದ ಸಂದರ್ಶನದಲ್ಲಿ ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಮಾತನಾಡಿದ್ದರು. ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳ್ಳಲು ಕೇವಲ 30 ನಿಮಿಷ ಸಾಕು ಎಂದಿದ್ದರು. ಒಬ್ಬ ವ್ಯಕ್ತಿ ಜೊತೆ 24 ಗಂಟೆ ಕಳೆಯೋದು ಮುಖ್ಯವಲ್ಲ, ಅವರನ್ನು ಅರ್ಥಮಾಡಿಕೊಳ್ಳಲು, ಭಾವನೆ ಹಂಚಿಕೊಳ್ಳಲು ದಿನದಲ್ಲಿ 30 ನಿಮಿಷ ಜೊತೆಗಿದ್ದರೆ ಸಾಕು ಅಂತ ನಿವೇದಿತಾ ಗೌಡ ಹೇಳಿದ್ದರು. ನಿವೇದಿತಾಗೆ ಒಂಟಿತನ ಕಾಡ್ತಿದ್ಯಾ? ಕೆಲ್ಸ ಸಿಗ್ತಿಲ್ವ? ಇನ್ಸ್ಟಾ ಫಾಲೋವರ್ಸ್ ಹೆಚ್ಚಾಗ್ತಿಲ್ಲ ಎನ್ನುವ ಬೇಸರವಾ ಗೊತ್ತಿಲ್ಲ. ಒಟ್ಟಿನಲ್ಲಿ ಲೈಫ್ ಅಂದ್ಕೊಂಡಷ್ಟು ಚೆನ್ನಾಗಿದ್ದಂತೆ ಕಾಣ್ತಿಲ್ಲ.



Source link

Leave a Reply

Your email address will not be published. Required fields are marked *