Headlines

ಬಟ್ಟೆ ಅಂಗಡಿ, ಸ್ಟಾರ್‌ಬಕ್ಸ್‌ನಲ್ಲಿ ಕೆಲಸ, ಲ್ಯಾಪ್‌ಟಾಪ್‌ ಬಳಸೋಕೆ ಬರಲ್ಲ: ಮುಗಿಲ್‌ಪೇಟೆ ನಟಿ Kayadu Lohar | Kayadu Lohar Opens Up About Her Past Jobs Before Acting Career Gvd

ಬಟ್ಟೆ ಅಂಗಡಿ, ಸ್ಟಾರ್‌ಬಕ್ಸ್‌ನಲ್ಲಿ ಕೆಲಸ, ಲ್ಯಾಪ್‌ಟಾಪ್‌ ಬಳಸೋಕೆ ಬರಲ್ಲ: ಮುಗಿಲ್‌ಪೇಟೆ ನಟಿ Kayadu Lohar | Kayadu Lohar Opens Up About Her Past Jobs Before Acting Career Gvd



ಬಟ್ಟೆ ಅಂಗಡಿ, ಸ್ಟಾರ್‌ಬಕ್ಸ್‌ನಲ್ಲಿ ಕೆಲಸ, ಲ್ಯಾಪ್‌ಟಾಪ್‌ ಬಳಸೋಕೆ ಬರಲ್ಲ: ಮುಗಿಲ್‌ಪೇಟೆ ನಟಿ Kayadu Lohar | Kayadu Lohar Opens Up About Her Past Jobs Before Acting Career Gvd

ಕಯಾದು ಲೋಹರ್ ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಸಿನಿಮಾ ರಂಗಕ್ಕೆ ಬರುವ ಮುನ್ನ ತಾನು ಮಾಡಿದ ಕೆಲಸಗಳ ಬಗ್ಗೆ ಕಯಾದು ಮಾತನಾಡಿದ್ದು, ಎಲ್ಲರ ಗಮನ ಸೆಳೆದಿದೆ.

ಟೊವಿನೋ ಥಾಮಸ್ ನಟನೆಯ ‘ಪಳ್ಳಿಚಟ್ಟಂಬಿ’ ಚಿತ್ರದ ಮೂಲಕ ಮುಗಿಲ್‌ಪೇಟೆ ಬ್ಯೂಟಿ ನಟಿ ಕಯಾದು ಲೋಹರ್ ಮತ್ತೆ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಕ್ಕೆ ಬರುವ ಮುನ್ನ ತಾನು ಸ್ಟಾರ್‌ಬಕ್ಸ್, ಬಟ್ಟೆ ಅಂಗಡಿ ಮತ್ತು ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಾಗಿ ಅವರು ಇದೀಗ ಬಹಿರಂಗಪಡಿಸಿದ್ದಾರೆ.

ಟೊವಿನೋ ಥಾಮಸ್ ನಾಯಕರಾಗಿರುವ ‘ಪಳ್ಳಿಚಟ್ಟಂಬಿ’ ಚಿತ್ರದ ಮೂಲಕ ಮುಗಿಲ್‌ಪೇಟೆ ನಟಿ ಕಯಾದು ಲೋಹರ್ ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಸಿನಿಮಾ ರಂಗಕ್ಕೆ ಬರುವ ಮುನ್ನ ತಾನು ಮಾಡಿದ ಕೆಲಸಗಳ ಬಗ್ಗೆ ಕಯಾದು ಮಾತನಾಡಿದ್ದು, ಎಲ್ಲರ ಗಮನ ಸೆಳೆದಿದೆ. ತಾನು ಬಟ್ಟೆ ಅಂಗಡಿ, ಸ್ಟಾರ್‌ಬಕ್ಸ್‌ನಲ್ಲಿ ಕೆಲಸ ಮಾಡಿದ್ದೆ, ಅಷ್ಟೇ ಅಲ್ಲ, ತನಗೆ ಲ್ಯಾಪ್‌ಟಾಪ್‌ ಕೂಡ ಸರಿಯಾಗಿ ಬಳಸಲು ಬರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

“ಸಿನಿಮಾಕ್ಕೆ ಬರೋ ಮುನ್ನ ನಾನು ತುಂಬಾನೇ ಕೆಲಸ ಮಾಡಿದ್ದೆ. ಸ್ಟಾರ್‌ಬಕ್ಸ್, ಬಟ್ಟೆ ಅಂಗಡಿಗಳಲ್ಲಿ ಕೆಲಸದ ಅನುಭವ ಇದೆ. ಅಷ್ಟೇ ಅಲ್ಲ, ಹಲವು ಐಟಿ ಕಂಪನಿಗಳಲ್ಲೂ ಕೆಲಸ ಮಾಡಿದ್ದೀನಿ. ತಮಾಷೆ ಅಂದ್ರೆ, ನನಗೆ ಲ್ಯಾಪ್‌ಟಾಪ್‌ ಸರಿಯಾಗಿ ಬಳಸೋಕೆ ಬರಲ್ಲ. ಐಟಿ ಕಂಪನಿಗಳಲ್ಲಿ ಟ್ರೈನಿಂಗ್ ಪೀರಿಯಡ್‌ನಲ್ಲಿ ಮಾತ್ರ ಕೆಲಸ ಮಾಡಿದ್ದು,” ಎಂದು ಕಯಾದು ಲೋಹರ್ ಹೇಳಿದ್ದಾರೆ. ಇನ್ನು, ಡಿಜೋ ಜೋಸ್ ಆಂಟನಿ ನಿರ್ದೇಶನದ, ಟೊವಿನೋ ಥಾಮಸ್ ನಟನೆಯ ‘ಪಳ್ಳಿಚಟ್ಟಂಬಿ’ ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ.

ಐದು ಭಾಷೆಗಳಲ್ಲಿ ಬಿಡುಗಡೆ

ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಪೋಸ್ಟರ್‌ಗಳು ಮತ್ತು ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಟೀಸರ್‌ನಲ್ಲಿನ ಅದ್ಭುತ ದೃಶ್ಯಗಳು ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ವರ್ಲ್ಡ್ ವೈಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನೌಫಲ್ ಮತ್ತು ಬ್ರಿಜೇಶ್ ಹಾಗೂ ಸಿ ಕ್ಯೂಬ್ ಬ್ರೋಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚಾಣುಕ್ಯ ಚೈತನ್ಯ ಚರಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಪಳ್ಳಿಚಟ್ಟಂಬಿ’ ಏಪ್ರಿಲ್ 10 ರಂದು ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕಥೆ 1950-60ರ ದಶಕದಲ್ಲಿ ನಡೆಯುತ್ತದೆ.

ಜೇಕ್ಸ್ ಬಿಜೋಯ್ ಸಂಗೀತ ಸಂಯೋಜಿಸಿರುವ, ಬಾಲಿವುಡ್‌ನ ಹಿಟ್ ಗಾಯಕ ವಿಶಾಲ್ ಮಿಶ್ರಾ ಮಲಯಾಳಂನಲ್ಲಿ ಮೊದಲ ಬಾರಿಗೆ ಹಾಡಿರುವ ‘ಕಾಟ್ಟುಚೆಂಬಕಂ’ ಹಾಡು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿರ್ದೇಶಕ ಡಿಜೋ ಜೋಸ್ ಆಂಟನಿ ಮತ್ತು ಜೇಕ್ಸ್ ಬಿಜೋಯ್ ಕಾಂಬಿನೇಷನ್‌ನ ನಾಲ್ಕನೇ ಚಿತ್ರ ಇದಾಗಿದೆ. ಈ ಹಿಂದೆ ‘ಕ್ವೀನ್’, ‘ಜನ ಗಣ ಮನ’, ‘ಮಲಯಾಳಿ ಫ್ರಂ ಇಂಡಿಯಾ’ ಚಿತ್ರಗಳಲ್ಲಿ ಈ ಜೋಡಿ ನೀಡಿದ ಹಾಡುಗಳು ಚಾರ್ಟ್‌ಬಸ್ಟರ್ ಆಗಿದ್ದವು. ಹೀಗಾಗಿ ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ. ಚಿತ್ರದಲ್ಲಿ ವಿಜಯರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆಡಮಂಗಲಂ, ಪ್ರಶಾಂತ್ ಅಲೆಕ್ಸ್ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ.



Source link

Leave a Reply

Your email address will not be published. Required fields are marked *