ಬರೋಬ್ಬರಿ 12 ಟನ್‌ KitKat ದರೋಡೆ: ಕಳ್ಳರು ಬಳಸಿದ ಐಡಿಯಾ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ | 12 Ton Kitkat Chocolate Heist Europe Nestle Shipment Theft Viral News San

ಬರೋಬ್ಬರಿ 12 ಟನ್‌ KitKat ದರೋಡೆ: ಕಳ್ಳರು ಬಳಸಿದ ಐಡಿಯಾ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ | 12 Ton Kitkat Chocolate Heist Europe Nestle Shipment Theft Viral News San



ಬರೋಬ್ಬರಿ 12 ಟನ್‌ KitKat ದರೋಡೆ: ಕಳ್ಳರು ಬಳಸಿದ ಐಡಿಯಾ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ | 12 Ton Kitkat Chocolate Heist Europe Nestle Shipment Theft Viral News San

ಇಟಲಿಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದ್ದು, ನೆಸ್ಲೆ ಕಂಪನಿಗೆ ಸೇರಿದ ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳು ಕಳ್ಳತನವಾಗಿವೆ. ಪೋಲೆಂಡ್‌ಗೆ ಸಾಗಿಸುತ್ತಿದ್ದ ಈ ಬೃಹತ್ ಸರಕನ್ನು ಮಾರ್ಗ ಮಧ್ಯದಲ್ಲಿಯೇ ಕಳ್ಳರು ಲೂಟಿ ಮಾಡಿದ್ದಾರೆ. 

ನವದೆಹಲಿ (ಮಾ.30): ದೂರದ ಇಟಲಿಯಲ್ಲಿ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳು ಕಳ್ಳತನವಾಗಿವೆ. ಈ ಬೃಹತ್ ಪ್ರಮಾಣದ ಚಾಕೊಲೇಟ್ ಕಳ್ಳತನ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಷ್ಟೊಂದು ಚಾಕೊಲೇಟ್‌ಗಳು ಎಲ್ಲಿ ಹೋದವು? ಅನ್ನೋ ಪ್ರಶ್ನೆಯೇ ಎಲ್ಲರದಾಗಿದೆ.

ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಪ್ರತಿಯೊಬ್ಬರೂ ಭಿನ್ನ ಭಿನ್ನ ರೀತಿಯ ಚಾಕೊಲೇಟ್‌ಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಕೆಲವು ಚಾಕೊಲೇಟ್‌ಗಳ ಬೆಲೆ ಸಾವಿರಾರು ರೂಪಾಯಿಗಳಷ್ಟಿರುತ್ತದೆ, ಆದರೂ ಜನ ಇದನ್ನು ಖರೀದಿಸುತ್ತಾರೆ. ಚಾಕೊಲೇಟ್ ತಯಾರಿಕೆಯಲ್ಲಿ ವಿಶ್ವದ ಮುಂಚೂಣಿ ಕಂಪನಿಯಾದ ನೆಸ್ಲೆ (Nestle) ಕಿಟ್‌ಕ್ಯಾಟ್ ಬ್ರ್ಯಾಂಡ್ ಅನ್ನು ತಯಾರಿಸುತ್ತದೆ. ಈಗ ಇದೇ ಚಾಕೊಲೇಟ್ ಬಗ್ಗೆ ಒಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕಳ್ಳರು ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳನ್ನು ಲೂಟಿ ಮಾಡಿದ್ದಾರೆ. ಕಂಪನಿಯ ಆಡಳಿತ ಮಂಡಳಿ ಈಗ ಈ ಕಳ್ಳತನವಾದ ಚಾಕೊಲೇಟ್‌ಗಳ ಹುಡುಕಾಟದಲ್ಲಿದೆ.

ಅಸಲಿಗೆ ನಡೆದಿದ್ದೇನು?

ಬರೋಬ್ಬರಿ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್ ಕಳ್ಳತನವಾಗಿರುವ ಘಟನೆ ಯುರೋಪ್‌ನಲ್ಲಿ ನಡೆದಿದೆ. ನೆಸ್ಲೆ ಕಂಪನಿಯೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದೆ. ಮಧ್ಯ ಇಟಲಿಯಲ್ಲಿ ನೆಸ್ಲೆ ಕಂಪನಿಯ ದೊಡ್ಡ ಕಾರ್ಖಾನೆಯಿದ್ದು, ಈ ಕಾರ್ಖಾನೆಯಲ್ಲಿ ಕಿಟ್‌ಕ್ಯಾಟ್ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತದೆ. ಇಲ್ಲಿ ತಯಾರಾದ 12 ಟನ್ ಚಾಕೊಲೇಟ್‌ಗಳ ಒಂದು ದೊಡ್ಡ ಸರಕನ್ನು (Consignment) ಪೋಲೆಂಡ್‌ಗೆ ಕಳುಹಿಸಲಾಗುತ್ತಿತ್ತು. ಈ ಮಾರ್ಗ ಮಧ್ಯದಲ್ಲಿಯೇ ಕಳ್ಳರು ಕೈಚಳಕ ತೋರಿಸಿ ಇಡೀ ಲೋಡ್ ಅನ್ನು ಕದ್ದಿದ್ದಾರೆ.

ಈಸ್ಟರ್ ಹಬ್ಬದ ಸಂದರ್ಭದಲ್ಲೇ ಕಳ್ಳತನ!

ಕಿಟ್‌ಕ್ಯಾಟ್‌ನ ಮಾತೃ ಸಂಸ್ಥೆ ನೆಸ್ಲೆ ಈಗ ಸ್ಥಳೀಯ ಪೊಲೀಸರು ಮತ್ತು ಆಡಳಿತದ ಸಹಾಯದೊಂದಿಗೆ ಕಳ್ಳತನವಾದ ಚಾಕೊಲೇಟ್‌ಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. ಗ್ರಾಹಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ನೆಸ್ಲೆ ಸ್ಪಷ್ಟಪಡಿಸಿದೆ. ನೆಸ್ಲೆ ಕಂಪನಿಯ ವಕ್ತಾರ ಕೂಡ ಈ ಕಳ್ಳತನವನ್ನು ದೃಢಪಡಿಸಿದ್ದಾರೆ. ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ಈ ಕಳ್ಳತನವು ‘ಈಸ್ಟರ್’ (Easter) ಹಬ್ಬಕ್ಕೆ ಕೆಲವೇ ದಿನಗಳ ಮೊದಲು ನಡೆದಿದೆ. ಈ ಸಮಯದಲ್ಲಿ ಜನರು ‘ಚಾಕೊಲೇಟ್ ಹಂಟ್’ (ಚಾಕೊಲೇಟ್ ಹುಡುಕಾಟ) ಆಟವನ್ನು ಸಂಭ್ರಮಿಸುತ್ತಾರೆ. ಇಂತಹ ಸಂದರ್ಭದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಕಳ್ಳತನ ನಡೆದಿದೆ ಎಂದು ಕಂಪನಿ ತಿಳಿಸಿದೆ.

12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್ ಏನಾಯಿತು?

ಈ ಕಳ್ಳತನದ ಸುದ್ದಿ ಹೊರಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವಿಧವಿಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಂಟರ್ನೆಟ್‌ನಲ್ಲಿ ತರಹೇವಾರಿ ಮೀಮ್‌ಗಳು ಹರಿದಾಡುತ್ತಿವೆ. ಇನ್ನೊಂದೆಡೆ, ಬರೋಬ್ಬರಿ 12 ಟನ್ ಚಾಕೊಲೇಟ್ ಅನ್ನು ಪತ್ತೆಹಚ್ಚುವುದು ಅಲ್ಲಿನ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Scroll to load tweet…



Source link

Leave a Reply

Your email address will not be published. Required fields are marked *