Headlines

ಅಂಕಲ್ ಜೊತೆ ಮಲಗಲು ನಿರಾಕರಿಸಿದ ಗರ್ಲ್‌ಫ್ರೆಂಡ್‌, ಕೊ*ಲೆ ಮಾಡಿ ಬೆಡ್‌ಬಾಕ್ಸ್‌ನಲ್ಲಿ ಶವ ತುರುಕಿದ ಪಾಪಿ! | Delhi Mangolpuri Murder Woman Killed For Refusing Sleep With Uncle Body In Bed Box San

ಅಂಕಲ್ ಜೊತೆ ಮಲಗಲು ನಿರಾಕರಿಸಿದ ಗರ್ಲ್‌ಫ್ರೆಂಡ್‌, ಕೊ*ಲೆ ಮಾಡಿ ಬೆಡ್‌ಬಾಕ್ಸ್‌ನಲ್ಲಿ ಶವ ತುರುಕಿದ ಪಾಪಿ! | Delhi Mangolpuri Murder Woman Killed For Refusing Sleep With Uncle Body In Bed Box San



ಅಂಕಲ್ ಜೊತೆ ಮಲಗಲು ನಿರಾಕರಿಸಿದ ಗರ್ಲ್‌ಫ್ರೆಂಡ್‌, ಕೊ*ಲೆ ಮಾಡಿ ಬೆಡ್‌ಬಾಕ್ಸ್‌ನಲ್ಲಿ ಶವ ತುರುಕಿದ ಪಾಪಿ! | Delhi Mangolpuri Murder Woman Killed For Refusing Sleep With Uncle Body In Bed Box San

ದೆಹಲಿಯ ಮಂಗೋಲ್‌ಪುರಿಯಲ್ಲಿ, ತನ್ನ ಅಂಕಲ್ ಜೊತೆ ಶಾರೀರಿಕ ಸಂಬಂಧ ಬೆಳೆಸಲು ನಿರಾಕರಿಸಿದ ಮಹಿಳೆಯನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಶವವನ್ನು ಮಂಚದೊಳಗೆ ಬಚ್ಚಿಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ನವದೆಹಲಿ (ಏ.9): ರಾಷ್ಟ್ರ ರಾಜಧಾನಿ ದೆಹಲಿಯ ಮಂಗೋಲ್‌ಪುರಿಯಲ್ಲಿ ಭೀಕರ ಘಟನೆ ನಡೆದಿದೆ. ತನ್ನ ಅಂಕಲ್ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಒಪ್ಪದ 35 ವರ್ಷದ ಮಹಿಳೆಯನ್ನು 22 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕ, ಆತನ ಅಂಕಲ್ ಮತ್ತು ಕೃತ್ಯಕ್ಕೆ ಸಹಕರಿಸಿದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆ ಮಂಗೋಲ್‌ಪುರಿ ನಿವಾಸಿಯಾಗಿದ್ದು, ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಕೆ ಈಗಾಗಲೇ ವಿವಾಹಿತೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಆದರೆ, ಸ್ಥಳೀಯವಾಗಿ ಚಿಕನ್ ಶಾಪ್ ನಡೆಸುತ್ತಿದ್ದ 22 ವರ್ಷದ ಆರೋಪಿ ಯುವಕನೊಂದಿಗೆ ಈಕೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆರೋಪಿ ಯುವಕ ತನ್ನ ಅಂಕಲ್‌ನ ಲೈಂಗಿಕ ಆಸೆಯನ್ನು ತೀರಿಸಲು ಸಹಕರಿಸುವಂತೆ ಮಹಿಳೆಯನ್ನು ಪದೇ ಪದೇ ಒತ್ತಾಯಿಸುತ್ತಿದ್ದ. ಆದರೆ ಮಹಿಳೆ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರು.

ಘಟನೆಯ ದಿನದಂದು ಆರೋಪಿ ಯುವಕ ತನ್ನ ಅಂಕಲ್ ಮತ್ತು ಸ್ನೇಹಿತನನ್ನು ಸ್ನೇಹಿತನ ಬಾಡಿಗೆ ಕೋಣೆಗೆ ಕರೆಸಿಕೊಂಡಿದ್ದ. ನಂತರ ಪ್ರೇಯಸಿಯನ್ನು ಅಲ್ಲಿಗೆ ಕರೆತಂದಿದ್ದ. ಅಂಕಲ್ ಮತ್ತು ಸ್ನೇಹಿತ ಹೊರಗಿನ ಕೋಣೆಯಲ್ಲಿ ಕುಳಿತಿದ್ದಾಗ, ಒಳಗಿನ ಕೋಣೆಯಲ್ಲಿ ಯುವಕ ಮತ್ತೆ ಮಹಿಳೆಗೆ ಅಂಕಲ್‌ ಜೊತೆ ಸೆಕ್ಸ್‌ ಮಾಡುವಂತೆ ಪೀಡಿಸಿದ್ದಾನೆ. ಮಹಿಳೆ ನಿರಾಕರಿಸಿದಾಗ ಆಕೆಯನ್ನು ಗೋಡೆಗೆ ತಳ್ಳಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಳಿಕ ನೆಲಕ್ಕೆ ತಳ್ಳಿ, ಉಣ್ಣೆಯ ಕಂಬಳಿಯಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಮಹಿಳೆ ಮೃತಪಟ್ಟಿದ್ದಾಳೆ ಎಂದು ಖಚಿತವಾದ ನಂತರ, ಶವವನ್ನು ಕೋಣೆಯಲ್ಲಿದ್ದ ಬೆಡ್‌ಬಾಕ್ಸ್ (ಮಂಚದ ಒಳಗಿನ ಸ್ಟೋರೇಜ್) ಒಳಗೆ ತುರುಕಿ ಬಚ್ಚಿಟ್ಟಿದ್ದಾನೆ. ಬಳಿಕ ಹೊರಬಂದು ಅಂಕಲ್ ಮತ್ತು ಸ್ನೇಹಿತನಿಗೆ ವಿಷಯ ತಿಳಿಸಿದ್ದಾನೆ. ಅವರಿಬ್ಬರೂ ಆರೋಪಿ ಸ್ಥಳದಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಸಂಜೆ ವೇಳೆ ಮನೆ ಮಾಲೀಕರು ಮನೆಗೆ ಬಂದಾಗ, ಕೋಣೆಯಲ್ಲಿದ್ದ ಬೆಡ್‌ಬಾಕ್ಸ್‌ನಿಂದ ಮಹಿಳೆಯ ಕಾಲು ಹೊರಕ್ಕೆ ಚಾಚಿರುವುದು ಕಂಡುಬಂದಿದೆ. ಗಾಬರಿಗೊಂಡು ಬಾಕ್ಸ್ ತೆರೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಹಿಳೆಯ ಹಣೆಯ ಮೇಲಿದ್ದ ಗಾಯದ ಗುರುತುಗಳು ಇದು ಕೊಲೆ ಎಂಬುದನ್ನು ಖಚಿತಪಡಿಸಿವೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೃತ ಮಹಿಳೆಯನ್ನು ಗುರುತಿಸಿದ್ದು, ಆಕೆಯ ಬಾಯ್‌ಫ್ರೆಂಡ್‌ಅನ್ನೇ ಪ್ರಮುಖ ಆರೋಪಿ ಎಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸದ್ಯ ಮೂವರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *