Mosque ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? | Israel Shuts Al Aqsa Mosque During Ramadan Amid Escalating War With Iran

Mosque ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? | Israel Shuts Al Aqsa Mosque During Ramadan Amid Escalating War With Iran



Mosque ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? | Israel Shuts Al Aqsa Mosque During Ramadan Amid Escalating War With Iran

ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? ಜೆರುಸಲೇಂನಲ್ಲಿರುವ ಈ ಮಸೀದಿ ಇಸ್ರೇಲ್ ಸರ್ಕಾರದ ವ್ಯಾಪ್ತಿಯಲ್ಲಿದೆ. ಇದೀಗ ಈ ಮಸೀದಿಯನ್ನು ಇಸ್ರೇಲ್ ಬಂದ್ ಮಾಡಿಸಿದೆ. 

ಜೆರುಸಲೇಂ (ಮಾ.09) ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ಮಧ್ಯಪ್ರಾಚ್ಯ ದೇಶಗಳ ಮೇಲೂ ಆತಂಕ ಹೆಚ್ಚಾಗುತ್ತಿದೆ. ಇತ್ತ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ಇಸ್ರೇಲ್ ಹಾಗೂ ಇರಾನ್ ಬಾಂಬ್ ಮಳೆ ಸುರಿಸುತ್ತಿದೆ. ಇರಾನ್ ದಾಳಿಗಳು ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೂ ತಟ್ಟಿದೆ. ಈ ಬೆಳವಣಿಗೆ ನಡುವೆ ಇಸ್ಲಾಂನ ಮೂರನೇ ಪವಿತ್ರ ಅಲ್ ಅಕ್ಸಾ ಮಸೀದಿಯನ್ನು ಇಸ್ರೇಲ್ ಸರ್ಕಾರ ಬಂದ್ ಮಾಡಿಸಿದೆ. ಇಸ್ರೇಲ್ ರಾಜಧಾನಿ ಜೆರುಸಲೇಂನಲ್ಲಿರುವ ಅಲ್ ಅಕ್ಸಾ ಮಸೀದಿ ಇಸ್ರೇಲ್ ಸರ್ಕಾರದ ಅಧೀನದಲ್ಲಿದೆ. ಇದನ್ನು ಮುಚ್ಚಲಾಗಿದೆ.

ರಂಜಾನ್ ತಿಂಗಳಲ್ಲೇ ಮಸೀದಿ ಮುಚ್ಚಿದ್ದೇಕೆ?

ರಂಜಾನ್ ತಿಂಗಳಲ್ಲೇ ಮಸೀದಿ ಮುಚ್ಚಲಾಗಿದೆ. ಇದಕ್ಕೆ ಕಾರಣ ಇಸ್ರೇಲ್ ಹಾಗೂ ಇರಾನ್ ಯುದ್ಧದ ಕಾರಣದಿಂದ ಮುನ್ನಚ್ಚೆರಿಕಾ ಕ್ರಮವಾಗಿ ಮಸೀದಿ ಮುಚ್ಚಲಾಗಿದೆ. ಇರಾನ್ ಇಸ್ರೇಲ್ ಯುದ್ಧದ ಜೊತೆಗೆ ಇಸ್ರೇಲ್ ಪ್ಯಾಲೇಸ್ತಿನ್ ಸಂಘರ್ಷವೂ ಇರುವ ಕಾರಣ ಮುನ್ನಚ್ಚೆರಿಕ ದೃಷ್ಟಿಯಿಂದ ಮಸೀದಿ ಮುಚ್ಚಲಾಗಿದೆ. ಜೆರುಸಲೇಂನ ಈ ಮಸೀದಿ ಆಡಳಿತವನ್ನು ಜೋರ್ಡಾನ್‌ನ ಇಸ್ಲಾಮಿಕ್ ಸೆಂಟರ್ ನಿರ್ವಹಣೆ ಮಾಡುತ್ತಿದೆ. ಅಲ್ ಅಕ್ಸಾ ಮಸೀದಿಯಲ್ಲಿನ ಕೆಲ ಕಾರ್ಯಾಚರಣೆಗಳು ಹಲವು ಬಾರಿ ವಿವಾದಕ್ಕೂ ಕಾರಣವಾಗಿದೆ. ಪ್ರವೇಶ ನಿರ್ಬಂಧ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇದೀಗ ಮಸೀದಿ ಮುಚ್ಚಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಯುದ್ಧದ ತೀವ್ರತೆ ಹೆಚ್ಚಿರುವ ಕಾರಣ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ. ಇರಾನ್ ಹಾಗೂ ಪ್ಯಾಲೇಸ್ತಿನ್ ಸಂಘರ್ಷದಿಂದ ಮಸೀದಿ ಮೇಲೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ರಂಜಾನ್ ತಿಂಗಳಾಗಿರುವ ಕಾರಣ ಹೆಚ್ಚಿನ ಮಂದಿ ಸೇರುತ್ತಾರೆ. ಹೀಗಾಗಿ ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಮಸೀದಿ ಮುಚ್ಚಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಪ್ರವಾದಿ ಮೊಹಮ್ಮದರು ಮೆಕ್ಕಾದಿಂದ ಜೆರುಸಲೇಂಗೆ ಪ್ರಯಾಣ ಬೆಳೆಸಿದ್ದರು ಎಂಬ ಉಲ್ಲೇಖವಿದೆ. ಹೀಗಾಗಿ ಮೆಕ್ಕಾ ಹಾಗೂ ಮದೀನಾ ಬಳಿಕ ಜೆರುಸಲೇಂನ ಅಲ್ ಅಕ್ಸಾ ಮಸೀದಿ ಇಸ್ಲಾಂನ ಮೂರನೇ ಪವಿತ್ರ ಎಂದು ಗುರುತಿಸಿಕೊಂಡಿದೆ. ಇತ್ತ ಯಹೂದಿಗಳಿಗೆ ಇದು ಟೆಂಪಲ್ ಮೌಂಟ್ ಆಗಿದೆ. ಇಲ್ಲಿ ಯಹೂದಿಗಳ ದೇವಾಲಯ ಇದ್ದ ಸ್ಥಳ ಎಂದು ಯಹೂದಿಗಳು ನಂಬುತ್ತಾರೆ. ಇದೇ ಕಾರಣದಿಂದ ಇಲ್ಲಿ ಹಲವು ಬಾರಿ ಪ್ರವೇಶ ನಿರ್ಬಂಧ ಕೂಡ ವಿಧಿಸಲಾಗಿತ್ತು.



Source link

Leave a Reply

Your email address will not be published. Required fields are marked *