elephant chanchal viral photoshootಪಿಂಕ್ ಫೋಟೋಶೂಟ್‌ನಲ್ಲಿ ಭಾಗಿಯಾದ ಆನೆ ನಾಲ್ಕೇ ತಿಂಗಳಿಗೆ ನಿಗೂಢ ಸಾವು | Elephant Chanchal Dies Just Four Months After Being Painted For A Photoshoot

elephant chanchal viral photoshootಪಿಂಕ್ ಫೋಟೋಶೂಟ್‌ನಲ್ಲಿ ಭಾಗಿಯಾದ ಆನೆ ನಾಲ್ಕೇ ತಿಂಗಳಿಗೆ ನಿಗೂಢ ಸಾವು | Elephant Chanchal Dies Just Four Months After Being Painted For A Photoshoot



elephant chanchal viral photoshootಪಿಂಕ್ ಫೋಟೋಶೂಟ್‌ನಲ್ಲಿ ಭಾಗಿಯಾದ ಆನೆ ನಾಲ್ಕೇ ತಿಂಗಳಿಗೆ ನಿಗೂಢ ಸಾವು | Elephant Chanchal Dies Just Four Months After Being Painted For A Photoshoot

ಜೈಪುರದಲ್ಲಿ ವಿದೇಶಿ ಕಲಾವಿದೆಯೊಬ್ಬರು ಆನೆಗೆ ಪಿಂಕ್ ಬಣ್ಣ ಬಳಿದು ನಡೆಸಿದ ಫೋಟೋಶೂಟ್ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ಚಂಚಲ್ ಹೆಸರಿನ ಆನೆ ಸಾವನ್ನಪ್ಪಿದ್ದು,, ಅದರ ಸಾವಿಗೆ ಫೋಟೋಶೂಟ್ ಕಾರಣ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಪಿಂಕ್ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದ ಆನೆ ಸಾವು

ಜೈಪುರದಲ್ಲಿ ವಿದೇಶಿ ಕಲಾವಿದೆಯೊಬ್ಬರು ಕಳೆದ ನವೆಂಬರ್‌ನಲ್ಲಿ ಆನೆಗೆ ಸಂಪೂರ್ಣ ಪಿಂಕ್ ಬಣ್ಣ ಬಳಿದು ಅದರೊಂದಿಗೆ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಶೂಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದಾಗಿ ವರ್ಷ ಕಳೆಯುವ ಮುನ್ನವೇ ಈ ಆನೆ ಸಾವನ್ನಪ್ಪಿದೆ. ಆದರೆ ಆನೆ ವಯೋಸಹಜ ಸಮಸ್ಯೆಯಿಂದ ಸಹಜವಾಗಿ ಸಾವನ್ನಪ್ಪಿದ್ದರೂ ಈಗ ಫೋಟೋ ಶೂಟ್‌ಗಾಗಿ ಆನೆಗೆ ಬಣ್ಣ ಬಳಿದ ವಿದೇಶಿ ಕಲಾವಿದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.

ಜೈಪುರದಲ್ಲಿ ಸುಮಾರು 70 ವರ್ಷದ ಆನೆ ಚಂಚಲ್ ಕಳೆದ ತಿಂಗಳು ಸಾವನ್ನಪ್ಪಿದೆ. ಆದರೆ ಆಕೆಯ ಸಾವಿನ ನಂತರ ಆಕೆಗೆ ಬಣ್ಣ ಬಳಿದು ರಷ್ಯನ್ ಮಾಡೆಲ್ ಒಬ್ಬರು ಅದರ ಮೇಲೆ ಕುಳಿತು ಫೋಟೋಶೂಟ್ ಮಾಡಿಸಿದ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅದು ವಯೋಸಹಜವಾಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರೂ ಸಹ ಜನರು ಆನೆಯ ಸಾವಿಗೂ ಫೋಟೋ ಶೂಟ್‌ಗೂ ಲಿಂಕ್ ಮಾಡುತ್ತಿದ್ದಾರೆ. ಹೀಗಾಗಿ ಆ ಫೋಟೋಶೂಟ್ ನಡೆಸಿದ ಮಾಡೆಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ನಿರ್ವಾಹಕರು ಆಕೆಯ ಸಾವು ನೈಸರ್ಗಿಕ ಕಾರಣಗಳಿಂದ ಉಂಟಾಗಿದ್ದು ಅದಕ್ಕೂ ಫೋಟೋಶೂಟ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಸಹ ಪ್ರಾಣಿಗಳ ಕಲ್ಯಾಣ, ಕಲಾ ಪ್ರಕಾರಗಳಲ್ಲಿ ಪ್ರಾಣಿಗಳ ನೈತಿಕ ಬಳಕೆ ಮತ್ತು ಕಠಿಣ ನಿಯಂತ್ರಕ ಮೇಲ್ವಿಚಾರಣೆಯ ಕುರಿತು ಜನ ಚರ್ಚಿಸುತ್ತಿದ್ದಾರೆ.

ನವೆಂಬರ್ 2025ರಲ್ಲಿ ಈ ಫೋಟೋ ಶೂಟ್ ನಡೆದಿದ್ದು, ಆ ಫೋಟೋ ವೀಡಿಯಯೋಗಳು ಮತ್ತೆ ವೈರಲ್ ಆಗಿವೆ. ಜೈಪುರದ ಪಾಳುಬಿದ್ದ ದೇವಾಲಯವೊಂದರಲ್ಲಿ ವಿದೇಶಿ ಫೋಟೋಗ್ರಾಪರ್ ಒಬ್ಬರು ನಡೆಸಿದ ಈ ಶೂಟಿಂಗ್‌ಗಾಗಿ, ಗುಲಾಲ್ ಪುಡಿಯನ್ನು(ಹೋಳಿ ಹಬ್ಬದಲ್ಲಿ ಹಚ್ಚಲು ಬಳಸುವಂತಹ ಬಣ್ಣದ ಪೌಡರ್) ಬಳಸಿ ಆನೆಗೆ ಪ್ರಕಾಶಮಾನವಾದ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು. ಆನೆಯ ಪಕ್ಕದಲ್ಲಿ ಮಾಡೆಲ್ ಒಬ್ಬರು ಪೋಸ್ ನೀಡುತ್ತಿದ್ದರು. ಅತ್ತ ಮಾಡೆಲ್ ಕೂಡ ಪಿಂಕ್ ಬಣ್ಣ ಬಳಿದುಕೊಂಡು ಆನೆ ಮೇಲೆ ಹತ್ತಿ ಕುಳಿತು ಪೋಸ್ ನೀಡಿದ್ದಳು.

ಈ ದೃಶ್ಯಗಳು ಅವುಗಳ ಕಲಾತ್ಮಕ ಆಕರ್ಷಣೆಗೆ ಮೆಚ್ಚುಗೆಯನ್ನು ಗಳಿಸಿದ್ದರೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಫೋಟೋ ಶೂಟ್‌ಗಾಗಿ ಜೀವಂತ ಪ್ರಾಣಿಯನ್ನು ಬಳಸಿದಕ್ಕೆ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಈ ಫೋಟೋಶೂಟ್‌ನಲ್ಲಿ ಬಣ್ಣ ಬಳಿಯುವಿಕೆಗೆ ಒಳಗಾದ ಚಂಚಲ್ ಆನೆ ಇತ್ತೀಚೆಗೆ ಸಾವನ್ನಪ್ಪಿದೆ ಎಂದು ವರದಿಗಳು ಬರುತ್ತಿದ್ದಂತೆ ಈ ಚರ್ಚೆ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವಕ ಸಾವು

ನಮ್ಮ ರಾಜ್ಯದಲ್ಲಿ ಸಕ್ಕರೆಬೈಲು, ದುಬಾರೆ ಇರುವಂತೆ ಜೈಪುರದ ಆನೆ ಕ್ಯಾಂಪ್ ಆದ ಹಾಥಿ ಗಾಂವ್‌ನ ಹೆಣ್ಣು ಆನೆ ಈ ಚಂಚಲ್ ಆಗಿದ್ದು, ಚಂಚಲ್‌ಗೆ ಸುಮಾರು 70 ವರ್ಷ ವಯಸ್ಸಾಗಿತ್ತು, ಈ ಹಾಥಿಗಾಂವ್ ಪ್ರದೇಶವನ್ನು ಆನೆ ಗ್ರಾಮ ಎಂದೂ ಕರೆಯುತ್ತಾರೆ, ಈ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಆನೆಗಳನ್ನು ಸ್ಥಳೀಯ ಮಾವುತರು ಸಾಕುತ್ತಾರೆ ಮತ್ತು ನೋಡಿಕೊಳ್ಳುತ್ತಾರೆ.

ಚಂಚಲ್ ಎಂಬ ಹೆಸರಿನ ಈ 65 ವರ್ಷದ ವೃದ್ಧ ಆನೆ ಇನ್ನಿಲ್ಲ (ಫೆಬ್ರವರಿ 26). ಈ ಫೋಟೋಶೂಟ್ ನಂತರ ಈ ಸೌಮ್ಯ ಜೀವ ನಿಧನಗೊಂಡಿದೆ ಎಂದು ಮಾಲೀಕ ಶಾದಿಕ್ ಖಾನ್ ಹೇಳಿದ್ದಾರೆ. ಈಗ ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ ವಿರುದ್ಧ ಯಾವುದೇ ನೆಪ ಹೇಳದೇ ಕಾನೂನು ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ತನಿಖೆಗೆ ಕರೆ ನೀಡಿದೆ ಎಂದು ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ: 9 ಜನರು ಸಾವು

ಚಿತ್ರೀಕರಣದ ಸಮಯದಲ್ಲಿ ಬಳಸಲಾದ ಗುಲಾಬಿ ಬಣ್ಣಕ್ಕೂ ಚಂಚಲ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಮತ್ತು ನಿರ್ವಾಹಕರು ದೃಢವಾಗಿ ನಿರಾಕರಿಸಿದ್ದಾರೆ. ಹೋಳಿ ಆಚರಣೆಯ ಸಮಯದಲ್ಲಿ ಬಳಸಿದಂತೆಯೇ ಸಾವಯವ ಗುಲಾಲ್ ಪುಡಿಯನ್ನು ಸ್ವಲ್ಪ ಸಮಯದವರೆಗೆ ಹಚ್ಚಿ ಕೆಲವೇ ನಿಮಿಷಗಳಲ್ಲಿ ತೊಳೆಯಲಾಯಿತು ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಪಶುವೈದ್ಯಕೀಯ ಮೂಲಗಳು ಫೋಟೋಶೂಟ್‌ಗೆ ಸಂಬಂಧಿಸಿದ ಯಾವುದೇ ಗಾಯಗಳು, ರಾಸಾಯನಿಕ ಪ್ರತಿಕ್ರಿಯೆಗಳು ಅಥವಾ ಆರೋಗ್ಯ ಸಮಸ್ಯೆಗಳು ಆ ಸಮಯದಲ್ಲಿ ವರದಿಯಾಗಿಲ್ಲ ಎಂದು ಸೂಚಿಸಿವೆ. ಇದರ ಹೊರತಾಗಿಯೂ, ಆಕೆಯ ಸಾವಿನ ಸಮಯ, ವೀಡಿಯೊ ವೈರಲ್ ಆಗುವುದರೊಂದಿಗೆ ಹೊಂದಿಕೆಯಾಗುವುದರಿಂದ, ಆನ್‌ಲೈನ್‌ನಲ್ಲಿ ವ್ಯಾಪಕ ಊಹಾಪೋಹಗಳು ಕೇಳಿಬಂದವು.



Source link

Leave a Reply

Your email address will not be published. Required fields are marked *