
ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್, ನಾಸಿಕ್ ಟಿಸಿಎಸ್ ಕಂಪನಿಯಲ್ಲಿ ನಡೆದ ಲವ್ ಜಿಹಾದ್, ಮತಾಂತರ ಪ್ರಕರಣದಿಂದ ಕಾರ್ಪೋರೇಟ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ.
ದೇಶಾದ್ಯಂತ ಹಲವೆಡೆ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿದೆ. ಆದರೆ ನಾಸಿಕ್ನಲ್ಲಿ ಬೆಳಕಿಗೆ ಬಂದ ಪ್ರಕರಣ ದೇಶದಲ್ಲಿ ಕಾರ್ಪೋರೇಟ್ ಜಿಹಾದ್ ಸದ್ದಿಲ್ಲದೆ ನಡೆಯುತ್ತಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಹಿಂದೂ ಹೆಣ್ಣುಮಕ್ಕಳು, ಕೆಲಸದ ಅನಿವಾರ್ಯತೆಯಲ್ಲಿರುವ ಹಲವು ಅಮಾಯಕರನ್ನು ಟಾರ್ಗೆಟ್ ಮಾಡಿ ಕಾರ್ಪೋರೇಟ್ ಜಿಹಾದ್ ನಡೆಸಲಾಗುತ್ತಿದೆ ಅನ್ನೋದು ನಾಸಿಕ್ ಪ್ರಕರಣದಿಂದ ಬಯಲಾಗಿದೆ. ಇದು ಕೇವಲ ನಾಸಿಕ್ನ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ಕಂಪನಿಯಲ್ಲಿ ಮಾತ್ರವಲ್ಲ, ದೇಶದ ಹಲವು ಪ್ರತಿಷ್ಠಿತ, ಹಾಗೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಈ ರೀತಿಯ ಕಾರ್ಪೋರೇಟ್ ಜಿಹಾದ್ ಸದ್ದಿಲ್ಲದೆ ನಡೆಯುತ್ತಿರುವ ಸಾಧ್ಯತೆ ಇದೆ ಅನ್ನೋ ಆರೋಪಗಳು, ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.
ಏನಿದು ಘಚನೆ?
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಿಸಿಎಸ್ ಬಿಪಿಒ ಘಟಕದಲ್ಲಿ ಹೆಣ್ಣುಮಕ್ಕಳಿಗೆ ಪ್ರತಿ ದಿನ ಲೈ0ಗಿಕ ಕಿರುಕುಳ, ಅತ್ಯಾ**ರ, ಗೋ ಮಾಂಸ ತಿನ್ನಲ್ಲು, ಮತಾಂತರಗೊಳ್ಳಲು ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ 6 ಮಹಿಳಾ ಪೊಲೀಸ್ ಅಧಿಕಾರಿಗಳು ಅಂಡರ್ಕವರ್ ಆಗಿ ಇದೇ ಟಿಸಿಎಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. 40 ದಿನಗಳ ಕಾಲ ಕೆಲಸ ಮಾಡಿ ಈ ಆರೋಪಗಳ ಕುರಿತು ರಹಸ್ಯವಾಗಿ ತನಿಖೆ ನಡೆಸಿದ್ದಾರೆ. ಈ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಟಿಸಿಎಸ್ ಬಿಪಿಒ ಕಂಪನಿಯಲ್ಲಿ ಟೀಮ್ ಲೀಡರ್ಸ್, ಓರ್ವ ಹೆಚ್ಆರ್ ಸೇರಿಕೊಂಡು ಕಾರ್ಪೋರೇಟ್ ಜಿಹಾದ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಮಹಿಳಾ ಉದ್ಯೋಗಿಗಳಿಗೆ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿ ಅವರನ್ನು ಲೈ0ಗಿಕವಾಗಿ ಬಳಸಿಕೊಂಡಿದ್ದಾರೆ. ಬಳಿಕ ಮತಾಂತರಕ್ಕೆ ಬೆದರಿಕೆ ಹಾಕಿದ್ದಾರೆ. ಉದ್ಯೋಗ ಭದ್ರತೆ, ಪ್ರಮೋಶನ್ ಸೇರಿದಂತೆ ಹಲವು ಆಮಿಷ, ಬೆದರಿಕೆ ಹಾಕಿ ಮಹಿಳಾ ಉದ್ಯೋಗಿಗಳನ್ನು ಈ ರೀತಿ ಬಳಸಿಕೊಂಡಿದ್ದಾರೆ. ಈ ಕುರಿತಕು 9 ಎಫ್ಐಆರ್ ದಾಖಲಾಗಿದೆ. ಅತ್ಯಾ**ರ ಜೊತೆ, ಮತಾಂತರಕ್ಕೆ ಬೆದಿರಿಕೆ ಹಾಕಿದ್ದು ಮಾತ್ರವಲ್ಲ, ಗೋ ಮಾಂಸ ತಿನ್ನುವಂತೆ ಬೆದರಿಸಿದ್ದಾರೆ. ಇನ್ನು ನಮಾಜ್ ಮಾಡಲು ಹಲವು ಉದ್ಯೋಗಿಗಳನ್ನು ಬೆದರಿಸಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ಅರೆಸ್ಟ್
ಟಿಸಿಎಸ್ ಬಿಪಿಒ ಕಂಪನಿಯ 6 ಟೀಮ್ ಲೀಡರ್ಸ್ ಹಾಗೂ ಓರ್ವ ಹೆಚ್ಆರ್ ಉದ್ಯೋಗಿಯನ್ನು ನಾಸಿಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತ ಈ ಪ್ರಕರಣ ಬಯಲಾಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ಟಿಸಿಎಸ್ ಕಂಪನಿ ಪ್ರಕರಣದಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದೆ. ಈ ಬಗ್ಗೆ ಕಂಪನಿಗೆ ಗೊತ್ತಿರಲಿಲ್ಲ ಎಂದು ಅರೆಸ್ಟ್ ಆಗಿರುವ ಉದ್ಯೋಗಿಗಳನ್ನು ಕಂಪನಿಯಿಂದ ಅಮಾನತು ಮಾಡಿದೆ.
ಏನಿದು ಕಾರ್ಪೋರೇಟ್ ಜಿಹಾದ್?
ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿ ಹೆಸರಿನಲ್ಲಿ ನಾಟಕವಾಡಿ ಮದುವೆ ಮಾಡಿಕೊಂಡು ಬಳಿಕ ಮತಾಂತರ ಮಾಡುವ ಲವ್ ಜಿಹಾದ್ ಆರೋಪದ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಕಾರಣ ಈ ಲವ್ ಜಿಹಾದ್ ಪ್ರಕರಣ, ಆರೋಪಗಳು ಕಳೆದ ಹಲವು ವರ್ಷಗಳಿಂದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ಕಾರ್ಪೋರೇಟ್ ವಲಯದಲ್ಲಿ ಟೀಮ್ ಲೀಡರ್, ಮ್ಯಾನೇಜರ್, ಬಾಸ್ ಸ್ಥಾನದಲ್ಲಿರುವ ಕೆಲ ಸಮುದಾಯದ ವ್ಯಕ್ತಿಗಳು ಸದ್ದಿಲ್ಲದೆ ಕಾರ್ಪೋರೇಟ್ ಜಿಹಾದ್ ನಡೆಸುತ್ತಿರುವುದು ನಾಸಿಕ್ ಟಿಸಿಎಸ್ ಪ್ರಕರಣದಿಂದ ಬೆಳಕಿಗೆ ಬಂದಿದೆ ಅನ್ನೋ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ.
ಕಾರ್ಪೋರೇಟ್ ಕಂಪನಿಗಳಲ್ಲಿ ಮೇಲಧಿಕಾರಿಗಳು, ಮ್ಯಾನೇಜರ್ ಬಾಸ್ ತಮ್ಮ ಕಂಪನಿಯ ಕಿರಿಯ ಮಹಿಳಾ ಉದ್ಯೋಗಳಿಗೆ ಉದ್ಯೋಗ ಭದ್ರತೆ, ಪ್ರಮೋಶನ್ ಆಮಿಷ ಅಥವಾ ಕೆಲಸದಿಂದ ಕಿತ್ತು ಹಾಕುವ ಅಮಾನತು ಮಾಡುವ ಬೆದರಿಕೆ ಹಾಕಿ ಪ್ರೀತಿ ಬಲೆಯಲ್ಲಿ ಬೀಳಿಸುತ್ತಾರೆ. ಕಾರ್ಪೋರೇಟ್ ಔಟಿಂಗ್, ಟೂರ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಪ್ರವಾಸಿ ತಾಣಕ್ಕೆ ಕರೆದುಕೊಂಡು ಹೋಗಿ ಖಾಸಗಿ ಹೊಟೆಲ್, ರೆಸಾರ್ಟ್ಗಳಲ್ಲಿ ಬಳಸಿಕೊಳ್ಳುವುದು, ಪಾರ್ಟಿ ಹೆಸರಿನಲ್ಲಿ ಲೈ0ಗಿಕ ಕಿರುಕುಳ ನೀಡುವುದು ರಹಸ್ಯವಾಗಿ ನಡೆಯುತ್ತಿದೆ. ಪ್ರೀತಿ, ಮದುವೆ ಬಳಿಕ ಮತಾಂತರ ಮಾಡುವುದು ಬಳಿಕ ಬೇರೊಬ್ಬಳನ್ನು ಮದುವೆಯಾಗುವ ಪದ್ಧತಿಗಳೇ ಕಾರ್ಪೋರೇಟ್ ಜಿಹಾದ್ ಆಗಿ ಗುರುತಿಸಿಕೊಂಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Scroll to load tweet…
ಟೀಂ ಲೀಡರ್ಸ್ ಹೆಚ್ಚು ಹೆಚ್ಚು ತಮ್ಮ ಸಮುದಾದವರಿಗೆ ಉದ್ಯೋಗ ನೀಡಿ ಕಂಪನಿಗೆ ಸೇರಿಸಿಕೊಳ್ಳುವುದು, ಬಳಿಕ ಹಿಂದೂ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಕಾರ್ಪೋರೇಟ್ ಜಿಹಾದ್ ನಡೆಸುವುದು ಇದೀಗ ಎಗ್ಗಿಲ್ಲದೆ ನಡೆಯುತ್ತಿದೆ. ಕಾರ್ಪೋರೇಟ್ ವಲಯದಲ್ಲಿ ಕೆಲಸದಲ್ಲಿರುವ ಹಲವರು ಈ ಮೋಸದ ಬಲೆಯಲ್ಲಿ ಸಿಲುಕಿ, ಹೊರಗೆ ಹೇಳಲು ಆಗದೆ ಒದ್ದಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.
Scroll to load tweet…