ಮಹಿಳಾ ವಿಶ್ವಕಪ್: ಟಾಸ್ ವೇಳೆ ಭಾರತಕ್ಕೆ ಮಹಾ ಮೋಸ, ಪಾಕ್ ಕ್ಯಾಪ್ಟನ್ ಕೇಳಿದ್ದು ಟೇಲ್ಸ್, ಬಿದ್ದಿದ್ದು ಹೆಡ್ಸ್! | Womens World Cup Controversy Pakistan Wrongly Declared Toss Winner Against India

ಮಹಿಳಾ ವಿಶ್ವಕಪ್: ಟಾಸ್ ವೇಳೆ ಭಾರತಕ್ಕೆ ಮಹಾ ಮೋಸ, ಪಾಕ್ ಕ್ಯಾಪ್ಟನ್ ಕೇಳಿದ್ದು ಟೇಲ್ಸ್, ಬಿದ್ದಿದ್ದು ಹೆಡ್ಸ್! | Womens World Cup Controversy Pakistan Wrongly Declared Toss Winner Against India



ಮಹಿಳಾ ವಿಶ್ವಕಪ್: ಟಾಸ್ ವೇಳೆ ಭಾರತಕ್ಕೆ ಮಹಾ ಮೋಸ, ಪಾಕ್ ಕ್ಯಾಪ್ಟನ್ ಕೇಳಿದ್ದು ಟೇಲ್ಸ್, ಬಿದ್ದಿದ್ದು ಹೆಡ್ಸ್! | Womens World Cup Controversy Pakistan Wrongly Declared Toss Winner Against India

ಮಹಿಳಾ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಟಾಸ್ ವೇಳೆ ನಡೆದ ಪ್ರಮಾದದಿಂದ ವಿವಾದ ಭುಗಿಲೆದ್ದಿದೆ. ಪಾಕ್ ನಾಯಕಿ ‘ಟೇಲ್ಸ್’ ಎಂದು ಕರೆದರೂ, ‘ಹೆಡ್ಸ್’ ಬಿದ್ದಾಗ ನಿರೂಪಕಿಯ ತಪ್ಪಿನಿಂದ ಪಾಕಿಸ್ತಾನಕ್ಕೆ ಟಾಸ್ ನೀಡಲಾಗಿದ್ದು, ಭಾರತಕ್ಕೆ ಮೋಸವಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. 

ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ನಿರ್ಣಾಯಕ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಏಷ್ಯಾಕಪ್‌ನಲ್ಲಿ ಪುರುಷರ ತಂಡ ಹಸ್ತಲಾಘವಕ್ಕೆ ನಿರಾಕರಿಸಿದಂತೆ, ಮಹಿಳಾ ತಂಡವೂ ಪಾಕ್ ಆಟಗಾರ್ತಿಯರೊಂದಿಗೆ ಹ್ಯಾಂಡ್‌ಶೇಕ್ ಮಾಡುವುದಿಲ್ಲ ಎಂದು ಬಿಸಿಸಿಐ ಮೊದಲೇ ಸ್ಪಷ್ಟಪಡಿಸಿದ್ದರಿಂದ, ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕ್ ಕ್ಯಾಪ್ಟನ್ ಫಾತಿಮಾ ಸನಾ ಟಾಸ್ ನಂತರ ಹ್ಯಾಂಡ್‌ಶೇಕ್ ಮಾಡಲಿಲ್ಲ.

ಟಾಸ್ ವೇಳೆ ಭಾರತಕ್ಕೆ ಮಹಾ ಮೋಸ

ಆದರೆ, ನಿಜವಾಗಿ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದಿದ್ದು ಭಾರತ. ಮ್ಯಾಚ್ ರೆಫ್ರಿ ಶಾಂತ್ರಿ ಫ್ರಿಟ್ಜ್ ಮತ್ತು ನಿರೂಪಕಿ ಮೆಲ್ ಜೋನ್ಸ್ ಮಾಡಿದ ದೊಡ್ಡ ತಪ್ಪಿನಿಂದ ಪಾಕಿಸ್ತಾನಕ್ಕೆ ಟಾಸ್ ನೀಡಲಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಟಾಸ್‌ಗಾಗಿ ನಾಣ್ಯವನ್ನು ಚಿಮ್ಮಿದಾಗ, ಫಾತಿಮಾ ಸನಾ ‘ಟೇಲ್ಸ್’ ಎಂದು ಕರೆದಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಎಂದು ಅಭಿಮಾನಿಗಳು ಪತ್ತೆಹಚ್ಚಿದ್ದಾರೆ. ಆದರೆ, ನಿರೂಪಕಿ ಮೆಲ್ ಜೋನ್ಸ್, ಫಾತಿಮಾ ‘ಹೆಡ್ಸ್’ ಎಂದು ಕರೆದಿದ್ದಾರೆ ಎಂದು ಮೈಕ್‌ನಲ್ಲಿ ಹೇಳಿದರು. ನಾಣ್ಯ ‘ಹೆಡ್ಸ್’ ಬಿದ್ದಿದೆ ಎಂದು ಮ್ಯಾಚ್ ರೆಫ್ರಿ ಖಚಿತಪಡಿಸಿದಾಗ, ಫಾತಿಮಾ ಸನಾ ಟಾಸ್ ಗೆದ್ದಿದ್ದಾರೆ ಎಂದು ನಿರೂಪಕಿ ಘೋಷಿಸಿ, ಮಾತನಾಡಲು ಆಹ್ವಾನಿಸಿದರು. ಸನಾ ‘ಟೇಲ್ಸ್’ ಎಂದು ಕರೆದಿದ್ದು ಹತ್ತಿರದಿಂದಲೇ ಕೇಳಿಸಿಕೊಂಡಿದ್ದ ಮ್ಯಾಚ್ ರೆಫ್ರಿ ಕೂಡ ನಿರೂಪಕಿಯನ್ನು ತಿದ್ದಲಿಲ್ಲ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು, ಪಾಕ್ ಎದುರು ಭಾರತಕ್ಕೆ ಟಾಸ್ ವೇಳೆ ಮಹಾಮೋಸವಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ತಂತ್ರಗಾರಿಕೆಯಿಂದ ಮೌನವಹಿಸಿದ ಪಾಕ್ ಕ್ಯಾಪ್ಟನ್

ತಾನು ನಿಜವಾಗಿ ‘ಟೇಲ್ಸ್’ ಎಂದು ಕರೆದಿದ್ದು, ಆದರೆ ಬಿದ್ದಿದ್ದು ‘ಹೆಡ್ಸ್’ ಆದ್ದರಿಂದ ಭಾರತ ಟಾಸ್ ಗೆದ್ದಿದೆ ಎಂದು ಸರಿಪಡಿಸಲು ಪಾಕಿಸ್ತಾನ ನಾಯಕ ಸನಾ ಮುಂದಾಗಲಿಲ್ಲ. ನಿರೂಪಕಿ ಮತ್ತು ಮ್ಯಾಚ್ ರೆಫ್ರಿಯ ತಪ್ಪನ್ನು ಸರಿಪಡಿಸದೆ, ಫಾತಿಮಾ ಸನಾ ಜಾಣತನದಿಂದ ಮೌನವಾಗಿದ್ದರು. ಟಾಸ್ ಗೆದ್ದ ಖುಷಿಯಲ್ಲಿ ಪಾಕ್ ಕ್ಯಾಪ್ಟನ್ ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಭಾರತದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಕೂಡ ಸನಾ ‘ಟೇಲ್ಸ್’ ಎಂದು ಕರೆದು ‘ಹೆಡ್ಸ್’ ಬಿದ್ದಿದ್ದನ್ನು ಗಮನಕ್ಕೆ ತರಲಿಲ್ಲ.

Scroll to load tweet…

 

ಟಾಸ್‌ಗಾಗಿ ನಾಣ್ಯವನ್ನು ಚಿಮ್ಮಿದಾಗ ಸನಾ ‘ಟೇಲ್ಸ್’ ಎಂದು ಹೇಳಿದ್ದು ಮತ್ತು ನಿರೂಪಕಿ ‘ಹೆಡ್ಸ್’ ಎಂದು ಗಟ್ಟಿಯಾಗಿ ಹೇಳಿದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ಇಂತಹ ದೊಡ್ಡ ಪ್ರಮಾದ ನಡೆದಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮ್ಯಾಚ್ ರೆಫ್ರಿ ಮತ್ತು ನಿರೂಪಕಿಯ ತಪ್ಪಿನ ವಿರುದ್ಧ ಭಾರತ ಐಸಿಸಿಗೆ ಅಧಿಕೃತವಾಗಿ ದೂರು ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Scroll to load tweet…

 

ಪಾಕ್ ಎದುರು ಭಾರತ ಎಚ್ಚರಿಕೆಯ ಆರಂಭ:

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಭಾರತ ಮಹಿಳಾ ಕ್ರಿಕೆಟ್ ತಂಡವು ಎಚ್ಚರಿಕೆಯ ಆರಂಭ ಪಡೆದಿದೆ. ಮೊದಲ ವಿಕೆಟ್‌ಗೆ ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧನಾ ಜೋಡಿ 48 ರನ್‌ಗಳ ಜತೆಯಾಟವಾಡಿತು. ಮಂಧನಾ ಮತ್ತೊಮ್ಮೆ ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. ಮಂಧನಾ 23 ರನ್ ಬಾರಿಸಿ ಪಾತಿಮಾ ಸನಾಗೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 31 ರನ್ ಸಿಡಿಸಿದರು.

ಇನ್ನು ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಹರ್ಲಿನ್ ಡಿಯೊಲ್ 65 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 46 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್‌ ಕೇವಲ 19 ರನ್‌ಗಳಿಗೆ ಸೀಮಿತವಾಯಿತು. ಇನ್ನು ಜಮಿಮಾ ರೋಡ್ರಿಗಸ್ 32 ರನ್ ಗಳಿಸಿ ನಶ್ರಾ ಸಂಧುಗೆ ವಿಕೆಟ್ ಒಪ್ಪಿಸಿದರು. ಸದ್ಯ ಭಾರತ ಮಹಿಳಾ ತಂಡವು 37 ಓವರ್ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 164 ರನ್ ಬಾರಿಸಿದ್ದು, ಸವಾಲಿನ ಮೊತ್ತ ಕಲೆಹಾಕುವತ್ತ ಮುನ್ನುಗ್ಗುತ್ತಿದೆ.



Source link

Leave a Reply

Your email address will not be published. Required fields are marked *