GST benefits for farmers: ರೈತರಿಗೂ ಬಂಪರ್: ಜಿಎಸ್‌ಟಿ ಇಳಿಕೆಯ ಬಳಿ ಟ್ರ್ಯಾಕ್ಟರ್, ಕೃಷಿಯಂತ್ರಗಳ ದರದಲ್ಲಿ ಭಾರಿ ಇಳಿಕೆ..! | Gst Rate Cut Relief For Farmers As Tractors And Agri Equipment Become Cheaper

GST benefits for farmers: ರೈತರಿಗೂ ಬಂಪರ್: ಜಿಎಸ್‌ಟಿ ಇಳಿಕೆಯ ಬಳಿ ಟ್ರ್ಯಾಕ್ಟರ್, ಕೃಷಿಯಂತ್ರಗಳ ದರದಲ್ಲಿ ಭಾರಿ ಇಳಿಕೆ..! | Gst Rate Cut Relief For Farmers As Tractors And Agri Equipment Become Cheaper



GST benefits for farmers: ರೈತರಿಗೂ ಬಂಪರ್: ಜಿಎಸ್‌ಟಿ ಇಳಿಕೆಯ ಬಳಿ ಟ್ರ್ಯಾಕ್ಟರ್, ಕೃಷಿಯಂತ್ರಗಳ ದರದಲ್ಲಿ ಭಾರಿ ಇಳಿಕೆ..! | Gst Rate Cut Relief For Farmers As Tractors And Agri Equipment Become Cheaper

ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ದರ ನಾಳೆಯಿಂದ ಜಾರಿಯಾಗಲಿದ್ದು, ರೈತರು ಬಳಸುವ ಟ್ರ್ಯಾಕ್ಟರ್, ಸ್ಪ್ರಿಂಕ್ಲರ್‌ಗಳು, ಕೊಯ್ಲು ಯಂತ್ರಗಳ ಮೇಲಿನ ಜಿಎಸ್‌ಟಿ ದರ ಗಣನೀಯವಾಗಿ ಇಳಿಕೆಯಾಗಿದೆ. ಇದರೊಂದಿಗೆ, ವೈದ್ಯಕೀಯ ಉಪಕರಣ, ಕೆಲವು ಅಗತ್ಯ ಔಷಧಿಗಳ ಮೇಲಿನ ತೆರಿಗೆ ಸಹ ಕಡಿಮೆ ಮಾಡಲಾಗಿದೆ.

 ರೈತರಿಗೂ ಬಂಪರ್‌: ಜಿಎಸ್‌ಟಿ ಇಳಿಕೆ ಬಳಿಕ ಟ್ರ್ಯಾಕ್ಟರ್ ಸೇರಿದಂತೆ ಹಲವು ಕೃಷಿ ಯಂತ್ರೋಪಕರಣಗಳ ದರ ಹೀಗಿದೆ

ನವದೆಹಲಿ: ನಾಳೆಯಿಂದ ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದ್ದು, ಜಿಎಸ್‌ಟಿ ದರ ಇಳಿಕೆಯಿಂದ ರೈತರಿಗೂ ಹಲವು ಅನುಕೂಲವಾಗಲಿದೆ. ರೈತರು ಅಗತ್ಯವಾಗಿ ಬಳಸುವ ಹಲವು ಯಂತ್ರೋಪಕರಣಗಳ ದರದಲ್ಲಿ ಭಾರಿ ಇಳಿಕೆಯಾಗಿದೆ.

1800 ccಯ ಟ್ರಾಕ್ಟರುಗಳ ಮೇಲಿನ ಜಿಎಸ್ಟಿ 12% ನಿಂದ 5% ಕ್ಕೆ ಇಳಿಕೆಯಾಗಿದೆ. ಟೈರ್‌ಗಳು, ಟ್ಯೂಬ್‌ಗಳು, ಹೈಡ್ರಾಲಿಕ್ ಪಂಪ್‌ಗಳು ಸೇರಿದಂತೆ ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್‌ಟಿ ಶೇ. 18 ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ.

ಸ್ಪ್ರಿಂಕ್ಲರ್‌ಗಳು, ಹನಿ ನೀರಾವರಿ, ಕೊಯ್ಲು ಯಂತ್ರೋಪಕರಣಗಳು, ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್‌ಟಿ ಶೇ. 12 ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ. ಸ್ಥಿರ ವೇಗದ ಡೀಸೆಲ್ ಎಂಜಿನ್‌ಗಳು (15 HP), ಒಕ್ಕಣೆ/ಕೊಯ್ಲು ಯಂತ್ರಗಳು, ಕಾಂಪೋಸ್ಟ್ ಯಂತ್ರಗಳ ಮೇಲಿನ ಜಿಎಸ್‌ಟಿ 12% ರಿಂದ 5% ಕ್ಕೆ ಇಳಿಕೆಯಾಗಿದೆ.

ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಹೆಸರು ಹಳೆದರ ಹೊಸದರ ಉಳಿತಾಯ
ಟ್ರ್ಯಾಕ್ಟರ್ 35 ಹೆಚ್.ಪಿ 6,50,000 6,09,000 41000
ಟ್ರ್ಯಾಕ್ಟರ್ 45 ಹೆಚ್.ಪಿ. 7,20,000 6,75,000 45,000
ಟ್ರ್ಯಾಕ್ಟರ್ 50 ಎಚ್‌ಪಿ 8,50,000 7,97,000 53,000
ಟ್ರ್ಯಾಕ್ಟರ್ 75 ಹೆಚ್.ಪಿ 10,00,000 9,37,000 63,000
ಪವರ್ ಟಿಲ್ಲರ್ 13 ಎಚ್‌ಪಿ 1,90,000 1,78,125 11,875
ಭತ್ತದ ಕಸಿ ಯಂತ್ರ 2,46,400 2,31,000 15,400
ಮಲ್ಟಿಕ್ರಾಪ್ ಥ್ರೆಷರ್ 2,24,000 2,24,000 14,000
ಪವರ್ ವೀಡರ್ 7.5 ಎಚ್‌ಪಿ 87,920 82,425 5,495
ಟ್ರೇಲರ್ 5 ಟೋನ್ ಸಾಮರ್ಥ್ಯ 1,68,000 1,57,500 10,500
ರೋಟೇವೇಟರ್16 ಅಡಿ 1,25,000 1,17,187 7,812.

ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್‌ಟಿಯೂ ಇಳಿಕೆ:

ಹಾಗೆಯೇ ವೈದ್ಯಕೀಯ, ಶಸ್ತ್ರಚಿಕಿತ್ಸಾ, ದಂತ ಅಥವಾ ಪಶುವೈದ್ಯಕೀಯ ಬಳಕೆಗಾಗಿ ಅಥವಾ ಭೌತಿಕ ಅಥವಾ ರಾಸಾಯನಿಕ ವಿಶ್ಲೇಷಣೆಗಾಗಿ ಬಳಸುವ ವಿವಿಧ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳ ಮೇಲಿನ ಜಿಎಸ್‌ಟಿ ದರಗಳನ್ನು 18% ರಿಂದ 5% ಕ್ಕೆ ಇಳಿಸಲಾಗಿದೆ. ವಾಡಿಂಗ್ ಗಾಜ್, ಬ್ಯಾಂಡೇಜ್‌ಗಳು, ಡಯಾಗ್ನೋಸ್ಟಿಕ್ ಕಿಟ್‌ಗಳು ಮತ್ತು ಕಾರಕಗಳು, ಗ್ಲುಕೋಮೀಟರ್ ವೈದ್ಯಕೀಯ ಸಾಧನಗಳು ಇತ್ಯಾದಿಗಳಂತಹ ವಿವಿಧ ವೈದ್ಯಕೀಯ ಉಪಕರಣಗಳು ಮತ್ತು ಸರಬರಾಜು ಸಾಧನಗಳ ಮೇಲಿನ ಜಿಎಸ್‌ಟಿ ದರಗಳನ್ನು 12% ರಿಂದ 5% ಕ್ಕೆ ಇಳಿಕೆ ಮಾಡಲಾಗಿದೆ.

ವಸ್ತು ಹಳೆದರ ಹೊಸದರ ಉಳಿತಾಯ
ಹಿಮಾಲಯ ಬೇಬಿ ಸೋಪ್ 70 – 62 8
ಬೇಬಿ ಶಾಂಪೂ 240 214 36
ಬೇಬಿ ಹೇರ್ ಆಯಿಲ್ 300 267 33
ಡಯಾಪರ್ ರಾಶ್ ಕ್ರೀಮ್ 150 141 9
ಕಾಫ್ಲೆಟ್ ಸಿರಪ್ 125 117 9
ರೋಲ್ ಆನ್ 170 159 11
ಲೀವ್ ಸಿರಪ್ 250 234 16
ಗ್ಯಾಸೆಕ್ಸ್ ಟ್ಯಾಬ್ಲೆಟ್ 220 206 14
ವಯಸ್ಕರ ಡೈಪರ್ 650 609 41
ಫಿಲೆಕ್ಸ್ ಟ್ಯಾಬ್ಲೆಟ್ 234 250  16
ಫ್ರೆಶ್ ಕೋಟ್ 630 561 69

ಹಾಗೆಯೇ ಕೆಲ ಅಗತ್ಯ ಔಷಧಿಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಲಾಗಿದೆ. 33 ಔಷಧಿಗಳಲ್ಲಿ ಕ್ಯಾನ್ಸರ್, ರಕ್ತ ಅಸ್ವಸ್ಥತೆಗಳು, ಅಪರೂಪದ ಆನುವಂಶಿಕ ಕಾಯಿಲೆಗಳು ಮತ್ತು ಇತರ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ದುಬಾರಿ ಔಷಧಿಗಳ ದರ ಇಳಿಕೆಯಾಗಿದೆ.



Source link

Leave a Reply

Your email address will not be published. Required fields are marked *