ನಾಟ್ ರಿಚೇಬಲ್ ಆದ ‘ದಿ ಡೆವಿಲ್’ ಡೈರೆಕ್ಟರ್; ದರ್ಶನ್ ಅಂದರ್ ಆದ್ಮೇಲೆ ಏನಾಗ್ತಿದೆ ಗೊತ್ತಾ? | Darshan Starrer The Devil Movie Director Prakash Veer Becomes Not Reachable

ನಾಟ್ ರಿಚೇಬಲ್ ಆದ ‘ದಿ ಡೆವಿಲ್’ ಡೈರೆಕ್ಟರ್; ದರ್ಶನ್ ಅಂದರ್ ಆದ್ಮೇಲೆ ಏನಾಗ್ತಿದೆ ಗೊತ್ತಾ? | Darshan Starrer The Devil Movie Director Prakash Veer Becomes Not Reachable



ನಾಟ್ ರಿಚೇಬಲ್ ಆದ ‘ದಿ ಡೆವಿಲ್’ ಡೈರೆಕ್ಟರ್; ದರ್ಶನ್ ಅಂದರ್ ಆದ್ಮೇಲೆ ಏನಾಗ್ತಿದೆ ಗೊತ್ತಾ? | Darshan Starrer The Devil Movie Director Prakash Veer Becomes Not Reachable

‘ದಿ ಡೆವಿಲ್’ ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ದರ್ಶನ್​ಗೆ ಈ ಹಿಂದೆಂದೂ ಕೊಡದಷ್ಟು ಸಂಭಾವನೆ ಕೊಟ್ಟಿದ್ದಾರೆ. 2024ರ ಡಿಸೆಂಬರ್​ಗೆ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಇಲ್ಲಿವರೆಗೂ ತಡವಾಗಿರೋದಕ್ಕೆ ನಟ ದರ್ಶನ್ ಸಿಕ್ಕಿಹಾಕಿಕೊಂಡಿರುವ ಕೊಲೆ ಆರೋಪದ ಕೇಸೇ ಕಾರಣ. ಇನ್ನೇನು…

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರು ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ಮತ್ತೆ ಜೈಲು ಸೇರಿದ್ದು ಗೊತ್ತೇ ಇದೆ. ಹೈಕೋರ್ಟ್ ಕೊಟ್ಟಿದ್ದ ಬೇಲ್ ರದ್ದು ಮಾಡಿ ಇದೀಗ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಆರೋಪಿ ದರ್ಶನ್ ಅವರನ್ನು ಮತ್ತೆ ಅರೆಸ್ಟ್ ಮಾಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಮೊನ್ನೆ ನಡೆದ ಈ ಬೆಳವಣಿಗೆ ಸಹಜವಾಗಿಯೇ ‘ದಿ ಡೆವಿಲ್’ ಚಿತ್ರಕ್ಕೆ ಶಾಪವಾಗಿ ಪರಿಣಮಿಸಿದೆ.

ಶಾಪ ಇಂದ ಸೆನ್ಸ್, ದರ್ಶನ್ ನಟನೆಯಲ್ಲಿ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿ ಮೊಟ್ಟಮೊದಲ ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿ ಇತ್ತು ದಿ ಡೆವಿಲ್ ಚಿತ್ರತಂಡ. ಆಗಸ್ಟ್ 15ಕ್ಕೆ ಸಾಂಗ್ ಲಾಂಚ್ ಕೂಡ ಫಿಕ್ಸ್ ಆಗಿತ್ತು. ಆದರೆ, ನಟ ದರ್ಶನ್ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿರುವ ಕಾರಣಕ್ಕೆ ಸಿನಿಮಾ ತಂಡ ಸಾಂಗ್ ಲಾಂಚ್‌ ಮುಂದಕ್ಕೆ ಹಾಕಿದೆ. ಅಷ್ಟೇ ಅಲ್ಲ, ಮತ್ತೊಂದು ಬೆಳವಣಿಗೆ ಕೂಡ ನಡೆದಿದೆ. ಅದು ‘ದಿ ಡೆವಿಲ್’ ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಾಟ್ ರೀಚೆಬಲ್ ಅಗುವಂತೆ ಮಾಡಿದೆಯಂತೆ!

ಹೌದು, ನಟ ದರ್ಶನ್ ತೂಗುದೀಪ ಅರೆಸ್ಟ್ ಆಗ್ತಾ ಇದ್ದ ಹಾಗೇನೇ ದಿ ಡೆವಿಲ್ ನಿರ್ಮಾಪಕ ಕಂ ನಿರ್ದೇಶಕ ಫೋನ್ ಸ್ವಿಚ್ ಆಫ್ ಮಾಡಿ ನಾಟ್ ರೀಚೆಬಲ್ ಆಗಿದ್ದಾರೆ. ಹಾಡಿನ ಬಿಡುಗಡೆಯನ್ನ ಮುಂದೂಡಿ, ಮುಂದೇನು ಮಾಡೋದು ಅಂತ ಅಜ್ಞಾತ ಸ್ಥಳದಲ್ಲಿ ಕುಳಿತು ಯೋಚಿಸ್ತಾ ಇದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಕನ್ನಡದ ಖ್ಯಾತ ನಿರ್ಮಾಪಕರಾದ ಚಿನ್ನೇಗೌಡರು ಮಾಹಿತಿ ನೀಡಿದ್ದಾರೆ. ನಿರ್ದೇಶಕ ಪ್ರಕಾಶ್ ವೀರ್ ಅವರ ಸ್ಥಿತಿ ಸದ್ಯ ಯಾರಿಗೂ ಬೇಡ ಎಂಬಂತಾಗಿದೆ.

‘ದಿ ಡೆವಿಲ್’ ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ದರ್ಶನ್​ಗೆ ಈ ಹಿಂದೆಂದೂ ಕೊಡದಷ್ಟು ಸಂಭಾವನೆ ಕೊಟ್ಟಿದ್ದಾರೆ. 2024ರ ಡಿಸೆಂಬರ್​ಗೆ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಇಲ್ಲಿವರೆಗೂ ತಡವಾಗಿರೋದಕ್ಕೆ ನಟ ದರ್ಶನ್ ಸಿಕ್ಕಿಹಾಕಿಕೊಂಡಿರುವ ಕೊಲೆ ಆರೋಪದ ಕೇಸೇ ಕಾರಣ. ಇನ್ನೇನು ಚಿತ್ರ ಮುಗಿಸಿ ರಿಲೀಸ್ ಮಾಡೋಣ ಅನ್ನೋ ಟೈಂನಲ್ಲಿ ದರ್ಶನ್ ಮತ್ತೆ ಅಂದರ್ ಆಗಿರೋದು ದಿ ಡೆವಿಲ್ ಮೇಕರ್ಸ್​ಗೆ ತಲೆನೋವು ತಂದಿದೆ.



Source link

Leave a Reply

Your email address will not be published. Required fields are marked *