ತಾಯ್ತನದ ಬಳಿಕ ಕತ್ರಿನಾ, ಕಿಯಾರಾ ಮತ್ತೆ ಸಿನಿಮಾದಲ್ಲಿ ಮಿಂಚೋದು ಅನುಮಾನ.. ಶೋಭಾ ಡೇ ಮಾತಿಗೆ ಬಾಲಿವುಡ್ ಶಾಕ್! | Shobhaa De Says Not Sure If Katrina Kaif Kiara Advani Will Be Back After Motherhood Like Deepika Priyanka Alia

ತಾಯ್ತನದ ಬಳಿಕ ಕತ್ರಿನಾ, ಕಿಯಾರಾ ಮತ್ತೆ ಸಿನಿಮಾದಲ್ಲಿ ಮಿಂಚೋದು ಅನುಮಾನ.. ಶೋಭಾ ಡೇ ಮಾತಿಗೆ ಬಾಲಿವುಡ್ ಶಾಕ್! | Shobhaa De Says Not Sure If Katrina Kaif Kiara Advani Will Be Back After Motherhood Like Deepika Priyanka Alia



ತಾಯ್ತನದ ಬಳಿಕ ಕತ್ರಿನಾ, ಕಿಯಾರಾ ಮತ್ತೆ ಸಿನಿಮಾದಲ್ಲಿ ಮಿಂಚೋದು ಅನುಮಾನ.. ಶೋಭಾ ಡೇ ಮಾತಿಗೆ ಬಾಲಿವುಡ್ ಶಾಕ್! | Shobhaa De Says Not Sure If Katrina Kaif Kiara Advani Will Be Back After Motherhood Like Deepika Priyanka Alia

‘ದೀಪಿಕಾ ಪಡುಕೋಣೆ ಅಥವಾ ಪ್ರಿಯಾಂಕಾ ಚೋಪ್ರಾ ಅಂತಹ ಸ್ಟಾರ್‌ಗಳಿಗೆ ಮಾತ್ರ ಇಂತಹ ಡಿಮ್ಯಾಂಡ್ ಮಾಡುವ ತಾಕತ್ತಿದೆ. ಒಂದು ವೇಳೆ ಬೇರೆ ಯಾರಾದ್ರೂ ಹೀಗೆ ಹೇಳಿದ್ರೆ, ನಿರ್ಮಾಪಕರು ತಕ್ಷಣ ಅವರ ಜಾಗಕ್ಕೆ ಬೇರೆಯವರನ್ನು ಹುಡುಕುತ್ತಾರೆ. ಏಕೆಂದರೆ ಸಿನಿಮಾ ಅಂತಿಮವಾಗಿ ಒಂದು ಬಿಸಿನೆಸ್’ ಎಂದಿದ್ದಾರೆ ಶೋಭಾ ಡೇ.

ಮದರ್ ಹುಡ್ ನಂತರ ಕತ್ರಿನಾ, ಕಿಯಾರಾ ಕರಿಯರ್ ಖತಂ? ಬಾಲಿವುಡ್ ಬೆಡಗಿಯರ ಬಗ್ಗೆ ಶೋಭಾ ಡೇ ಸ್ಫೋಟಕ ಹೇಳಿಕೆ!

ಬಾಲಿವುಡ್ ಅಂದ್ರೆ ಅಲ್ಲಿ ಬರೀ ಬಣ್ಣದ ಲೋಕ ಮಾತ್ರವಲ್ಲ, ಅದರ ಹಿಂದೆ ಅಸಂಖ್ಯಾತ ಚರ್ಚೆಗಳು, ಗಾಳಿಸುದ್ದಿಗಳು ಮತ್ತು ವಿವಾದಗಳು ಸದಾ ಸುಳಿದಾಡುತ್ತಿರುತ್ತವೆ. ಈಗ ಸಿನಿನಗರಿಯಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಅದು ಬೇರೇನೂ ಅಲ್ಲ, ನಟಿಯರು ತಾಯಿಯಾದ ನಂತರ ಅವರ ಸಿನಿಮಾ ಕೆರಿಯರ್ ಹೇಗಿರುತ್ತೆ ಎಂಬುದು! ಈ ಬೆಂಕಿಗೆ ತುಪ್ಪ ಸುರಿಯುವಂತೆ ಖ್ಯಾತ ಅಂಕಣಗಾರ್ತಿ ಶೋಭಾ ಡೇ ನೀಡಿರುವ ಹೇಳಿಕೆ ಈಗ ಬಿಟೌನ್‌ನಲ್ಲಿ ಸಂಚಲನ ಮೂಡಿಸಿದೆ.

ದೀಪಿಕಾ ಪಡುಕೋಣೆ ಮತ್ತು 8 ಗಂಟೆಗಳ ಕೆಲಸದ ಕಿರಿಕ್!

ಇತ್ತೀಚೆಗೆ ದೀಪಿಕಾ ಪಡುಕೋಣೆ (Deepika Padukone) ಅವರು ಪ್ರಭಾಸ್ ಅಭಿನಯದ ‘ಕಲ್ಕಿ’ ಚಿತ್ರದ ಪ್ರಚಾರ ಮತ್ತು ‘ಸ್ಪಿರಿಟ್’ ಚಿತ್ರದಿಂದ ಹೊರಬಂದ ವಿಚಾರ ಸುದ್ದಿಯಲ್ಲಿತ್ತು. ಅಷ್ಟೇ ಅಲ್ಲ, ದೀಪಿಕಾ ಅವರು ಶೂಟಿಂಗ್ ಸೆಟ್‌ನಲ್ಲಿ ಕೇವಲ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತೇನೆ ಎಂಬ ಡಿಮ್ಯಾಂಡ್ ಇಟ್ಟಿದ್ದಾರಂತೆ! ಇದು ಚಿತ್ರನಿರ್ಮಾಪಕರಿಗೆ ನುಂಗಲಾರದ ತುತ್ತಾಗಿದೆ ಎಂಬ ಮಾತು ಕೇಳಿಬರುತ್ತಿದೆ. ತಾಯ್ತನದ ಹೊಸ್ತಿಲಲ್ಲಿರುವ ದೀಪಿಕಾ ಅವರ ಈ ನಿರ್ಧಾರ ನಟಿಯರ ಕೆಲಸದ ಸಮಯದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಶೋಭಾ ಡೇ ಅವರ ಖಡಕ್ ಮಾತುಗಳು:

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶೋಭಾ ಡೇ, “ಎಲ್ಲಾ ನಟಿಯರಿಗೂ ಈ ತರಹದ ಕಂಡೀಷನ್ ಹಾಕಲು ಸಾಧ್ಯವಿಲ್ಲ” ಎಂದಿದ್ದಾರೆ. ರೆಡಿಫ್ ಒರಿಜಿನಲ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು, “ದೀಪಿಕಾ ಪಡುಕೋಣೆ ಅಥವಾ ಪ್ರಿಯಾಂಕಾ ಚೋಪ್ರಾ ಅಂತಹ ಸ್ಟಾರ್‌ಗಳಿಗೆ ಮಾತ್ರ ಇಂತಹ ಡಿಮ್ಯಾಂಡ್ ಮಾಡುವ ತಾಕತ್ತಿದೆ. ಒಂದು ವೇಳೆ ರಾಧಿಕಾ ಆಪ್ಟೆ ಅಂತಹ ನಟಿಯರು ‘ನಾನು ದಿನಕ್ಕೆ 4 ಗಂಟೆ ಮಾತ್ರ ಕೆಲಸ ಮಾಡ್ತೀನಿ’ ಅಂದ್ರೆ, ನಿರ್ಮಾಪಕರು ತಕ್ಷಣ ಅವರ ಜಾಗಕ್ಕೆ ಬೇರೆಯವರನ್ನು ಹುಡುಕುತ್ತಾರೆ. ಏಕೆಂದರೆ ಸಿನಿಮಾ ಅಂತಿಮವಾಗಿ ಒಂದು ಬಿಸಿನೆಸ್. ಇಲ್ಲಿ ಯಾರು ಥಿಯೇಟರ್‌ಗೆ ಜನರನ್ನು ಕರೆತರುತ್ತಾರೋ ಅವರಿಗೆ ಮಾತ್ರ ಬೆಲೆ,” ಎಂದು ನೇರವಾಗಿ ಹೇಳಿದ್ದಾರೆ.

ಕತ್ರಿನಾ ಕೈಫ್ ಮತ್ತು ಕಿಯಾರಾ ಅಡ್ವಾಣಿ ಬಗ್ಗೆ ಅನುಮಾನ!

ಇನ್ನು ಮದರ್ ಹುಡ್ ನಂತರ ನಟಿಯರ ಇಮೇಜ್ ಬಗ್ಗೆ ಮಾತನಾಡುತ್ತಾ ಶೋಭಾ ಡೇ ಅವರು ಕತ್ರಿನಾ ಕೈಫ್ ಮತ್ತು ಕಿಯಾರಾ ಅಡ್ವಾಣಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. “ಕತ್ರಿನಾ ಕೈಫ್ ಮಗುವಾದ ನಂತರ ಮತ್ತೆ ಅದೇ ಫಾರ್ಮ್‌ಗೆ ಮರಳುತ್ತಾರಾ ಎಂಬ ಬಗ್ಗೆ ನನಗೆ ನಂಬಿಕೆಯಿಲ್ಲ. ಹಾಗೆಯೇ ಕಿಯಾರಾ ಅಡ್ವಾಣಿ ಅವರು ತಾಯಿಯಾದ ಮೇಲೆ ಪ್ರೇಕ್ಷಕರು ಅವರನ್ನು ಮೊದಲಿನಂತೆಯೇ ಗ್ಲಾಮರಸ್ ಆಗಿ ನೋಡುತ್ತಾರಾ ಎಂಬುದು ಅನುಮಾನ,” ಎಂದು ಹೇಳುವ ಮೂಲಕ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದಾರೆ.

ಆಲಿಯಾ ಮತ್ತು ಪ್ರಿಯಾಂಕಾ ಮಾತ್ರ ‘ಎಕ್ಸೆಪ್ಶನಲ್’!

ಆದರೆ ಆಲಿಯಾ ಭಟ್ (Alia Bhatt), ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ದೀಪಿಕಾ ಪಡುಕೋಣೆ ಅವರ ವಿಷಯವೇ ಬೇರೆ ಎನ್ನುತ್ತಾರೆ ಶೋಭಾ. “ಆಲಿಯಾ ಭಟ್ ಮಗುವಾದ ನಂತರವೂ ಸಿನೆಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಜನರಿಗೆ ಅವರು ಅಮ್ಮ ಎನ್ನುವುದಕ್ಕಿಂತ ಒಬ್ಬ ಅದ್ಭುತ ನಟಿ ಎಂಬುದು ಮುಖ್ಯವಾಗಿದೆ. ಇವರು ಕಮರ್ಷಿಯಲ್ ಆಗಿ ದೊಡ್ಡ ಮಟ್ಟದ ಸಕ್ಸಸ್ ನೀಡಬಲ್ಲರು. ಹಾಗಾಗಿ ಇವರು ತಮ್ಮ ಕೆಲಸದ ನಿಯಮಗಳನ್ನು ತಾವೇ ರೂಪಿಸಿಕೊಳ್ಳುವ ಪವರ್ ಹೊಂದಿದ್ದಾರೆ,” ಎಂದು ಅವರು ವಿಶ್ಲೇಷಿಸಿದ್ದಾರೆ.

ಹಾಗೆ ನೋಡಿದರೆ ಹಾಲಿವುಡ್‌ನಲ್ಲಿಯೂ ವೇತನ ತಾರತಮ್ಯ ಮತ್ತು ಕೆಲಸದ ಅವಧಿಯ ಬಗ್ಗೆ 15 ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರೂ ಅಲ್ಲಿಯೂ ದೊಡ್ಡ ಬದಲಾವಣೆಗಳಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಈ ‘ಸೂಪರ್ ಮಾಮ್ಸ್’ ಸಿನಿಮಾರಂಗದ ಈ ಹಳೆಯ ಪದ್ಧತಿಯನ್ನು ಬದಲಿಸುತ್ತಾರಾ? ಅಥವಾ ಶೋಭಾ ಡೇ ಹೇಳಿದಂತೆ ಕತ್ರಿನಾ, ಕಿಯಾರಾ ಅಂತಹ ನಟಿಯರ ಕೆರಿಯರ್ ಮೇಲೆ ಮದರ್ ಹುಡ್ ಪರಿಣಾಮ ಬೀರುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಶೋಭಾ ಡೇ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ!



Source link

Leave a Reply

Your email address will not be published. Required fields are marked *