47 ವರ್ಷಗಳ ಬಳಿಕ ಒಂದಾದ ದಿಗ್ಗಜರು! ಕಮಲ್-ರಜನಿ ಜೋಡಿಯಿಂದ ಹೊಸ ಅಧ್ಯಾಯದ ಆರಂಭ? | Kamal Haasan And Rajinikanth Reunite After 47 Years Legendary Duo Set To Share Screen Again Kvn

47 ವರ್ಷಗಳ ಬಳಿಕ ಒಂದಾದ ದಿಗ್ಗಜರು! ಕಮಲ್-ರಜನಿ ಜೋಡಿಯಿಂದ ಹೊಸ ಅಧ್ಯಾಯದ ಆರಂಭ? | Kamal Haasan And Rajinikanth Reunite After 47 Years Legendary Duo Set To Share Screen Again Kvn


ಬರೋಬ್ಬರಿ 47 ವರ್ಷಗಳ ನಂತರ, ಭಾರತೀಯ ಚಿತ್ರರಂಗದ ದಿಗ್ಗಜರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಮತ್ತೆ ಒಂದಾಗುತ್ತಿದ್ದಾರೆ. ಕಮಲ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸಲಿರುವ 173ನೇ ಚಿತ್ರದ ಜೊತೆಗೆ, ನೆಲ್ಸನ್ ನಿರ್ದೇಶನದ 174ನೇ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ತೆರೆ ಹಂಚಿಕೊಳ್ಳಲಿದ್ದಾರೆ.

ಕಮಲ್ ಹಾಸನ್ ಮತ್ತು ರಜನಿಕಾಂತ್ ಭಾರತೀಯ ಸಿನಿರಂಗದ ಈ ಇಬ್ಬರು ದಿಗ್ಗಜರನ್ನ ಮತ್ತೆ ಒಟ್ಟಿಗೆ ನೋಡೋ ಚಾನ್ಸ್ ಸಿನಿಪ್ರಿಯರಿಗೆ ಸಿಕ್ತಾ ಇದೆ. ರಜನಿಕಾಂತ್ ನಟನೆಯ 173ನೇ ಚಿತ್ರವನ್ನ ಕಮಲ್ ನಿರ್ಮಾಣ ಮಾಡ್ತಾ ಇದ್ರೆ, ರಜನಿಯ 174ನೇ ಚಿತ್ರದಲ್ಲಿ ಕಮಲ್-ರಜನಿ ಒಟ್ಟಾಗಿ ನಟನೆ ಮಾಡ್ತಾ ಇದ್ದಾರೆ. ಈ ದಿಗ್ಗಜರ ಸಮಾಗಮ ಸದ್ಯ ಸಿನಿಲೋಕದಲ್ಲಿ ಹಲ್ ಚಲ್ ಎಬ್ಬಿಸಿದೆ.

47 ವರ್ಷಗಳ ಬಳಿಕ ಒಂದಾದ ದಿಗ್ಗಜರು!

ಯೆಸ್ ಅವರಿಬ್ರೂ ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದರು. ಇಬ್ಬರಿಗೂ ಕೋಟಿ ಕೋಟಿ ಅಭಿಮಾನಿ ಬಳಗ ಇದೆ. ಆರಂಭದಲ್ಲಿ ಇಬ್ಬರೂ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ರು. ಇಬ್ಬರೂ ಕೂಡ ಒಬ್ಬರೇ ಗುರುವಿನ ಗರಡಿಯಿಂದ ಬಂದವರು. ಆದ್ರೆ ಸ್ಟಾರ್ ಗಳಾದ ಮೇಲೆ ಇಬ್ಬರೂ ಅವರವರದ್ದೆ ಹಾದಿ ಹಿಡಿದಿದ್ರು. ಇದೀಗ ಬರೊಬ್ಬರಿ 47 ವರ್ಷಗಳ ನಂತರ ಕಮಲ್ ಹಾಸನ್ ಮತ್ತು ರಜನಿಕಾಂತ್ ಒಟ್ಟಾಗಿ ನಟಿಸ್ತಾ ಇದ್ದಾರೆ.

ಈಗಾಗ್ಲೇ ರಜನಿಕಾಂತ್​ರ 173ನೇ ಚಿತ್ರವನ್ನ ಕಮಲ್ ಒಡೆತನದ ರಾಜಕಮಲ್ ಇಂಟರ್​ನ್ಯಾಷನಲ್ ಸಂಸ್ಥೆ ನಿರ್ಮಿಸ್ತಾ ಇದೆ. ಇದ್ರಲ್ಲಿ ಕಮಲ್ ನಿರ್ಮಾಪಕ ಮತ್ತು ರಜನಿ ನಾಯಕನಟನಾಗಿ ಮಿಂಚಲಿದ್ದಾರೆ. ಇನ್ನೂ ಈ ರಜನಿಕಾಂತ್ 174ನೇ ಸಿನಿಮಾದಲ್ಲಿ ಕಮಲ್ ಹಾಸನ್ ರಜನಿಯೊಡನೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ರೆಡ್ ಗೇಂಟ್ ಸಂಸ್ಥೆ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ನೆಲ್ಸನ್ ಈ ದಿಗ್ಗಜರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

KH x RK ಅಂತ ಸಿನಿಮಾಗೆ ಟೆಂಟಿಟಿವ್ ಟೈಟಲ್

ಸದ್ಯ ಈ ಇಬ್ಬರೂ ಲೆಜೆಂಡ್ಸ್‌ಗಳನ್ನು ಇಟ್ಟುಕೊಂಡು ನೆಲ್ಸನ್ ಪ್ರೋಮೋವೊಂದನ್ನ ಶೂಟ್ ಮಾಡಿದ್ದು, ಅಭಿಮಾನಿಗಳನ್ನ ಹುಚ್ಚೆದ್ದು ಕುಣಿವಂತೆ ಮಾಡಿದೆ. ಸದ್ಯ KH x RK ಅಂತ ಸಿನಿಮಾಗೆ ಟೆಂಟಿಟಿವ್ ಟೈಟಲ್ ಇಡಲಾಗಿದೆ.

ಜೈಲರ್ -2 ಬಳಿಕ ನೆಲ್ಸನ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮಾಡಲಿದ್ದಾರೆ. ಒಟ್ಟಾರೆ ಚಿತ್ರಲೋಕದ ಇಬ್ಬರು ದಿಗ್ಗಜರು ಒಟ್ಟಾಗಿ ಸ್ಕ್ರೀನ್ ಶೇರ್ ಮಾಡ್ತಾ ಇದ್ದು, ಇಬ್ಬರ ಅಭಿಮಾನಿಗಳು ಒಟ್ಟಾಗಿ ಸೆಲೆಬ್ರೇಷನ್ ಮಾಡೋದಕ್ಕೆ ಸಜ್ಜಾಗಿ ನಿಂತಿದ್ದಾರೆ..!

ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *