ದುಡಿಯೋ ಹೆಣ್ಮಕ್ಕಳಿಗೆ ಗೋಲ್ಡ್‌ ಡಿಗ್ಗರ್‌, ಹನಿ ಟ್ರ್ಯಾಪರ್‌’ ಪಟ್ಟ; ಯಾರಿಗೆ ಟಾಂಗ್‌ ಕೊಟ್ಟರು ಶ್ರೀದೇವಿ ಬೈರಪ್ಪ? | Sridevi Byrappa Post On Gold Digger Remarks Harvard University Update San

ದುಡಿಯೋ ಹೆಣ್ಮಕ್ಕಳಿಗೆ ಗೋಲ್ಡ್‌ ಡಿಗ್ಗರ್‌, ಹನಿ ಟ್ರ್ಯಾಪರ್‌’ ಪಟ್ಟ; ಯಾರಿಗೆ ಟಾಂಗ್‌ ಕೊಟ್ಟರು ಶ್ರೀದೇವಿ ಬೈರಪ್ಪ? | Sridevi Byrappa Post On Gold Digger Remarks Harvard University Update San



ದುಡಿಯೋ ಹೆಣ್ಮಕ್ಕಳಿಗೆ ಗೋಲ್ಡ್‌ ಡಿಗ್ಗರ್‌, ಹನಿ ಟ್ರ್ಯಾಪರ್‌’ ಪಟ್ಟ; ಯಾರಿಗೆ ಟಾಂಗ್‌ ಕೊಟ್ಟರು ಶ್ರೀದೇವಿ ಬೈರಪ್ಪ? | Sridevi Byrappa Post On Gold Digger Remarks Harvard University Update San

ಯುವರಾಜ್‌ ಕುಮಾರ್‌ ಜೊತೆಗಿನ ವಿಚ್ಛೇದನ ಪ್ರಕರಣದ ನಡುವೆ, ಶ್ರೀದೇವಿ ಬೈರಪ್ಪ ಅವರು ಹಂಚಿಕೊಂಡಿರುವ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಕುತೂಹಲ ಮೂಡಿಸಿದೆ. ಮಹಿಳೆಯರನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆಯುವುದರ ವಿರುದ್ಧ ಅವರ ಪೋಸ್ಟ್, ತಮ್ಮ ವೈಯಕ್ತಿಕ ಜೀವನದ ಸನ್ನಿವೇಶಗಳಿಗೆ ಉತ್ತರ ಎಂದು ಚರ್ಚೆಯಾಗುತ್ತಿದೆ.

ಬೆಂಗಳೂರು (ಮಾ.3): ಯುವರಾಜ್‌ ಕುಮಾರ್‌ ಅವರೊಂದಿಗಿನ ವಿಚ್ಛೇದನ ಪ್ರಕರಣ ಬಳಿಕ ಸಾಕಷ್ಟು ಸುದ್ದಿಯಲ್ಲಿರುವ ದೊಡ್ಮನೆ ಸೊಸೆ ಶ್ರೀದೇವಿ ಬೈರಪ್ಪ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಈಗ ಕುತೂಹಲಕ್ಕೆ ಕಾರಣವಾಗಿದೆ. ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ, 2019ರಲ್ಲಿ ಯುವರಾಜ್‌ ಕುಮಾರ್‌ ಶ್ರೀದೇವಿ ಬೈರಪ್ಪ ಅವರನ್ನು ವಿವಾಹವಾಗಿದ್ದರು. ಸ್ವತಃ ಪುನೀತ್‌ ರಾಜ್‌ಕುಮಾರ್‌ ಈ ಮದುವೆಗೆ ಮುಂದಾಳತ್ವ ವಹಿಸಿದ್ದರು ಎನ್ನಲಾಗಿತ್ತು. ಆದರೆ, ಇವರ ಏಳು ವರ್ಷದ ಪ್ರೇಮ ಹಾಗೂ ನಾಲ್ಕು ವರ್ಷದ ಮದುವೆಗೆ 2023ರಲ್ಲಿ ವಿಚ್ಛೇದನದ ಶಾಕಿಂಗ್‌ ನ್ಯೂಸ್‌ ಸಿಕ್ಕಿತ್ತು. ಇವರಿಬ್ಬರ ವಿಚ್ಛೇದನ ಆಗಿದ್ಯಾ? ಇಲ್ಲವಾ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.ಇದರ ನಡುವೆ ಶ್ರೀದೇವಿ ಬೈರಪ್ಪ ಅವರು ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಕುತೂಹಲಕ್ಕೆ ಕಾರಣವಾಗುತ್ತಿದೆ.

ಎರಡು ದಿನಗಳ ಹಿಂದೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶ್ರೀದೇವಿ ಬೈರಪ್ಪ, ಮಹಿಳೆಯನ್ನು ಗೋಲ್ಡ್‌ ಡಿಗ್ಗರ್‌, ಹನಿ ಟ್ರ್ಯಾಪರ್‌ ಎನ್ನುವ ಪದಗಳಿಂದ ಕರೆಯೋದರ ಬಗ್ಗೆ ಅಸಾಮಾಧ ವ್ಯಕ್ತಪಡಿಸಿದ್ದಾರೆ.

“ದುರದೃಷ್ಟವಶಾತ್, ನಾವು ಎಂತಹ ಲೋಕದಲ್ಲಿ ಬದುಕುತ್ತಿದ್ದೇವೆ ಎಂದರೆ, ತಾವಾಗಲಿ ಅಥವಾ ತಮ್ಮ ಕುಟುಂಬವಾಗಲಿ ಆರ್ಥಿಕವಾಗಿ ತೀರಾ ಕಷ್ಟದಲ್ಲಿದ್ದರೂ ಸಹ, ಕೆಲವು ಹುಡುಗರು ತಮಗಿಂತ ಹೆಚ್ಚು ಸಂಪಾದಿಸುವ ಮಹಿಳೆಯರನ್ನು ‘ಹಣದಾಸೆಯವರು’ (Gold digger) ಅಥವಾ ‘ಹಣಕ್ಕಾಗಿ ಬಲೆ ಬೀಸುವವರು’ (Honey trapper) ಎಂಬಂತಹ ಅಸಭ್ಯ ಮಾತುಗಳಿಂದ ಹೀಯಾಳಿಸುವ ಧೈರ್ಯ ಮಾಡುತ್ತಾರೆ.” ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ಆದರೆ, ಅವರು ಈ ಮಾತನ್ನು ಹೇಳಿದ್ದು ಯಾರಿಗೆ? ಈ ಮಾತಿನ ಮೂಲಕ ಯಾರಿಗೆ ಏನನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋದೇ ಪ್ರಶ್ನೆಯ ವಿಚಾರವಾಗಿದೆ. ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಮಾತು ಇದಾಗಿದ್ದರೂ, ತಮ್ಮ ಜೀವನದಲ್ಲಿ ಆಗುತ್ತಿರುವ ಸನ್ನಿವೇಶಗಳಿಗೆ ಉತ್ತರ ನೀಡುವ ಪ್ರಯತ್ನ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಮೆರಿಕದ ಹಾರ್ವಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀದೇವಿ ಬೈರಪ್ಪ

ಶ್ರೀದೇವಿ ಬೈರಪ್ಪ ಭಾರತದಲ್ಲಿಲ್ಲ. ಅಮೆರಿಕದ ಹಾರ್ವಡ್‌ನಲ್ಲಿ ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಚ್ಛೇದನದ ನೋಟಿಸ್‌ಗಳಿಗೆ ಅವರು ಅಲ್ಲಿಂದಲೇ ಉತ್ತರಿಸುತ್ತಿದ್ದಾರೆ. ಆದರೆ, ಅವರು ಭಾರತಕ್ಕೆ ಬರುತ್ತಾರೋ? ಇಲ್ಲವೋ ಎನ್ನುವುದರ ಬಗ್ಗೆಯೂ ಗೊಂದಲವಿದೆ. ಕೆಲ ದಿನಗಳ ಹಿಂದೆ ತಮ್ಮ ಹಾರ್ವರ್ಡ್‌ ಕಲಿಕೆಯ ಬಗ್ಗೆಯೂ ಅವರು ಪೋಸ್ಟ್‌ ಮಾಡಿದ್ದರು.

“ಕೊನೆಗೂ ಹಾರ್ವರ್ಡ್‌ನಲ್ಲಿ (@harvard), ಹಾರ್ವರ್ಡ್ ಕೋ-ಆಪ್ ಹೂಡಿ (@harvardcoop) ಧರಿಸಿ ಫೋಟೋಗಳನ್ನು ತೆಗೆಸಿಕೊಂಡೆ. 2023 ರಲ್ಲಿ ನನಗೆ ‘ಹಾರ್ವರ್ಡ್ ಜಿಎಸ್‌ಇ’ನಲ್ಲಿ (Harvard GSE) ಸೀಟು ಸಿಕ್ಕಾಗ, ನನ್ನ ಜೀವನದಲ್ಲಿ ನಡೆದ ಈ ಅತ್ಯುತ್ತಮ ವಿಷಯವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂಕೋಚ ಮತ್ತು ಒಳಗೆಲ್ಲೋ ಒಂದು ರೀತಿಯ ಕೀಳರಿಮೆ ಇತ್ತು!! ಆ ಸಮಯದಲ್ಲಿ ನಾನು ಒಂದು ಅಧಿಕೃತ ಪೋಸ್ಟ್ ಕೂಡ ಮಾಡಿರಲಿಲ್ಲ… ನಿಜ ಹೇಳಬೇಕೆಂದರೆ, ನಾನು ಇಲ್ಲಿ ಓದುತ್ತಿದ್ದಾಗ ಸೋಶಿಯಲ್ ಮೀಡಿಯಾದಿಂದ ದೂರವಿದ್ದೆ ಮತ್ತು ಯಾವುದನ್ನೂ ಪೋಸ್ಟ್ ಮಾಡಿರಲಿಲ್ಲ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ… ನೀವು ಹಾರ್ವರ್ಡ್‌ನಲ್ಲಿದ್ದರೆ, “ನಾನು ಹಾರ್ವರ್ಡ್‌ನಲ್ಲಿದ್ದೇನೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಏಕೆಂದರೆ ಪ್ರಾತಿನಿಧ್ಯ (Representation) ಎಂಬುದು ನಿಜಕ್ಕೂ ಬಹಳ ಮುಖ್ಯ. ನೀವು ಹಂಚಿಕೊಳ್ಳುವ ಒಂದು ಸಣ್ಣ ಕ್ಷಣವೂ ಸಹ, “ಇದು ನನಗೂ ಸಾಧ್ಯವಾಗಬಹುದು” ಎಂದು ಕನಸು ಕಾಣಲು ಇನ್ನೊಬ್ಬರಿಗೆ ಸ್ಫೂರ್ತಿಯಾಗಬಹುದು. ಕೊನೆಗೂ ನನ್ನ ಗೆಳೆಯ ಮತ್ತು ನನ್ನ ತಂಡದ ಕ್ರಿಸ್ಟಿಯನ್ ಈ ಕ್ಷಣವನ್ನು ಹಂಚಿಕೊಳ್ಳಲು ನನಗೆ ಅವಕಾಶ ಮಾಡಿಕೊಟ್ಟರು! ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದರು.



Source link

Leave a Reply

Your email address will not be published. Required fields are marked *