ಮನ್‌ ಕೀ ಬಾತ್: ಯುದ್ಧ ಎಫೆಕ್ಟ್, ಜಾಗತಿಕ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ | Mann Ki Baat 132 Episode Pm Narendra Modi Warns Of War Effect Global Crisis Mrq

ಮನ್‌ ಕೀ ಬಾತ್: ಯುದ್ಧ ಎಫೆಕ್ಟ್, ಜಾಗತಿಕ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ | Mann Ki Baat 132 Episode Pm Narendra Modi Warns Of War Effect Global Crisis Mrq



ಮನ್‌ ಕೀ ಬಾತ್: ಯುದ್ಧ ಎಫೆಕ್ಟ್, ಜಾಗತಿಕ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ | Mann Ki Baat 132 Episode Pm Narendra Modi Warns Of War Effect Global Crisis Mrq

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 132ನೇ ‘ಮನ್‌ ಕೀ ಬಾತ್’ ಸಂಚಿಕೆಯಲ್ಲಿ ಇರಾನ್-ಇಸ್ರೇಲ್ ಯುದ್ಧದಿಂದ ಉಂಟಾದ ಜಾಗತಿಕ ಪ್ರಕ್ಷುಬ್ಧತೆಯ ಬಗ್ಗೆ ಮಾತನಾಡಿದರು. ಕೋವಿಡ್-19ರ ಹೋರಾಟವನ್ನು ಸ್ಮರಿಸಿದ ಅವರು, ಇಂಧನ ಬಿಕ್ಕಟ್ಟು ಸೇರಿದಂತೆ ಹೊಸ ಸವಾಲುಗಳನ್ನು ಎದುರಿಸಲು ದೇಶ ಸನ್ನದ್ಧವಾಗಿದೆ ಎಂದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮದ 132ನೇ ಸಂಚಿಕೆ ಪ್ರಸಾರವಾಗಿದ್ದು, ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಸೇರಿದಂಯೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾರ್ಚ್ ತಿಂಗಳು ಜಾಗತೀಕ ಪ್ರಕ್ಷುಬ್ದಕ್ಕೆ ಸಾಕ್ಷಿಯಾಗಿದ್ದು, ಇದೇ ವೇಳೆ ಕೋವಿಡ್-19 ಕಾಲಘಟ್ಟದಲ್ಲಿ ಇಡೀ ಜಗತ್ತು ನಡೆಸಿದ ಹೋರಾಟದ ಸಮಯವನ್ನು ಪ್ರಧಾನಿಗಳಿ ಮೆಲಕು ಹಾಕಿಕೊಂಡರು. ಕೋವಿಡ್ ಬಳಿಕ ವೇಗವಾಗಿ ಜಗತ್ತು ಬೆಳವಣಿಗೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ಅನೇಕ ಹೊಸ ಸಮಸ್ಯೆಗಳನ್ನು ಎದುರಿಸುವ ಸಮಯ ಬಂದಿದೆ.

ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿಯವರ ಪ್ರಮುಖ ವಿಷಯಗಳು

1.ಕೋವಿಡ್ ಕಾಲಘಟ್ಟದ ಬಳಿಕ ಜಗತ್ತು ವೇಗವಾಗಿ ಮುಂದುವರಿಯುವ ನಿರೀಕ್ಷೆ ಇತ್ತು. ಆದ್ರೆ ಮಾರ್ಚ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈಗ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನತೆಗಳು ಹೊಸ ಸವಾಲುಗಳನ್ನು ಸೃಷ್ಟಿಸಿವೆ. ಜಗತ್ತು ಮತ್ತೊಮ್ಮೆ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕೊರೊನಾ ವಿರುದ್ಧ ಜಗತ್ತು ದೀರ್ಘಕಾಲದವರೆಗೆ ಹೋರಾಟ ನಡೆಸಿತ್ತು. ಯುದ್ಧ ಅಭಿವೃದ್ಧಿಯ ವೇಗದ ಮೇಲೆ ಪರಿಣಾಮ ಬೀರುತ್ತಿದೆ.

2.ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ ಒಂದು ತಿಂಗಳಿಗೂ ಅಧಿಕ ಕಾಲ ಭೀಕರ ಯುದ್ಧ ನಡೆಯುತ್ತಿದೆ. ಈಗಲೂ ನಡೆಯುತ್ತಿರುವ ಯುದ್ಧ ಭಾರತದ ಮೇಲೆಯೂ ಪರಿಣಾಮ ಬೀರಿದೆ. ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಲಕ್ಷಾಂತರ ಭಾರತೀಯರು ವಾಸವಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಭಾರತೀಯರಿಗೆ ನೆರವಾಗುತ್ತಿರುವ ಗಲ್ಫ್ ರಾಷ್ಟ್ರಗಳಿಗೆ ಪ್ರಧಾನಿಗಳು ಧನ್ಯವಾದ ಸಲ್ಲಿಸಿದರು. ಗಲ್ಫ್ ರಾಷ್ಟ್ರಗಳಲ್ಲಿ 10 ಲಕ್ಷಕ್ಕೂ ಅಧಿಕ ಭಾರತೀಯರು ವಾಸವಾಗಿರುವ ಮಾಹಿತಿಯನ್ನು ಪ್ರಧಾನಿಗಳು ಹಂಚಿಕೊಂಡರು.

3.ಇಂಧನದ ಪ್ರಮುಖ ಕೇಂದ್ರ ಸ್ಥಳಗಳಲ್ಲಿಯೇ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ಯುದ್ಧದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಪರಿಣಾಮ ಬೀರುತ್ತಿದೆ. ಇಡೀ ವಿಶ್ವ ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಕಳೆದ ಒಂದು ದಶಕದಿಂದ ಭಾರತ ಜಾಗತೀಕವಾಗಿ ಅನೇಕ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರೋದಿರಂದ ಈ ಸವಾಲುಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತಿದೆ. ಸರ್ಕಾರವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

4.ಯುದ್ಧದ ಪರಿಣಾಮದ ಪರಿಸ್ಥಿತಿ ಎದುರಿಸೋದು ಸವಾಲಿನ ಕೆಲಸವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ತಾಳ್ಮೆ ಮತ್ತು ತಿಳುವಳಿಕೆ ಅಗತ್ಯವಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು. ದೇಶದ ಜನರು ಯಾವುದೇ ಸುಳ್ಳು ವದಂತಿಗಳನ್ನ ನಂಬಬಾರದು. ಸರ್ಕಾರದಿಂದ ಬರುವ ಅಧಿಕೃತ ಹೇಳಿಕೆಗಳನ್ನು ಗಮನಿಸಬೇಕು. ಇದು 1.4 ಶತಕೋಟಿ ಜನರ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ಸುಳ್ಳು ಸುದ್ದಿಗಳಿಂದ ಜನರು ಜಾಗರೂಕರಾಗಿರಬೇಕು.

ಇದನ್ನೂ ಓದಿ: ಭಾರತೀಯ ಸೇನೆಗೆ ‘ಪ್ರಹಾರ’ ಬಲ: 2,000 ಲೈಟ್ ಮೆಷಿನ್ ಗನ್‌ಗಳ ಮೊದಲ ಬ್ಯಾಚ್ ಹಸ್ತಾಂತರಿಸಿದ ಅದಾನಿ ಡಿಫೆನ್ಸ್!

5.ದೇಶದ ಜನತೆ ಜಾಗರೂಕರಾಗಿದ್ದು, ವದಂತಿಗಳಿಗೆ ಬಲಿಯಾಗಬಾರದು. ಜನರು ಸರ್ಕಾರಿ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಿ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು. ದೇಶವು ಕೋವಿಡ್-19 ಬಿಕ್ಕಟ್ಟನ್ನು ಜಯಿಸಿದಂತೆಯೇ ಈ ಸವಾಲನ್ನೂ ಜಯಿಸುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು. 1.4 ಶತಕೋಟಿ ಜನರ ಒಗ್ಗಟ್ಟು ದೇಶದ ದೊಡ್ಡ ಶಕ್ತಿ ಎಂದು ಪ್ರಧಾನಿಗಳು ಹೇಳಿದರು.

ಇದನ್ನೂ ಓದಿ: ಬ್ಯಾಂಕ್ ಖಾತೆಗೆ ಅಚಾನಕ್ ಆಗಿ ಬಂದು ಬಿತ್ತು 10 ಕೋಟಿ: ಮಹಿಳೆ ಮಾಡಿದ್ದೇನು?

Scroll to load tweet…



Source link

Leave a Reply

Your email address will not be published. Required fields are marked *