Headlines

ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್‌ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ | 1000 Drones Will Light Up Helicopter Ride For The Public The World Famous Hampi Utsava 2026 Mrq

ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್‌ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ | 1000 Drones Will Light Up Helicopter Ride For The Public The World Famous Hampi Utsava 2026 Mrq



ಈ ಬಾರಿ ಹಂಪಿ ಉತ್ಸವದಲ್ಲಿ 1000 ಡ್ರೋನ್‌ಗಳ ಬೆಳಕಿನ ಚಿತ್ತಾರ; ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸವಾರಿ | 1000 Drones Will Light Up Helicopter Ride For The Public The World Famous Hampi Utsava 2026 Mrq

ವಿಶ್ವವಿಖ್ಯಾತ ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಲು ಸಜ್ಜಾಗಿದೆ. ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ, ಒಂದು ಸಾವಿರ ಡ್ರೋನ್‌ಗಳನ್ನು ಬಳಸಿ ಹಂಪಿಯ ಸ್ಮಾರಕಗಳ ಚಿತ್ತಾರವನ್ನು ಬಾನಂಗಳದಲ್ಲಿ ಮೂಡಿಸುವ ಅದ್ಭುತ ಡ್ರೋನ್ ಶೋ ಆಯೋಜಿಸಲಾಗಿದೆ. 

ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಗತ‍ವೈಭವ ಸ್ಮರಿಸಲು ದಿನಗಣನೆ ಶುರುವಾಗಿದೆ. ಉತ್ಸವದಲ್ಲಿ ಎಲ್ಲ ವರ್ಗದ ಜನರು ಉತ್ಸುಕತೆಯಿಂದ ಭಾಗವಹಿಸಲು ವಿಭಿನ್ನ ಮತ್ತು ವೈವಿಧ್ಯಮಯ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ರೂಪಿಸಿದೆ.ಈ ಬಾರಿಯ ಹಂಪಿ ಉತ್ಸವದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಹಂಪಿ ಇತಿಹಾಸವನ್ನು ಮುಖ್ಯವೇದಿಕೆಯಾದ ಎಂ.ಪಿ. ಪ್ರಕಾಶ್ ವೇದಿಕೆ ಬಳಿ ಫೆ.13ರಿಂದ 15ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಹಂಪಿಯ ಸ್ಮಾರಕಗಳ ಕುರಿತು ಡ್ರೋನ್‌ ಶೋ ಹಮ್ಮಿಕೊಳ್ಳಲಾಗಿದೆ.

ಡ್ರೋನ್‌ ಶೋನಲ್ಲಿ ಆಕಾಶದಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುವಂತಹ ಕಾರ್ಯವಾಗಲಿದೆ. ಒಂದು ಸಾವಿರ ಅತ್ಯಾಧುನಿಕ ಡ್ರೋನ್‌ಗಳನ್ನು ಬ‍‍ಳಸಿ ಡ್ರೋನ್ ಶೋದಲ್ಲಿ ಹಂಪಿಯ ಸ್ಮಾರಕಗಳ ಚಿತ್ತಾರವು ಅತ್ಯಂತ ಆಕರ್ಷಕವಾಗಿರಲಿದೆ.

ಡ್ರೋನ್‌ಗಳು ಹಂಪಿಯ ಕತ್ತಲಲ್ಲಿ ಕೇವಲ ಬೆಳಕಿನ ಆಟ ಆಡದೇ ಹಂಪಿಯ ಒಂದು ಸ್ಮಾರಕದ ಕಲಾಕೃತಿಯನ್ನು ಬಾನಂಗಳದಲ್ಲಿ ಬೆಳಕಿನಲ್ಲಿ ಚಿತ್ತಾರ ಮೂಡಿಸಿ ನೋಡಗರಿಗೆ ಆಶ್ಚರ್ಯವನ್ನು ಮೂಡಿಸಲಿದೆ.

ಡ್ರೋನ್‌ ಶೋದಲ್ಲಿ ಬೆಳಕಿನ ಕಲಾಕೃತಿಯ ಚಿತ್ತಾರ

ಒಂದು ಸಾವಿರ ಡ್ರೋನ್‌ ಶೋನಲ್ಲಿ ಹಂಪಿಯ ಕಲ್ಲಿನ ತೇರು, ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ರಾಜಗೋಪುರ, ಉಗ್ರನರಸಿಂಹ, ಕಮಲ್ ಮಹಲ್‌, ಸಾಸಿವೆ ಕಾಳು ಗಣಪತಿ, ಕಡಲೆಕಾಳು ಗಣೇಶ್, ಮಹಾನವಮಿ ದಿಬ್ಬ, ವಿಜಯವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ ಮತ್ತು ಶ್ರೀಕೃಷ್ಣದೇವರಾಯ, ಹಕ್ಕ-ಬುಕ್ಕರಂತಹ ಪ್ರಮುಖ ಅರಸರ ಚಿತ್ರಣಗಳು ಸೇರಿದಂತೆ ಇನ್ನಿತರ ಹಂಪಿಯ ಸ್ಮಾರಕಗಳನ್ನು ಡ್ರೋನ್‌ ಶೋದಲ್ಲಿ ಬೆಳಕಿನ ಕಲಾಕೃತಿಯ ಚಿತ್ತಾರಗಳನ್ನು ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಜೊತೆಗೆ ನೋಡುಗರನ್ನು ಆಚ್ಚರಿಪಡಿಸಲಿದೆ.

ಡ್ರೋನ್‌ ಶೋ ಈಗಾಗಲೇ ಮೈಸೂರು ದಸರಾದಲ್ಲಿ ಪ್ರದರ್ಶನಗೊಂಡು ಜನರನ್ನು ಆಕರ್ಷಿಸಿದೆ. ಈಗ ಅದೇ ಡ್ರೋನ್ ಶೋ ಹಂಪಿ ಉತ್ಸವದಲ್ಲಿ ಮೂರು ದಿನಗಳ ಕಾಲ ರಾತ್ರಿ ಪ್ರದರ್ಶನಗೊಳ್ಳಲಿದೆ. ಹಗಲಿನಲ್ಲಿ ಹಂಪಿಯ ಸ್ಮಾರಕಗಳನ್ನು ಆಗಸದಿಂದ ನೋಡಲು ಹಂಪಿ ಬೈ ಸ್ಕೈನ ಎರಡು ಹೆಲಿಕಾಫ್ಟರ್‌ ಸೇವೆ ಆರಂಭಿಸಲಾಗುತ್ತಿದೆ. ಫೆ.12ರಿಂದಲೇ ಈ ಸೇವೆ ಆರಂಭಿಸಲಾಗುತ್ತಿದೆ. ಫೆ.15ರವರೆಗೆ ಕಮಲಾಪುರದ ಮಯೂರ ಭವನೇಶ್ವರಿ ಆವರಣದಲ್ಲಿ ನಡೆಯಲಿದೆ.

ಹೆಲಿಕಾಪ್ಟರ್‌ ಟೇಕ್‌ ಆಫ್‌ ಹಾಗೂ ಲ್ಯಾಂಡಿಂಗ್‌ ಸಮಯ ಸೇರಿ 7 ನಿಮಿಷಗಳ ಆಕಾಶದಲ್ಲಿ ಹಾರಾಟದಲ್ಲಿ ಆಗಸದಿಂದ ಹಂಪಿಯ ಸೊಬಗನ್ನು ವೀಕ್ಷಿಸಬಹುದು.

ವಿವಿಧ ಕಾರ್ಯಕ್ರಮಗಳ ವಿವರ

ಶಿಲ್ಪಕಲಾ ಶಿಬಿರದಲ್ಲಿ 15 ಶಿಲ್ಪಿಗಳು ಹಂಪಿಯ ಗ್ರಾಪಂ ಎದುರಲ್ಲಿ ತಮ್ಮ ಕೈಚಳಕದಿಂದ ಕಲಾಕೃತಿ ಸಿದ್ಧಪಡಿಸುತ್ತಿದ್ದಾರೆ. ಉತ್ಸವದ ಶಿಬಿರದಲ್ಲಿ ಸಿದ್ಧಗೊಂಡ ಶಿಲ್ಪಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ. ಫೆ.9ರಂದು ಸಂಜೆ 5 ಗಂಟೆಗೆ ಮಾತಂಗ ಪರ್ವತ ಮೈದಾನದಲ್ಲಿ ಚಿತ್ರಕಲಾ ಶಿಬಿರ ನಡೆಯಲಿದೆ.

ಇದನ್ನೂ ಓದಿ: Koppal: ಕುಡಿಯಲು ಯೋಗ್ಯವಲ್ಲದ ಸ್ಪಿರಿಟ್ ಸೇವಿಸಿ 25 ವರ್ಷದ ಯುವಕನ ದುರಂತ ಸಾವು; ಇಬ್ಬರ ಬಂಧನ

ಹಂಪಿ ಉತ್ಸವದ ಪ್ರಚಾರಕ್ಕಾಗಿ ಬೈಕ್‌ ರ್ಯಾಲಿಯನ್ನು ಫೆ. 10 ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡು ಹೊಸಪೇಟೆಯ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಬೈಕ್‌ ರ್ಯಾರಿ ನಡೆಯಲಿದೆ. ಹಂಪಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸುವ ತುಂಗಾ ಆರತಿ ಮಹೋತ್ಸವ ಫೆ.11ರಂದು ಸಂಜೆ 6 ಗಂಟೆಗೆ ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರ ತುಂಗಾನದಿ ತಟದಲ್ಲಿ ನಡೆಯಲಿದೆ. ಫೆ.12ರಂದು ಮಧ್ಯಾಹ್ನ 3 ಗಂಟೆಗೆ ಹೊಸಪೇಟೆಯ ವಡಕರಾಯ ದೇವಸ್ಥಾನದ ರಥ ಬೀದಿಯಿಂದ ಪುನೀತ್‌ ರಾಜಕುಮಾರ್‌ ಸರ್ಕಲ್‌ವರೆಗೆ ವಿಜಯನಗರ ವಸಂತ ‍ವೈಭವ ನಡೆಯಲಿದೆ.

ಫೆ.13ರಂದು ಬೆಳಿಗ್ಗೆ 10 ಗಂಟೆಗೆ ವಿರೂಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದೆ. ಕಮಲಾಪುರದ ಹಂಪಿ ಪ್ರಾಧಿಕಾರದ ಕಚೇರಿಯ ಹಿಂಭಾಗದ ಆವರಣದಲ್ಲಿ ರೈತರಿಗಾಗಿ ಎತ್ತುಗಳ ಪ್ರದರ್ಶನ ನಡೆಯಲಿದೆ. ಹಂಪಿ ಗ್ರಾಪಂ ಮುಂಭಾಗದಲ್ಲಿ ಮತ್ಸ್ಯ ಮೇಳ ನಡೆಯಲಿದೆ. ಆಹಾರ ಮೇಳ, ಫಲ ಪುಷ್ಪ ಪ್ರದರ್ಶನ, ಕೃಷಿ, ಕರ ಕುಶಲ, ಕೈಗಾರಿಕೆ, ಪುಸ್ತಕ ಪ್ರದರ್ಶನ, ಚಿತ್ರಸಂತೆ ನಡೆಯಲಿದೆ.

ಇದನ್ನೂ ಓದಿ: Koppal: ಕುಕನೂರಿನ ಶಾಲೆಯಲ್ಲಿ ಟೀಚರ್ಸ್ ಬಂದಿಲ್ಲ ಅಂದ್ರೆ ಅಡುಗೆಯವರೇ ಪ್ರಭಾರಿ ಶಿಕ್ಷಕರು



Source link

Leave a Reply

Your email address will not be published. Required fields are marked *