Headlines

ಅರವಿಂದ್‌ ಕೇಜ್ರಿವಾಲ್‌ ಲಾಜಿಕ್‌ ಪ್ರಕಾರ ಹೋದ್ರೆ ಯಾವ ಜಡ್ಜ್‌ ಕೂಡ ಸರ್ಕಾರ, ರಾಜಕಾರಣಿ ವಿಚಾರಣೆ ಮಾಡೋದು ಸಾಧ್ಯವಿಲ್ಲ: ಸಿಬಿಐ | Cbi Opposes Arvind Kejriwal Recusal Plea Justice Swarana Kanta Sharma Delhi Hc San

ಅರವಿಂದ್‌ ಕೇಜ್ರಿವಾಲ್‌ ಲಾಜಿಕ್‌ ಪ್ರಕಾರ ಹೋದ್ರೆ ಯಾವ ಜಡ್ಜ್‌ ಕೂಡ ಸರ್ಕಾರ, ರಾಜಕಾರಣಿ ವಿಚಾರಣೆ ಮಾಡೋದು ಸಾಧ್ಯವಿಲ್ಲ: ಸಿಬಿಐ | Cbi Opposes Arvind Kejriwal Recusal Plea Justice Swarana Kanta Sharma Delhi Hc San



ಅರವಿಂದ್‌ ಕೇಜ್ರಿವಾಲ್‌ ಲಾಜಿಕ್‌ ಪ್ರಕಾರ ಹೋದ್ರೆ ಯಾವ ಜಡ್ಜ್‌ ಕೂಡ ಸರ್ಕಾರ, ರಾಜಕಾರಣಿ ವಿಚಾರಣೆ ಮಾಡೋದು ಸಾಧ್ಯವಿಲ್ಲ: ಸಿಬಿಐ | Cbi Opposes Arvind Kejriwal Recusal Plea Justice Swarana Kanta Sharma Delhi Hc San

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂಬ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಸಿಬಿಐ ವಾದಿಸಿದೆ.

ನವದೆಹಲಿ (ಏ.16): ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು (Recusal) ಎಂಬ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಗುರುವಾರ ಲಿಖಿತ ರೂಪದಲ್ಲಿ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವನ್ನು ಒಪ್ಪಿಕೊಂಡರೆ ದೇಶದ ಯಾವುದೇ ನ್ಯಾಯಾಧೀಶರು ಸರ್ಕಾರ ಅಥವಾ ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ಆಲಿಸಲು ಸಾಧ್ಯವಾಗುವುದಿಲ್ಲ ಎಂದು ಸಿಬಿಐ ವಾದಿಸಿದೆ.

ಸಿಬಿಐ ಮಂಡಿಸಿದ ಪ್ರಬಲ ವಾದಗಳೇನು?

ನ್ಯಾಯಮೂರ್ತಿ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರ ಪ್ಯಾನಲ್‌ನಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂಬುದು ಕೇಜ್ರಿವಾಲ್ ಅವರ ವಾದವಾಗಿತ್ತು. ಇದಕ್ಕೆ ಸಿಬಿಐ ಲಿಖಿತ ರೂಪದಲ್ಲಿ ತಿರುಗೇಟು ನೀಡಿದೆ. ಕೇಜ್ರಿವಾಲ್ ತರ್ಕದಂತೆ ಹೋದರೆ, ತಮ್ಮ ಸಂಬಂಧಿಕರು ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಪ್ಯಾನಲ್‌ನಲ್ಲಿ ಇರುವ ಎಲ್ಲಾ ನ್ಯಾಯಾಧೀಶರು ಆಯಾ ಸರ್ಕಾರ ಅಥವಾ ರಾಜಕೀಯ ನಾಯಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ಅನರ್ಹರಾಗುತ್ತಾರೆ. ಇದು ಅತ್ಯಂತ ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ.

ಕೇಜ್ರಿವಾಲ್ ಅವರು ಹೆಚ್ಚುವರಿ ಅಫಿಡವಿಟ್ ಸಲ್ಲಿಸಿರುವುದು ನ್ಯಾಯಾಂಗ ಸಂಸ್ಥೆ ಮತ್ತು ವ್ಯಕ್ತಿಗಳ ಮೇಲೆ ಒತ್ತಡ ಹೇರಲು ಹಾಗೂ ಸಂಸ್ಥೆಯ ಘನತೆಗೆ ಮಸಿ ಬಳಿಯಲು ಮಾಡಿದ ಪ್ರಯತ್ನ ಎಂದು ಸಿಬಿಐ ಕಿಡಿಕಾರಿದೆ. ನ್ಯಾಯಮೂರ್ತಿ ಶರ್ಮಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತ ಅಭಿಯಾನ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ವಿಚಾರಣೆಯಿಂದ ಹಿಂದೆ ಸರಿಯುವುದು ನ್ಯಾಯಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಿಬಿಐ ಹೇಳಿದೆ.

ಎಬಿಎಪಿ ಕಾರ್ಯಕ್ರಮದ ವಿವಾದ

ಅಖಿಲ ಭಾರತ ಅಧಿವಕ್ತ ಪರಿಷತ್ (ABAP) ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳು ಭಾಗವಹಿಸಿದ್ದನ್ನು ಕೇಜ್ರಿವಾಲ್ ಆಕ್ಷೇಪಿಸಿದ್ದರು. ಇದಕ್ಕೆ ಉತ್ತರಿಸಿದ ಸಿಬಿಐ, “ಕೇವಲ ಒಂದು ಸೆಮಿನಾರ್‌ನಲ್ಲಿ ಭಾಗವಹಿಸುವುದು ಅವರ ಸಿದ್ಧಾಂತವನ್ನು ಪ್ರತಿಬಿಂಬಿಸುವುದಿಲ್ಲ. ಇದನ್ನೇ ಕಾರಣವಾಗಿಸಿದರೆ, ಸರ್ವೋಚ್ಚ ನ್ಯಾಯಾಲಯ ಅಥವಾ ಹೈಕೋರ್ಟ್‌ನ ಯಾವುದೇ ನ್ಯಾಯಾಧೀಶರು ಆಮ್ ಆದ್ಮಿ ಪಕ್ಷದ ನಾಯಕರ ಪ್ರಕರಣಗಳನ್ನು ಆಲಿಸಲು ಸಾಧ್ಯವಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ

ಫೆಬ್ರವರಿ 27 ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಇತರ 22 ಜನರನ್ನು ಅಬಕಾರಿ ಹಗರಣದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ ಎಂದು ಅವರು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿದ್ದರು. ಇದರಿಂದ ಆತಂಕಗೊಂಡ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರು ನ್ಯಾಯಮೂರ್ತಿಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 13 ರಂದು ಕೇಜ್ರಿವಾಲ್ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದರು. ಈ ವೇಳೆ ನ್ಯಾಯಾಲಯದ ಒಳಗಿನ ವಿಡಿಯೋಗಳು ವೈರಲ್ ಆಗಿದ್ದು, ಅದನ್ನು ತೆಗೆದುಹಾಕುವಂತೆ ಹೈಕೋರ್ಟ್ ಈಗಾಗಲೇ ಆದೇಶಿಸಿದೆ.



Source link

Leave a Reply

Your email address will not be published. Required fields are marked *