Headlines

ಮೊದಲ ಮಾತುಕತೆಯಲ್ಲೇ ಕೋಚ್ ದ್ರಾವಿಡ್‌ರನ್ನು ತಬ್ಬಿಬ್ಬು ಮಾಡಿದ್ದ ವೈಭವ್ ಸೂರ್ಯವಂಶಿ! ಆ ಕ್ಷಣವನ್ನು ನೆನಪಿಸಿದ ಸಂಜು | Sanju Samson Reveals Rahul Dravid Advice To Young Ipl Sensation Vaibhav Suryavanshi Kvn

ಮೊದಲ ಮಾತುಕತೆಯಲ್ಲೇ ಕೋಚ್ ದ್ರಾವಿಡ್‌ರನ್ನು ತಬ್ಬಿಬ್ಬು ಮಾಡಿದ್ದ ವೈಭವ್ ಸೂರ್ಯವಂಶಿ! ಆ ಕ್ಷಣವನ್ನು ನೆನಪಿಸಿದ ಸಂಜು | Sanju Samson Reveals Rahul Dravid Advice To Young Ipl Sensation Vaibhav Suryavanshi Kvn



ಮೊದಲ ಮಾತುಕತೆಯಲ್ಲೇ ಕೋಚ್ ದ್ರಾವಿಡ್‌ರನ್ನು ತಬ್ಬಿಬ್ಬು ಮಾಡಿದ್ದ ವೈಭವ್ ಸೂರ್ಯವಂಶಿ! ಆ ಕ್ಷಣವನ್ನು ನೆನಪಿಸಿದ ಸಂಜು | Sanju Samson Reveals Rahul Dravid Advice To Young Ipl Sensation Vaibhav Suryavanshi Kvn

ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಆಸಕ್ತಿದಾಯಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮುನ್ನ ರಾಹುಲ್ ದ್ರಾವಿಡ್ ಜೊತೆಗಿನ ವೈಭವ್ ಸಂಭಾಷಣೆ ಹಾಗೂ ನಂತರ ಆತ ಮಾಡಿದ ದಾಖಲೆಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

ನವದೆಹಲಿ: ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ತಮ್ಮ ತಂಡದ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಕಥೆ ಹೇಳಿದ್ದಾರೆ. 2025ರ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಆಗ ಅವರಿಗೆ ಕೇವಲ 14 ವರ್ಷ 23 ದಿನ ವಯಸ್ಸು. ಈ ಮೂಲಕ ಐಪಿಎಲ್ ಆಡಿದ ಅತ್ಯಂತ ಕಿರಿಯ ಆಟಗಾರ ಅನ್ನೋ ದಾಖಲೆ ಬರೆದಿದ್ದರು. ನವದೆಹಲಿಯಲ್ಲಿ ನಡೆದ ‘ನಮನ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಸಂಜು ಈ ಘಟನೆಯನ್ನು ನೆನಪಿಸಿಕೊಂಡರು.

ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ವೈಭವ್‌ಗೆ ಸಲಹೆ ನೀಡಲು ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರನ್ನು ಕರೆದಿದ್ದರಂತೆ. ಆ ಕ್ಷಣವನ್ನು ಸಂಜು ಸ್ಯಾಮ್ಸನ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ರಾಹುಲ್ ಸರ್ ನನ್ನನ್ನು ರೂಮಿಗೆ ಕರೆದು, ‘ಸಂಜು, ನಾವು ಅವನ ಜೊತೆ ಮಾತಾಡಬೇಕು. ಅವನು ತುಂಬಾ ಚಿಕ್ಕ ಹುಡುಗ, ಹೇಗೆ ಆಡಬೇಕು ಅಂತ ನಾವು ಹೇಳಿಕೊಡಬೇಕು’ ಅಂದರು. ನಂತರ ದ್ರಾವಿಡ್ ಅವರು ವೈಭವ್ ಬಳಿ, ‘ವೈಭವ್, ನಿನ್ನ ಪ್ಲಾನ್ ಏನು?’ ಅಂತ ಕೇಳಿದ್ರು. ಅದಕ್ಕೆ ಅವನು, ‘ಏನಿಲ್ಲ ಸರ್, ನಾನು ನನ್ನ ಆಟ ಆಡ್ತೀನಿ’ ಅಂತ ಉತ್ತರ ಕೊಟ್ಟ.”

ಆಗ ದ್ರಾವಿಡ್ ಮತ್ತೆ ಗೇಮ್ ಪ್ಲಾನ್ ಬಗ್ಗೆ ಕೇಳಿದಾಗ, “‘ಮೊದಲ ಬಾಲ್ ನನ್ನ ಜೋನ್‌ನಲ್ಲಿ ಬಂದ್ರೆ, ಅದನ್ನು ಸಿಕ್ಸರ್‌ಗೆ ಎತ್ತುತ್ತೇನೆ’ ಅಂತ ವೈಭವ್ ಕೂಲ್ ಆಗಿ ಹೇಳಿದ. ಅವನ ಮಾತು ಕೇಳಿ ನಾವೇ ಶಾಕ್ ಆಗಿದ್ವಿ. ಅವನು ವಿಡಿಯೋ ಗೇಮ್ ಆಡಿದಷ್ಟೇ ಸುಲಭವಾಗಿ ಕ್ರಿಕೆಟ್‌ ಅನ್ನೂ ನೋಡುತ್ತಾನೆ” ಅಂತ ಸಂಜು ಹೇಳಿದ್ದಾರೆ.

Scroll to load tweet…

ಐಪಿಎಲ್ 2025ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೈಭವ್

13ನೇ ವಯಸ್ಸಿನಲ್ಲೇ ರಾಜಸ್ಥಾನ ರಾಯಲ್ಸ್ ತಂಡ ವೈಭವ್‌ನನ್ನು 1.10 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿತ್ತು. ತನ್ನ ಮೊದಲ ಪಂದ್ಯದಲ್ಲೇ ಶಾರ್ದೂಲ್ ಠಾಕೂರ್‌ಗೆ ಸಿಕ್ಸರ್ ಬಾರಿಸಿ ವೈಭವ್ ಸದ್ದು ಮಾಡಿದ್ದ. ಜೈಪುರದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಕೇವಲ 38 ಎಸೆತಗಳಲ್ಲಿ 101 ರನ್ ಸಿಡಿಸಿ ಎಲ್ಲರನ್ನೂ ಬೆರಗುಗೊಳಿಸಿದ.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಪಾಲಾಯಿತು. ಇದು ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ವೇಗದ ಶತಕ ಹಾಗೂ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಶತಕವಾಗಿದೆ.

2025ರ ಸೀಸನ್‌ನಲ್ಲಿ ಆಡಿದ 7 ಪಂದ್ಯಗಳಿಂದ 206.55ರ ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದ್ದಾನೆ. ಅವರ ಸರಾಸರಿ 36 ರನ್. ಈ ಅದ್ಭುತ ಪ್ರದರ್ಶನದೊಂದಿಗೆ, ಈ ಎಡಗೈ ಬ್ಯಾಟರ್ ವಿಶ್ವ ಕ್ರಿಕೆಟ್‌ನಲ್ಲೇ ಅತ್ಯಂತ ಭರವಸೆಯ ಯುವ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಕಳೆದ ಡಿಸೆಂಬರ್ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ಉಳಿಸಿಕೊಂಡಿದ್ದ 13 ಆಟಗಾರರಲ್ಲಿ ವೈಭವ್ ಕೂಡ ಒಬ್ಬ.

ಆಡಿದ ಎಲ್ಲಾ ಟೂರ್ನಿಗಳಲ್ಲಿ ಶತಕ ಸಿಡಿಸಿರುವ ವೈಭವ್:

ವೈಭವ್ ಸೂರ್ಯವಂಶಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಆಡಿದ ಬಹುತೇಕ ಎಲ್ಲಾ ಟೂರ್ನಿಗಳಲ್ಲೂ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವೈಭವ್, ದೇಶಿ ಕ್ರಿಕೆಟ್‌ನಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸುತ್ತಿದ್ದು, ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ಅಂಡರ್-19 ಏಷ್ಯಾಕಪ್, ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ಮುಂಬರುವ 19ನೇ ಸೀಸನ್‌ ಐಪಿಎಲ್ ಟೂರ್ನಿಗೆ ವೈಭವ್ ಸೂರ್ಯವಂಶಿ ಸಜ್ಜಾಗುತ್ತಿದ್ದಾರೆ.



Source link

Leave a Reply

Your email address will not be published. Required fields are marked *