ಇರಾನ್‌ನ 500ಕ್ಕೂಹೆಚ್ಚು ಕಡೆ ಇಸ್ರೇಲ್- ಅಮೆರಿಕ ದಾಳಿ । 200 ಬಲಿ – ಅಮೆರಿಕ ಸೇನಾ ನೆಲೆ ಅಲ್ಲೋಲ ಕಲ್ಲೋಕ | Over 500 Locations In Iran Hit By Israel United States Strikes 200 Dead

ಇರಾನ್‌ನ 500ಕ್ಕೂಹೆಚ್ಚು ಕಡೆ ಇಸ್ರೇಲ್- ಅಮೆರಿಕ ದಾಳಿ । 200 ಬಲಿ – ಅಮೆರಿಕ ಸೇನಾ ನೆಲೆ ಅಲ್ಲೋಲ ಕಲ್ಲೋಕ | Over 500 Locations In Iran Hit By Israel United States Strikes 200 Dead



ಇರಾನ್‌ನ 500ಕ್ಕೂಹೆಚ್ಚು ಕಡೆ ಇಸ್ರೇಲ್- ಅಮೆರಿಕ ದಾಳಿ । 200 ಬಲಿ – ಅಮೆರಿಕ ಸೇನಾ ನೆಲೆ ಅಲ್ಲೋಲ ಕಲ್ಲೋಕ | Over 500 Locations In Iran Hit By Israel United States Strikes 200 Dead

‘ಇರಾನ್‌ ಅಣ್ವಸ್ತ್ರ ಸಿದ್ಧಪಡಿಸುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸುತ್ತಲೇ, ತನ್ನ ಮಾತು ಕೇಳದ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ ಖಮೇನಿ ಪದಚ್ಯುತಿಗೆ ಪ್ರಯತ್ನಿಸುತ್ತಿದ್ದ ಅಮೆರಿಕ, ಶನಿವಾರ ಇಸ್ರೇಲ್ ಜೊತೆಗೂಡಿ 200 ವಿಮಾನ ಬಳಸಿ ಇರಾನ್‌ನ 500ಕ್ಕೂ ಹೆಚ್ಚು ಸ್ಥಳಗಳ ಮೇಲೆ ಭಾರೀ ವಾಯುದಾಳಿ ನಡೆಸಿದೆ.

ಟೆಹರಾನ್‌/ಟೆಲ್‌ ಅವಿವ್‌/ವಾಷಿಂಗ್ಟನ್‌: ‘ಇರಾನ್‌ ಅಣ್ವಸ್ತ್ರ ಸಿದ್ಧಪಡಿಸುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸುತ್ತಲೇ, ತನ್ನ ಮಾತು ಕೇಳದ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ ಖಮೇನಿ ಪದಚ್ಯುತಿಗೆ ಪ್ರಯತ್ನಿಸುತ್ತಿದ್ದ ಅಮೆರಿಕ, ಶನಿವಾರ ಇಸ್ರೇಲ್ ಜೊತೆಗೂಡಿ 200 ವಿಮಾನ ಬಳಸಿ ಇರಾನ್‌ನ 500ಕ್ಕೂ ಹೆಚ್ಚು ಸ್ಥಳಗಳ ಮೇಲೆ ಭಾರೀ ವಾಯುದಾಳಿ ನಡೆಸಿದೆ.

ಇದರ ಬೆನ್ನಲ್ಲೇ ಇರಾನ್‌ ಕೂಡ, ಇಸ್ರೇಲ್‌ ಮತ್ತು ಅಮೆರಿಕದ ವಾಯುನೆಲೆಗಳು ಇರುವ 6 ಕೊಲ್ಲಿ ದೇಶಗಳ ಮೇಲೆ ಬಾಂಬ್‌ ದಾಳಿಯ ಮೂಲಕ ತಿರುಗೇಟು ನೀಡಿದೆ. ಹೀಗಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಇದೀಗ ಯುದ್ಧದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ರೇಲ್‌-ಹಮಾಸ್, ಉಕ್ರೇನ್‌-ರಷ್ಯಾ ಯುದ್ಧದಿಂದ ಜಗತ್ತು ಚೇತರಿಸಿಕೊಳ್ಳುವ ಮೊದಲೇ ನಡೆದ ಈ ಬೆಳವಣಿಗೆ ಜಗತ್ತಿನ ಆರ್ಥಿಕತೆ ಮೇಲೆ ಮತ್ತೊಂದು ಕಾರ್ಮೋಡ ಕವಿಯುವಂತೆ ಮಾಡಿದೆ.

ಯೋಜಿತ ದಾಳಿ:

‘ಅಣ್ವಸ್ತ್ರ ಪ್ರಯೋಗ ನಿಲ್ಲಿಸಿ’ ಹಾಗೂ ‘ಖಮೇನಿ ನಾಯಕತ್ವ ಬದಲಾವಣೆ ಆಗಲಿ’ ಎಂಬ ತಮ್ಮ 2 ಬೇಡಿಕೆಗಳಿಗೆ ಮನ್ನಣೆ ನೀಡದ ಇರಾನ್‌ಗೆ ಪಾಠ ಕಲಿಸುವ ನಿಟ್ಟಿನಲ್ಲಿ ಇಸ್ರೇಲ್ ಜೊತೆಗೂಡಿ ಅಮೆರಿಕ ಯೋಜಿತ ದಾಳಿ ಆರಂಭಿಸಿದೆ. ‘ಆಪರೇಷನ್‌ ರೋರಿಂಗ್ ಲಯನ್‌’ ಹೆಸರಲ್ಲಿ ಇಸ್ರೇಲ್ ಮತ್ತು ‘ಆಪರೇಷನ್‌ ಎಪಿಕ್‌ ಫ್ಯೂರಿ’ ಹೆಸರಲ್ಲಿ ಅಮೆರಿಕ ಸೇನೆಗಳು, ಇರಾನ್‌ ರಾಜಧಾನಿ ಟೆಹ್ರಾನ್‌ ಸೇರಿ 500ಕ್ಕೂ ಹೆಚ್ಚು ಕಡೆ ಭಾರೀ ಕ್ಷಿಪಣಿ ದಾಳಿ ನಡೆಸಿವೆ.

ಟಾರ್ಗೆಟ್‌ ಖಮೇನಿ:

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಕಚೇರಿ, ಮನೆ, ಮಿಲಿಟರಿ ನೆಲೆಗಳು, ಅಣ್ವಸ್ತ್ರ ಕೇಂದ್ರಗಳನ್ನು ಗುರಿಯಾಗಿಸಿರಿಕೊಂಡು ಟೆಹ್ರಾನ್‌, ಇಸ್ಫಹಾನ್‌, ಕೋಮ್‌, ಕರ್ಮನಶಾಹ, ಕಾರಜ್‌ ಸೇರಿ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ದಕ್ಷಿಣ ಇರಾನ್‌ನ ಮಿನಾಬ್‌ ಪ್ರದೇಶದ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ಮೇಲೆ ದಾಳಿ ಮಾಡಿದಾಗ ಮಕ್ಕಳು ಸೇರಿ 85 ಜನ ಮೃತಪಟ್ಟಿದ್ದಾರೆ. ಇದೂ ಸೇರಿ 201 ಜನ ಇರಾನ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಖಮೇನಿ ಮನೆ ಮೇಲೆ ದಾಳಿ ನಡೆದಾಗ ಅವರು ಸ್ಥಳದಲ್ಲಿದ್ದರೆ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಖಮೇನಿ ಅಳಿಯ ಹಾಗೂ ಸೊಸೆ ಸಾವನ್ನಪ್ಪಿದ್ದಾರೆ ಎಂದು ಇರಾನಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟಾರ್ಗೆಟ್‌ ಗಲ್ಫ್‌, ಅಮೆರಿಕ ಸೇನಾನೆಲೆ:

ಇದಾದ ನಂತರ ಬೆದರಿಕೆಗೆ ಬಗ್ಗದ ಇರಾನ್‌, 7 ಗಲ್ಫ್ ದೇಶಗಳಲ್ಲಿ ಅಮೆರಿಕದ ಸೇನಾನೆಲೆಗಳನ್ನು ಟಾರ್ಗೆಟ್‌ ಮಾಡಿಕೊಂಡು ಭಾರಿ ಕ್ಷಿಪಣಿ ದಾಳಿ ನಡೆದಿವೆ.

ಇಸ್ರೇಲ್‌ನ ಹಲವೆಡೆ ಸರಣಿ ದಾಳಿ ನಡೆಸಿರುವ ಇರಾನ್‌ ಸೇನೆ, ಇದರ ಜತೆಗೆ ಯುಎಇ, ಸೌದಿ ಅರೇಬಿಯಾ, ಕತಾರ್‌, ಜೋರ್ಡಾನ್‌, ಕುವೈತ್‌, ಬಹ್ರೈನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಹಾರಿಸಿಬಿಟ್ಟಿದೆ. ಈ ವೇಳೆ ದುಬೈನಲ್ಲಿ ಏಷ್ಯಾ ಮೂಲದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದಾದ ನಂತರ ’ಇದು ಆರಂಭ ಮಾತ್ರ. ಗುಜರಿ ಕ್ಷಿಪಣಿ ಬಳಸಿದ್ದೇವೆ. ನೈಜ ದಾಳಿ ಬಾಕಿ ಇದೆ’ ಎಂದಿದೆ. ಹೀಗಾಗಿ ಸಮರ ಇಷ್ಟಕ್ಕೇ ನಿಲ್ಲದು. ದೀರ್ಘ ಕಾಲೀನ ಆಗಬಹುದು ಎಂಬ ಆತಂಕ ಹೆಚ್ಚಿದೆ.

ಆದರೆ ನಮ್ಮ ನೆಲೆಗಳಿಗೆ ಹೆಚ್ಚು ಹಾನಿಯಾಗಿಲ್ಲ. ಯಾರೂ ಸಾವನ್ನಪ್ಪಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *