Headlines

ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ಫೆ.22ರಂದು ಬಿಜೆಪಿಗೆ ಸೇರ್ಪಡೆ-ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಶಾಕ್‌ | Former Congress State President To Join Bjp On Feb 22

: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ಸೋಮವಾರವಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಅಸ್ಸಾಂ ಕಾಂಗ್ರೆಸ್‌ ಘಟಕದ ಮಾಜಿ ರಾಜ್ಯಾಧ್ಯಕ್ಷ ಭೂಪೇನ್‌ ಬೊಹ್ರಾ, ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಗುವಾಹಟಿ: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ಸೋಮವಾರವಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಅಸ್ಸಾಂ ಕಾಂಗ್ರೆಸ್‌ ಘಟಕದ ಮಾಜಿ ರಾಜ್ಯಾಧ್ಯಕ್ಷ ಭೂಪೇನ್‌ ಬೊಹ್ರಾ, ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಮಂಗಳವಾರ ಬೊಹ್ರಾ ಅವರನ್ನು ಭೇಟಿ ಮಾಡಿ ಅಸ್ಸಾಂ ಮುಖ್ಯಮಂತ್ರಿ ಮಾತುಕತೆ 

ಮಂಗಳವಾರ ಇಲ್ಲಿ ಬೊಹ್ರಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ವಿಷಯ ಪ್ರಕಟಿಸಿದ್ದಾರೆ. ‘ಬೊಹ್ರಾ ಕಾಂಗ್ರೆಸ್‌ನಲ್ಲಿದ್ದು ಹಲವು ವರ್ಷಗಳಿಂದ ನಲುಗಿ ಹೋಗಿದ್ದಾರೆ. ಹೀಗಾಗಿ ಫೆ.22ರಂದು ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಪಕ್ಷದಲ್ಲಿ ಅವರು ಬಯಸಿದ ಸ್ಥಾನ ನೀಡಲಾಗುವುದು. ಅವರ ಸೇರ್ಪಡೆ, ಕಾಂಗ್ರೆಸ್‌ ಹಿಂದೂಗಳ ಇರುವ ಸ್ಥಳವಲ್ಲ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಹೇಳಿದ್ದಾರೆ.

ಗೌರವ್‌ ಗೊಗೋಯ್ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆ

ಪಕ್ಷದ ಹಾಲಿ ರಾಜ್ಯಾಧ್ಷಕ್ಷ ಗೌರವ್‌ ಗೊಗೋಯ್ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಬೊಹ್ರಾ ಪಕ್ಷ ತೊರೆದಿದ್ದಾರೆ. ವಿಶೇಷವೆಂದರೆ 2014ರಲ್ಲಿ ಹಿಮಂತಾ ಕೂಡಾ ಅಂದಿನ ಕಾಂಗ್ರೆಸ್‌ ಮುಖ್ಯಮಂತ್ರಿ, ಗೌರವ್‌ರ ತಂದೆ ತರುಣ್‌ ಗೊಗೋಯ್‌ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಪಕ್ಷ ತೊರೆದಿದ್ದರು.

Source link

Leave a Reply

Your email address will not be published. Required fields are marked *