ಬ್ಯಾಚುಲರ್‌ಗಳಿಗೆ ಶಾಕ್! ನಿಯಮ ಉಲ್ಲಂಘಿಸಿದ 10 ಕಟ್ಟಡಗಳ ಕರೆಂಟ್ ಕಟ್ ಮಾಡಿದ ಕುವೈತ್ | Kuwait Authorities Cut Power To 10 Buildings In Bachelor Housing Crackdown

ಕುವೈತ್‌ನಲ್ಲಿ ಬ್ಯಾಚುಲರ್‌ಗಳು ವಾಸಿಸುವ ಮನೆಗಳ ಮೇಲೆ ಮುನ್ಸಿಪಾಲಿಟಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದ 10 ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂಜಿನಿಯರಿಂಗ್ ಆಡಿಟ್ ಮತ್ತು ಫಾಲೋ-ಅಪ್ ವಿಭಾಗ ಈ ಕಾರ್ಯಾಚರಣೆ ನಡೆಸಿದೆ.

ಕುವೈತ್ ಸಿಟಿ (ಫೆ.4): ಫ್ಯಾಮಿಲಿಗಳು ವಾಸಿಸುವ ಏರಿಯಾಗಳಲ್ಲಿ ಬ್ಯಾಚುಲರ್‌ಗಳಿಗೆ ಮನೆ ಬಾಡಿಗೆ ಕೊಟ್ಟಿದ್ದಕ್ಕೆ ಕುವೈತ್ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಫರ್ವಾನಿಯಾ ಗವರ್ನರೇಟ್‌ನ ರಬಿಯಾ, ಫಿರ್ದೌಸ್ ಮತ್ತು ಒಮಾರಿಯಾ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿದ್ದ 10 ಕಟ್ಟಡಗಳ ಕರೆಂಟ್ ಸಂಪರ್ಕವನ್ನು ಕಟ್ ಮಾಡಿದ್ದಾರೆ.

ಕುವೈತ್ ಮುನ್ಸಿಪಾಲಿಟಿಯ ಇಂಜಿನಿಯರಿಂಗ್ ಆಡಿಟ್ ಮತ್ತು ಫಾಲೋ-ಅಪ್ ವಿಭಾಗ ಈ ದಾಳಿ ನಡೆಸಿದೆ. ಈ ಕಟ್ಟಡಗಳ ಮಾಲೀಕರಿಗೆ ಈ ಮೊದಲೇ 47 ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ಮುನ್ಸಿಪಾಲಿಟಿ ತಿಳಿಸಿದೆ. ಆದರೆ, ಈ ಎಚ್ಚರಿಕೆಗಳನ್ನು ಮಾಲೀಕರು ಕಡೆಗಣಿಸಿದ್ದರು. ಹೀಗಾಗಿ, ಸಂಬಂಧಪಟ್ಟ ಇತರೆ ಇಲಾಖೆಗಳ ಸಹಕಾರದೊಂದಿಗೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಹ ಕಠಿಣ ಕ್ರಮ ಕೈಗೊಂಡಿದ್ದಾರೆ.

ಕುಟುಂಬಗಳು ವಾಸಿಸುವ ಪ್ರದೇಶಗಳಲ್ಲಿ ಬ್ಯಾಚುಲರ್‌ಗಳು ಇರುವುದನ್ನು ತಡೆಯುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲೂ ಈ ತಪಾಸಣೆ ಮುಂದುವರಿಯಲಿದೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Source link

Leave a Reply

Your email address will not be published. Required fields are marked *