Headlines

ಕರ್ನಾಟಕದಲ್ಲಿ ಧುರಂಧರ್​​​-2 ಹಗಲು ದರೋಡೆ; ಯುಗಾದಿ ಗಿಫ್ಟ್​ ಜೇಬು ಕಾಲಿ ಮಾಡೋದು ಫಿಕ್ಸ್!

ಕರ್ನಾಟಕದಲ್ಲಿ ಧುರಂಧರ್​​​-2 ಹಗಲು ದರೋಡೆ; ಯುಗಾದಿ ಗಿಫ್ಟ್​ ಜೇಬು ಕಾಲಿ ಮಾಡೋದು ಫಿಕ್ಸ್!

ಕರ್ನಾಟಕದಲ್ಲಿ ಧುರಂಧರ್​​​-2 ಹಗಲು ದರೋಡೆ; ಯುಗಾದಿ ಗಿಫ್ಟ್​ ಜೇಬು ಕಾಲಿ ಮಾಡೋದು ಫಿಕ್ಸ್!

ಯುಗಾದಿ ಹಬ್ಬ ಹತ್ತಿರದಲ್ಲೇ ಇದೆ. ಮಾರ್ಚ್​ 19ಕ್ಕೆ ಯುಗಾದಿ ಫೆಸ್ಟಿವೆಲ್ ಇದೆ. ಅದೇ ದಿನ ಭಾರತೀಯ ಚಿತ್ರರಂಗದ ಬಹು ದೊಡ್ಡ ಸಿನಿಮಾ ಧುರಂಧರ್ ತೆರೆ ಕಾಣುತ್ತಿದೆ. ಆದ್ರೆ ಅಷ್ಟರಲ್ಲಾಗಲ್ಲೇ ದುರಂಧರ್​-2 ಕರ್ನಾಟಕವನ್ನ ಕೊಳ್ಳೆ ಹೊಡೆಯುತ್ತಿದೆ. ಯಾಕಂದ್ರೆ ನಮ್ಮ ನಾಡಿದಲ್ಲಿ ಹಿಂದಿಯ ದುರಂಧರ್​​-2 ಟಿಕೆಟ್ ರೇಟು ಡಬಲ್ ಆಗಿದೆ..

ಬಿಸಿಲು ಹೀಟು ಧುರಂದರ್-2ಗೆ ಸಖತ್ ರೇಟು..!

ರಾಕಿಂಗ್ ಸ್ಟಾರ್ ಯಶ್​ ಆ ಒಂದು ನಿರ್ಧಾರ ಈಗ ಕರ್ನಾಟಕ ಬಾಕ್ಸಾಫೀಸ್​​ನಲ್ಲಿ ಧುರಂದರ್​​ ದುರಾಡಳಿಯ ನಡೆಯೋ ಹಾಗೆ ಮಾಡಿದೆ. ಮಾರ್ಚ್​ 19ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲ್ಲ ಅಂತ ಯಶ್ ಅನೌನ್ಸ್ ಮಾಡಿದ್ದೇ ತಡ. ಅದೇ ದಿನ ಬಿಡುಗಡೆಗೆ ಸಿದ್ಧವಾಗಿದ್ದ ಹಿಂದಿಯ ದುರಂಧರ್​ ಮೂವಿ ಕರ್ನಾಟಕ ಬಾಕ್ಸಾಫೀಸ್​​ಅನ್ನ ಭದ್ರ ಮಾಡಿಕೊಳ್ತು. ಏನೇ ಆಗ್ಲಿ ಈ ಭಾರಿ ಎಷ್ಟು ಸಾಧ್ಯವೋ ಅಷ್ಟು ಕೊಳ್ಳೆ ಹೊಡೆದೇ ಬಿಡೋಣ ಅಂತ ಡಿಸೈಡ್ ಆಯ್ತು. ಇದರ ಪ್ರಭಾವ ಕರ್ನಾಟಕದಲ್ಲಿ ದುರಂಧರ್​ ಸಿನಿಮಾ ಟಿಕೆಟ್​ ರೇಟು ಡಬಲ್ ಆಗಿದೆ.

ಧುರಂಧರ್-2 ಟಿಕೆಟ್ ಬೆಲೆ ಮನಸ್ಸೋಯಿಚ್ಚೆ ಏರಿಕೆ

ಯೆಸ್, ಮಧ್ಯಪ್ರಾಚ್ಯ ಯುದ್ಧದಿಂದ ಎಲ್ಲದರ ಬೆಲೆ ಗಗನಕ್ಕೇರಿದೆ. ಇದೇ ಟೈಮ್​ನಲ್ಲಿ ಹಿಂದಿಯ ದುರಂಧರ್​-2 ಸಿನಿಮಾ ಕರ್ನಾಟಕ ಬಾಕ್ಸಾಫೀಸ್​ಅನ್ನ ಇಲ್ಲಿನ ಸಿನಿಮಾ ಪ್ರೇಕ್ಷಕರ ಜೇಬು ಕಾಲಿ ಮಾಡುತ್ತಿದೆ. ಕರ್ನಾಟಕದಲ್ಲಿ ದುರಂಧರ್​-2 ಟಿಕೆಟ್​ ದರ ಒಂದು ಸಾವಿರಕ್ಕೆ ಏರಿದೆ.

ಧುರುಂಧರ್​​​​ ಪೈಯ್ಡ್​ ಪ್ರೀಮಿಯರ್ ಶೋಗೆ ಒಂದು ಸಾವಿರದೊಂದ ಒಂದೂವರೆ ಸಾವಿರದ ವರೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ನಾರ್ಮಲ್ ಟಿಕೆಟ್ ದರ 500 ರು ಇದೆ. ಆದ್ರೆ ಅದೇ ಮುಂಬೈನಲ್ಲಿ ದುರಂಧರ್​ ಟಿಕೆಟ್ ದರ 1000 ದಾಟಿಲ್ಲ. ಚನ್ನೈನಲ್ಲಿ 500 ರೂ ಮುಟ್ಟಿಲ್ಲ. ಆದ್ರೆ ಕರ್ನಾಟಕದಲ್ಲಿ ಮಾತ್ರ ಮನಸೋ ಇಚ್ಚೆ ಟಿಕೆಟ್​ ದರ ಏರಿಸಿ ನಮ್ಮವರ ಜೇಬಿಕೇ ಕತ್ತರಿ ಹಾಕಲಾಗ್ತಿದೆ.

Source link

Leave a Reply

Your email address will not be published. Required fields are marked *