
ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ದರ್ಶನ್ ಇಪ್ಪತ್ನಾಲ್ಕು ಇಂಚಿನ ಟಿವಿ ಕೊಟ್ಟಿದ್ದಕ್ಕೆ ಸಲಾಂ ಹೊಡೆಯೋ ಸ್ಥಿತಿ ಬಂದಿದೆ. ಒಂದೊಂತ್ತಿನ ಊಟಕ್ಕೆ ಕೈ ಮುಗಿದು ಕೇಳುವ ಸ್ಥಿತಿ ಬಂದಿದೆ. ಕೋಟಿ ಕೋಟಿ ಅಭಿಮಾನಿಗಳ ಒಡೆಯ ಜೈಲಿನಲ್ಲಿ ಬರಿಗೈ ದಾಸನಾಗಿ, ಊಟ-ಉಪ್ಪಿನಕಾಯಿ ಬೇಡವಂತಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳು ಸೆಷೆನ್ಸ್ ಕೋರ್ಟ್ವಿಚಾರಣೆಗೆ ಸೋಮವಾರ ಹಾಜರಾಗಿದ್ದು, ದರ್ಶನ್ (Darshan Thoogudeepa) ಅಂಡ್ ಗ್ಯಾಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾದೀಶರ ಎದುರು ವಿಚಾರಣೆ ಎದುರಿಸಿದೆ. ಅದ್ರಲ್ಲೂ ದರ್ಶನ್ ಖುದ್ದು ನ್ಯಾಯಾದೀಶರ ಮುಂದೆ ತನ್ನ ಅಳಲನ್ನ ತೋಡಿಕೊಂಡಿದ್ದು, ಅದನ್ನ ಕೇಳಿದ್ರೆ ಸದ್ಯ ದರ್ಶನ್ ಸ್ಥಿತಿ ಹೇಗಿದೆ ಅನ್ನೋದು ನಿಮ್ಮ ಅರಿವಿಗೆ ಬರುತ್ತೆ.
TV ಕೊಟ್ಟಿದ್ದಕ್ಕೆ ಧನ್ಯವಾದ.. ಒಂದೊತ್ತಿನ ಊಟಕ್ಕೂ ಪರದಾಟ..!
ಹೌದು, ಸೋಮವಾರ ದರ್ಶನ್ ಅಂಡ್ ಗ್ಯಾಂಗ್ ಕೋರ್ಟ್ ವಿಚಾರಣೆಗೆ ಹಾಜರಾಗಿದೆ. ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ಮತ್ತು ಇತತರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆ ಎದುರಿಸಿದ್ದಾರೆ. ಖುದ್ದು ದರ್ಶನ್‌ಗೆ ನ್ಯಾಯಾದೀಶರ ಎದುರು ಮಾತನಾಡೋ ಅವಕಾಶ ಸಿಕ್ಕಿದೆ. ಸಿಕ್ಕ ಅವಕಾಶ ಬಳಿಸಿಕೊಂಡು ದರ್ಶನ್ ನ್ಯಾಯಾದೀಶರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೊದಲನೇಯದ್ದಾಗಿ ದರ್ಶನ್ ಬ್ಯಾರಕ್ಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಟಿವಿ ಅಳವಡಿಸಲಾಗಿತ್ತು. ಮೊದಲು ದರ್ಶನ್ ಸೆಲ್ಗೆ ಟಿವಿ ಕೊಡೋದಕ್ಕೆ ಜೈಲು ಅಧಿಕಾರಿಗಳು ಒಪ್ಪಿರಲಿಲ್ಲ. ಆಧ್ರೆ ಕೋರ್ಟ್ ಟಿವಿ ಕೊಡಿ ಅಂತ ಆದೇಶ ಕೊಟ್ಟ ಮೇಲೆ ದಾಸನ ಸೆಲ್ಗೆ ಟಿವಿ ಬಂದಿತ್ತು. ಸಮಯ ಕಳೆಯೋದಕ್ಕೆ ಏನೊಂದು ಉಪಕರಣವೂ ಇರದೇ ಪರದಾಡಿದ್ದ ಡಿ ಗ್ಯಾಂಗ್ಗೆ ಟಿವಿ ಬಂದಿದ್ದು ಜೀವ ಬಂದಂತೆ ಆಗಿತ್ತು. ಅಂತೆಯೇ ದರ್ಶನ್ ಟಿವಿ ಕೊಡಿಸಿದ್ದ ನ್ಯಾಯಾದೀಶರಿಗೆ ಧನ್ಯವಾದ ಹೇಳಿದ್ದಾರೆ.
ದರ್ಶನ್ : ಟಿವಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸ್ವಾಮಿ
ನ್ಯಾಯಾದೀಶರು : ಥ್ಯಾಂಕ್ಸ್ ಹೇಳಬಾರದು ನಮ್ಮ ಕೆಲಸ ಮಾತ್ರ ನಾವು ಮಾಡಿದ್ದೇವೆ.. ಥ್ಯಾಂಕ್ಸ್ ಹೇಳುವ ಅಗತ್ಯವಿಲ್ಲ.
ದರ್ಶನ್ : ನಮ್ಮ ಕುಟುಂದವರು ಭೇಟಿಗೆ ಬಂದಾಗ ಒಳಗೆ ಬಿಡಲು ಅನುಮತಿ ಕೊಡಿಸಿ ಸ್ವಾಮಿ. ಮಂಗಳವಾರ ಮತ್ತು ಗುರುವಾರ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡ್ತಾರೆ. ಕನಿಷ್ಟ ಒಂದು ದಿನವಾದರೂ ಒಳ ಸಂದರ್ಶನಕ್ಕೆ ಅವಕಾಶ ಮಾಡಿಕೊಡಿ.
ದರ್ಶನ್ : ಕೋರ್ಟ್ ಗೆ ನೇರವಾಗಿ ಹಾಜರಾಗೋದಕ್ಕೂ ಅವಕಾಶ ಮಾಡಿಕೊಡಿ. ಯಾಕಂದ್ರೆ ಜೈಲಿನಲ್ಲಿ ಕೊಡುವ ಊಟ ಸರಿ ಇರೋದಿಲ್ಲ. ಕೊನೆ ಪಕ್ಷ ಒಂದು ದಿನ ಕೋರ್ಟ್ಗೆ ಬಂದಾಗಲಾದರೂ ಮನೆಯೂಟ ತಿನ್ನುವ ಅವಕಾಶ ಸಿಕ್ಕುತ್ತೆ.
ನ್ಯಾಯಾದೀಶರು : ಖುದ್ದು ಹಾಜರಿ ಮನವಿ ಸಂಬಂಧ ಅರ್ಜಿ ಸಲ್ಲಿಸಿ. ನೋಡೋಣ.
ಇಂಥದ್ದೊಂದು ಮಾತುಕತೆ ಕೋರ್ಟ್ನಲ್ಲಿ ದರ್ಶನ್ ಮತ್ತು ನ್ಯಾಯಾದೀಶರ ನಡುವೆ ನಡೆದಿದೆ. ಮನೆಯಿಂದ ಭೇಟಿಗೆ ಬಂದಾಗ ಅವರನ್ನ ಒಳಗೆ ಬಿಡೋದಿಲ್ಲ. ಅವರು ಪಂಜರದ ಹೊರಗೆ ನಾನು ಪಂಜರದ ಒಳಗೆ ಇರ್ತಿನಿ. ವಾರದಲ್ಲಿ ಎರಡು ದಿನ ಕುಟುಂಬದವರ ಭೇಟಿಗೆ ಅವಕಾಶ ಇದೆ. ಆದ್ರೆ ಒಂದು ದಿನವಾದ್ರೂ ಒಳಗಡೆ ಬಂದು ಅವರು ಭೇಟಿ ಮಾಡುವಂತೆ ಅವಕಾಶ ಮಾಡಿಕೊಡಿ ಅಂತ ದರ್ಶನ್ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ನೀವು ಅದೆಷ್ಟೋ ಸಿನಿಮಾಗಳಲ್ಲಿ ಕೈದಿಗಳ ಭೇಟಿಗೆ ಕುಟುಂಬದರು ಹೋಗುವ ದೃಶ್ಯಗಳನ್ನ ನೋಡಿರಬಹುದು. ಸದ್ಯ ದರ್ಶನ್ನ ಭೇಟಿಗೆ ಜೈಲಿಗೆ ಹೋಗುವವರಿಗೂ ಅಂಥದ್ದೇ ಸ್ಥಿತಿ ಇರುತ್ತೆ. ಕಟಾಂಜನದ ಒಳಗೆ ದರ್ಶನ್ ನಿಂತಿದ್ರೆ, ಅದರ ಹೊರಗೆ ನಿಂತು ಭೇಟಿಗೆ ಬಂದವರು ಮಾತನಾಡಬೇಕು. ಇದರ ಬದಲು ಜೈಲರ್ ಕೋಣೆಯೊಳಗೆ ಕೂತು ಕುಟುಂಬದವರ ಜೊತೆ ಮಾತನಾಡೋ ಅವಕಾಶ ಕೊಡಿ ಅಂತ ದರ್ಶನ್ ಮನವಿ ಸಲ್ಲಿಸಿದ್ದಾರೆ.
ನೇರವಾಗಿ ಕೋರ್ಟ್ಗೆ ಬರ್ತಿನಿ ದಾಸನ ಹಠ
ಹೌದು ಜೈಲಿನಿಂದಂಲೇ ವಿಡಿಯೋ ಕಾನ್ಫ್ರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ್ರೆ ಜೈಲೂಟವನ್ನೇ ತಿನ್ನಬೇಕು. ಅದೇ ನೇರ ಕೋರ್ಟ್ಗೆ ಹೋದ ದಿನ ಕೊನೆ ಪಕ್ಷ ಒಂದೊತ್ತು ಮನೆಯೂಟ ಸಿಕ್ಕುತ್ತೆ. ಅದಕ್ಕಾಗಿ ನೇರವಾಗಿ ಕೋರ್ಟ್ಗೆ ಬರ್ತಿನಿ ಅವಕಾಶ ಕೊಡಿ ಸ್ವಾಮಿ ಅಂತ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.
ಅಲ್ಲಿಗೆ ದರ್ಶನ್ ಒಂದೊತ್ತು ಮನೆಯೂಟ ಸಿಕ್ರೂ ಅದೇ ಪರಮಾನ್ನ ಅಂತ ಪರದಾಡೋ ಸ್ಥಿತಿ ಬಂದಿದೆ. ಆಹಾರಪ್ರಿಯನಾದ ದರ್ಶನ್ ದಿನವೂ ವೆರೈಟಿ ವೆರೈಟಿ ಬಾಡೂಡ ತಿಂದುಕೊಂಡಿದ್ದವರು. ಆದ್ರೆ ಈಗ ಮನೆಯಿಂದ ಊಟ-ಉಪ್ಪಿನಕಾಯಿ ದಯಪಾಲಿಸಿ ಅಂತ ಬೇಡಿಕೊಳ್ಳೋ ಸ್ಥಿತಿ ಬಂದಿದೆ.
ಡೇ ಟು ಡೇ ಬೇಸಿಸ್ ವಿಚಾರಣೆ.. ಜೈಲಲ್ಲಿ ದಾಸ ದಿನಗಣನೆ
ದರ್ಶನ್ ಪರ ವಕೀಲರು ಈ ಕೊಲೆ ಕೇಸ್ ವಿಚಾರಣೆಯನ್ನ ತ್ವರಿತಗತಿಯಲ್ಲಿ ನಡೆಸಿ… ಸಾಧ್ಯವಾದ್ರೆ ಡೇ ಟು ಡೇ ಬೇಸಿಸ್ ಅಂದ್ರೆ ಪ್ರತಿದಿನವೂ ಟ್ರಯಲ್ ನಡೆಸಿ ಅಂತ ಮನವಿ ಸಲ್ಲಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ನಡೀತಾ ಇದೆ. ಇದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ. ಯಾಕಂದ್ರೆ ಈ ಕೇಸ್ನಲ್ಲಿ ಬರೊಬ್ಬರಿ 272 ಸಾಕ್ಷಿಗಳಿವೆ.
ಕಳೆದೊಂದು ತಿಂಗಳಿಂದ ಕೇವಲ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆದಿದೆ. ಇದೇ ಸ್ಪೀಡ್ನಲ್ಲಿ ಹೋದ್ರೆ ಕನಿಷ್ಟ 2-3 ವರ್ಷ ಬರೀ ಸಾಕ್ಷಿಗಳ ವಿಚಾರಣೆಯೇ ನಡೆಯುತ್ತೆ. ಸಾಕ್ಷಿಗಳ ವಿಚಾರಣೆ ಕಂಪ್ಲೀಟ್ ಆಗೋ ತನಕ ಬೇಲ್ಗೆ ಅಪ್ಲೈ ಮಾಡೋಕಾಗಲ್ಲ. ಸೋ ದರ್ಶನ್ ಅಕ್ಷರಶಃ ಜೈಲಿನಲ್ಲಿ ದಿನಗಣನೆ ಮಾಡುವಂತೆ ಆಗಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ದರ್ಶನ್ ಬೇಲ್ ರದ್ದಾಗಿತ್ತು. ಅದಾದ ಬಳಿಕ ಪವಿತ್ರಾ ಗೌಡ ಎರಡು ಬಾರಿ ಬೇಲ್ಗೆ ಅರ್ಜಿ ಸಲ್ಲಿಸಿದ್ರು. ಆದ್ರೆ ಅದು ರಿಜೆಕ್ಟ್ ಆಗಿತ್ತು. ಸೋ ದರ್ಶನ್ ಬೇಲ್ಗೆ ಅರ್ಜಿ ಸಲ್ಲಿಸೋ ಸಾಹಸಕ್ಕೆ ಕೈ ಹಾಕಿಲ್ಲ. ವಕೀಲರ ಸಲಹೆಯಂತೆ ಸಾಕ್ಷಿಗಳ ವಿಚಾರಣೆ ಮುಗಿಯೋ ತನಕ ಕಾಯೋಣ ಅಂತ ಸುಮ್ಮನಿದ್ದಾರೆ. ಆದ್ರೆ ಅದೆಷ್ಟು ಕಾಲವಾಗುತ್ತೋ ಗೊತ್ತಿಲ್ಲ..!
ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ದರ್ಶನ್ ಇಪ್ಪತ್ನಾಲ್ಕು ಇಂಚಿನ ಟಿವಿ ಕೊಟ್ಟಿದ್ದಕ್ಕೆ ಸಲಾಂ ಹೊಡೆಯೋ ಸ್ಥಿತಿ ಬಂದಿದೆ. ಒಂದೊಂತ್ತಿನ ಊಟಕ್ಕೆ ಕೈ ಮುಗಿದು ಕೇಳುವ ಸ್ಥಿತಿ ಬಂದಿದೆ. ಕೋಟಿ ಕೋಟಿ ಅಭಿಮಾನಿಗಳ ಒಡೆಯ ಜೈಲಿನಲ್ಲಿ ಬರಿಗೈ ದಾಸನಂತೆ ನಿಂತುಕೊಂಡು ಊಟ ಉಪ್ಪಿನಕಾಯಿಗೆ ಬೇಡುವ ಸ್ಥಿತಿ ಬಂದುಬಿಟ್ಟಿದೆ. ಇದನ್ನ ನೋಡಿದ್ರೆ ದರ್ಶನ್ನ ದುರಂತ ನಾಯಕ ಅನ್ನದೇ ವಿಧಿಯಿಲ್ಲ..!
ಹೆಚ್ಚಿನ ಮಾಹಿತಿಗೆ ‘ಸಿನಿಮಾ ಹಂಗಾಮ’ ನೋಡಿ..