
ಮದುವೆ ರದ್ದುಗೊಂಡಿದ್ದಕ್ಕೆ ಕೋಪಗೊಂಡ 24 ವರ್ಷದ ಯುವಕ, ತನ್ನ ಎಚ್‌ಐವಿ ಸೋಂಕಿತ ರಕ್ತವನ್ನು 24 ವರ್ಷದ ಯುವತಿಗೆ ಸಿರಿಂಜ್ ಮೂಲಕ ಚುಚ್ಚಿದ್ದಾನೆ. ಬಾಲ್ಯದಿಂದಲೇ ಎಚ್‌ಐವಿ ಸೋಂಕಿತನಾಗಿದ್ದ ಈತನ ವಿಷಯ ತಿಳಿದು ಯುವತಿ ಮನೆಯವರು ಮದುವೆ ನಿರಾಕರಿಸಿದ್ದರು.
ಹೈದರಾಬಾದ್: ಐಟಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ವ್ಯಕ್ತಿಯೊಬ್ಬ, ಮದುವೆ ರದ್ದು ಮಾಡಿದ್ದಕ್ಕಾಗಿ 24 ವರ್ಷದ ಮಹಿಳೆಗೆ ತನ್ನ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿರುವ ಆಘಾತಕಾರಿ ಘಟನೆ ಇಲ್ಲಿ ಮೆಡ್‌ಚಾಲ್‌ನಲ್ಲಿ ವರದಿಯಾಗಿದೆ.
ಸಿರಿಂಜ್ ಮೂಲಕ ಮಹಿಳೆಗೆ ರಕ್ತ ಚುಚ್ಚಿದ ಆರೋಪಿ
ಆರೋಪಿಯ ಪೋಷಕರು ಎಚ್‌ಐವಿ ಸೋಂಕಿತರಾಗಿದ್ದು, ಈತನಿಗೂ ಬಾಲ್ಯದಿಂದಲೇ ಸೋಂಕು ತಗುಲಿತ್ತು. ಈ ವಿಷಯ ಇತ್ತೀಚೆಗೆ ಹುಡುಗಿಯ ಮನೆಯವರಿಗೆ ಗೊತ್ತಾಗಿ ಅವರು ಮದುವೆ ರದ್ದು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ, ಮಾ.11ರ ಸಂಜೆ 5ರ ವೇಳೆ ಮಹಿಳೆ ಫ್ಲಾಟ್‌ನಲ್ಲಿದ್ದಾಗ ನುಗ್ಗಿ ಕಿಸೆಯಿಂದ ಸಿರಿಂಜ್ ತೆಗೆದು ತನ್ನ ರಕ್ತವನ್ನು ಮಹಿಳೆಗೆ ಚುಚ್ಚಿದ್ದಾನೆ. ಮಾರನೆ ದಿನ ಮಹಿಳೆಗೆ ಜ್ವರ ಬಂದಿದೆ.
ಆರೋಪಿಯ ಬಂಧನ
ಈ ಬಗ್ಗೆ ಮಹಿಳೆ ಶುಕ್ರವಾರ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ರಾತ್ರಿ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ: ರಸ್ತೆ ಅಪಘಾತವೆಂದು ಬಿಂಬಿಸಲೆತ್ನಿಸಿದ್ದ ಆರೋಪಿಗಳು
ಇದನ್ನೂ ಓದಿ: ಗ್ರಾಮ ಪಂಚಾಯಿತಿ ನೀರುಗಂಟಿಯ ಡೆತ್‌ನೋಟ್‌ನಲ್ಲಿತ್ತು 11 ತಿಂಗಳ ಸಂಬಳದ ನೋವಿನ ಕಥೆ!