ನಿಮ್ಮ ಮನೆಗೆ ಗ್ಯಾಸ್‌ ತರುವ ಡೆಲಿವರಿ ಬಾಯ್‌ಗೆ ಪ್ರತಿ ಸಿಲಿಂಡರ್‌ ಮೇಲೆ ಎಷ್ಟು ರೂಪಾಯಿ ಸಿಗುತ್ತೆ? | Lpg Gas Cylinder Delivery Boy Commission Earnings Distributor Profit Details San

ನಿಮ್ಮ ಮನೆಗೆ ಗ್ಯಾಸ್‌ ತರುವ ಡೆಲಿವರಿ ಬಾಯ್‌ಗೆ ಪ್ರತಿ ಸಿಲಿಂಡರ್‌ ಮೇಲೆ ಎಷ್ಟು ರೂಪಾಯಿ ಸಿಗುತ್ತೆ? | Lpg Gas Cylinder Delivery Boy Commission Earnings Distributor Profit Details San



ನಿಮ್ಮ ಮನೆಗೆ ಗ್ಯಾಸ್‌ ತರುವ ಡೆಲಿವರಿ ಬಾಯ್‌ಗೆ ಪ್ರತಿ ಸಿಲಿಂಡರ್‌ ಮೇಲೆ ಎಷ್ಟು ರೂಪಾಯಿ ಸಿಗುತ್ತೆ? | Lpg Gas Cylinder Delivery Boy Commission Earnings Distributor Profit Details San

ಯುದ್ಧದಿಂದಾಗಿ ಮನೆಬಳಕೆಯ ಗ್ಯಾಸ್ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳು ಏರಿಕೆಯಾಗಿವೆ. ಇಂತಹ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ತಲುಪಿಸುವ ಡೆಲಿವರಿ ಬಾಯ್‌ಗೆ ಎಷ್ಟು ಕಮಿಷನ್ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ವಿವರ ಇಲ್ಲಿದೆ. 

ಬೆಂಗಳೂರು (ಮಾ.26): ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜೊತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿದೆ. ಗ್ಯಾಸ್ ಬುಕ್ ಮಾಡಿದರೂ ಹಲವು ದಿನಗಳವರೆಗೆ ಜನರಿಗೆ ಸಿಲಿಂಡರ್ ಸಿಗುತ್ತಿಲ್ಲ. ಕೆಲವು ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳ ಸಂತೆಯಲ್ಲಿ ಭಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಈ ಮಧ್ಯೆ, ನಿಮ್ಮ ಮನೆಬಾಗಿಲಿಗೆ ಗ್ಯಾಸ್ ಹೊತ್ತು ತರುವ ಡೆಲಿವರಿ ಬಾಯ್‌ಗೆ ಒಂದು ಸಿಲಿಂಡರ್ ಮೇಲೆ ಎಷ್ಟು ರೂಪಾಯಿ ಸಿಗುತ್ತದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಂಪನಿಗೆ ಸಿಗುವ ಕಮಿಷನ್ ಎಷ್ಟು?

ಮೊದಲಿಗೆ ಗ್ಯಾಸ್ ವಿತರಿಸುವ ಡಿಸ್ಟ್ರಿಬ್ಯೂಟರ್ ಕಂಪನಿಗೆ ಒಂದು ಸಿಲಿಂಡರ್ ಮೇಲೆ ಎಷ್ಟು ಲಾಭ ಸಿಗುತ್ತದೆ ಎಂದು ತಿಳಿಯೋಣ. ಮನೆಬಳಕೆಯ 14.2 ಕೆಜಿ ತೂಕದ ಸಿಲಿಂಡರ್ ಅನ್ನು ಹೋಮ್ ಡೆಲಿವರಿ ನೀಡಿದಾಗ ಡಿಸ್ಟ್ರಿಬ್ಯೂಟರ್ ಕಂಪನಿಗೆ 80 ರಿಂದ 88 ರೂಪಾಯಿ ಸಿಗುತ್ತದೆ. ಗೋದಾಮಿನ ನಿರ್ವಹಣೆ ಮತ್ತು ವಿತರಣಾ ವೆಚ್ಚವಾಗಿ ಈ ಮೊತ್ತವನ್ನು ಕಂಪನಿಗೆ ನೀಡಲಾಗುತ್ತದೆ. ಇನ್ನು ಹೋಟೆಲ್‌ಗಳಲ್ಲಿ ಬಳಸುವ ವಾಣಿಜ್ಯ (Commercial) ಸಿಲಿಂಡರ್ ವಿತರಣೆ ಮಾಡಿದರೆ ಡಿಸ್ಟ್ರಿಬ್ಯೂಟರ್‌ಗೆ 100 ರೂಪಾಯಿ ಕಮಿಷನ್ ಸಿಗುತ್ತದೆ.

ಗ್ಯಾಸ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು?

ಗ್ಯಾಸ್ ಸಿಲಿಂಡರ್ ತಲುಪಿಸುವ ವ್ಯಕ್ತಿಗೆ ಪ್ರತಿ ಸಿಲಿಂಡರ್ ಮೇಲೆ 20 ರಿಂದ 25 ರೂಪಾಯಿ ಕಮಿಷನ್ ಸಿಗುತ್ತದೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ ಸರಾಸರಿ 30 ಸಿಲಿಂಡರ್ ವಿತರಿಸಿದರೆ, ಆತನಿಗೆ ದಿನಕ್ಕೆ ಸುಮಾರು 600 ರಿಂದ 750 ರೂಪಾಯಿ ಆದಾಯ ಬರುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಆಗ ದಿನವೊಂದಕ್ಕೆ 50 ಸಿಲಿಂಡರ್ ತಲುಪಿಸಿದರೆ, ದಿನದ ಸಂಪಾದನೆ 1,000 ದಿಂದ 1,250 ರೂಪಾಯಿ ತಲುಪುತ್ತದೆ. ಅಂದರೆ ಒಬ್ಬ ಡೆಲಿವರಿ ಬಾಯ್ ತಿಂಗಳಿಗೆ ಸರಾಸರಿ 15,600 ರಿಂದ 19,500 ರೂಪಾಯಿ ಹಣವನ್ನು ಮನೆಮನೆಗೆ ಸಿಲಿಂಡರ್‌ ನೀಡಿಯೇ ಗಳಿಸಬಹುದು.

ತಿಂಗಳಿಗೆ 65,000 ಗಳಿಕೆಯೂ ಸಾಧ್ಯ!

ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ವಿತರಣೆ ಹೆಚ್ಚಾದಂತೆ ಅವರ ಆದಾಯ 32,000 ರೂಪಾಯಿ ವರೆಗೂ ಏರುತ್ತದೆ. ಇನ್ನು ಬೇಡಿಕೆ ವಿಪರೀತವಾಗಿದ್ದಾಗ ಕೆಲವು ಡೆಲಿವರಿ ಬಾಯ್‌ಗಳು ದಿನಕ್ಕೆ 100 ಸಿಲಿಂಡರ್‌ಗಳನ್ನು ಕೂಡ ತಲುಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ದೈನಂದಿನ ಆದಾಯ 2,500 ರೂಪಾಯಿ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಅವರು ತಿಂಗಳಿಗೆ ಗರಿಷ್ಠ 65,000 ರೂಪಾಯಿ ವರೆಗೂ ಸಂಪಾದನೆ ಮಾಡುವ ಸಾಧ್ಯತೆ ಇರುತ್ತದೆ.



Source link

Leave a Reply

Your email address will not be published. Required fields are marked *