ದೃಶ್ಯ ಸಿನಿಮಾ ಮೀರಿಸುವಂತೆ ಕಥೆ ಕಟ್ಟಿದ್ದ ಕಿರಾತಕ! ಹೆಂಡತಿಯನ್ನು ಬಡಿದು ಕೊಂದವ ಸಿಕ್ಕಿಬಿದ್ದಿದ್ದು ಹೇಗೆ? | Missing Wife Case Turns Murder Mystery In Vijayapura Husband Buries Body Inside His Own House Kvn

ದೃಶ್ಯ ಸಿನಿಮಾ ಮೀರಿಸುವಂತೆ ಕಥೆ ಕಟ್ಟಿದ್ದ ಕಿರಾತಕ! ಹೆಂಡತಿಯನ್ನು ಬಡಿದು ಕೊಂದವ ಸಿಕ್ಕಿಬಿದ್ದಿದ್ದು ಹೇಗೆ? | Missing Wife Case Turns Murder Mystery In Vijayapura Husband Buries Body Inside His Own House Kvn


ಪತ್ನಿ ಕಾಣೆಯಾಗಿದ್ದಾಳೆಂದು ಗಂಡನೇ ದೂರು ನೀಡಿದ್ದ. ಆದರೆ ಒಂದು ತಿಂಗಳ ನಂತರ, ಆ ನಾಪತ್ತೆ ಪ್ರಕರಣವು ಕೊಲೆ ರಹಸ್ಯವಾಗಿ ಬದಲಾಗಿದೆ. ದೃಶ್ಯ ಸಿನಿಮಾ ಮಾದರಿಯಲ್ಲಿ ಪತಿಯೇ ಪತ್ನಿಯನ್ನು ಕೊಂದು ಹೂತಿಟ್ಟಿದ್ದ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.

ಅದೊಂದು ಪುಟ್ಟ ಕುಟುಂಬ. ಗಂಡ ಹೆಂಡತಿ ಮತ್ತು ಮಗ. ಗಂಡ ಬಿಲ್ಡಿಂಗ್​​ ಕಾಂಟ್ರಾಕ್ಟರ್​​ ಆದ್ರೆ ಹೆಂಡತಿ ಮನೆಯಲ್ಲೇ ಇರುತ್ತಿದ್ದಳು. ಮಗ ಎಸ್​​.ಎಸ್​.ಎಲ್​.ಸಿ ಓದುತ್ತಿದ್ದ. ಸ್ಥಿತಿವಂತರೇ. ಹೊಸದಾಗಿ ಬಿಲ್ಡಿಂಗ್​​ ಕೂಡ ಕಟ್ಟಿಸುತ್ತಿದ್ರು. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಹೆಂಡತಿ ಮಾಯವಾಗಿಬಿಡ್ತಾಳೆ. ಗಂಡ ಎಷ್ಟೇ ಹುಡುಕಿದ್ರೂ ಸಿಗೋದಿಲ್ಲ. ನಾಲ್ಕು ದಿನ ಬಿಟ್ಟು ಪೊಲೀಸ್​​ ಠಾಣೆಗೆ ಹೋಗಿ ಮಿಸ್ಸಿಂಗ್​ ಕೇಸ್​​ ದಾಖಲಿಸಿದ. ಪೊಲೀಸರೂ ಕೂಡ ಅವಳಿಗಾಗಿ ಹುಡುಕಾಡಿದ್ರು. ಆದ್ರೆ ಇದೆಲ್ಲಾ ಆಗಿ ಒಂದು ತಿಂಗಳು ಕಳೆಯುತ್ತ ಬಂದಿದೆ. ಆದ್ರೆ ಈಗ ಆ ಮಿಸ್ಸಿಂಗ್​​ ಕೇಸ್‌ಗೆ ಟ್ವಿಸ್ಟ್​​ ಸಿಕ್ಕಿದೆ. ಆವತ್ತು ನಾಪತ್ತೆಯಾದವಳು ಹೆಣವಾಗಿ ಸಿಕ್ಕಿದ್ದಾಳೆ. ಅಷ್ಟಕ್ಕೂ ಆಕೆ ಎಲ್ಲಿಗೆ ಹೋಗಿದ್ಲು? ಆಕೆಯ ಮೃತದೇಹ ಸಿಕ್ಕಿದ್ದೆಲ್ಲಿ? ಒಂದು ಮರ್ಡರ್​​ ಹಿಂದಿನ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​​.ಐ.ಆರ್

ನಾವೆಲ್ಲಾ ದೃಶ್ಯ ಸಿನಿಮಾವನ್ನ ನೋಡಿದ್ದೇವೆ. ಅದೇ ರೀತಿಯ ಕ್ರೈಂಗಳನ್ನ ಆಡಿದ ಕ್ರಿಮಿನಲ್​ಗಳನ್ನೂ ನೋಡಿದ್ದೇವೆ. ನಂತರ ತಗ್ಲಾಕಿಕೊಂಡಿರೋ ಕಥೆಗಳನ್ನೂ ನೋಡಿದ್ದೇವ. ನಾವು ಇವತ್ತು ಇಂಥದ್ದೇ ಒಂದು ಕಥೆಯನ್ನ ಹೇಳೋದಕ್ಕೆ ಹೊರಟಿದ್ದೇವೆ. ಸೇಮ್‌ ಟು ಸೇಮ್‌ ದೃಶ್ಯ ಸಿನಿಮಾ ರೀತಿ ಹೋಲುವ ಈ ಮರ್ಡರ್‌ ಕಹಾನಿ ಯಾವುದೇ ಕ್ರೈಂ ಥ್ರಿಲ್ಲರ್‌ ಸಿನಿಮಾಗೆ ಕಮ್ಮಿಯಂತು ಇಲ್ಲ. ಕೊ*ಲೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪತಿರಾಯ ಆಡಿದ ನೌರಂಗಿ ಆಟಗಳು. ಹ*ತ್ಯೆ ಮಾಡಿ ಹೆಣ ಮುಚ್ಚಿಟ್ಟ ಸ್ಟೈಲ್‌ ಎಂಥವರನ್ನು ಬೆಚ್ಚಿ ಬೀಳೀಸುತ್ತೆ. ಆತ ಮಾಡಿದ ಕೊ*ಲೆಯ ದಿನದಿಂದ ಅರೆಸ್ಟ್‌ ಆಗೋ ದಿನದ ವರೆಗೂ ನಡೆದ ಒಂದೊಂದು ಘಟನೆಯೂ ರೋಚಕತೆಯಿಂದ ಕೂಡಿದೆ. ಅಷ್ಟಕ್ಕೂ ಈ ಕೊ*ಲೆ ನಡೆದ್ದದ್ದು ಎಲ್ಲಿ? ಇದ್ರ ಥ್ರಿಲ್ಲಿಂಗ್‌ ಕಹಾನಿ ಏನು ಅನ್ನೋದನ್ನ ನೋಡೋಕೆ ನಾವು ನೇರವಾಗಿ ವಿಜಯಪುರ ಜಿಲ್ಲೆಗೆ ಹೋಗಬೇಕು.

ವಿಜಯಪುರದ ಭೀಕರ ಮರ್ಡ*ರ್ ಕೇಸ್

ಇಡೀ ಕ್ರೈಂ ಕಹಾನಿಯ ಮೇನ್‌ ಕ್ಯಾರಕ್ಟರ್ ಪ್ರಭು ರತ್ನಾಕರ್‌ ವಯಸ್ಸು 44 ವರ್ಷ. ಇನ್ನು ಈತನ ಪತ್ನಿ ಸರೋಜಾ, ಈಕೆ ಪ್ರಭು ರತ್ನಾಕರ್‌ ನ ಏಕಮಾತ್ರ ಸುಂದರ ಹೆಂಡ್ತಿ! ಖುದ್ದು ಕಲಬುರ್ಗಿ ಜಿಲ್ಲೆಯ ಜೇವರ್ಗಿಯವ. ಆದ್ರೆ ಕೆಲ ವರ್ಷಗಳಿಂದ ಹೆಂಡ್ತಿ ಊರಾದ ಇದೆ ದೇವರಹಿಪ್ಪರಗಿಯಲ್ಲೆ ನೆಲೆಸಿದ್ದ. ಅದೇನು ಮಾಡಿ ಗಳಿಸಿದ್ನೋ ಗೊತ್ತಿಲ್ಲ. ದೇವರಹಿಪ್ಪರಗ ಪಟ್ಟಣದಲ್ಲಿ ನಿಂತು ನೋಡುವಂತ ಮೂರು ಅಂತಸ್ಥಿನ ಮನೆಯನ್ನ ಕಟ್ಟಿದ್ದ.

ಸುಂದರ ಪತ್ನಿಯನ್ನು ಕೊಂ*ದಿದ್ದೇಕೆ ಪ್ರಭು ರತ್ನಾಕರ?

ಇದೇ ಮನೆಯಲ್ಲಿ ಇಂಥಹ ಪಳಪಳ ಹೊಳೆಯೋ ಸುಂದರ ಹೆಂಡ್ತಿಯನ್ನ ರತ್ನಾಕರ ಬರ್ಬರವಾಗಿ ಕೊಂ*ದು, ಮನೆಯ ಕಂಪೌಂಡಿನಲ್ಲೆ ಹೂತು ಹಾಕಿ ಈಗ ದರ್ಗಾ ಜೈಲಿನಲ್ಲಿ ಕಡಕ್‌ ರೊಟ್ಟಿ ಕಾರಾಬ್ಯಾಳಿ ತಿನ್ತಿದ್ದಾನೆ. ಅಸಲಿ ಕಹಾನಿಗೆ ಬರೋದಾದ್ರೆ. ಕಳೆದ ತಿಂಗಳು 24 ರಂದು ಇದೆ ಪ್ರಭು ಕಟ್ಟಿಸಿರೋ ಮೂರು ಅಂತಸ್ಥಿನ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು.

ಜನವರಿ 24ರ ರಾತ್ರಿ 12 ಗಂಟೆ ಸುಮಾರಿಗೆ ಯಾವುದೋ ವಿಚಾರಕ್ಕೆ ಪ್ರಭು ರತ್ನಾಕರ್‌ ಹಾಗೂ ಸರೋಜಾ ನಡುವೆ ವಾದ ನಡೆದಿತ್ತು. ಗಂಡ ಹೆಂಡಿರ ನಡುವಿನ ವಾದವಿವಾದಗಳು ಮಾಮೂಲಿ. ಆದ್ರೆ ಅವತ್ತು ಅದೇನಾಯ್ತೋ ಗೊತ್ತಿಲ್ಲ ಪ್ರಭು-ಸರೋಜಾ ದಂಪತಿ ನಡುವಿನ ವಾದವಿವಾದ ಅಂತ್ಯವಾಗಿದ್ದೆ ಸರೋಜಾಳ ಭೀಕರ ಕೊ*ಲೆಯಲ್ಲಿ. ಮನೆಯಲ್ಲೆ ಇದ್ದ ಕಾರ ಕುಟ್ಟುವ ಹಾರಿಯಿಂದ, ಅಂದ್ರೆ ದಪ್ಪವಾದ ಕಬ್ಬಿಣದ ರಾಡ್‌ ನಿಂದ ಪ್ರಭು ಸರೋಜಾಳ ತಲೆಗೆ ಹೊಡೆದಿದ್ದ. ಮೂರ್ನಾಲ್ಕು ಬಾರಿ ಪೆಟ್ಟು ಬಿದ್ದ ಕಾರಣ ಸರೋಜಾ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಆದ್ರೆ ಕೊ*ಲೆ ವಿಚಾರ ಬಯಲಿಗೆ ಬರಬಾರದು ಅಂತಾ ಪ್ರಭೂ ಮಾಡಿದ್ದೆ ಒಬ್ಬ ಅಸಲಿ ಕ್ರಿಮಿನಲ್‌ ಪ್ರೋಪೆಶನಲ್‌ ಕಿಲ್ಲರ್‌ ಮಾಡೋ ರೀತಿಯ ಕೃತ್ಯವನ್ನ.

ದೃಶ್ಯ ಸಿನಿಮಾ ನೆನಪಿಸಿದ ಘಟನೆ

ಕೊಂ*ದವನು ಇಡೀ ಪ್ರಕರಣ ಮುಚ್ಚಿ ಹಾಕಲು ಹೆಂಡ್ತಿ ಶವವನ್ನ ಮನೆಯ ಕಂಪೌಂಡ್‌ ಬಳಿಯಲ್ಲೆ ಹೂತು ಹಾಕಿದ್ದ. 6 ಅಡಿ ಉದ್ದ, 2 ಅಡಿ ಆಳದ ಗುಂಡಿಯಲ್ಲಿ ಆಕೆಯನ್ನ ಮಣ್ಣು ಮಾಡಿ ಮೇಲೆ ಕಾಂಕ್ರಿಟ್‌ ಎಳೆದು ಬಿಟ್ಟಿದ್ದ. ಬಳಿಕ ಒಂದು ವಾರ ಸುಮ್ಮನೆ ಹುಡುಕಿದಂತೆ ನಾಟಕವಾಡಿದ್ದ. ಬಳಿಕ ಫೆಬ್ರವರಿ 2 ರಂದು ನೇರವಾಗಿ ದೇವರಹಿಪ್ಪರಗಿ ಪೊಲೀಸ್‌ ಠಾಣೆಗೆ ತೆರಳಿ ಮಿಸ್ಸಿಂಗ್‌ ಕಂಪ್ಲೇಂಟ್‌ ಕೊಟ್ಟುಬಿಟ್ಟಿದ್ದ. ಮಿಸ್ಸಿಂಗ್‌ ಕಂಪ್ಲೆಂಟ್‌ ಅಂದಾಗ ಯಾವುದೇ ಸಂಶಯವೇ ಇಲ್ಲದೇ ದೇವರಹಿಪ್ಪರಗಿ ಪಿಎಸ್‌ಐ ದೂರು ಪಡೆದುಕೊಂಡು ನಿಮ್ಮ ಕುಟುಂಬಸ್ಥರಲ್ಲು ಒಂದ್ಸಾರಿ ವಿಚಾರಿಸಿ ಎಂದಿದ್ದರು. ಆಯ್ತು ಸರ್‌ ವಿಚಾರಿಸ್ತೀನಿ ಎಂದು ಕರು ಕಳೆದುಕೊಂಡ ಆಕಳದಂತೆ ಮುಖ ಮಾಡಿಕೊಂಡು ಠಾಣೆಯಿಂದ ಎದ್ದು ಬಂದಿದ್ದ.

ಆ ಮೇಲೆ ಆತ ಸಿಕ್ಕಿಹಾಕಿಕೊಂಡಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಈ ವಿಡಿಯೋದಲ್ಲಿದೆ ನೋಡಿ.



Source link

Leave a Reply

Your email address will not be published. Required fields are marked *