Headlines

ಕಾಂಡೋಮ್​ ಕಂಪೆನಿಗೂ ಈ ಟ್ರಿಕ್ಸ್​ ಗೊತ್ತೇ ಇರಲಿಲ್ಲ- ಮಹಿಳೆಯ ವೈರಲ್​ ವಿಡಿಯೋ ನೋಡಿ ಜನರು ಸುಸ್ತು | Viral Video Shows A Woman Save Her From Arrest By Using Condom Suc

ಕಾಂಡೋಮ್​ ಕಂಪೆನಿಗೂ ಈ ಟ್ರಿಕ್ಸ್​ ಗೊತ್ತೇ ಇರಲಿಲ್ಲ- ಮಹಿಳೆಯ ವೈರಲ್​ ವಿಡಿಯೋ ನೋಡಿ ಜನರು ಸುಸ್ತು | Viral Video Shows A Woman Save Her From Arrest By Using Condom Suc



ಕಾಂಡೋಮ್​ ಕಂಪೆನಿಗೂ ಈ ಟ್ರಿಕ್ಸ್​ ಗೊತ್ತೇ ಇರಲಿಲ್ಲ- ಮಹಿಳೆಯ ವೈರಲ್​ ವಿಡಿಯೋ ನೋಡಿ ಜನರು ಸುಸ್ತು | Viral Video Shows A Woman Save Her From Arrest By Using Condom Suc

ಕಾಂಡೋಮ್‌ನ ಇತಿಹಾಸವು ಪ್ರಾಚೀನ ಕಾಲದಿಂದಲೂ ಇದ್ದು, ಇದನ್ನು ಗರ್ಭನಿರೋಧಕವಾಗಿ ಬಳಸಲಾಗುತ್ತದೆ. ಆದರೆ, ವೈರಲ್ ಆದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬಳು ಕೈಕೋಳದಿಂದ ತಪ್ಪಿಸಿಕೊಳ್ಳಲು ಕಾಂಡೋಮ್ ಅನ್ನು ವಿಭಿನ್ನವಾಗಿ ಬಳಸಿ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದಾಳೆ.

ಮಕ್ಕಳ ಜನನ ನಿಯಂತ್ರಣಕ್ಕೆ ತಯಾರಿಸುತ್ತಿರುವ ಕಾಂಡೋಮ್​ನ ಇತಿಹಾಸವೇ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕ್ರಿಸ್ತ ಪೂರ್ವ 1350ರಲ್ಲಿಯೇ ಇದನ್ನು ಪ್ರಾಚೀನ ಈಜಿಪ್ಟಿಗನ್ನರು ಸೋಂಕು ತಡೆಗಟ್ಟಲು ಆರಂಭಿಸಿದ್ದರು ಎಂದು ಇತಿಹಾಸ ಹೇಳುತ್ತದೆ. 16ನೇ ಶತಮಾನದಲ್ಲಿ ಇದನ್ನು ಗರ್ಭನಿರೋಧಕವಾಗಿ ಪ್ರಯೋಗಿಸಲಾಯಿತು. ಆರಂಭದಲ್ಲಿ ರೋಮನ್ನರು ಪ್ರಾಣಿಗಳ ಮೂತ್ರಕೋಶ-ಕರುಳಿನಿಂದ ಮಾಡಿದ ಸಾಧನಗಳನ್ನು ಬಳಸುತ್ತಿದ್ದರು. ಜಪಾನ್‌ನಲ್ಲಿ ಆಮೆ ಚಿಪ್ಪಿನಿಂದ ಮಾಡಿದ ಕಾಂಡೋಮ್‌ಗಳೂ ಇದ್ದವು. ರಬ್ಬರ್​ ಬಳಕೆ ಆರಂಭವಾದದ್ದು 1844 ರಲ್ಲಿ ಎನ್ನಲಾಗಿದೆ. 20ನೇ ಶತಮಾನದಲ್ಲಿ ಲ್ಯಾಟೆಕ್ಸ್ ತಂತ್ರಜ್ಞಾನವು ಆಧುನಿಕ, ಸುರಕ್ಷಿತ ಕಾಂಡೋಮ್‌ಗಳ ಉತ್ಪಾದನೆಗೆ ಕಾರಣವಾಯಿತು.

ಕಾಂಡೋಮ್​ ರಸಹ್ಯ

1980 ರ ದಶಕದಲ್ಲಿ HIV/AIDS ಜಾಗೃತಿಯಿಂದಾಗಿ ಕಾಂಡೋಮ್ ಬಳಕೆ ಜಾಗತಿಕವಾಗಿ ಹೆಚ್ಚಾಯಿತು. ಇಂದು ಇವುಗಳನ್ನು ನಯಗೊಳಿಸಿದ ವಿಭಿನ್ನ ಆಕಾರ ಮತ್ತು ವಿನ್ಯಾಸಗಳಲ್ಲಿ ಉತ್ಪಾದಿಸಲಾಗುತ್ತದೆ. ಹೋಗಲಿ ಬಿಡಿ ಇತಿಹಾಸ ಈಗ ಯಾರಿಗೆ ಬೇಕು ಎಂದು ಕೇಳುವುದು ಉಂಟು. ಅದೇನೇ ಇದ್ದರೂ ಇದೀಗ ಕಾಂಡೋಮ್​ ಹೆಚ್ಚು ಸದ್ದು ಮಾಡುತ್ತಿರುವುದು ಕಾಲೇಜು, ಹಾಸ್ಟೆಲ್​ ಇಂಥ ಕಡೆಗಳಲ್ಲಿ ಎನ್ನುವ ಆಘಾತಕಾರಿ ಸುದ್ದಿಗಳು ಆಗಾಗ್ಗೆ ಸದ್ದು ಮಾಡುವುದು ಉಂಟು. ನಮ್ಮ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಹಾಸ್ಟೆಲ್​, ಕಾಲೇಜುಗಳ ಸಮೀಪ ಇವುಗಳ ಬಳಕೆ ಹೆಚ್ಚುತ್ತಿರುವುದು ಆಘಾತಕಾರಿಯೂ ಆಗಿದೆ.

ಮೀಮ್ಸ್​ಗಳ ಅಬ್ಬರ

ಅಷ್ಟಕ್ಕೂ ಕಾಂಡೋಮ್​ ಸದ್ಯ ಅಂತು ಯಾರೂ ಬಳಸಿದರೂ ಅದನ್ನು ಮಕ್ಕಳು ಹುಟ್ಟದಂತೆ ತಡೆಯುವುದಕ್ಕಾಗಿ ಎನ್ನುವುದಂತೂ ನಿಜ. ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾದ ರೀತಿಯಲ್ಲಿ ಇದರ ತಯಾರಿ ನಡೆಯುತ್ತದೆ. ಅಷ್ಟಕ್ಕೂ ಕಾಂಡೋಮ್​ಗಳ ಮೀಮ್ಸ್​ಗಳಿಗಂತೂ ಬರವೇ ಇಲ್ಲ. ಇದನ್ನು ವಿಭಿನ್ನ ರೀತಿಯಲ್ಲಿ ಬಳಕೆ ಮಾಡುವ ಬಗ್ಗೆ ಇದಾಗಲೇ ಸೋಷಿಯಲ್​ ಮೀಡಿಯಾಗಳಲ್ಲಿ ಫನ್ನಿ ವಿಡಿಯೋಗಳಿಗಂತೂ ಬರವೇ ಇಲ್ಲ. ಕೆಲವೊಮ್ಮೆ ಕಾಂಡೋಮ್​ ತಯಾರ ಕಂಪೆನಿಗಳೂ ಇವುಗಳನ್ನು ನೋಡಿ ಸುಸ್ತಾದರೂ ಅಚ್ಚರಿಯೇನಿಲ್ಲ. ಆ ರೀತಿಯ ವಿಡಿಯೋಗಳು ವೈರಲ್​ ಆಗುತ್ತಿವೆ.

ಮಹಿಳೆ ಕೈಯಲ್ಲಿ ಕಾಂಡೋಮ್​

ಈಗ ಅಂಥದ್ದೇ ಒಂದು ಫನ್ನಿ ವಿಡಿಯೋ viralsarcasm ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. ಇದರಲ್ಲಿ ಮಹಿಳೆಗೆ ಬೇಡಿ ಹಾಕಿ ಕಂಬಕ್ಕೆ ಕಟ್ಟಲಾಗಿದೆ. ಅವಳ ಕೈಯಲ್ಲಿ ಕಾಂಡೋಮ್​ ಪ್ಯಾಕೇಟ್​ ಇದೆ. ಅದರಿಂದ ಕಾಂಡೋಮ್​ ತೆಗೆಯುವ ಮಹಿಳೆ ಅದನ್ನು ತನ್ನ ಕೈಗೆ ಹಾಕಿಕೊಳ್ಳುತ್ತಾಳೆ. ಇವಳೇನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಅಂತೂ ನೆಟ್ಟಿಗರಿಗೆ ಕಾಡುತ್ತದೆ. ಕೊನೆಗೆ ಮಹಿಳೆ ಅದನ್ನು ತನ್ನ ಅಂಗೈಗೆ ಹಾಕಿಕೊಂಡ ಬಳಿಕ, ಅದು ಜಾರುತ್ತದಲ್ಲ, ಅದನ್ನೇ ಬಳಸಿಕೊಂಡು ಕೋಳವನ್ನು ಸುಲಭದಲ್ಲಿ ತೆಗೆಯುತ್ತಾಳೆ. ಈ ವಿಡಿಯೋಗೆ ಸಹಸ್ರಾರು ಮಂದಿ ಫನ್ನಿಯಾಗಿ ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಕಾಂಡೋಮ್​ ಹೀಗೆಲ್ಲಾ ಬಳಸಬಹುದು ಎಂದು ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಅದರ ವಿಡಿಯೋ ಇಲ್ಲಿದೆ ನೋಡಿ.



Source link

Leave a Reply

Your email address will not be published. Required fields are marked *