
ರೈಲಿನಲ್ಲಿ ಯುವಕನೋರ್ವನಿಗೆ ಮಂಗಳಮುಖಿಯೊಬ್ಬರು ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಾಗದ ಸಿಂಗಲ್ ಹುಡುಗರಿಗೆ ಇದೇ ಗತಿ ಎಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Transgender Kisses Man in Train: ಝೆನ್ ಜಿ ಕಿಡ್ಸ್ ಮದುವೆಯಾಗ್ತಿದ್ರೂ ಕೆಲ 90ರ ದಶಕದ ಹುಡುಗರಿಗೆ ಕಂಕಣಭಾಗ್ಯವೇ ಕೂಡಿ ಬರುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ತರೇಹವಾರಿ ಶೀರ್ಷಿಕೆಯುಳ್ಳ ಫೋಟೋ/ವಿಡಿಯೋಗಳನ್ನು ಮದುವೆಯಾಗದೇ ಉಳಿದ ಬ್ರಹ್ಮಚಾರಿಗಳಿಗೆ (Single Boys) ಟ್ಯಾಗ್ ಮಾಡಲಾಗುತ್ತದೆ. ಇದೀಗ ಇಂತಹವುದೇ ಒಂದು ವಿಡಿಯೋ ಎಕ್ಸ್ ಖಾತೆಯಲ್ಲಿ ಮುನ್ನಲೆಗೆ ಬಂದಿದ್ದು, ನಿಮಗೆ ಗೊತ್ತಿರುವ ಸಿಂಗಲ್ಸ್ ಗಳಿಗೆ ಟ್ಯಾಗ್ ಮಾಡಿ ಎಂದು ಹೇಳಲಾಗಿದೆ. ವಿಡಿಯೋ ನೋಡಿದವರು, ಸಿಂಗಲ್ ಆಗಿ ಉಳಿದ್ರೆ ಮುಂದೆ ಇದೇ ಗತಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಅನಾಮಿಕ (@Anamika_Vibes) ಹೆಸರಿನ ಎಕ್ಸ್ ಖಾತೆಯಲ್ಲಿ ಮಾರ್ಚ್ 23ರಂದು ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋಗೆ 48 ಸಾವಿರಕ್ಕೂ ಅಧಿಕ ವ್ಯೂವ್, 200ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ಇಲ್ಲಿ ಯಾರು ಜಾಣರು? ಯುವಕ ಕೇವಲ 10 ರೂಪಾಯಿಯಲ್ಲಿ ತನ್ನ ಆಸೆ ಈಡೇರಿಸಿಕೊಂಡನು ಎಂದು ಕೆಲವರು ಕಮೆಂಟ್ ಮಾಡಿದ್ರೆ, ರೈಲಿನಲ್ಲಿ ಈ ವರ್ತನೆ ಅಸಹ್ಯಕರ ಎಂಬ ಮಾತುಗಳು ಕೇಳಿ ಬಂದಿವೆ. ಹಾಗಾದ್ರೆ ವೈರಲ್ ವಿಡಿಯೋದಲ್ಲಿರೋದು ಏನು ಎಂದು ನೋಡೋಣ ಬನ್ನಿ.
ಯುವಕನಿಗೆ ಕಿಸ್ ಕೊಟ್ಟ ಮಂಗಳಮುಖಿ
ರೈಲು ಪ್ರಯಾಣದ ವೇಳೆ ಮಂಗಳಮುಖಿಯರು ಭಿಕ್ಷಾಟನೆ ಮಾಡುತ್ತಿರೋದನ್ನು ಎಲ್ಲರೂ ನೋಡಿರುತ್ತೇವೆ. ಕೆಲವರು ಹಣಕ್ಕಾಗಿ ಪೀಡಿಸಿದ್ರೆ, ಬಹುತೇಕರು ಕೊಟ್ಟಷ್ಟು ತೆಗೆದುಕೊಂಡು ಆಶೀರ್ವಾದ ಮಾಡಿ ತೆರಳುತ್ತಾರೆ. ಒಂದಿಷ್ಟು ಮಂಗಳಮುಖಿಯರು ಕಡಿಮೆ ಸಮಯದಲ್ಲಿ ಪ್ರಯಾಣಿಕರೊಂದಿಗೆ ಬೆರತು ಮಾತನಾಡಲು ಆರಂಭಿಸುತ್ತಾರೆ. ವಿಶೇಷವಾಗಿ ಮುಂಬೈ ಲೋಕಲ್ ಟ್ರೈನ್‌ನಲ್ಲಿ (Mumbai Local Trains Videos) ಭಿಕ್ಷಾಟನೆ ಮಾಡುವ ಮಂಗಳಮುಖಿಯರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿರುತ್ತವೆ. ಸದ್ಯ ಯುವಕನೋರ್ವನಿಗೆ ಮಂಗಳಮುಖಿ ಕಿಸ್ ಮಾಡಿರುವ ವಿಡಿಯೋ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುವಕನೋರ್ವ ರೈಲಿನ ಮೇಲಿನ ಆಸನದಲ್ಲಿ ಕುಳಿತಿರುತ್ತಾನೆ. ಈ ವೇಳೆ ಅಲ್ಲಿಗೆ ಮಂಗಳಮುಖಿಯೊಬ್ಬರು ಬರುತ್ತಾರೆ. ಮಂಗಳಮುಖಿಗೆ ಯುವಕ 10 ರೂಪಾಯಿ ನೋಟು ನೀಡುತ್ತಾನೆ. ಹಣ ಪಡೆಯುತ್ತಿದ್ದಂತೆ ಯುವಕನಿಗೆ ಮಂಗಳಮುಖಿ ಒಳ್ಳೆಯದಾಗ್ಲಿ ಎಂದು ಆಶೀರ್ವಾದ ಮಾಡುತ್ತಾರೆ. ಆಗ ಯುವಕ ಕಿಸ್ ಕೊಡುವಂತೆ ತನ್ನ ತುಟಿಗಳನ್ನು ಮುಂದೆ ಮಾಡುತ್ತಾನೆ. ಒಂದು ಕ್ಷಣ ಮಂಗಳಮುಖಿ ಕಿಸ್ ಕೊಡಲು ನಿರಾಕರಿಸುತ್ತಾರೆ. ಕೊನೆಗೆ ಯುವಕನ ಒತ್ತಾಯ ಮಣಿದು ಯುವಕನ ತುಟಿಗೆ ಮಂಗಳಮುಖಿ ಚುಂಬಿಸುತ್ತಾರೆ. ಈ ಎಲ್ಲಾ ದೃಶ್ಯಗಳು ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: Chitradurga: ಸ್ವಾವಲಂಬಿ ಜೀವನ ನಡೆಸೋ ಮಂಗಳಮುಖಿಯರಿಗೆ ಕಳ್ಳರ ಕಾಟ: 40ಕ್ಕೂ ಹೆಚ್ಚು ಕುರಿಗಳ ಕಳ್ಳತನ
ಈ ಘಟನೆ ಯಾವ ರೈಲಿನಲ್ಲಿ ನಡೆದಿದೆ ಮತ್ತು ಆ ಯುವಕ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಕೆಲವರು ಇದನ್ನು ರೀಲ್ಸ್‌ಗಾಗಿ ಮಾಡಿರುತ್ತಾರೆ. ಇದ್ಯಾವುದು ಕಾಕತಾಳೀಯ ಅಲ್ಲ, ಎಲ್ಲವೂ ಪ್ಲಾನ್ ಎಂದು ಅನುಮಾನಿಸಿದ್ದಾರೆ. ಒಂದು ವೇಳೆ ನಿಜವಾಗಿಯೂ ನಡೆದ ಘಟನೆ ಅಗಿದ್ರೆ, ಯುವಕನ ಕುಟುಂಬಸ್ಥರು ವಿಡಿಯೋ ನೋಡಿ ಹೇಗೆ ಪ್ರತಿಕ್ರಿಯಿಸಿರಬಹುದು ಎಂದು ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Mangalmukhi’s Selfless Act: ಭಿಕ್ಷೆ ಬೇಡಿದ ಹಣದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಬಟ್ಟೆ ಕೊಡಿಸಿದ ಮಂಗಳಮುಖಿ!
Scroll to load tweet…