ಹಗಲು ಬ್ಯೂಟಿ ಪಾರ್ಲರ್ ರಾತ್ರಿ ಬೇರೆಯದೇ ಕೆಲಸ: ಮಹಿಳೆಯ ಬಂಧಿಸಿದ ದೆಹಲಿ ಪೊಲೀಸರು | Delhi Police Special Unit Operation Lady Don Neha Arrest

ಹಗಲು ಬ್ಯೂಟಿ ಪಾರ್ಲರ್ ರಾತ್ರಿ ಬೇರೆಯದೇ ಕೆಲಸ: ಮಹಿಳೆಯ ಬಂಧಿಸಿದ ದೆಹಲಿ ಪೊಲೀಸರು | Delhi Police Special Unit Operation Lady Don Neha Arrest



ಹಗಲು ಬ್ಯೂಟಿ ಪಾರ್ಲರ್ ರಾತ್ರಿ ಬೇರೆಯದೇ ಕೆಲಸ: ಮಹಿಳೆಯ ಬಂಧಿಸಿದ ದೆಹಲಿ ಪೊಲೀಸರು | Delhi Police Special Unit Operation Lady Don Neha Arrest

ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ಸೋಗಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಲೇಡಿ ಡಾನ್ ಖುಸ್ನುಮಾ ಅನ್ಸಾರಿ ಅಲಿಯಾಸ್ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಾಗಿ ಮಾದಕವಸ್ತು ಜಾಲವನ್ನು ನಿರ್ವಹಿಸುತ್ತಿದ್ದಳು.

ದೆಹಲಿಯ ಲೇಡಿ ಡಾನ್ ಅಂದರ್:

ನವದೆಹಲಿ: ಹಗಲಿನಲ್ಲಿ ಬ್ಯೂಟಿ ಪಾರ್ಲರ್ ಇರಿಸಿಕೊಂಡು ರಾತ್ರಿ ವೇಳೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಖುಸ್ನುಮಾ ಅನ್ಸಾರಿ ಅಲಿಯಾಸ್ ನೇಹಾ ಎಂದು ಗುರುತಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕದ ಕೌಂಟರ್ ಇಂಟೆಲಿಜೆನ್ಸ್ ತಂಡದಿಂದ ಈಕೆಯನ್ನು ಬಂಧಿಸಲಾಗಿದೆ. ಈಕೆ ಆರಂಭದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಾಗಿ ಮಾದಕವಸ್ತು ಸಿಂಡಿಕೇಟ್ ಅನ್ನು ನಿರ್ವಹಿಸುತ್ತಿದ್ದ ಆರೋಪವಿದೆ. ನೇಹಾ ಜೊತೆ ಬಾಬಿ ಕಬುತಾರ್ ಆಕೆಯ ದೀರ್ಘಕಾಲದ ಪಾರ್ಟನರ್, ಹೈ ಪ್ರೊಫೈಲ್ ಗನ್ ಮ್ಯಾನ್ ಬಾಬಿ ಕಬುತಾರ್ ಹಾಗೂ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಈ ಬಾಬಿ ಕಬುತಾರ್ ಶಸ್ತ್ರಾಸ್ತ್ರ ಪೂರೈಕೆದಾರನಾಗಿದ್ದಾನೆ.

ಈ ಬಾಬಿ ಕಬುತಾರ್‌ನ ನಿಜವಾದ ಹೆಸರು ಮಹ್ಫೂಜ್ ಈತ ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳಿಗೆ ಪ್ರಾಥಮಿಕ ಲಾಜಿಸ್ಟಿಕ್ಸ್ ಲಿಂಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂಬ ಆರೋಪವಿದೆ. ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿರುವ ಭಾರತದ ಅತಿದೊಡ್ಡ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿ ಎಂದೇ ಕುಖ್ಯಾತಿ ಪಡೆದಿರುವ ಸಲೀಂ ಪಿಸ್ತೂಲ್‌ನಿಂದ ಈತ ಉನ್ನತ ದರ್ಜೆಯ ಬಂದೂಕುಗಳನ್ನು ಖರೀದಿಸಿದ್ದಾನೆ ತನಿಖಾಧಿಕಾರಿಗಳು ಹೇಳಿದ್ದಾರೆ. ಹೀಗೆ ಆತನಿಂದ ಪಡೆದ ಆಯುಧಗಳನ್ನು ಸಿಧು ಮೂಸೆವಾಲಾ ಹತ್ಯೆ, ನಟಿ ದಿಶಾ ಪಟಾನಿ ನಿವಾಸದ ಹೊರಗೆ ಗುಂಡಿನ ದಾಳಿ, ದೆಹಲಿಯಲ್ಲಿ ನಾದಿರ್ ಶಾ ಹತ್ಯೆ ಮತ್ತು ಸೀಲಾಂಪುರ ಜೋಡಿ ಕೊಲೆ ಸೇರಿದಂತೆ ಹಲವಾರು ಉನ್ನತ ಮಟ್ಟದ ಅಪರಾಧ ಪ್ರಕರಣಗಳಲ್ಲಿ ಬಳಸಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಚೀನಾ ರೋಬೋಡಾಗ್ ತಮ್ಮದೆಂದು ತೋರಿಸಿದ ಗಾಲ್ಗೋಟಿಯಾಸ್ ವಿವಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು

ನೇಹಾ ಬಂಧನವು ಬಿಷ್ಣೋಯ್ ಗ್ಯಾಂಗ್‌ನಲ್ಲಿ ಮಹಿಳೆಯರು ಪಾತಕ ಕೃತ್ಯದಲ್ಲಿ ಭಾಗಿಯಾಗುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ದೀಪಾ ಮತ್ತು ಗ್ಯಾಂಗ್‌ಸ್ಟಾರ್ ಹಾಶಿಮ್ ಬಾಬಾ ಪತ್ನಿ ಜೋಯಾ ಖಾನ್ ನಂತರ ಈಗ ಬಂಧಿಸಲ್ಪಟ್ಟ ಮೂರನೇ ಲೇಡಿ ಡಾನ್ ಈ ನೇಹಾ.

ಸಾರ್ವಜನಿಕರಿಗಾಗಿ ನೇಹಾ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆದರೆ ಈ ವ್ಯವಹಾರವು ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಚಲು ಮತ್ತು ಅವರ ಮಾದಕವಸ್ತು ವಿತರಣಾ ಜಾಲವನ್ನು ನಿರ್ವಹಿಸಲು ಕೇವಲ ಒಂದು ಮುಖವಾಡವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನೇಹಾ ಮತ್ತು ಬಾಬಿ ಏಳು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. ಮಹಿಪಾಲಪುರ ಫ್ಲೈಓವರ್ ಬಳಿ ಈಕೆಯ ಬಂಧನದ ಸಮಯದಲ್ಲಿ, ಪೊಲೀಸರು ಗಮನಾರ್ಹ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಂಡರು. ಬಂಧಿತ ಬಾಬಿ ಕಬುತಾರ್ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಬಾಬಿ ತಿಂಗಳುಗಳಿಂದ ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಮತ್ತು ಆಗಾಗ್ಗೆ ತನ್ನ ಸ್ಥಳವನ್ನು ಬದಲಾಯಿಸುವ ಮೂಲಕ ವಿಶೇಷ ಘಟಕದಿಂದ ತಪ್ಪಿಸಿಕೊಳ್ಳುತ್ತಿದ್ದ. ಆದರೆ ತಾಂತ್ರಿಕ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿಗಳನ್ನು ಬಳಸಿಕೊಂಡು ವಿಶೇಷ ದಳವು ಆತನನ್ನು ಬಂಧಿಸಿದೆ.

ಇದನ್ನೂ ಓದಿ: 99 ವರ್ಷದ ವೃದ್ಧೆಯ ಕೊಲೆ ಮಾಡಿ ದರೋಡೆ: ಶವ ಕಬ್ಬಿಣದ ಪೆಟ್ಟಿಗೆಗೆ ತುಂಬಿ ಎಸ್ಕೇಪ್



Source link

Leave a Reply

Your email address will not be published. Required fields are marked *