ಯೂಟ್ಯೂಬ್‌ನಲ್ಲಿ ‘ಬದುಕಲು ಕಲಿಯಿರಿ’ ನಿಜಜೀವನದಲ್ಲಿ ‘ಕದಿಯಲು ಬದುಕಿರಿ’: ಐನಾತಿ ಕಳ್ಳನ ಅರೆಸ್ಟ್‌ ಮಾಡಿದ ಪೊಲೀಸ್‌! | Odisha Youtuber Thief Motivational Speaker Arrested San

ಯೂಟ್ಯೂಬ್‌ನಲ್ಲಿ ‘ಬದುಕಲು ಕಲಿಯಿರಿ’ ನಿಜಜೀವನದಲ್ಲಿ ‘ಕದಿಯಲು ಬದುಕಿರಿ’: ಐನಾತಿ ಕಳ್ಳನ ಅರೆಸ್ಟ್‌ ಮಾಡಿದ ಪೊಲೀಸ್‌! | Odisha Youtuber Thief Motivational Speaker Arrested San



ಯೂಟ್ಯೂಬ್‌ನಲ್ಲಿ ‘ಬದುಕಲು ಕಲಿಯಿರಿ’ ನಿಜಜೀವನದಲ್ಲಿ ‘ಕದಿಯಲು ಬದುಕಿರಿ’: ಐನಾತಿ ಕಳ್ಳನ ಅರೆಸ್ಟ್‌ ಮಾಡಿದ ಪೊಲೀಸ್‌! | Odisha Youtuber Thief Motivational Speaker Arrested San

ಯೂಟ್ಯೂಬ್‌ನಲ್ಲಿ ‘ಚೇಂಜ್‌ ಯುವರ್‌ ಲೈಫ್’ ಎಂಬ ಚಾನೆಲ್‌ ಮೂಲಕ ಬದುಕು ಕಲಿಸುತ್ತಿದ್ದ ವ್ಯಕ್ತಿಯೊಬ್ಬ ಕಳ್ಳತನದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಭುವನೇಶ್ವರ ಪೊಲೀಸರು ಬಂಧಿಸಿರುವ ಈತನ ವಿರುದ್ಧ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ.

ನವದೆಹಲಿ (ಆ.29): ಆತನ ಯೂಟ್ಯೂಬ್‌ ವಿಡಿಯೋ ನೋಡಿದವರೆಲ್ಲಾ ಅವನ ಮಾತಿಗೆ ಮಾರು ಹೋಗದವರೇ ಇಲ್ಲ. ಅದಕ್ಕಾಗಿ ಯೂಟ್ಯೂಬ್‌ಗೆ ಅಂಥದ್ದೇ ಹೆಸರನ್ನೇ ಇಟ್ಟುಕೊಂಡಿದ್ದ. ‘ಚೇಂಜ್‌ ಯುವರ್‌ ಲೈಫ್‌..’. ಮೋಟಿವೇಷನಲ್‌ ಸ್ಪೀಕರ್‌ ಅಂತಾರಲ್ಲ.. ಅಂಥದ್ದೇನೋ ಮಾಡ್ತಿದ್ದ. ಯೂಟ್ಯೂಬ್‌ ವಿಡಿಯೋ ನೋಡುವವರಿಗೆ ನೀವು ಬದುಕಲು ಕಲಿಯಿರಿ ಎನ್ನುತ್ತಿದ್ದ. ಆದರೆ, ಈತ ಮಾತ್ರ ಬದುಕೋಕೆ ಕದಿಯುತ್ತಿದ್ದ. ಅಂಥ ಒಬ್ಬ ಮೋಟಿವೇಷನಲ್‌ ಸ್ಪೀಕರ್‌ ಹಾಗೂ ಐನಾತಿ ಕಳ್ಳನನ್ನು ಒಡಿಶಾದ ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ.

ಚೆಂಜ್‌ ಯುವರ್‌ ಲೈಫ್‌ ಎನ್ನುವ ಹೆಸರಿನಲ್ಲಿ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದ ವ್ಯಕ್ತಿ ನಿಜ ಜೀವನದಲ್ಲಿ ಕಳ್ಳತನದ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆತನನ್ನು ಭುವನೇಶ್ವರ ಪೊಲೀಸರು ಬಂದಿಸಿದ್ದಾರೆ.

10ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿ

ಮನೋಜ್ ಸಿಂಗ್ ಎಂಬ ವ್ಯಕ್ತಿ ವಿರುದ್ಧ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ ಮತ್ತು ವಿವಿಧ ಜನರು ಮತ್ತು ಸ್ಥಳಗಳಿಂದ ಕದ್ದಿದ್ದ ನಗದು ಮತ್ತು ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಕೇಸ್‌ ತನಿಖಾ ತಜ್ಞರು ಹೇಳುವ ಪ್ರಕಾರ, ಸಿಂಗ್ ದಿನವಿಡೀ ಒಂಟಿ ಮನೆಗಳನ್ನು ಆಯ್ಕೆ ಮಾಡುತ್ತಿದ್ದ. ಆದರೆ, ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಬದುಕಿನ ಸದ್ಗುಣಗಳ ವಿಡಿಯೋ ಅಪ್‌ಲೋಡ್‌ ಮಾಡುತ್ತಿದ್ದ. ಜನರು ಪ್ರಮಾಣಿಕತೆ ಹಾಗೂ ಶಿಸ್ತಿನಿಂದ ಬದುಕಲು ಬೇಕಾಗುವ ಕಲೆ ಸಿದ್ದಿಸಿಕೊಳ್ಳಬೇಕು ಎಂದು ಹೇಳುತ್ತಿದ್ದ.

ಒಂದು ವಾರಗಳ ಕಾಲ ಹದ್ದಿನ ಕಣ್ಣು

ಆಗಸ್ಟ್ 14 ರಂದು ಭರತ್‌ಪುರದ ಮನೆಯೊಂದಕ್ಕೆ ಮನೋಜ್ ನುಗ್ಗಿ 200 ಗ್ರಾಂ ಚಿನ್ನ ಮತ್ತು 5 ಲಕ್ಷ ರೂಪಾಯಿ ನಗದು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬೀಗ ಮುರಿದಿರುವುದನ್ನು ತಿಳಿದ ನಂತರ ಮನೆಯ ನಿವಾಸಿಗಳು ತಮ್ಮ ಚಿನ್ನ ಮತ್ತು ನಗದು ಕಾಣೆಯಾಗಿರುವುದನ್ನು ನೋಡಿದ್ದಾರೆ.

ಪೊಲೀಸರು ಮನೋಜ್‌ನನ್ನು ಒಂದು ವಾರದ ಕಾಲ ಹದ್ದಿನ ಕಣ್ಣಲ್ಲಿಟ್ಟು, ನಂತರ ಖಂಡಗಿರಿ ಬಾರಿಯಲ್ಲಿ ಬಂಧಿಸಿದರು. ಆತನಿಂದ ಆಭರಣಗಳು ಮತ್ತು 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಫ್ರೀ ಟೈಮ್‌ನಲ್ಲಿ ಮೋಟಿವೇಷನಲ್‌ ಸ್ಪೀಚ್‌

“ಆತ ಒಬ್ಬ ಪರಿಣಿತ ಕಳ್ಳನಾಗಿದ್ದರೂ ಮತ್ತು ಆತನ ವಿರುದ್ಧ ಕನಿಷ್ಠ 10 ಕಳ್ಳತನ ಪ್ರಕರಣಗಳು ಬಾಕಿ ಇದ್ದರೂ, ಆತ ತನ್ನ ಬಿಡುವಿನ ವೇಳೆಯಲ್ಲಿ ಮೋಟಿವೇಷನಲ್‌ ಸ್ಪೀಚ್‌ ನೀಡಿ ಉತ್ತಮ ಅಭಿಪ್ರಾಯಗಳನ್ನು ಗಳಿಸಿದ್ದ” ಎಂದು ಪೊಲೀಸ್ ಆಯುಕ್ತ ಎಸ್. ದೇವ್ ದತ್ತ ಸಿಂಗ್ ತಿಳಿಸಿದ್ದಾರೆ.

ಮನೋಜ್ ಸಿಂಗ್‌ನ ಇತರ ಕಳ್ಳತನಗಳ ತನಿಖೆ ಮುಂದುವರೆದಿದ್ದು, ಆತ ಈಗ ಬಂಧನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ನಿವಾಸಿಗಳು ಜಾಗರೂಕರಾಗಿರಿ ಮತ್ತು ಆನ್‌ಲೈನ್ ವ್ಯಕ್ತಿಗಳನ್ನು ಕುರುಡಾಗಿ ನಂಬಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ.

 



Source link

Leave a Reply

Your email address will not be published. Required fields are marked *