
ಕ್ಯಾನ್ಸರ್ ಒಂದು ಸಾಂಕ್ರಾಮಿಕ ರೋಗದಂತಾಗಿದೆ. ಮೂವರಲ್ಲಿ ಇಬ್ಬರಿಗೆ ಕ್ಯಾನ್ಸರ್ ಕಾಡ್ತಿದೆ. ಈಗ ಸ್ಟಡಿಯೊಂದು ಕ್ಯಾನ್ಸರ್ ಬಗ್ಗೆ ಆಸಕ್ತಿಕರ ವಿಷ್ಯವನ್ನು ಹೊರ ಹಾಕಿದೆ. ಮದುವೆ ಹಾಗೂ ಕ್ಯಾನ್ಸರ್ ಸಂಬಂಧವನ್ನು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ (Cancer) ಸಂಖ್ಯೆ ಹೆಚ್ಚಾಗ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯಸ್ಸಿನ ಜನರಿಗೆ ಈ ಕ್ಯಾನ್ಸರ್ ಕಾಡ್ತಿದೆ. ಕೊನೆ ಹಂತದಲ್ಲಿ ಇದು ಪತ್ತೆಯಾಗೋದು ಹೆಚ್ಚು. ಹಾಗಾಗಿ ಚಿಕಿತ್ಸೆ ನಡೆದ್ರೂ ಉಳಿಯೋ ಸಾಧ್ಯತೆ ಕಡಿಮೆ. ಕ್ಯಾನ್ಸರ್ ಬಗ್ಗೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಹೊಸ ಹೊಸ ಔಷಧಿಗಳು ಮಾರ್ಕೆಟ್ ಗೆ ಬರ್ತಿವೆ. ಈ ಮಧ್ಯೆ ಹೊಸ ಸ್ಟಡಿಯೊಂದು ಆಘಾತಕಾರಿ ವಿಷ್ಯವನ್ನು ಹೊರ ಹಾಕಿದೆ. ಮದುವೆ ಆದವರಿಗಿಂತ ಒಂಟಿಯಾಗಿರುವ ಜನರಿಗೆ ಕ್ಯಾನ್ಸರ್ ಕಾಡೋದು ಹೆಚ್ಚು ಎಂದು ಅಧ್ಯಯನ ಹೇಳಿದೆ. ಈ ಬಗ್ಗೆ ತಜ್ಞರು ಏನು ಹೇಳ್ತಾರೆ? ಸ್ಟಡಿಯಿಂದ ಗೊತ್ತಾದ ಮಾಹಿತಿ ಏನು ಎಂಬ ವಿವರ ಇಲ್ಲಿದೆ.
ಒಂಟಿ ಜೀವಕ್ಕೆ ಕ್ಯಾನ್ಸರ್ ಹೆಚ್ಚು
ಕ್ಯಾನ್ಸರ್ ರಿಸರ್ಚ್ ಕಮ್ಯುನಿಕೇಷನ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಎಂದಿಗೂ ಮದುವೆಯಾಗದ ಜನರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚಂತೆ. ಮದುವೆಯಾಗದ ಪುರುಷರಲ್ಲಿ ಕ್ಯಾನ್ಸರ್ ಬರುವ ಅಪಾಯ ಶೇ. 68 ರಷ್ಟು ಹೆಚ್ಚಾಗಿದೆ. ಮಹಿಳೆಯರಲ್ಲಿ ಅಪಾಯ ಶೇ. 83 ರಷ್ಟು ಹೆಚ್ಚಾಗಿದೆ. ವಯಸ್ಸು ಹೆಚ್ಚಾದಂತೆ ಮದುವೆಯ ಆರೋಗ್ಯ ಪ್ರಯೋಜನಗಳು ಹೆಚ್ಚಾಗುತ್ತವೆ ಎಂದು ಅಧ್ಯಯನ ಹೇಳಿದೆ.
ಎಣ್ಣೆ ಹೊಡೆದು ಡ್ಯಾಮೇಜ್ ಆಗಿರುವ ಲಿವರ್ಗೆ ಮರು ಜೀವ ಕೊಡುವ ಈ ಹಣ್ಣು; ಯಾವುದು?
ಅವಿವಾಹಿತ ಮಹಿಳೆಯರಿಗೆ ಅವಿವಾಹಿತ ಪುರುಷರಿಗಿಂತ ಕ್ಯಾನ್ಸರ್ ಅಪಾಯ ಹೆಚ್ಚು. ಇದು ಜೈವಿಕ ಅಂಶಗಳಿಂದಾಗಿರಬಹುದು. ಉದಾಹರಣೆಗೆ ಎಂದಿಗೂ ಗರ್ಭಿಣಿಯಾಗದ ಮಹಿಳೆಯರಲ್ಲಿ ಅಂಡಾಶಯ ಮತ್ತು ಗರ್ಭಾಶಯದ ಕ್ಯಾನ್ಸರ್ ಹೆಚ್ಚುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ನಂಬ್ತಾರೆ.
ಇಲ್ಲಿ ಮದುವೆ ಎನ್ನುವುದಕ್ಕಿಂತ ವಿವಾಹಿತರಿಗೆ ಸಿಗುವ ಬೆಂಬಲ ಹಾಗೂ ಅವರು ಆರೋಗ್ಯ ಬಗ್ಗೆ ತೆಗೆದುಕೊಳ್ಳುವ ಕಾಳಜಿ ಮುಖ್ಯವಾಗುತ್ತದೆ. ತಜ್ಞರ ಪ್ರಕಾರ, ವಿವಾಹಿತರು ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲ ಪಡೆಯುತ್ತಾರೆ. ಅವರು ಆಗಾಗ್ಗೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿ ಮಾಡುತ್ತಾರೆ. ಇದು ರೋಗಗಳ ಆರಂಭಿಕ ಪತ್ತೆಗೆ ಕಾರಣವಾಗುತ್ತದೆ. ವಿವಾಹಿತರು ಸಾಮಾನ್ಯವಾಗಿ ಆರೋಗ್ಯ ರಕ್ಷಣೆ ಮತ್ತು ಬೆಂಬಲಕ್ಕೆ ಹೆಚ್ಚಿನ ಮಾರ್ಗ ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಉದಾಹರಣೆಗೆ ವಿಮೆ, ನಿಯಮಿತ ತಪಾಸಣೆಗಳು ಮತ್ತು ಹೆಚ್ಚಾಗಿ ವೈದ್ಯಕೀಯ ಮೇಲ್ವಿಚಾರಣೆ. ವಿವಾಹಿತರು ಸಾಮಾನ್ಯವಾಗಿ ಧೂಮಪಾನ ಮತ್ತು ಮದ್ಯ ಸೇವನೆಯನ್ನು ಕಡಿಮೆ ಮಾಡುವಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಿರ್ತಾರೆ. ಅಪಾಯಕಾರಿ ನಡವಳಿಕೆಗಳನ್ನು ಕಡಿಮೆ ಮಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ನಂತಹ ಅನೇಕ ರೀತಿಯ ಕ್ಯಾನ್ಸರ್ಗಳ ಅಪಾಯವೂ ಕಡಿಮೆ. ಬಲವಾದ ಸಾಮಾಜಿಕ ಸಂಬಂಧಗಳು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಸಂಶೋಧನೆ ತೋರಿಸಿದೆ. ಉತ್ತಮ ಸಂಬಂಧಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡನ್ನೂ ಸುಧಾರಿಸುತ್ತವೆ.
ಸಿಕ್ಕಾಪಟ್ಟೆ ಬಿಸಿಲು, ಬಾಡಿ ಹೀಟ್ ಕಡಿಮೆ ಮಾಡೋ ಪಾನೀಯಗಳಿವು; ದುಡ್ಡು ಖರ್ಚಾಗಲ್ಲ
ಒಂಟಿ ಜನರು ಏನು ಮಾಡ್ಬೇಕು?
ವಿವಾಹಿತ ರೋಗಿಗಳು ಮನೆಯವರ ಬೆಂಬಲ ಹೊಂದಿರ್ತಾರೆ. ಅವರಿಗೆ ಮಾನಸಿಕವಾಗಿ ನೆಮ್ಮದಿ ಮತ್ತು ಧೈರ್ಯ ನೀಡಲು ಮನೆಯವರಿರ್ತಾರೆ ಎಂದು ಡಾಕ್ಟರ್ ಕೂಡ ನಂಬ್ತಾರೆ. ಆದ್ರೆ ಒಂಟಿಯಾಗಿರುವ ಜನರಿಗೆ ಇಷ್ಟು ಸಪೋರ್ಟ್ ಸಿಗೋದು ಕಷ್ಟ. ಬಲವಾದ ಸಾಮಾಜಿಕ ಜಾಲವನ್ನು ನಿರ್ಮಿಸಲು ಮತ್ತು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಒಂಟಿಯಾಗಿರುವ ಜನರು ಕ್ಯಾನ್ಸರ್ ನಿಂದ ರಕ್ಷಣೆ ಬೇಕೆಂದ್ರೆ ಕೆಲವೊಂದು ಎಚ್ಚರಿಕೆ ವಹಿಸಬೇಕು. ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಬೇಕು. ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಸೇರಿದಂತೆ ಸಮತೋಲಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.