ಗಣಿ ಅಧಿಕಾರಿ ಮೊಹಂತಿ ಮನೆಯಲ್ಲಿ ನೋಟುಗಳ ರಾಶಿ, 4 ಕೋಟಿ ಪತ್ತೆ; ಮುಂದುವರಿದ ಎಣಿಕೆ | Odisha Vigilance Officials Raid Rs 4 Crore Unaccounted Cash Found Debabrata Mohanty Bhubaneswar Flat Mrq

ಗಣಿ ಅಧಿಕಾರಿ ಮೊಹಂತಿ ಮನೆಯಲ್ಲಿ ನೋಟುಗಳ ರಾಶಿ, 4 ಕೋಟಿ ಪತ್ತೆ; ಮುಂದುವರಿದ ಎಣಿಕೆ | Odisha Vigilance Officials Raid Rs 4 Crore Unaccounted Cash Found Debabrata Mohanty Bhubaneswar Flat Mrq



ಗಣಿ ಅಧಿಕಾರಿ ಮೊಹಂತಿ ಮನೆಯಲ್ಲಿ ನೋಟುಗಳ ರಾಶಿ, 4 ಕೋಟಿ ಪತ್ತೆ; ಮುಂದುವರಿದ ಎಣಿಕೆ | Odisha Vigilance Officials Raid Rs 4 Crore Unaccounted Cash Found Debabrata Mohanty Bhubaneswar Flat Mrq

ಕಲ್ಲಿದ್ದಲು ಉದ್ಯಮಿಯಿಂದ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಗಣಿ ಉಪ ನಿರ್ದೇಶಕ ಮೊಹಂತಿ ಅವರನ್ನು ಬಂಧಿಸಲಾಗಿದೆ. ಬಂಧನದ ನಂತರ, ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅವರ ಮನೆಯಲ್ಲಿ ಸುಮಾರು 4 ಕೋಟಿ ರೂ. ನಗದು, 130 ಗ್ರಾಂ ಚಿನ್ನ ಮತ್ತು ಎರಡು ಐಷಾರಾಮಿ ಮನೆಗಳು ಪತ್ತೆಯಾಗಿವೆ. 

ಭುವನೇಶ್ವರ: ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮಿ ಬಳಿ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಓಡಿಶಾಸ ಕಟಕ್‌ನ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ (Debabrata Mohanty) ಎಂಬ ಅಧಿಕಾರಿಯನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಅಧಿಕಾರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಅಧಿಕಾರಿಗಳು (Odisha Vigilance officials) ದಾಳಿ ನಡೆಸಿದ್ದರು. ಮೊಹಂತಿ ವಾಸವಿದ್ದ ಒಡಿಶಾ ವಿಜಿಲೆನ್ಸ್ ಫ್ಲಾಟ್, ಭದ್ರಕ್‌ನ ಮಠಸಾಹಿಯಲ್ಲಿರುವ ಪೋಷಕರ ಮನೆ ಮತ್ತು ಕಟಕ್‌ನಲ್ಲಿರುವ ಆಫಿಸ್‌ನ ಕೋಣೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಿಆರ್‌ಎಸ್ ಫ್ಲ್ಯಾಟ್‌ನೊಳಗೆ ಟ್ರೋಲಿ ಬ್ಯಾಗ್‌ನಲ್ಲಿದ್ದ ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಓಡಿಶಾದ ಅತಿದೊಡ್ಡ ದಾಳಿ

ಟ್ರೋಲಿ ಬ್ಯಾಗ್‌ ಮತ್ತು ತಿಜೋರಿಯಲ್ಲಿದ್ದ ಹಣದ ಎಣಿಕೆಯಾಗುತ್ತಿದೆ. ಈವರೆಗಿನ ವರದಿಗಳ ಪ್ರಕಾರ, ಹಣದ ಮೊತ್ತ 4 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಎಣಿಕೆ ಕಾರ್ಯ ಮುಂದುವರಿದಿದ್ದು, ಓಡಿಶಾದ ಇತಿಹಾಸದಲ್ಲಿಯೇ ಇದನ್ನು ಅತಿದೊಡ್ಡ ದಾಳಿ ಎಂದು ಸ್ಥಳೀಯ ಮಾಧ್ಯಮಗಳು ವ್ಯಾಖ್ಯಾನಿಸುತ್ತಿವೆ. ದೇಬಬ್ರತ ಮೊಹಂತಿ ಕಚೇರಿಯ ಡ್ರಾಯರ್‌ಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ನಗದು ಸಿಕ್ಕಿದೆ.

ಇದನ್ನೂ ಓದಿ: ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ

ಅರಮನೆಯಂತಹ ಎರಡು ಐಷಾರಾಮಿ ಮನೆಗಳು

ಭುವನೇಶ್ವರ ನಗರದಲ್ಲಿ ದೇಬಬ್ರತ ಮೊಹಂತಿ ಅರಮನೆಯಂತಹ ಎರಡು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಹಣದ ಜೊತೆಯಲ್ಲಿ 130 ಗ್ರಾಂಗೂ ಅಧಿಕ ಚಿನ್ನ ಸಿಕ್ಕಿದೆ. , ಕಲ್ಲಿದ್ದಲು ಡಿಪೋ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಮತ್ತು ಸಾರಿಗೆ ಅನುಮತಿ ನೀಡಲು ಉದ್ಯಮಿಗೆ ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಮೊಹಂತಿಯ ಲಂಚ ಕೇಳಿದ ವಿಷಯವನ್ನು ವಿಜಿಲೆನ್ಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಮಂಗಳವಾರ ರಾತ್ರಿ ಲಂಚ ಪಡೆಯುತ್ತಿರುವಾಗಲೇ ಮೊಹಂತಿಯನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಮೊಹಂತಿಗೆ ಸಂಬಂಧಿಸಿದ ಆಸ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Bharat Taxi Launch: ಚಾಲಕರಿಗೂ ಮಾಲೀಕರಾಗೋ ಅವಕಾಶ, ಅಮೂಲ್‌ ಮಾದರಿಯಲ್ಲಿ ಭಾರತ್‌ ಟ್ಯಾಕ್ಸಿ

Scroll to load tweet…



Source link

Leave a Reply

Your email address will not be published. Required fields are marked *