20 ರೂ. ವಸ್ತು ಖರೀದಿಗೆ 200 ರೂ ಖರ್ಚು ! ಬ್ಲಿಂಕಿಟ್, ಇನ್ಸ್ಟಾಮಾರ್ಟ್ ಬಿಟ್ಮೇಲೆ ಏನಾಯ್ತು? | 30 Days Without Blinkit Instamart Saved My Money And Health What Indians Are Doing To Save Money On Delivery Charge

20 ರೂ. ವಸ್ತು ಖರೀದಿಗೆ 200 ರೂ ಖರ್ಚು ! ಬ್ಲಿಂಕಿಟ್, ಇನ್ಸ್ಟಾಮಾರ್ಟ್ ಬಿಟ್ಮೇಲೆ ಏನಾಯ್ತು? | 30 Days Without Blinkit Instamart Saved My Money And Health What Indians Are Doing To Save Money On Delivery Charge



20 ರೂ. ವಸ್ತು ಖರೀದಿಗೆ 200 ರೂ ಖರ್ಚು ! ಬ್ಲಿಂಕಿಟ್, ಇನ್ಸ್ಟಾಮಾರ್ಟ್ ಬಿಟ್ಮೇಲೆ ಏನಾಯ್ತು? | 30 Days Without Blinkit Instamart Saved My Money And Health What Indians Are Doing To Save Money On Delivery Charge

ಜನರು ಬ್ಲಿಂಕಿಟ್, ಇನ್ಸ್ಟಾಮಾರ್ಟ್  ಆನ್ಲೈನ್ ಮಾರ್ಕೆಟ್ ಗೆ ದಾಸರಾಗ್ತಿದ್ದಾರೆ. ಹೊರಗಿನ ಪ್ರಪಂಚ ನೋಡ್ದೆ ಮನೆಯಲ್ಲಿಯೇ ಎಲ್ಲ ವಸ್ತು ಆರ್ಡರ್ ಮಾಡ್ತಿದ್ದಾರೆ. ಡೆಲಿವರಿ ಚಾರ್ಜ್ ಉಳಿಸೋಕೆ ಹೋಗಿ ಜೇಬಿಗೆ ಕತ್ತರಿ ಹಾಕಿಕೊಳ್ತಿರುವ ಜನರು ಏನೆಲ್ಲ ಮಿಸ್ ಮಾಡ್ಕೊಳ್ತಿದ್ದಾರೆ ಗೊತ್ತಾ? 

ಮಧ್ಯರಾತ್ರಿ ಐಸ್ ಕ್ರೀಂ (Ice cream) ತಿನ್ನೋ ಆಸೆ ಆದ್ರೆ ಮನೆಯಿಂದ ಹೊರಗೆ ಹೋಗ್ಬೇಕು, ಈಗ ಬೇಡ ಎನ್ನುವ ಆಪ್ಷನ್ ನಮಗಿಲ್ಲ. ಆರಾಮವಾಗಿ ಬ್ಲಿಂಕಿಟ್, ಇನ್ಸ್ಟಾಮಾರ್ಟ್, ಜೆಪ್ಟೋ ಸೇರಿದಂತೆ ಆನ್ಲೈನ್ ಆಪ್ ನಲ್ಲಿ ಒಂದು ಕ್ಲಿಕ್ ಮಾಡಿದ್ರೆ ಸಾಕು. ಮನೆ ಬಾಗಿಲಿಗೆ ಆಹಾರ ಬರುತ್ತೆ. ಇದು ನಮ್ಮ ಕೆಲ್ಸ ಸುಲಭ ಮಾಡಿದೆ. ವರ್ಕ್ ಫ್ರಂ ಹೋಮ್ ಮಾಡ್ತಾ, ಒಂದು ಮನೆಯಲ್ಲಿ ಬಂಧಿಯಾಗಿರುವ ವ್ಯಕ್ತಿ ಹೊರಗೆ ಹೋಗ್ದೆ ಅರ್ಧ ವರ್ಷ ಈ ಆಪ್ ಸಹಾಯದಿಂದ ಕಳೆಯಬಹುದು. ಎಲ್ಲವೂ ಅರೆ ಕ್ಷಣದಲ್ಲಿ ಸಿಗೋದ್ರಿಂದ ಸೂರ್ಯನ ಬೆಳಕು ನೋಡೋದೇ ಅಪರೂಪ ಎನ್ನುವವರಿದ್ದಾರೆ.

ಖರ್ಚು ಹೆಚ್ಚಾಗಿದ್ದು ಹೀಗೆ

ಈ ಆಪ್ ನಮ್ಮ ಜೀವನದ ಒಂದು ಭಾಗವಾಗಿದೆ. ಈ ಆಪ್ ವಿಶೇಷ ಅಂದ್ರೆ ಇಲ್ಲಿ ಲಿಮಿಟ್ ಇರುತ್ತೆ. 20 ರೂಪಾಯಿ ಬೆಲೆಯ ಒಂದು ಆಹಾರ ಬೇಕು, ಆದ್ರೆ 20 ರೂಪಾಯಿಗೆ ಫುಡ್ ಬುಕ್ ಮಾಡಿದ್ರೆ ಡೆಲಿವರಿ ಚಾರ್ಜ್ ನೀಡ್ಬೇಕು. ಈ ಡೆಲಿವರಿ ಚಾರ್ಜ್ ಉಳಿಸೋಕೆ 100 -200 ರೂಪಾಯಿ ಬೆಲೆಯ ಅಗತ್ಯವಿಲ್ಲದ ವಸ್ತು ಖರೀದಿ ಮಾಡ್ತಿದ್ದೆ. ಬ್ರೆಡ್, ಹಾಲಿನ ಜೊತೆ ಚಾಕೋಲೇಟ್, ಅದು ಇದು ಅಂತ ಈಗ್ಲೇ ಅಗತ್ಯವಿರದ ವಸ್ತು ಲೀಸ್ಟ್ ಸೇರ್ತಾ ಇತ್ತು. ಪ್ರತಿ ದಿನ ನೀವು ಡೆಲಿವರಿ ಚಾರ್ಜ್ ಉಳಿಸೋಕೆ ಖರೀದಿ ಹೆಚ್ಚು ಮಾಡಿದ್ರೆ ತಿಂಗಳಿಗೆ 4 ರಿಂದ 5 ಸಾವಿರ ಖರ್ಚಾಗೋದು ಗ್ಯಾರಂಟಿ. ಒಂದು ಸಾಮಾನ್ಯ ಕುಟುಂಬ ಇದೇ ಹಣದಲ್ಲಿ ಒಂದು ತಿಂಗಳು ಜೀವನ ನಡೆಸ್ಬಹುದು. ಬ್ಲಿಂಕಿಟ್, ಇನ್ಸ್ಟಾ ಮಾರ್ಟ್ ವ್ಯವಹಾರ ಬಿಟ್ಮೇಲೆ ನನಗೆ ಈ ಲೆಕ್ಕ ಗೊತ್ತಾಗಿದ್ದು.

ರೈತರಿಗೆ ಲಾಭ ತಂದ್ಕೊಂಡೋ ಬ್ಯುಸಿನೆಸ್‌ ಇದು, ಕಡಿಮೆ ಬಂಡವಾಳ ಹೆಚ್ಚಿನ ಲಾಭ

ಈ ಆನ್ಲೈನ್ ಮಾರ್ಕೆಟಿಂಗ್ ಅಪ್ಲಿಕೇಷನ್ ಒಳ್ಳೆಯದಲ್ಲ ಅಂತಲ್ಲ. ಒಮ್ಮೆ ಇದಕ್ಕೆ ಅಂಟಿಕೊಂಡ್ರೆ ಬಿಡೋದು ಮಾತ್ರ ಕಷ್ಟ. ಇದ್ರಿಂದ ನೀವು ಎಷ್ಟು ಹಣ ಉಳಿಸ್ತೀರಿ ಅನ್ನೋದು ಕೂಡ ಪ್ರಶ್ನೆಯಾಗೋದಿಲ್ಲ. ಆದ್ರೆ ತುಂಬಾ ಸಂಗತಿಯನ್ನು ಮಿಸ್ ಮಾಡ್ಕೊಳ್ತೀರಿ. ಮಂಡಿಗೆ, ಮಾರ್ಕೆಟ್ ಗೆ ಹೋಗಿ ನಿಮ್ಮ ಕೈಯಾರೆ ನಿಮಗಿಷ್ಟದ ತರಕಾರಿ, ಹಣ್ಣು ಖರೀದಿ ಮಾಡೋಕಾಗಲ್ಲ. ಚೌಕಾಸಿ ಸಾಧ್ಯವಿಲ್ಲ. ಅಕ್ಕಪಕ್ಕದಲ್ಲಿ ಯಾವೆಲ್ಲ ಅಂಗಡಿ ಬಂದಿದೆ, ಅಲ್ಲಿನ ಜನರು ಹೇಗಿದ್ದಾರೆ ಎನ್ನುವ ಪರಿಚಯವೇ ನಿಮಗಾಗೋದಿಲ್ಲ. ಸಣ್ಣ ಪ್ರಮಾಣದಲ್ಲಿ ವರ್ಕ್ ಔಟ್ ಕೂಡ ಇದ್ರಿಂದ ಆಗುತ್ತೆ. ಬರೀ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ರಿಲ್ಯಾಕ್ಸ್ ನೀಡುತ್ತೆ ಈ ಕೆಲ್ಸ.

‘ಯಾವುದೇ ಬ್ಯಾಕಪ್ ಇಲ್ಲದೇ ಕೆಲಸ ಬಿಟ್ಟೆ’: ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ!

ಅತೀ ಮುಖ್ಯವಾಗಿ ಇದ್ರಿಂದ ಆಗುವ ಲಾಭ ಅಂದ್ರೆ ಅನಗತ್ಯ ವಸ್ತುಗಳ ಆರ್ಡರ್ ತಪ್ಪುತ್ತದೆ. ಹಾಗೇ ಮಧ್ಯರಾತ್ರಿ ಆರ್ಡರ್ ಮಾಡೋದು ತಪ್ಪುತ್ತೆ. ತಿಂಗಳಿಗೆ ಎಷ್ಟು ಖರ್ಚು ಮಾಡ್ಬೇಕು, ಯಾವುದಕ್ಕೆ ಎಷ್ಟು ಹಣ ನೀಡಿದ್ದೆ ಎಂಬೆಲ್ಲ ಲೆಕ್ಕದ ಪತ್ರ ಹೊರಗೆ ಬರುತ್ತೆ. ಆನ್ಲೈನ್ ನಲ್ಲಿ ಲೆಕ್ಕ ಇಲ್ಲದಷ್ಟು ನಾವು ಆಹಾರ ಆರ್ಡರ್ ಮಾಡ್ತೇವೆ. ಅದ್ರ ಸರಿಯಾದ ಮಾಹಿತಿ ನಮಗಿರೋದಿಲ್ಲ. ನಾನು ಅಪ್ಲಿಕೇಷನ್ ಡಿಲಿಟ್ ಮಾಡಿದ್ಮೇಲೆ ಸ್ವಲ್ಪ ವಾಕ್, ಸ್ವಲ್ಪ ಹಣ, ಸ್ವಲ್ಪ ನೆಮ್ಮದಿ ಜೀವನಕ್ಕೆ ವಾಪಸ್ ಬಂತು. ಆಪ್ ಡಿಲಿಟ್ ಮಾಡ್ತಿದ್ದಂತೆ ನಮ್ಮ ಜೀವನ ದಿಡೀರ್ ಬದಲಾಗೋದಿಲ್ಲ. ಆದ್ರೆ ಒಂದಿಷ್ಟು ತಾಳ್ಮೆ, ಖರ್ಚಿನಲ್ಲಿ ಕಂಟ್ರೋಲ್ ಬರೋದು ಸತ್ಯ. ಎಷ್ಟು ಹಣ ಉಳಿತು ಅಂತ ಲೆಕ್ಕ ಹಾಕಿದ್ರೆ ಅನಗತ್ಯ ವಸ್ತುವಿಗೆ ದಿನಕ್ಕೆ 100 -150 ರೂಪಾಯಿ ಖರ್ಚಾಗ್ತಾ ಇತ್ತು. ಅದೆಲ್ಲ ಉಳಿದಿದೆ. ಇದು ತಿಯಾಸಾ ಭೋವಾಲ್ ಎಂಬುವವರ ಅನುಭವ. ನೀವೂ ಒಂದು ತಿಂಗಳು ಈ ಚಾಲೆಂಜ್‌ ಸ್ವೀಕರಿಸಿ ಟೆಸ್ಟ್‌ ಮಾಡಿ ನೋಡಿ.



Source link

Leave a Reply

Your email address will not be published. Required fields are marked *