Headlines

ಸಣ್ಣ ಪುಟ್ಟ ರಿಪೇರಿ ಮಾಡ್ಸಿ ಬೇಕಾದಷ್ಟು ವರ್ಷ ಫ್ರಿಡ್ಜ್‌ ಬಳಸೋದಲ್ಲ, ಈ ಲಕ್ಷಣ ಕಾಣ್ತಿದ್ದಂತೆ ಬದಲಿಸಿ | Refrigerator Can Also Make You Sick If You See These Signs Take Immediate Action

ಸಣ್ಣ ಪುಟ್ಟ ರಿಪೇರಿ ಮಾಡ್ಸಿ ಬೇಕಾದಷ್ಟು ವರ್ಷ ಫ್ರಿಡ್ಜ್‌ ಬಳಸೋದಲ್ಲ, ಈ ಲಕ್ಷಣ ಕಾಣ್ತಿದ್ದಂತೆ ಬದಲಿಸಿ | Refrigerator Can Also Make You Sick If You See These Signs Take Immediate Action



ಸಣ್ಣ ಪುಟ್ಟ ರಿಪೇರಿ ಮಾಡ್ಸಿ ಬೇಕಾದಷ್ಟು ವರ್ಷ ಫ್ರಿಡ್ಜ್‌ ಬಳಸೋದಲ್ಲ, ಈ ಲಕ್ಷಣ ಕಾಣ್ತಿದ್ದಂತೆ ಬದಲಿಸಿ | Refrigerator Can Also Make You Sick If You See These Signs Take Immediate Action

ಮನೆಯಲ್ಲಿರುವ ಫ್ರಿಡ್ಜ್ ಆಹಾರ ಸ್ಟೋರ್ ಮಾಡೋದು ಮಾತ್ರವಲ್ಲ ಆರೋಗ್ಯ ಹಾಳು ಕೂಡ ಮಾಡ್ಬಹುದು. ಫ್ರಿಡ್ಜ್ ನಲ್ಲಿ ಕೆಲ ಲಕ್ಷಣ ಕಾಣ್ತಿದ್ದಂತೆ ನೀವು ಎಚ್ಚೆತ್ತುಕೊಳ್ಬೇಕು. ತಕ್ಷಣ ರಿಪೇರಿ ಅಥವಾ ರಿಪ್ಲೇಸ್ ಮಾಡಿಲ್ಲ ಅಂದ್ರೆ ಅಪಾಯ ಗ್ಯಾರಂಟಿ. 

ಮನೆಯಲ್ಲಿ ಹಗಲು ರಾತ್ರಿ ಎನ್ನದೆ ಉರಿಯುವ ಎಲೆಕ್ಟ್ರಿಕ್ ಐಟಂನಲ್ಲಿ ಫ್ರಿಡ್ಜ್ (fridge) ಒಂದು. ಫ್ರಿಡ್ಜ್ ನಲ್ಲಿ ಜನರು ಆಹಾರ, ತರಕಾರಿ ಮಾತ್ರ ಅಲ್ಲ ಬೇಳೆಕಾಳು, ನೇಲ್ ಪಾಲಿಶ್ ಕೂಡ ಇಡ್ತಾರೆ. ಫ್ರಿಡ್ಜ್ ನಲ್ಲಿ ಉಳಿದ, ಹೆಚ್ಚಾದ ಆಹಾರಗಳನ್ನು ಡಂಪ್ ಮಾಡೋದು ಮಾತ್ರವಲ್ಲ ಅದ್ರ ಜೀವಿತಾವಧಿ ಬಗ್ಗೆಯೂ ನೀವು ತಿಳಿದಿರಬೇಕು. ಫ್ರಿಡ್ಜ್ ಗೂ ಎಕ್ಸ್ಪೈರಿ ಡೇಟ್ ಇರುತ್ತೆ. ಒಮ್ಮೆ ಖರೀದಿ ಮಾಡಿದ ಫ್ರಿಡ್ಜನ್ನು ನಿಮ್ಮ ಜೀವಿತಾವಧಿ ಪೂರ್ತಿ ಬಳಸೋದಲ್ಲ. ಅದನ್ನೂ ಬದಲಿಸಬೇಕು. ಇಲ್ಲ ಅಂದ್ರೆ ಆಹಾರ ಹಾಳಾಗುವ ಜೊತೆಗೆ ನಿಮ್ಮ ಆರೋಗ್ಯ ಹಾಳಾಗುತ್ತೆ. ಇಷ್ಟೇ ಅಲ್ದೆ ಇದು ಜೀವ ತೆಗೆಯುವ ಜೊತೆಗೆ ನಿಮ್ಮ ಆಸ್ತಿ ನಷ್ಟ ಮಾಡ್ಬಹುದು. ಫ್ರಿಡ್ಜ್ ಬ್ಲಾಸ್ಟ್ ಗೆ ಅದ್ರ ಎಕ್ಸ್ಪೈರಿ ಡೇಟ್ ಮುಗಿದಿರೋದು ಒಂದು ಕಾರಣ.

ಫ್ರಿಡ್ಜ್ ಎಕ್ಸ್ಪೈರಿ ಡೇಟ್

ಈಗ ಮಾರ್ಕೆಟ್ ಗೆ ಬರ್ತಿರುವ ಬಹುತೇಕ ರೆಫ್ರಿಜರೇಟರ್ಗಳು 10 ರಿಂದ 15 ವರ್ಷಗಳವರೆಗೆ ಬಾಳಿಕೆ ಬರುತ್ವೆ. ಇನ್ನೂ ಕೆಲ ಉತ್ತಮ ಮಾಡೆಲ್ ಫ್ರಿಡ್ಜ್ ಇನ್ನೂ ಹೆಚ್ಚು ಕಾಲ ಬಾಳಿಕೆ ಬರುತ್ತೆ. ಆದ್ರೆ ವಯಸ್ಸಾದಂತೆ ಅವುಗಳ ಕೂಲಿಂಗ್ ಶಕ್ತಿ ಕ್ರಮೇಣ ಕಡಿಮೆಯಾಗುತ್ತೆ. ಸಮಸ್ಯೆಯೆಂದರೆ ಫ್ರಿಡ್ಜ್ ಇದ್ದಕ್ಕಿದ್ದಂತೆ ಹಾಳಾಗೋದಿಲ್ಲ. ಸಾಮಾನ್ಯವಾಗಿ ಅವು ಸಣ್ಣ ಎಚ್ಚರಿಕೆ ನೀಡುತ್ತವೆ. ನಾವು ಅವುಗಳ ಬಗ್ಗೆ ಗಮನ ಹರಿಸ್ಬೇಕು. ಫ್ರಿಡ್ಜ್ ರಿಪೇರಿ ಮಾಡ್ಬೇಕು ಇಲ್ಲ ಸಮಯಕ್ಕೆ ಸರಿಯಾಗಿ ಬದಲಿಸಬೇಕು.

ಇನ್ನು ಗಂಟೆಗಟ್ಟಲೇ ಕಷ್ಟಪಡಬೇಕಾಗಿಲ್ಲ, ಮ್ಯಾಜಿಕ್ ಟ್ರಿಕ್ಸ್ ನಿಂದ ನಿಮಿಷದಲ್ಲಿ ಬೆಳ್ಳುಳ್ಳಿ ಸಿಪ್ಪೆ ಸುಲಿಯಿರಿ

ವೇಗವಾಗಿ ಹಾಳಾಗೋ ಆಹಾರ

ಫ್ರಿಡ್ಜ್ ಕಾಲಾವಧಿ ಮುಗಿತಾ ಬಂದಿದ್ರೆ ಹಾಲು ಸಾಮಾನ್ಯಕ್ಕಿಂತ ವೇಗವಾಗಿ ಹಾಳಾಗುತ್ತೆ. ತರಕಾರಿಗಳು ಬೇಗ ಕೊಳೆಯುತ್ವೆ. ಇಟ್ಟ ಆಹಾರ ಒಂದು ಅಥವಾ ಎರಡೇ ದಿನಕ್ಕೆ ವಾಸನೆ ಬರುತ್ತೆ. ನಿಮ್ಮ ಫ್ರಿಡ್ಜ್ ನಲ್ಲಿಟ್ಟ ಆಹಾರವೆಲ್ಲ ಬೇಗ ಹಾಳಾಗ್ತಿದೆ ಅಂದ್ರೆ ನಿಮ್ಮ ಫ್ರಿಡ್ಜ್ ಒಳಗೆ ಕೂಲಿಂಗ್ ಸರಿಯಾಗಿ ಆಗ್ತಿಲ್ಲ ಎಂದರ್ಥ. ಫ್ರಿಡ್ಜ್ ಮೊದಲ ಕೆಲ್ಸ ಅಂದ್ರೆ ಕೂಲಿಂಗ್. ಇದನ್ನೇ ಫ್ರಿಡ್ಜ್ ಸರಿಯಾಗಿ ಮಾಡಲು ವಿಫಲವಾದ್ರೆ ಅದ್ರಲ್ಲಿಟ್ಟ ಆಹಾರ ನಿಮ್ಮ ಆರೋಗ್ಯ ಹಾಳು ಮಾಡುತ್ತೆ. ಇದ್ರ ಅರಿವಿಲ್ಲದೆ ಅದೇ ಆಹಾರವನ್ನು ನೀವು ಸೇವನೆ ಮಾಡ್ತಿರಿ. ಇದು ಹೊಟ್ಟೆ ಮತ್ತು ಇಡೀ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತೆ.

ಅಗತ್ಯಕ್ಕಿಂತ ಹೆಚ್ಚು ಐಸ್ ಕಟ್ಟಿಕೊಳ್ಳುತ್ತೆ

ಕೆಲವು ಹಳೆಯ ಫ್ರಿಡ್ಜ್ ನ ಫ್ರೀಜರ್ನಲ್ಲಿ ಅತಿಯಾದ ಐಸ್ ಕಟ್ಟಿಕೊಳ್ಳುತ್ತೆ. ಪದೇ ಪದೇ ಡಿಫ್ರಾಸ್ಟಿಂಗ್ ಅಗತ್ಯವಿದ್ದರೆ ಫ್ರಿಡ್ಜ್ ಹಾಳಾಗ್ತಿದೆ ಎಂದರ್ಥ. ರೆಫ್ರಿಜರೇಟರ್ ಅಥವಾ ಕೆಳಭಾಗದಲ್ಲಿರುವ ಪೂಲ್ಗಳಿಂದ ನೀರು ತೊಟ್ಟಿಕ್ಕಿದರೆ, ಇದು ಕೂಲಿಂಗ್ ಸರ್ಕಲ್ ಹಾಳಾಗಿರುವ ಸೂಚನೆಯಾಗಿದೆ.

ಗೋಧಿ ಹಿಟ್ಟಿನಲ್ಲಿ ಈ ಎಲೆ ಹಾಕಿಡಿ…ವರ್ಷಗಳವರೆಗೂ ಯಾವ ಹುಳಾನೂ ಹತ್ರ ಬರಲ್ಲ

ವಿಚಿತ್ರ ಶಬ್ದ

ನಿಮ್ಮ ಫ್ರಿಡ್ಜ್ ಮೊದಲಿಗಿಂತ ಹೆಚ್ಚು ಶಬ್ದ ಮಾಡ್ತಿದ್ದರೆ, ಹಿಂಭಾಗ ತುಂಬಾ ಬಿಸಿಯಾಗಿದ್ದರೆ ಇದು ಕಂಪ್ರೆಷನ್ ಮೇಲೆ ಓವರ್ಲೋಡ್ ಸೂಚಿಸುತ್ತದೆ.

ಕರೆಂಟ್ ಬಿಲ್ ಹೆಚ್ಚು ಬರ್ತಿದ್ಯಾ?

ಹಳೆಯ ಫ್ರಿಡ್ಜ್ ಹೊಸ ಟೆಕ್ನಿಕಲ್ ಫ್ರಿಡ್ಜ್ ಗಿಂತ ಹೆಚ್ಚಿನ ಕರೆಂಟ್ ಬಳಸುತ್ತದೆ. ಮನೆಯಲ್ಲಿ ಮತ್ತ್ಯಾವ ಹೆಚ್ಚುವರಿ ಕರೆಂಟ್ ಬಳಕೆ ಆಗ್ತಿಲ್ಲ, ಆದ್ರೂ ವಿದ್ಯುತ್ ಬಿಲ್ ಕ್ರಮೇಣ ಹೆಚ್ಚಾಗ್ತಿದ್ದರೆ ಫ್ರಿಡ್ಜ್ ಕಾರಣವಾಗಿರಬಹುದು. ಇದನ್ನು ಮೊದಲು ಕನ್ಫರ್ಮ್ ಮಾಡ್ಕೊಳ್ಳಿ. ಒಂದ್ವೇಳೆ ಫ್ರಿಡ್ಜ್ , ಕರೆಂಟ್ ಬಿಲ್ ಏರಿಕೆಗೆ ಕಾರಣ ಆಗಿದ್ರೆ ಫ್ರಿಡ್ಜ್ ರಿಪೇರಿ ಮಾಡಿಸ್ಬಹುದು. ಆದ್ರೆ ಫ್ರಿಡ್ಜ್ ರಿಪೇರಿಗಿಂತ ಹೊಸ ಫ್ರಿಡ್ಜ್ ಖರೀದಿ ಮಾಡೋದು ಉತ್ತಮ.



Source link

Leave a Reply

Your email address will not be published. Required fields are marked *