Train ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ | Several Train Schedules From Bengaluru Revised Due To Mantha Cyclone

Train ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ | Several Train Schedules From Bengaluru Revised Due To Mantha Cyclone



Train ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ | Several Train Schedules From Bengaluru Revised Due To Mantha Cyclone

ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ, ಪ್ರಯಾಣಿಕರ ಸುರಕ್ಷತೆ ಗಮನಿಸಿ ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಯಾವ್ಯಾವ ರೈಲು ಸೇವೆಯಲ್ಲಿ ವ್ಯತ್ಯಯ.

ಬೆಂಗಳೂರು (ಅ.27) ಮಂಥಾ ಚಂಡಮಾರುತದಿಂದ ಹಲವು ರಾಜ್ಯಗಳು ತತ್ತರಿಸಿದೆ. ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಕರ್ನಾಟಕದಲ್ಲೂ ಮಂಥಾ ಚಂಡಮಾರುತದಿಂದ ಭಾರಿ ಮಳೆ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದೆ. ಮೊಂಥ ಚಂಡಮಾರುತದಿಂದ ಪ್ರಯಾಣಿಕರ ಸುರಕ್ಷತೆ ಗಮನಿಸಿ ರೈಲು ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.

ದಕ್ಷಿಣ ಮಧ್ಯ ರೈಲ್ವೆಯ ವೇಳಾಪಟ್ಟಿ ಬದಲಾವಣೆ

ಪ್ರಬಲ ‘ಮಾಂತಾ’ (MONTHA) ಚಂಡಮಾರುತದ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತು ರೈಲ್ವೇ ಇಲಾಕೆ ಪ್ರಕಟಣೆ ಹೊರಡಸಿದೆ. ನಾಳೆಯಿಂದ ಹಲವು ರೈಲು ಸೇವೆಗಳಲ್ಲಿ ಭಾರೀ ವ್ಯತ್ಯಯವಾಗಲಿದೆ. ನಿಗದಿತ ನಿರ್ಗಮನ ಸಮಯಕ್ಕಿಂತ 12 ಗಂಟೆಗಳ ಕಾಲ ವಿಳಂಬವಾಗಿ ರೈಲುಳು ಹೊರಡಲಿದೆ.

ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ಸೇವೆಗಳಲ್ಲಿ ವ್ಯತ್ಯಯ

1. ರೈಲು ಸಂಖ್ಯೆ 22501 SMVT ಬೆಂಗಳೂರು – ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.

2. ರೈಲು ಸಂಖ್ಯೆ 12836 SMVT ಬೆಂಗಳೂರು – ಹಟಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.

3. ರೈಲು ಸಂಖ್ಯೆ 12503 SMVT ಬೆಂಗಳೂರು – ಅಗರ್ತಲಾ ಹಮ್ ಸಫರ್ ಎಕ್ಸ್‌ಪ್ರೆಸ್.

4. ರೈಲು ಸಂಖ್ಯೆ 12246 SMVT ಬೆಂಗಳೂರು – ಹೌರಾ ಜಂಕ್ಷನ್ ದುರಂತೋ ಎಕ್ಸ್‌ಪ್ರೆಸ್.

5. ರೈಲು ಸಂಖ್ಯೆ 12864 SMVT ಬೆಂಗಳೂರು – ಹೌರಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.

6. ರೈಲು ಸಂಖ್ಯೆ 13433 SMVT ಬೆಂಗಳೂರು – ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್.

7. ರೈಲು ಸಂಖ್ಯೆ 18048 ವಾಸ್ಕೊ ಡ ಗಾಮ – ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್.

ಅಕ್ಟೋಬರ್ 28ಕ್ಕೆ ಭಾರಿ ಮಳೆ

ಮಂತಾ ಚಂಡಮಾರುತದಿಂದ ಅಕ್ಟೋಬರ್ 28 ರಂದು ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಈ ಪೈಕಿ ಆಂಧ್ರ ಪ್ರದೇಶ, ತಮಿಳುನಾಡು, ಹಾಗೂ ಒಡಿಶಾದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ರಕ್ಷಣಾ ಪಡೆಗಳು ಸರ್ವ ಸನ್ನದ್ಧವಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ತೀವ್ರ ಮುನ್ನಚ್ಚೆರಿಕೆ ವಹಿಸುವಂತೆ ಸೂಚಿಸಿದೆ. ಕರ್ನಾಟದಲ್ಲೂ ಮಂತಾ ಚಂಡಮಾರುತದಿಂದ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಸೂಚಿಸಿದೆ.



Source link

Leave a Reply

Your email address will not be published. Required fields are marked *