Headlines

Cash Bonus 240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್ | Grab All You Can Chinese Boss Piles Rs 240 Crore In Cash On Tables For Employees

Cash Bonus 240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್ | Grab All You Can Chinese Boss Piles Rs 240 Crore In Cash On Tables For Employees



Cash Bonus 240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್ | Grab All You Can Chinese Boss Piles Rs 240 Crore In Cash On Tables For Employees

240 ಕೋಟಿ ರೂ ಬೋನಸ್ ಮೇಲಿಟ್ಟು ಎಷ್ಟು ಬೇಕಾದ್ರೂ ತಗೋಳ್ಳಿ ಎಂದ ಬಾಸ್, ಬಾಚಿಕೊಂಡ ಎಂಪ್ಲಾಯ್ಸ್, ಕೋಟಿ ಕೋಟಿ ರೂಪಾಯಿ ಹಣವನ್ನು ಉದ್ಯೋಗಿಗಳು ಬಾಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಹಲವು ಉದ್ಯೋಗಿಗಳ ಹುಬ್ಬೇರಿಸಿದೆ. 

ಬೀಜಿಂಗ್ (ಫೆ.28) ಭಾರತದಲ್ಲಿ ದೀಪಾವಳಿಗೆ ಸೇರಿ ಇತರ ವಾರ್ಷಿಕ ಸಂದರ್ಭದಲ್ಲಿ ಕೆಲ ಕಂಪನಿಗಳು ಕಾರು ಸೇರಿದಂತೆ ನಗದು ಉಡುಗೊರೆ, ಬೋನಸ್ ನೀಡಿದ ಉದಾಹರಣೆಗಳಿವೆ. ಆದರೆ ಬಹುತೇಕ ಕಂಪನಿಗಳು ಸ್ವೀಟ್ಸ್ ಬಾಕ್ಸ್ ನೀಡುತ್ತೆ. ಈ ಕುರಿತು ಸಾಕಷ್ಟ ಮೀಮ್ಸ್ ಹಾಗೂ ಟ್ರೋಲ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆದರೆ ಇದೀಗ ಈ ಕಂಪನಿ ಹಾಗೂ ಬಾಸ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಾರಣ ವಾರ್ಷಿಕ ಬೋನಸ್ ನೀಡಲು ಎಲ್ಲಾ ಉದ್ಯೋಗಿಗಳನ್ನು ಪಾರ್ಟಿಗೆ ಕರೆದಿದ್ದಾರೆ. ಬಳಿಕ ಟೇಬಲ್ ಮೇಲೆ ಬರೋಬ್ಬರಿ 240 ಕೋಟಿ ರೂಪಾಯಿ ನಗದು ಹಣ ಇಟ್ಟಿದ್ದಾರೆ. ಎಲ್ಲಾ ಉದ್ಯೋಗಿಗಳಿಗೆ ಎಷ್ಟು ಬೇಕಾದರೂ ಅಷ್ಟು ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ. ಈ ಸೂಚನೆ ಬೆನ್ನಲ್ಲೇ ಉದ್ಯೋಗಿಗಳು ಕೈಲಾದಷ್ಟು ನೋಟುಗಳನ್ನು ಬಾಚಿಕೊಂಡಿದ್ದಾರೆ. ಹಲವರು ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದ್ದಾರೆ.

ಕಂತೆ ಕಂತೆ ನೋಟು

ಹೀಗೆ ಟೇಬಲ್ ಮೇಲೆ ಕೋಟಿ ಕೋಟಿ ರೂಪಾಯಿ ಇಟ್ಟು ಎಷ್ಟುಬೇಕಾದರು ತೆಗೆದುಕೊಳ್ಳಿ ಎಂದು ಹೇಳಿದ ಬಾಸ್ ಚೀನಾದ ಹೆನಾನ್ ಕ್ವಾಂಗ್‌ಶಾನ್ ಕ್ರೇನ್ ಕಂಪನಿಯ ತ್ಸು ಪೀಜನ್. ಈ ಕಂಪನಿಯ ಬಾಸ್ ಉದ್ಯೋಗಿಗಳಿಗೆ ಭರ್ಜರಿ ಬೋನಸ್ ನೀಡಿದ್ದಾರೆ. ಇದು ಅಚ್ಚರಿ ರೂಪದಲ್ಲಿ ನೀಡಲಾಗಿದೆ. ಕ್ರೇನ್ ಕಂಪನಿಯ ಉದ್ಯೋಗಿಗಳ ಸಂಭ್ರಮ ಇನ್ನು ಮಾಸಿಲ್ಲ. ಬಾಚಿಕೊಂಡ ದುಡ್ಡು ಖರ್ಚು ಮಾಡಿದರೂ ಮುಗಿಯುತ್ತಿಲ್ಲ.

ಕಂಪನಿ ಬಾಸ್ ಉದ್ಯೋಗಿಗಳಿಗೆ ಪಾರ್ಟಿ ಆಯೋಜಿಸಿದ್ದಾರೆ. ಎಲ್ಲೂ ಕೂಡ ಬೋನಸ್ ನೀಡುತ್ತಾರೆ ಅನ್ನೋ ಸುಳಿವು ಬಿಟ್ಟುಕೊಟ್ಟಿಲ್ಲ. ಪಾರ್ಟಿಗೆ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಆಹ್ವಾನ ನೀಡಲಾಗಿದೆ. ಬರೋಬ್ಬರಿ 7000 ಮಂದಿ ಉದ್ಯೋಗಿಗಳು, ಅತಿಥಿಗಳು, ಗಣ್ಯರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಪಾರ್ಟಿ ಹಾಲ್‌ನಲ್ಲಿ ಎಲ್ಲಾ ಟೇಬಲ್‌ಗಳ ಮುಂದೆ ಕೋಟಿ ಕೋಟಿ ನಗದ ಹಣ ಇಡಲಾಗಿದೆ. ಬರೋಬ್ಬರಿ 240 ಕೋಟಿ ರೂಪಾಯಿ ನಗದು ಹಣವನ್ನು ತಂದು ಬೇರೆ ಬೇರೆ ಟೇಬಲ್‌ನಲ್ಲಿ ಇಟ್ಟಿದ್ದಾರೆ. ಬಳಿಕ ಕಂಪನಿ ಬೋನಸ್ ನೀಡುತ್ತಿದೆ. ನಿಮಗೆ ಎಷ್ಟು ಸಾಧ್ಯವಾಗೋತ್ತೋ ಅಷ್ಟು ಹಣ ತೆಗೆದುಕೊಳ್ಳಿ ಎಂದಿದ್ದಾರೆ.

ಕಂಪನಿ ಪಾರ್ಟಿ ಕಾರಣ ಬಹುತೇಕರು ಸೂಟ್ ಬೂಟ್‌ನಲ್ಲಿ ಆಗಮಿಸಿದ್ದರು. ಹೀಗೆ ಬಂದಿದ್ದೇ ಒಳ್ಳೆದಾಯ್ತು ಎಂಬಂತೆ ಸಿಕ್ಕ ಸಿಕ್ಕ ಕಡೆ ಕಂತೆ ಕಂತೆ ನೋಟುಗಳನ್ನು ತುರುಕಿದ್ದಾರೆ. ಕೆಲವರು ಕೋಟಿ ರೂಪಾಯಿವರೆಗೂ ಸಂಗ್ರಹ ಮಾಡಿದ್ದಾರೆ. ಇನ್ನು ಸಮಾರಂಭದ ವೇದಿಕೆ ಮೇಲೆ ಎಲ್ಲಾ ಕಂಪನಿಯಲ್ಲಿ ಮಾಡುವಂತ ಕೆಲ ಆಟಗಳನ್ನು ಆಡಿಸಲಾಗಿತ್ತು. ಕೆಲ ಲೆಕ್ಕ ಟ್ಯಾಲಿ ಮಾಡಲು ಹೇಳಲಾಗಿತ್ತು. ಟ್ಯಾಲಿಯ ಒಟ್ಟು ಸಂಖ್ಯೆ ಎಷ್ಟು ಬರುತ್ತೋ ಅಷ್ಟು ನಗದು ಹಣ ನೀಡಲಾಗಿದೆ. ಹೀಗೆ ವೇದಿಕೆಯಲ್ಲಿ 79 ಕೋಟಿ ರೂಪಾಯಿ ಹಣವನ್ನು ಉದ್ಯೋಗಿಳಿಗೆ ಹಂಚಲಾಗಿತ್ತು.

ಉದ್ಯೋಗಿಗಳ ಗೃಹ ಸಾಲ, ಕಾರು ಸೇರಿದಂತೆ ಇತರ ಸಾಲದ ಹೊರೆ, ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ ಕಡಿಮೆ ಮಾಡುವ ಉದ್ದೇಶದಿಂ ಈ ರೀತಿ ವಿನೂತವಾಗಿ ಬೋನಸ್ ಹಂಚಿಕೆ ಮಾಡಲಾಗಿದೆ. ಇದೀಗ ಚೀನಾದಲ್ಲಿ ಈ ಬಾಸ್‌ಗೆ ಹಣದ ದೇವರು ಎಂದು ಬಿರುದು ನೀಡಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *