ಮನೆಯಲ್ಲಿ ಗಂಡು ಮೊಮ್ಮಗು ಇಲ್ಲ ಎಂದು ಕೊರಗಿದ್ದ ಚಿರಂಜೀವಿ; ಅವಳಿ ಮಕ್ಕಳಿಗೆ ತಂದೆಯಾದ Ram Charan Teja, Upasana | Chiranjeevi Ram Charan Teja And Upasana Blessed With Twins A Boy And A Girl

ಮನೆಯಲ್ಲಿ ಗಂಡು ಮೊಮ್ಮಗು ಇಲ್ಲ ಎಂದು ಕೊರಗಿದ್ದ ಚಿರಂಜೀವಿ; ಅವಳಿ ಮಕ್ಕಳಿಗೆ ತಂದೆಯಾದ Ram Charan Teja, Upasana | Chiranjeevi Ram Charan Teja And Upasana Blessed With Twins A Boy And A Girl



ಮನೆಯಲ್ಲಿ ಗಂಡು ಮೊಮ್ಮಗು ಇಲ್ಲ ಎಂದು ಕೊರಗಿದ್ದ ಚಿರಂಜೀವಿ; ಅವಳಿ ಮಕ್ಕಳಿಗೆ ತಂದೆಯಾದ Ram Charan Teja, Upasana | Chiranjeevi Ram Charan Teja And Upasana Blessed With Twins A Boy And A Girl

Actor Ram Charan Teja Upasana Twins Babies: ನಟ ರಾಮ್‌ ಚರಣ್‌ ತೇಜ ಹಾಗೂ ಉಪಾಸನಾ ಕುಟುಂಬಕ್ಕೆ ಇನ್ನಿಬ್ಬರ ಆಗಮನ ಆಗಿದೆ. ಹೌದು, ಈ ದಂಪತಿ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಒಟ್ಟಿನಲ್ಲಿ ಚಿರಂಜೀವಿ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. 

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ಮತ್ತೆ ಪೋಷಕರಾಗಿದ್ದಾರೆ. ಉಪಾಸನಾ ಅವರು ಜನವರಿ 31ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಚಿರಂಜೀವಿ ಆಸೆ ಈಡೇರಿದ್ದರಿಂದ ಮೆಗಾ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಮತ್ತೆ ತಂದೆಯಾದ ರಾಮ್ ಚರಣ್..

ಈ ಬಾರಿ ಡಬಲ್ ಧಮಾಕಾ. ರಾಮ್ ಚರಣ್-ಉಪಾಸನಾ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದಾರೆ. ಅವರಿಗೆ ಅವಳಿ ಮಕ್ಕಳು ಜನಿಸಿವೆ. ಈಗಾಗಲೇ ಈ ಜೋಡಿಗೆ ಕ್ಲೀಂಕಾರಾ ಕೊನಿಡೇಲಾ ಎಂಬ ಮಗಳಿದ್ದಾಳೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಉಪಾಸನಾ

ಈ ಬಾರಿ ಕೊನಿಡೆಲಾ ಕುಟುಂಬಕ್ಕೆ ಪುಟಾಣಿ ಉತ್ತರಾಧಿಕಾರಿ ಬಂದಿದ್ದಾನೆ. ಜೊತೆಗೆ ಒಬ್ಬಳು ಉತ್ತರಾಧಿಕಾರಿಯೂ ಬಂದಿದ್ದಾಳೆ. ಉಪಾಸನಾ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಡು, ಒಂದು ಹೆಣ್ಣು ಮಗು ಜನಿಸಿದೆ. ಹೆರಿಗೆಗೂ ಮೊದಲೇ ಇವರಿಗೆ ಅವಳಿ ಮಕ್ಕಳು ಆಗುವುದು, ಜನವರಿ 31ರಂದು ಹೆರಿಗೆ ಆಗುವುದು ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಚಿರಂಜೀವಿ ಕುಟುಂಬಸ್ಥರು ಎರಡು ಮಗು ಆಗಿರೋದಿಕ್ಕೆ ಸಂಭ್ರಮ ಡಬಲ್‌ ಆಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಸಂತೋಷದಿಂದ ಘೋಷಿಸಿದ ಚಿರು

ಈ ಸಿಹಿ ಸುದ್ದಿಯನ್ನು ಮೆಗಾಸ್ಟಾರ್ ಚಿರಂಜೀವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಮ್ ಚರಣ್, ಉಪಾಸನಾಗೆ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳು ಹುಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆಯಾದ ಹತ್ತು ವರ್ಷಕ್ಕೆ ಮೊದಲ ಮಗು

ರಾಮ್ ಚರಣ್ ಮತ್ತು ಉಪಾಸನಾಗೆ ಮದುವೆಯಾದ ಹತ್ತು ವರ್ಷಗಳ ನಂತರ ಮೊದಲ ಮಗು ಜನಿಸಿತ್ತು. 2023ರಲ್ಲಿ ಕ್ಲೀಂಕಾರಾ ಕೊನಿಡೇಲಾ ಜನಿಸಿದಳು. ಇದೀಗ ಎರಡನೇ ಬಾರಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಚಿರಂಜೀವಿ ಆಸೆ ಈಡೇರಿತು

ಕ್ಲೀಂಕಾರಾ ಹುಟ್ಟಿದಾಗ, ನಮ್ಮ ಮನೆ ಲೇಡೀಸ್ ಹಾಸ್ಟೆಲ್‌ನಂತೆ ಆಗಿದೆ, ಒಬ್ಬ ಗಂಡು ಮಗುವನ್ನು ಬೇಕು ಎಂದು ರಾಮ್ ಚರಣ್‌ಗೆ ಹೇಳಿದ್ದಾಗಿ ಚಿರಂಜೀವಿ ಹಿಂದೆ ಹೇಳಿದ್ದರು. ಈಗ ಗಂಡು ಮತ್ತು ಹೆಣ್ಣು ಮಗು ಜನಿಸಿದ್ದರಿಂದ ಚಿರು ಡಬಲ್ ಹ್ಯಾಪಿ.

ರಾಮ್‌ ಚರಣ್‌ ತೇಜ, ಉಪಾಸನಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಬಹಳ ಅದ್ದೂರಿಯಾಗಿ ಈ ಮದುವೆ ನಡೆದಿತ್ತು. ಅಪೋಲೋ ಆಸ್ಪತ್ರೆ ಮಾಲೀಕರ ಮೊಮ್ಮಗಳಾಗಿರುವ ಉಪಾಸನಾ ಅವರ ಆಸ್ತಿ ಕೂಡ ಬೆಟ್ಟದಷ್ಟಿದೆ.



Source link

Leave a Reply

Your email address will not be published. Required fields are marked *