Headlines

man inserts eel in rectum: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದವನ ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್ | Man In Vietnam Stuffed Live Snake Fish Through His Anus

man inserts eel in rectum: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದವನ ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್ | Man In Vietnam Stuffed Live Snake Fish Through His Anus



man inserts eel in rectum: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದವನ ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್ | Man In Vietnam Stuffed Live Snake Fish Through His Anus

ಕೆಲವು ವಿಚಿತ್ರ ಮನಸ್ಥಿತಿಯ ಜನ ಗುದದ್ವಾರದೊಳಗೆ ಗ್ಲಾಸ್, ಬಾಟಲ್ ಸ್ಪೂನ್ ಮುಂತಾದವುಗಳನ್ನು ತುಂಬಿಸಿ ಆಸ್ಪತ್ರೆಗೆ ದಾಖಲಾದಂತಹ ಹಲವು ಘಟನೆಗಳು ಈ ಹಿಂದೆ ಬೆಳಕಿಗೆ ಬಂದಿರುವುದನ್ನು ನೀವು ಗಮನಿಸಿರಬಹುದು. ಆದರೆ ಇಲ್ಲೊಬ್ಬ ಗುದದ್ವಾರಕ್ಕೆ ತುಂಬಿಸಿದ್ದು ಏನನ್ನೂ ಎಂಬ ವಿಚಾರ ತಿಳಿದ್ರೆ ಅಚ್ಚರಿ ಪಡ್ತಿರಿ.

ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದವನ ತಪಾಸಣೆ ಮಾಡಿದ ವೈದ್ಯರಿಗೆ ಆಘಾತ

ಈ ಪ್ರಪಂಚದಲ್ಲಿ ಎಂಥೆಂತಾ ಚಿತ್ರವಿಚಿತ್ರ ವ್ಯಕ್ತಿಗಳಿರ್ತಾರೆ. ಇವರ ವಿಚಾರಗಳು ಹೀಗೂ ಇರ್ತಾರಾ ಎಂದು ಕೇಳುವುದಕ್ಕೆ ಒಂಥರಾ ಅಸಹ್ಯ ಆಗುತ್ತೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ನಂತರ ಆತನನ್ನು ಪರೀಕ್ಷಿಸಿ ಸ್ಕ್ಯಾನಿಂಗ್ ಎಕ್ಸರೇ ಅಂತಾ ಎಲ್ಲಾ ಪರೀಕ್ಷಾ ವಿಧಾನಗಳನ್ನು ಮಾಡಿದ ವೈದ್ಯರು ಆತನ ದೇಹದೊಳಗಿರುವುದನ್ನು ನೋಡಿ ಶಾಕ್ ಆಗಿದ್ದರು. ಹಾಗಿದ್ರೆ ಆತನ ದೇಹದೊಳಗೆ ಇದ್ದ ವಸ್ತುವಾದರೂ ಏನು?

ವಿಯೆಟ್ನಾಂನ ಹನೋಯ್‌ನಲ್ಲಿ ವಿಚಿತ್ರ ಘಟನೆ

ಗುದದ್ವಾರದೊಳಗೆ ಗ್ಲಾಸ್, ಬಾಟಲ್ ಸ್ಪೂನ್ ಮುಂತಾದವುಗಳನ್ನು ತುಂಬಿಸಿ ಆಸ್ಪತ್ರೆಗೆ ದಾಖಲಾದಂತಹ ಹಲವು ಘಟನೆಗಳು ಈ ಹಿಂದೆ ಬೆಳಕಿಗೆ ಬಂದಿರುವುದನ್ನು ನೀವು ಗಮನಿಸಿರಬಹುದು. ಆದರೆ ಇಲ್ಲೊಬ್ಬ ಜೀವ ಇರುವ ಜಲಚರವನ್ನೇ ತನ್ನ ಗುದದ್ವಾರದ ಒಳಗೆ ತುಂಬಿಸಿದ್ದಾನೆ. ಹೌದು ಇಂತಹದೊಂದು ವಿಚಿತ್ರ ಘಟನೆ ನಡೆದಿರೋದು ವಿಯೆಟ್ನಾಂನ ಹನೋಯ್‌ನಲ್ಲಿ. ಇಲ್ಲಿ ವಾಸವಿದ್ದ ಭಾರತೀಯ ಮೂಲಕದ ವ್ಯಕ್ತಿಯೊಬ್ಬನಿಗ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನಿಗೆ ಎಲ್ಲಾ ರೀತಿಯ ತಪಾಸಣೆ ಮಾಡಿದ್ದ ವೈದ್ಯರು ಆಘಾತಗೊಂಡಿದ್ದರು.

ಗುದದ್ವಾರದೊಳಗೆ ಜೀವಂತ ಮೀನು ತುಂಬಿಸಿದ್ದ ಭಾರತೀಯ ವ್ಯಕ್ತಿ

ಏಕೆಂದರೆ ಆತನ ಗುದದ್ವಾರದ ಮೂಲಕ ಕರುಳಿಗೆ ಹೋಗಿ ಹಾವು ಮೀನೊಂದು ಕಿಬ್ಬೊಟ್ಟೆಯನ್ನು ಸೇರಿದ್ದಲ್ಲದೇ ಅಲ್ಲಿ ಗಂಭೀರವಾದ ಆಂತರಿಕ ಹಾನಿಯನ್ನು ಮಾಡಿತ್ತು. ನೀರಲ್ಲಿರುವಂತಹ ಈ ಹಾವು ಮೀನು ಅದಾಗೇ ಮನುಷ್ಯನ ಗುದದ್ವಾರ ಸೇರುವುದಂತು ಸುಳ್ಳು. ಆತನೇ ಅದನ್ನು ಗುದದ್ವಾರದೊಳಗೆ ತುಂಬಿಸಿಕೊಂಡಿದ್ದ ಎಂಬುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಈ ಹಾವು ಮೀನು ಗುದದ್ವಾರದ ಮೂಲಕ ಕರುಳಿಗೆ ಸಾಗಿ ಅಲ್ಲಿ ಆತನ ಕರುಳಿಗೆ ಕಚ್ಚಿ ಗಂಭೀರ ಗಾಯ ಮಾಡಿತು. ಈ ಗಾಯಗಳ ತೀವ್ರತೆ ಹಾಗೂ ಅಲ್ಲಿರುವ ಈ ಹಾವು ಮೀನನ್ನು ಹೊರತೆಗೆಯುವುದಕ್ಕಾಗಿ ಹಾಗೂ ಒಳಗಗೆ ತೂತಾಗಿದ್ದ ಅಂಗಾಂಗವನ್ನು ಸರಿಪಡಿಸಲು ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾಯ್ತು. ವೈದ್ಯರ ತುರ್ತು ಚಿಕಿತ್ಸೆಯಿಂದಾಗಿ ಆತ ಈಗ ಬದುಕುಳಿದಿದ್ದು, ಆತ ಸುರಕ್ಷಿತವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈತನ ದೇಹ ಸೇರಿದ ಈ ಹಾವು ಮೀನು 65 ಸೆಂಟಿ ಮೀಟರ್ ಉದ್ದ ಇತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಾಮಲಲ್ಲಾನ ಭೇಟಿ ಮಾಡಿದ ಆಂಜನೇಯ: ಅಯೋಧ್ಯೆಗೆ ಬಂದ ಜರ್ಮನ್ ಬಾಲಕನ ವೀಡಿಯೋ ಭಾರಿ ವೈರಲ್

ಈ ಬಗ್ಗೆ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದು, ದೇಹದೊಳಗೆ ಹೊರಗಿನ ವಸ್ತುಗಳು ಅಥವಾ ಜೀವಂತ ಪ್ರಾಣಿಗಳನ್ನು ಸೇರಿಸುವುದರಿಂದ ದೇಹದ ಆಂತರಿಕ ರಂಧ್ರಗಳು ಸೋಂಕಿಗೆ ಒಳಗಾಗಬಹುದು ಹಾಗೂ ಇದು ಜೀವಕ್ಕೆ ಮಾರಕವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಹೇಗೆ ಯಾಕಾಗಿ ಏನು ಎಂದು ಕುತೂಹಲದಿಂದ ಕಾಮೆಂಟ್ ಮಾಡ್ತಿದ್ದಾರೆ. ಈ ಪೋಸ್ಟ್‌ಗೆ ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಕರುಳಿನಲ್ಲಿರುವ ಇತರ ಕೀಟಗಳನ್ನು ತಿನ್ನುವುದಕ್ಕಾಗಿ ಆತ ಇದನ್ನು ಗುದದ್ವಾರದ ಮೂಲಕ ಕಳುಹಿಸಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹೋಗಬೇಕಾದ ವಿಮಾನದ ಬದಲು ಬೇರೆ ವಿಮಾನವನ್ನು ಕೆನಡಾಗೆ ಕಳುಹಿಸಿದ ಏರ್ ಇಂಡಿಯಾ



Source link

Leave a Reply

Your email address will not be published. Required fields are marked *