ಬೆಂಗಳೂರಲ್ಲೂ ಹಳಿ ತಪ್ಪಿದ ನಮ್ಮ ಮೆಟ್ರೋ ‘ಡ್ರೈವರ್‌ಲೆಸ್’ ರೈಲು; ಘಟನೆಯ ತನಿಖೆಗೆ ಸಮಿತಿ ರಚಿಸಿದ ಬಿಎಂಆರ್‌ಸಿಎಲ್! | Bengaluru Namma Metro Yellow Line Driverless Train Derails At Hebbagodi Depot Sat

ಬೆಂಗಳೂರಲ್ಲೂ ಹಳಿ ತಪ್ಪಿದ ನಮ್ಮ ಮೆಟ್ರೋ ‘ಡ್ರೈವರ್‌ಲೆಸ್’ ರೈಲು; ಘಟನೆಯ ತನಿಖೆಗೆ ಸಮಿತಿ ರಚಿಸಿದ ಬಿಎಂಆರ್‌ಸಿಎಲ್! | Bengaluru Namma Metro Yellow Line Driverless Train Derails At Hebbagodi Depot Sat



ಬೆಂಗಳೂರಲ್ಲೂ ಹಳಿ ತಪ್ಪಿದ ನಮ್ಮ ಮೆಟ್ರೋ ‘ಡ್ರೈವರ್‌ಲೆಸ್’ ರೈಲು; ಘಟನೆಯ ತನಿಖೆಗೆ ಸಮಿತಿ ರಚಿಸಿದ ಬಿಎಂಆರ್‌ಸಿಎಲ್! | Bengaluru Namma Metro Yellow Line Driverless Train Derails At Hebbagodi Depot Sat

ಬೆಂಗಳೂರಿನ ಹೆಬ್ಬಗೋಡಿ ಡಿಪೋದಲ್ಲಿ ಚಾಲಕ ರಹಿತ ‘ನಮ್ಮ ಮೆಟ್ರೋ’ ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಹಳಿ ತಪ್ಪಿದೆ. ಈ ಘಟನೆಯ ಬೆನ್ನಲ್ಲೇ, ಬಿಡದಿ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ್ದು, ಈ ಸರಣಿ ಘಟನೆಗಳು ರೈಲ್ವೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿವೆ.

ಬೆಂಗಳೂರು (ಫೆ.20): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ‘ನಮ್ಮ ಮೆಟ್ರೋ’ ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಹಳಿ ತಪ್ಪಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೆಬ್ಬಗೋಡಿ ಡಿಪೋದಲ್ಲಿ ಮೆಟ್ರೋ ಹಳಿ ತಪ್ಪಿದ ಆತಂಕ:

ನಮ್ಮ ಮೆಟ್ರೋದ ಬಹುನಿರೀಕ್ಷಿತ ‘ಯೆಲ್ಲೋ ಲೈನ್’ (ಹಳದಿ ಮಾರ್ಗ) ನಲ್ಲಿ ಸಂಚರಿಸಬೇಕಾದ ಚಾಲಕ ರಹಿತ (Driverless) ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಹಳಿ ತಪ್ಪಿದೆ. ಜನವರಿ 15 ರಂದು ಬೆಳಿಗ್ಗೆ ಸುಮಾರು 5:30ರ ಸಮಯದಲ್ಲಿ ಈ ಘಟನೆ ನಡೆದಿದೆ. ಹೆಬ್ಬಗೋಡಿ ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಚೀನಾದಿಂದ ತರಿಸಲಾದ 3ನೇ ಚಾಲಕ ರಹಿತ ರೈಲು ಹಳಿ ತಪ್ಪಿದೆ.

ಈ ಘಟನೆಯು ಮೆಟ್ರೋ ಅಧಿಕಾರಿಗಳಲ್ಲಿ ತೀವ್ರ ಕಳವಳ ಮೂಡಿಸಿದ್ದು, ಡ್ರೈವರ್‌ಲೆಸ್ ರೈಲುಗಳ ಸುರಕ್ಷತೆಯ ಬಗ್ಗೆ ರೈಲ್ವೆ ಬೋರ್ಡ್ ಅಧಿಕಾರಿಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಘಟನೆಯ ಗಾಂಭೀರ್ಯವನ್ನು ಪರಿಗಣಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ತನಿಖೆಗಾಗಿ 6 ಜನರ ‘ಸತ್ಯಶೋಧನಾ ಸಮಿತಿ’ಯನ್ನು ರಚಿಸಿದೆ. ತಾಂತ್ರಿಕ ದೋಷ ಅಥವಾ ಹಳಿಗಳಲ್ಲಿನ ಸಮಸ್ಯೆ ಈ ಅಪಘಾತಕ್ಕೆ ಕಾರಣವಾಗಿದೆಯೇ ಎಂಬ ಬಗ್ಗೆ ಸಮಿತಿ ವರದಿ ನೀಡಲಿದೆ.

ಬಿಡದಿ ಸಮೀಪ ಗೂಡ್ಸ್ ರೈಲು ಅಪಘಾತ:

ಇದಕ್ಕೂ ಮೊದಲು, ಕಳೆದ ಮಂಗಳವಾರ ಸಂಜೆ ಬಿಡದಿ ಸಮೀಪ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮದ್ದೂರಿಗೆ ತೆರಳುತ್ತಿದ್ದ ಎನ್‌ಎಂಜಿ ರೇಕ್ (ಖಾಲಿ ಬೋಗಿಗಳ) ಗೂಡ್ಸ್ ರೈಲಿನ ಒಂದು ಬೋಗಿ ಸಂಜೆ 4:45 ರ ಸುಮಾರಿಗೆ ಹಳಿ ತಪ್ಪಿದೆ. ತಾಂತ್ರಿಕ ದೋಷದಿಂದಾಗಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಏನೋ ವ್ಯತ್ಯಾಸವಾಗುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೇ ಸಮಯಪ್ರಜ್ಞೆ ಮೆರೆದು ರೈಲನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿತ್ತು.

ಈ ಘಟನೆಯಿಂದಾಗಿ ಮೈಸೂರು ಮತ್ತು ಬೆಂಗಳೂರು ನಡುವಿನ ರೈಲು ಸಂಚಾರದಲ್ಲಿ ಗಣನೀಯ ವಿಳಂಬ ಕಂಡುಬಂದಿತ್ತು. ಮೈಸೂರಿನ ಕಡೆಗೆ ಹೊರಡುವ ಹಲವು ರೈಲುಗಳು ವಿವಿಧ ನಿಲ್ದಾಣಗಳಲ್ಲಿ ತಡೆಹಿಡಿಯಲ್ಪಟ್ಟವು. ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಎಂಜಿನಿಯರ್‌ಗಳು ಮತ್ತು ಪೊಲೀಸರು ಹಳಿ ತಪ್ಪಿದ ಬೋಗಿಯನ್ನು ಸಹಜ ಸ್ಥಿತಿಗೆ ತಂದು, ಹಳಿಗಳನ್ನು ಪರಿಶೀಲಿಸಿದ ನಂತರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

ಹೆಚ್ಚಿದ ಆತಂಕ:

ಸತತವಾಗಿ ನಡೆಯುತ್ತಿರುವ ಈ ಘಟನೆಗಳು ರೈಲ್ವೆ ಮತ್ತು ಮೆಟ್ರೋ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಸಾರ್ವಜನಿಕರು ನಿತ್ಯ ಅವಲಂಬಿಸಿರುವ ಸಾರಿಗೆ ವ್ಯವಸ್ಥೆಯಲ್ಲಿ ಇಂತಹ ತಾಂತ್ರಿಕ ಲೋಪಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಚಾಲಕ ರಹಿತ ಮೆಟ್ರೋ ರೈಲಿನ ಸುರಕ್ಷತೆಯ ಬಗ್ಗೆ ಸಮಗ್ರ ತನಿಖೆಯ ನಂತರವಷ್ಟೇ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.



Source link

Leave a Reply

Your email address will not be published. Required fields are marked *